ಎಡೆಬಿಡದೆ ಕಾಡುವ ಕೆಮ್ಮಿಗೆ ಶುಂಠಿ-ಉಪ್ಪಿನ ಕಷಾಯ

By: manu
Subscribe to Boldsky

ಹೊಟ್ಟೆ ಕೆಟ್ಟಿದ್ದಾಗ, ಹುಳಿತೇಗು, ಹೊಟ್ಟೆಯುರಿ, ಅಜೀರ್ಣ ಮೊದಲಾದ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆ ಕಂಡುಬಂದಾಗ ಶುಂಠಿಯ ಕಷಾಯ ಅಥವಾ ಹಸಿಶುಂಠಿಯ ರಸ ಕುಡಿದು ಪರಿಹಾರ ಪಡೆದುಕೊಳ್ಳಬಹುದು. ಆದರೆ ಈ ಅದ್ಭುತ ಮಸಾಲೆವಸ್ತು ಅತ್ಯುತ್ತಮವಾದ ಕೆಮ್ಮು ನಿವಾರಕ ಎಂದು ನಿಮಗೆ ಗೊತ್ತಿತ್ತೇ?

cough
 

ಹೌದು ಕೆಮ್ಮಿಗೆ ಔಷಧಿಯಾಗಿ ನಮ್ಮ ಹಿರಿಯಲು ಶುಂಠಿಯನ್ನು ನೂರಾರು ವರ್ಷಗಳಿಂದ ಬಳಸುತ್ತಾ ಬಂದಿದ್ದಾರೆ. ಹಸಿಶುಂಠಿ ಮತ್ತು ಕೊಂಚ ಉಪ್ಪನ್ನು ಬೆರೆಸಿ ಸೇವಿಸಬೇಕು. ಮುಂದಿನ ಬಾರಿ ಸತತವಾಗಿ ಕಾಡುವ ಕೆಮ್ಮು ಪ್ರಾರಂಭವಾದರೆ ಬೇರೆ ಔಷಧಿಗಳಿಗೆ ಶರಣಾಗುವ ಬದಲು ಈ ಮನೆಮದ್ದನ್ನು ಬಳಸಿ ಶೀಘ್ರವಾಗಿಯೇ ಕೆಮ್ಮಿನಿಂದ ಪಾರಾಗಬಹುದು. ಪ್ರಾಣ ಹಿಂಡುವ ಕೆಮ್ಮಿಗೆ ರಾಮಬಾಣವಾಗಿರುವ 10 ಸಿದ್ಧೌಷಧಗಳು    

ginger
 

ಕೆಮ್ಮಿಗೆ ಕಾರಣವಾದ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳನ್ನು ಶುಂಠಿಯಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಸದೆಬಡಿಯುತ್ತದೆ. ಸಾಮಾನ್ಯವಾಗಿ ವೈರಸ್ಸುಗಳ ಧಾಳಿಯಿಂದ ನಮ್ಮ ದೇಹ ಅಂಟುಅಂಟಾದ ದ್ರವವನ್ನು ಗಂಟಲ ಒಳಭಾಗದಲ್ಲಿ ಸ್ರವಿಸುತ್ತದೆ. ಇದು ಬ್ಯಾಕ್ಟೀರಿಯಾಗಳನ್ನು ಅಂಟಿಸಿಕೊಂಡು ಕಫವಾಗುತ್ತದೆ.

Ginger syruff
 

ಈ ಕಫವನ್ನು ಹೊರಹಾಕುವ ಕ್ರಿಯೆಯೇ ಕೆಮ್ಮು. ಉಪ್ಪು ಬೆರೆಸಿದ ಶುಂಠಿಯ ರಸ ಈ ಕಫವನ್ನು ಸಡಿಲಗೊಳಿಸಿ ಸುಲಭವಾಗಿ ನಿವಾರಿಸಲು ನೆರವಾಗುತ್ತದೆ. ಕಫವೇ ಇಲ್ಲದ ಬಳಿಕ ಕೆಮ್ಮು ಎಲ್ಲಿಂದ? ಇದೇ ಈ ವಿಧಾನದ ಸಫಲತೆಯ ಗುಟ್ಟು. ಮಧ್ಯರಾತ್ರಿ ಕಾಡುವ ಕೆಮ್ಮು, ಏನು ಮಾಡಬೇಕು?     

Ginger
 

ಈ ಔಷಧೀಯ ಬಳಕೆಯ ವಿಧಾನ
*ಕೆಮ್ಮು ಕಡಿಮೆಯಾಗಲು ಅತ್ಯುತ್ತಮ ವಿಧಾನವೆಂದರೆ ಒಂದು ಚಿಕ್ಕ ತುಂಡು ಹಸಿಶುಂಠಿಯನ್ನು ಉಪ್ಪಿನೊಂದಿಗೆ ಜಗಿಯುವುದು. ಆದರೆ ಹಸಿಶುಂಠಿ ಕೊಂಚ ಖಾರವಾದುದರಿಂದ ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ.
*ಇವರು ಹಸಿಶುಂಠಿಯನ್ನು ಕೊಂಚ ನೀರಿನಲ್ಲಿ ಕುದಿಸಿ ತಣಿಸಿ ಶೋಧಿಸಿದ ಬಳಿಕ ಚಿಟಿಕೆಯಷ್ಟು ಉಪ್ಪು ಸೇರಿಸಿ ಕುಡಿಯಬಹುದು.

salt
 

ಇನ್ನೊಂದು ವಿಧಾನ:
*ಒಂದು ಚಿಕ್ಕ ತುಂಡು ಹಸಿಶುಂಠಿಯ ಸಿಪ್ಪೆ ಸುಲಿದು ಇದಕ್ಕೆ ಕೊಂಚ ಉಪ್ಪನ್ನು ಸಿಂಪಡಿಸಿ. ಈ ತುಂಡನ್ನು ಜಜ್ಜಿ ನಯವಾಗಿಸಿ ಒಂದು ಚಮಚದಲ್ಲಿ ಲೇಹ್ಯದಂತೆ ನೇರವಾಗಿ ನುಂಗಿಬಿಡುವುದು.
*ಸಾಧ್ಯವಾದರೆ ಕೊಂಚ ಅಗಿದು ರಸವನ್ನು ನುಂಗಬೇಕು. ಇದರ ಖಾರದಿಂದ ರಕ್ಷಣೆ ಪಡೆಯಲು ಈ ತುಂಡನ್ನು ಸೇವಿಸಿದ ಬಳಿಕ ಕೊಂಚ ಜೇನನ್ನು ನೆಕ್ಕುವ ಮೂಲಕ ಉರಿಯಿಂದ ತಪ್ಪಿಸಿಕೊಳ್ಳಬಹುದು. ಬೆಕ್ಕಸ ಬೆರಗಾಗಿಸುವ ಹಸಿ ಶುಂಠಿಯ ಕಾರುಬಾರು...!  

ginger
 

ಶುಂಠಿಯ ಕಷಾಯ
*ಒಂದು ವೇಳೆ ಕೆಮ್ಮಿನೊಂದಿಗೆ ಉಸಿರಾಟದ ತೊಂದರೆಯೂ ಇದ್ದರೆ ಇದಕ್ಕೆ ಶುಂಠಿಯ ಕಷಾಯ ಉತ್ತಮ ಪರಿಹಾರವಾಗಿದೆ. *ಇದಕ್ಕಾಗಿ ಒಂದು ಲೋಟ ನೀರನ್ನು ಕುದಿಸಿ.ಇದಕ್ಕೆ ಕೊಂಚ ಹಸಿಶುಂಠಿಯ ತುಂಡುಗಳು, ಕೊಂಚವೇ ಕಾಳುಮೆಣಸು ಅಥವಾ ಕರಿಮೆಣಸು ಮತ್ತು ಕೊಂಚ ಉಪ್ಪು ಸೇರಿಸಿ ಕುದಿಸಿ.
*ಈ ನೀರು ಅರ್ಧಮಟ್ಟಕ್ಕೆ ಬರುವವರೆಗೂ ಕುದಿಸಿ ಬಳಿಕ ಉರಿ ಆರಿಸಬೇಕು. ನಂತರ ಉಗುರುಬೆಚ್ಚಗಾಗುವಷ್ಟು ತಣಿಸಿ ಸೋಸಿ ಈ ನೀರನ್ನು ಕುಡಿಯಬೇಕು.

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Tuesday, September 20, 2016, 10:35 [IST]
English summary

Ginger and salt – natural remedy to get rid of cough

Ginger works wonders in dealing with indigestion and other stomach woes. But did you know this spice can help you fight a cough naturally? An age-old remedy from grandma’s kitchen, ginger with salt can help you get rid of a cough at home. So the next time you have an allergic reaction or have a continuous bout of a cough, rather than popping a pill or having a teaspoon or two of cough syrup, try this quick and effective home remedy for a cough
Please Wait while comments are loading...
Subscribe Newsletter