ತೂಕ ಇಳಿಸಿಕೊಳ್ಳಬೇಕೇ? ಬೆಳಿಗ್ಗೆದ್ದ ತಕ್ಷಣ ಈ ಜ್ಯೂಸ್ ಕುಡಿಯಿರಿ

By: Arshad
Subscribe to Boldsky

ಅತೀಯಾದ ದೇಹದ ತೂಕ ಹಲವಾರು ಆರೋಗ್ಯ ಸಂಬಂಧಿ ತೊಂದರೆಗಳಿಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲ, ವ್ಯಕ್ತಿಯ ಸೌಂದರ್ಯವನ್ನೂ, ಆತ್ಮವಿಶ್ವಾಸವನ್ನೂ ಬಾಧಿಸಬಲ್ಲುದು. ತೂಕ ಹೆಚ್ಚುತ್ತಿದ್ದಂತೆಯೇ ಹೃದಯ ಸಂಬಂಧಿ ಕಾಯಿಲೆಗಳು, ರಕ್ತದೊತ್ತಡ, ಸಂಧಿವಾತ, ಕೊಲೆಸ್ಟ್ರಾಲ್ ಮೊದಲಾದ ತೊಂದರೆಗಳೂ ಬೇಡದ ಅತಿಥಿಯಂತೆ ದೇಹದಲ್ಲಿ ಸ್ಥಾನ ಪಡೆದುಕೊಳ್ಳುತ್ತವೆ.   ತೂಕ ಇಳಿಸಿಕೊಳ್ಳಲು ಒಂದು ಚಮಚದಷ್ಟು ಜೇನು ಸಾಕು!

ಈ ಎಲ್ಲಾ ತೊಂದರೆಗಳಿಗೆ ಕಡಿವಾಣ ಹಾಕಬೇಕೆಂದರೆ ಮೊತ್ತ ಮೊದಲು ದೇಹದ ತೂಕ ಹೆಚ್ಚಾಗಲು ಕಾರಣವಾಗಿರುವ ಸ್ಥೂಲಕಾಯದಿಂದ ಹೊರಬರಲು ಗಟ್ಟಿಮನಸ್ಸು ಮಾಡಬೇಕು. ಉಳಿದಂತೆ ಕೊಂಚ ವ್ಯಾಯಮ, ಕೊಂಚ ಆಹಾರದಲ್ಲಿ ಕಟ್ಟುನಿಟ್ಟು ಅನುಸರಿಸಿದರೆ ಸಾಕು.

ನಿಮ್ಮ ಪ್ರಯತ್ನಗಳು ಮಾತ್ರ ಸತತವಾಗಿರಬೇಕು ಹಾಗೂ ಯಾವುದೇ ಕಾರಣಕ್ಕೂ ತೂಕ ಹೆಚ್ಚಿಸುವ ಆಹಾರಗಳತ್ತ ಒಲವು ತೋರಬಾರದು. ತೂಕವನ್ನು ಇಳಿಸುವಲ್ಲಿ ಬೆಳಗ್ಗಿನ ಪ್ರಥಮ ಆಹಾರ ಅಪಾರವಾದ ಪ್ರಭಾವ ಬೀರುತ್ತದೆ. 

Have This One Thing Every Morning To Lose Weight Fast
 

ಒಂದು ವೇಳೆ ನೀವು ಇಂದಿಗೂ ನಿಮ್ಮ ಪ್ರಥಮ ಆಹಾರವಾಗಿ ಹೆಚ್ಚಿನ ಕೊಬ್ಬು ಇರುವ ಆಹಾರಗಳನ್ನು ಸೇವಿಸುತ್ತಿದ್ದರೆ ಈಗ ಇದನ್ನು ಬದಲಿಸಲು ಸಕಾಲವಾಗಿದೆ. ಕೆಳಗಿನ ಸುಲಭ ವಿಧಾನದ ಆಹಾರವನ್ನು ಸೇವಿಸುವ ಮೂಲಕ ಕೆಲವೇ ದಿನಗಳಲ್ಲಿ ತೂಕ ಇಳಿಕೆಯ ಕ್ರಮದತ್ತ ಸಾಗುವುದನ್ನು ಕಾಣಬಹುದು.        ಊಟ ಕಡಿಮೆ ಮಾಡಿದರೆ, ತೂಕ ಕಡಿಮೆಯಾಗುವುದಿಲ್ಲ!

ಅಗತ್ಯವಿರುವ ಸಾಮಾಗ್ರಿಗಳು:
*ಲಿಂಬೆಹಣ್ಣಿನ ರಸ- ಎರಡು ಚಿಕ್ಕ ಚಮಚ
*ಸೇಬಿನ ಶಿರ್ಕಾ (apple cider vinegar)-ಎರಡು ದೊಡ್ಡ ಚಮಚ
*ಜೇನು-ಎರಡು ದೊಡ್ಡ ಚಮಚ
*ಹಸಿಶುಂಠಿ-ಸುಮಾರು ಒಂದು ಇಂಚು (ರಸ ಎರಡು ಚಿಕ್ಕ ಚಮಚ ಬರುವಷ್ಟು)

Have This One Thing Every Morning To Lose Weight Fast
 

ವಿಧಾನ:
* ಶುಂಠಿಯನ್ನು ತುರಿದು ಮಿಕ್ಸಿಯಲ್ಲಿ ಕಡೆದು ರಸ ಹಿಂಡಿ ತೆಗೆಯಿರಿ
* ಒಂದು ಬೋಗುಣಿಯಲ್ಲಿ ಎರಡು ಕಪ್ ಉಗುರುಬೆಚ್ಚನೆಯ ನೀರು ಸುರಿಯಿರಿ
* ಇದಕ್ಕೆ ಮೇಲಿನ ಎಲ್ಲಾ ಪರಿಕರಗಳನ್ನು ಸೇರಿಸಿ ಚೆನ್ನಾಗಿ ಕಲಕಿ.
* ಈ ಜ್ಯೂಸ್ ಅನ್ನು ಬೆಳಿಗ್ಗೆದ್ದ ಬಳಿಕ ಪ್ರಥಮ ಆಹಾರವಾಗಿ ನಿತ್ಯವೂ ಸೇವಿಸುತ್ತಾ ಬನ್ನಿ. ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬಾರದು. ಬಳಿಕ ಅಲ್ಪ ಉಪಾಹಾರ ಸೇವಿಸಿ. ಕೆಲವೇ ದಿನಗಳಲ್ಲಿ ಉತ್ತಮ ಪರಿಹಾರ ಕಂಡುಬರುತ್ತದೆ.   ಶುಂಠಿ ಜಜ್ಜಿ ಹಾಕಿದ ಬಿಸಿ ನೀರು ಕುಡಿದರೆ-ತೂಕ ಇಳಿಕೆ...

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Friday, September 16, 2016, 12:06 [IST]
English summary

Have This One Thing Every Morning To Lose Weight Fast

Being overweight or obese can surely be a negative thing, especially in this era, where being fit is given a lot of credit to. It also makes a person feel self-conscious and affects their self-esteem. Weight issues can also lead to serious health complications such as obesity, coronary disorders, joint pain, cholesterol, etc. If you have already tried various weight-loss remedies that haven't had much success, then may be it is time for you to try out this exceptional homemade remedy. Check out the recipe, here.
Please Wait while comments are loading...
Subscribe Newsletter