ಅಧ್ಯಯನ ವರದಿ: ನ್ಯುಮೋನಿಯಾ ತಡೆಗೆ ದಂತಪರೀಕ್ಷೆ ಅತ್ಯಗತ್ಯ!

ವೈದ್ಯಕೀಯ ಅಧ್ಯಯನಗಳ ಪ್ರಕಾರ ನಿಯಮಿತವಾಗಿ ದಂತ ಪರೀಕ್ಷೆಯನ್ನು ಮಾಡಿಸಿಕೊಂಡವರು ಹಲ್ಲುಗಳ ಆರೋಗ್ಯವನ್ನು ಪಡೆದುಕೊಳ್ಳುವುದರ ಜೊತೆಗೆ ನ್ಯುಮೋನಿಯಾಗೆ ಕಾರಣವಾಗಿರುವ ಬ್ಯಾಕ್ಟೀರಿಯಾಗಳನ್ನು ತೊಡೆದು ಹಾಕಬಹುದಾಗಿದೆಯಂತೆ....

By: Jaya subramanya
Subscribe to Boldsky

ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿರುವ ಹೊಸದೊಂದು ಮಾಹಿತಿ ಖಂಡಿತ ನಿಮ್ಮನ್ನು ಆಶ್ವರ್ಯಚಕಿತಗೊಳಿಸಲಿದೆ. ಹೌದು ಹೊಸದಾದ ವೈದ್ಯಕೀಯ ಅಧ್ಯಯನಗಳ ಪ್ರಕಾರ ನಿಯಮಿತವಾಗಿ ದಂತ ಪರೀಕ್ಷೆಯನ್ನು ಮಾಡಿಸಿಕೊಂಡವರು ಹಲ್ಲುಗಳ ಆರೋಗ್ಯವನ್ನು ಪಡೆದುಕೊಳ್ಳುವುದರ ಜೊತೆಗೆ ಉತ್ತಮ ಶ್ವಾಸಕೋಶಗಳನ್ನು ಹೊಂದಬಹುದಾಗಿದೆಯಂತೆ.
 

Good Oral Health

ವರದಿಗಳು ತಿಳಿಸಿರುವಂತೆ, ದಂತ ವೈದ್ಯರು ನಿಮ್ಮ ಹಲ್ಲುಗಳನ್ನು ನಿಯಮಿತವಾಗಿ ಪರಿಶೀಲನೆ ಮಾಡುವ ಸಮಯದಲ್ಲಿ ನಿಮ್ಮ ಶ್ವಾಸಕೋಶಗಳನ್ನು ಆವರಿಸುವ ನ್ಯುಮೋನಿಯಾಗೆ ಕಾರಣವಾಗಿರುವ ಬ್ಯಾಕ್ಟೀರಿಯಾಗಳನ್ನು ತೊಡೆದು ಹಾಕಬಹುದಾಗಿದೆ. ದಂತಕುಳಿಯ ಸಮಸ್ಯೆ ಇದ್ದಾಗ, ಹಲ್ಲುಗಳ ಸ್ವಚ್ಛತೆಯ ಸಮಯದಲ್ಲಿ ನೀವು ಬಾಯಿಯನ್ನು ದೊಡ್ಡದಾಗಿ ತೆರೆಯುತ್ತೀರಿ ಮತ್ತು ಇದು ನಿಮಗೆ ವೇದನೆಯನ್ನು ಉಂಟುಮಾಡುತ್ತದೆ.

ಆದರೆ ಈ ವೇದನೆ ಕೂಡ ನಿಮ್ಮ ಶ್ವಾಸಕೋಶಗಳನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಹಿರಿಯರು ಮತ್ತು ಮಕ್ಕಳಲ್ಲಿ ಕಂಡುಬರುವ ಗಂಭೀರ ಶ್ವಾಸಕೋಶ ಸಮಸ್ಯೆಗಳಿಗೆ ಇದು ಪರಿಹಾರಕವಾಗಿದೆ. ದಂತವೈದ್ಯರಲ್ಲಿಗೆ ಹೋಗದೇ ಇರುವ 86 ಶೇಕಡಾ ಜನರು ಶ್ವಾಸಕೋಶ ಸಂಬಂಧಿ ರೋಗಗಳಿಗೆ ತುತ್ತಾಗಲಿದ್ದು, ವರ್ಷಕ್ಕೆ ಎರಡು ಬಾರಿ ದಂತಪರೀಕ್ಷೆಯನ್ನು ಮಾಡಿಸಿಕೊಂಡವರಲ್ಲಿ ಈ ಬಗೆಯ ಸಮಸ್ಯೆಗಳು ಕಂಡುಬಂದಿಲ್ಲ.           ದಂತಕುಳಿ ಸಮಸ್ಯೆ: ತ್ವರಿತವಾಗಿ ಶಮನಗೊಳಿಸುವ ಮನೆಮದ್ದುಗಳು  

Good Oral Health
 

ಈ ಅಧ್ಯಯನವನ್ನು ಕೈಗೊಂಡ ಪರೀಕ್ಷಕರು ಹೇಳಿರುವಂತೆ ಬಾಯಿಯ ಆರೋಗ್ಯ ಮತ್ತು ನ್ಯುಮೋನಿಯಾಗೆ ಸಂಬಂಧವಿದೆ ಎಂದಾಗಿದೆ. ಬಾಯಿಯನ್ನು ಬ್ಯಾಕ್ಟೀರಿಯಾ ರಹಿತವಾಗಿ ಮಾಡದೇ ಇದ್ದಲ್ಲಿ, ಇದು ನ್ಯುಮೋನಿಯಾದಂತಹ ಶ್ವಾಸಕೋಶಿ ಸಂಬಂಧಿ ರೋಗಗಳಿಗೆ ಕಾರಣವಾಗಲಿದೆ.

ಆದ್ದರಿಂದ ಶುದ್ಧವಾದ ಬಾಯಿಯ ಸ್ವಚ್ಛತೆಯನ್ನು ಮಾಡಬೇಕು ಇದರಿಂದ ಬ್ಯಾಕ್ಟೀರಿಯಾ ಉತ್ಪಾದನೆಯನ್ನು ತಡೆಯಬಹುದು ಎಂದಾಗಿದೆ. ಬಾಯಿಯ ಸ್ವಚ್ಛತೆ ಉತ್ತಮವಾಗಿದ್ದರೆ ಮಾತ್ರ ಸಂಪೂರ್ಣ ಆರೋಗ್ಯವನ್ನು ಪಡೆಯಬಹುದಾಗಿದೆ.

ಗಂಟಲು ಮತ್ತು ಬಾಯಿಯಿಂದ ಮಾಡುವ ಉಸಿರಾಟದಲ್ಲಿ ಏರುಪೇರುಗಳುಂಟಾದಾಗ ಹೃದಯದಲ್ಲಿ ಬ್ಯಾಕ್ಟೀರಿಯಾ ಇನ್‎ಫೆಕ್ಶನ್ಕಂ ಡುಬರುತ್ತದೆ. ಇದರಿಂದ ಶ್ವಾಸಕೋಶಗಳಿಗೆ ತೊಂದರೆಯುಂಟಾಗಲಿದೆ. ದಂತಕುಳಿ ಸಮಸ್ಯೆ ಇದ್ದವರಿಗೆ ನ್ಯುಮೋನಿಯಾ ಅಭಿವೃದ್ಧಿಯಾದಂತೆ ಎಂದಾಗಿದೆ.

ಇದು ಒಬ್ಬರಿಂದ ಇನ್ನೊಬ್ಬರಿಗೆ ಬಾಯಿ ಮತ್ತು ಮೂಗಿನ ಮೂಲಕ ಉಸಿರಾಡುವಾಗ ಹರಡಲಿದ್ದು, ಶ್ವಾಸಕೋಶಕ್ಕೆ ಹಾನಿಯನ್ನು ಮಾಡಲಿದೆ ಎಂಬುದಾಗಿ ವೈದ್ಯರುಗಳು ಎಚ್ಚರಿಸಿದ್ದಾರೆ.

Good Oral Health
 

ಜಾಗರೂಕತೆ ಹೇಗೆ? 
ನಿಯಮಿತವಾಗಿ ದಂತಪರೀಕ್ಷೆ ಮಾಡಿಸಿಕೊಳ್ಳುವುದು ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡಲಿದೆ
ಫ್ಲೋರೈಟ್ ಟೂತ್‎ಪೇಸ್ಟ್‎ನಲ್ಲಿ ದಿನಕ್ಕೆರಡು ಬಾರಿ ಹಲ್ಲುಜ್ಜಿ. ಹಲ್ಲುಗಳ ಸಂದಿ ಮತ್ತು ಒಳಭಾಗವನ್ನು ಶುದ್ಧ ಮಾಡಿ. ಆಹಾರ ಸೇವಿಸಿದ ಪ್ರತೀಬಾರಿ ಬಾಯಿ ಮುಕ್ಕಳಿಸುವುದನ್ನು ಮರೆಯದಿರಿ. ಅದರಲ್ಲೂ ಸಿಹಿ ತಿಂದ ನಂತರ ಬಾಯಿ ಮುಕ್ಕಳಿಸಲು ಮರೆಯದಿರಿ. ನ್ಯುಮೋನಿಯಾವನ್ನು ಮೊಳಕೆಯಲ್ಲೇ ಚಿವುಟಿ ಹಾಕಲು ನಿಯಮಿತ ದಂತವೈದ್ಯ ಪರೀಕ್ಷೆ ಸಹಕಾರಿಯಾಗಲಿದೆ.

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Monday, November 14, 2016, 14:47 [IST]
English summary

Good Oral Health Helps Avoid Pneumonia

According to reports, the new study has said that by seeing the dental specialist regularly and by cleaning the teeth, you can actually have an added advantage of avoiding pneumonia by reducing the bacteria that can otherwise infect your lungs/respiratory process.
Please Wait while comments are loading...
Subscribe Newsletter