For Quick Alerts
ALLOW NOTIFICATIONS  
For Daily Alerts

ಇಂತಹ ಹಣ್ಣು-ತರಕಾರಿಗಳನ್ನು ಆದಷ್ಟು ಸಿಪ್ಪೆ ಸಹಿತ ಸೇವಿಸಿ...

By Manu
|

ವೈದ್ಯರು ತಮ್ಮ ರೋಗಿಗೆ ನಿನ್ನ ಇಷ್ಟದ ಹಣ್ಣನ್ನು ಸಿಪ್ಪೆಸಹಿತ ತಿನ್ನು ಎಂದಾಗ ಆತ ಸಾಧ್ಯವಿಲ್ಲ ಎಂದನಂತೆ. ಏಕೆಂದು ಕೇಳಿದಾಗ ನನ್ನ ಇಷ್ಟದ ಹಣ್ಣು ಅಂದರೆ ಹಲಸಿನ ಹಣ್ಣು, ಇದನ್ನು ಸಿಪ್ಪೆಸಹಿತ ಹೇಗೆ ತಿನ್ನಲಿ ಎಂದು ಮರುಪ್ರಶ್ನೆ ಕೇಳಿದನಂತೆ....! ವಾಸ್ತವವಾಗಿ ಎಲ್ಲಾ ಹಣ್ಣುಗಳನ್ನು ಸಿಪ್ಪೆ ಸಹಿತ ತಿನ್ನಲು ಸಾಧ್ಯವಿಲ್ಲ. ಹಣ್ಣು ಮಾತ್ರವಲ್ಲ, ಅದರ ಸಿಪ್ಪೆಯೂ ಆರೋಗ್ಯದ ಕೀಲಿ ಕೈ

ಹಲಸಿನ ಹಣ್ಣು, ಬಾಳೆಹಣ್ಣು ಸೀತಾಫಲ, ಕಲ್ಲಂಗಡಿ ಮೊದಲಾದ ಹಣ್ಣುಗಳ ಹೊರತಾಗಿ ಯಾವ ಯಾವ ಹಣ್ಣುಗಳ ಹಾಗೂ ತರಕಾರಿಗಳ ಸಿಪ್ಪೆ ತೆಳುವಾಗಿದ್ದು ತಿನ್ನಲು ಸಾಧ್ಯವಿದೆಯೋ, ಅವನ್ನೆಲ್ಲಿ ಸಿಪ್ಪೆಸಹಿತ ತಿನ್ನಬೇಕು ಎಂದೇ ಆಹಾರತಜ್ಞರು ತಿಳಿಸುತ್ತಾರೆ. ಬನ್ನಿ, ಅಂತಹ ಹಣ್ಣು ಹಾಗೂ ತರಕಾರಿಗಳು ಯಾವುವು ಎಂಬುದನ್ನು ನೋಡೋಣ:

ಸೂಚನೆ- ಹಣ್ಣುಗಳು ಹಾಗೂ ತರಕಾರಿಗಳನ್ನು ಆರಿಸುವಾಗ ಅದರ ಸಿಪ್ಪೆಯ ಮೇಲೆ ತೆಳುವಾದ ಕೀಟನಾಶಕದ ಪದರ ಇದೆಯೇ ಎಂದು ನೋಡಿಕೊಳ್ಳಿ. ಒಂದು ವೇಳೆ ತೆಳುವಾಗಿ ಪೌಡರ್ ಅಂಟಿಸಿದಂತೆ ಪದರವೇನಾದರೂ ಇದ್ದರೆ ಈ ಸಿಪ್ಪೆಗಳನ್ನು ಬಳಸಬೇಡಿ. (ಸಾಮಾನ್ಯವಾಗಿ ಹಣ್ಣುಗಳನ್ನು ಕೊಳ್ಳುವಾಗಲೇ ಇದನ್ನು ಗಮನಿಸಿ ಕೊಳ್ಳದೇ ಇರುವುದು ಮೇಲು). ಈ ಕೀಟನಾಶಕ ಸಿಪ್ಪೆಯ ಆಳಕ್ಕೆ ಇಳಿದಿರುವುದರಿಂದ ಇವುಗಳ ಬಳಕೆ ಒಳ್ಳೆಯದಲ್ಲ.....

ಸೇಬು

ಸೇಬು

ಸೇಬಿನ ಸಿಪ್ಪೆಯಲ್ಲಿ ಪೆಕ್ಟಿನ್ ಎಂಬ ಕರಗದ ನಾರು ಇದೆ. ಈ ನಾರಿಗೆ ನಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ನಿವಾರಿಸುವ ಮತ್ತು ರಕ್ತದಲ್ಲಿ ಸಕ್ಕರೆಯ ಅಂಶವನ್ನು ಸಮತೋಲನದಲ್ಲಿ ಇರಿಸುವ ಗುಣಗಳಿವೆ. ಸೇಬಿನ ಸಿಪ್ಪೆಯೂ ಕೂಡ ಆರೋಗ್ಯಕ್ಕೆ ಉಪಕಾರಿ ಕಣ್ರೀ

ದ್ರಾಕ್ಷಿ

ದ್ರಾಕ್ಷಿ

ದ್ರಾಕ್ಷಿ ಬೆಳೆಗೆ ಇತರ ಬೆಳೆಗಳಿಗಿಂತಲೂ ಹೆಚ್ಚಿನ ಕೀಟನಾಶಕ ಬಳಸಲಾಗುತ್ತದೆ ಹಾಗೂ ನಾವು ಕೊಂಡು ತಂದ ಹಣ್ಣಿನಲ್ಲಿಯೂ ತೆಳುವಾದ ಪದರದಂತೆ ಉಳಿದಿರುತ್ತದೆ. ಬರೆಯ ನೀರಿನಿಂದ ತೊಳೆದರೆ ಇದು ಹೋಗುವುದಿಲ್ಲ. ಆದ್ದರಿಂದ ಉಪ್ಪು ನೀರು, ವಿನೇಗರ್ ಅಥವಾ ಬೇರಾವುದಾದರೂ ವಿಧಾನ ಬಳಸಿ ಚೆನ್ನಾಗಿ ತೊಳೆದೇ ತಿನ್ನಬೇಕು. ಏಕೆಂದರೆ ಇದರ ಸಿಪ್ಪೆಯಲ್ಲಿರುವ ರೆಸ್ವರೆಟಾಲ್ ಎಂಬ ಫೈಟೋಕೆಮಿಕಲ್ ಕಣಗಳಿದ್ದು ಇವು ವಿಶೇಷವಾಗಿ ಹೃದಯದ ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಸಾಧ್ಯವಾದರೆ ಸಾವಯವ ವಿಧಾನದಲ್ಲಿ ಬೆಳೆಸಿದ ದ್ರಾಕ್ಷಿಯನ್ನೇ ಕೊಳ್ಳಿ. ದ್ರಾಕ್ಷಿ ಹಣ್ಣು- ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು

ಆಲೂಗಡ್ಡೆ

ಆಲೂಗಡ್ಡೆ

ಆಲೂಗಡ್ಡೆಯ ಸಿಪ್ಪೆಯಲ್ಲಿ ಉತ್ತಮ ಪ್ರಮಾಣದ ಕಬ್ಬಿಣ, ಕರಗುವ ನಾರು ಇದೆ. ಈ ಪ್ರಮಾಣ ತಿರುಳಿನಲ್ಲಿರುವುದಕ್ಕಿಂತಲೂ ಹೆಚ್ಚಿದೆ. ಅಲ್ಲದೇ ತಿರುಳಿನಲ್ಲಿರುವುದಕ್ಕಿಂತ ಐದರಿಂದ ಹತ್ತು ಪಟ್ಟು ಹೆಚ್ಚು ಆಂಟಿ ಆಕ್ಸಿಡೆಂಟುಗಳು ಸಿಪ್ಪೆಯಲ್ಲಿವೆ. ಆಲೂಗಡ್ಡೆಯ ಸಿಪ್ಪೆಯ ಪವರ್‍‌ಗೆ ಶಭಾಷ್ ಎನ್ನಲೇಬೇಕು!

ಸೌತೆ

ಸೌತೆ

ಸೌತೆಯಲ್ಲಿ ಕ್ಯಾಲ್ಸಿಯಂ, ಗಂಧಕ, ಮೆಗ್ನೀಶಿಯಂ, ಪೊಟ್ಯಾಶಿಯಂ, ವಿಟಮಿನ್ ಎ ಮತ್ತು ಕೆ ಇವೆ. ಆದರೆ ಇವು ಸಿಪ್ಪೆಯಲ್ಲಿಯೇ ಇದ್ದು ತಿರುಳಿನಲ್ಲಿ ಅತ್ಯಲ್ಪ ಪ್ರಮಾಣದಲ್ಲಿವೆ. ಆದ್ದರಿಂದ ಈ ಎಲ್ಲಾ ಪೋಷಕಾಂಶಗಳನ್ನು ಪಡೆಯಲು ಸಿಪ್ಪೆ ಸಹಿತವೇ ತಿನ್ನಬೇಕು.

ಬದನೆ

ಬದನೆ

ಬದನೆಯ ಸಿಪ್ಪೆಯಲ್ಲಿಯೂ ನಾಸುನಿನ್ ಎಂಬ ಆಂಟಿ ಪ್ಲೇವನಾಯ್ಡುಗಳಿವೆ. ಇವು ಮೆದುಳಿನ ಜೀವಕೋಶಗಳು ಆರೋಗ್ಯಕರವಾಗಿರಲು ನೆರವಾಗುತ್ತವೆ. ಅಲ್ಲದೇ ಇದರಲ್ಲಿರುವ ಕರಗದ ನಾರು ಮತ್ತು ಇತರ ಪೋಷಕಾಂಶಗಳು ದೇಹದ ತೂಕ ಏರದಿರಲು ಸಹಕರಿಸುತ್ತವೆ. ಬದನೆಯೆಂಬ ಬಹುಗುಣಿ ತರಕಾರಿಯಲ್ಲಿದೆ ಅತಿ ರಹಸ್ಯ ಪ್ರಯೋಜನಗಳು


English summary

Fruits and vegetables you should never peel before eating

We remove the skin of most fruits and vegetables. But certain foods are more nutrient- dense with skin. So make sure you do not peel these fruits and vegetables,
X
Desktop Bottom Promotion