ನಿಲ್ಲಿ! ಖಾಲಿ ಹೊಟ್ಟೆ ಎಂದು ಈ ಆಹಾರಗಳನ್ನು ಮಾತ್ರ ಸೇವಿಸಬೇಡಿ!

By: Arshad
Subscribe to Boldsky

ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಯಂತೆ ಯಾವ ಊಟವನ್ನು ಯಾವ ಹೊತ್ತಿನಲ್ಲಿ ಸೇವಿಸಬೇಕು ಎಂದು ತಿಳಿದುಕೊಂಡಿರುವವರು ಉತ್ತಮ ಆರೋಗ್ಯ ಹೊಂದಿರುತ್ತಾರೆ. ಆದರೆ ಉತ್ತಮ ಆರೋಗ್ಯಕ್ಕೆ ಇಷ್ಟು ಮಾತ್ರ ಸಾಲದು, ಯಾವ ಹೊತ್ತಿನಲ್ಲಿ ಯಾವ ಆಹಾರವನ್ನು ತಿನ್ನಬಾರದು ಎಂಬುದನ್ನೂ ಕೊಂಚ ತಿಳಿದಿರಬೇಕು. ಖಾಲಿ ಹೊಟ್ಟೆಯಲ್ಲಿ ಚಹಾ ಸೇವನೆ-ಅಪಾಯ ಬೆನ್ನೇರಿ ಕಾಡಲಿದೆ!

ಏಕೆಂದರೆ ವಿಶೇಷವಾಗಿ ಹೊಟ್ಟೆ ಖಾಲಿಯಿದ್ದಾಗ ಸೇವಿಸುವ ಕೆಲವು ಆಹಾರಗಳು ಆರೋಗ್ಯವನ್ನು ಕೆಡಿಸಬಲ್ಲವು. ಆದರೆ ಯಾವ ಆಹಾರಗಳನ್ನು ಸೇವಿಸಬಾರದು ಎಂದು ಗೊತ್ತಿಲ್ಲವೇ? ಮುಂದೆ ಓದಿ.... 

ಸಕ್ಕರೆ

ಒಂದು ವೇಳೆ ನಾವು ಖಾಲಿ ಹೊಟ್ಟೆಯಲ್ಲಿ ಹೆಚ್ಚಿನ ಸಕ್ಕರೆ ಅಥವಾ ಸಕ್ಕರೆ ಬೆರೆಸಿದ ಆಹಾರಗಳನ್ನು ಸೇವಿಸಿದಾಗ ನಮ್ಮ ದೇಹ ಈ ಮಟ್ಟದ ಸಕ್ಕರೆಯನ್ನು ಅರಗಿಸಿಕೊಳ್ಳಬಲ್ಲಷ್ಟು ಪ್ರಮಾಣದ ಇನ್ಸುಲಿನ್ ಅನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಆದರೆ ಜೀರ್ಣಾಂಗಗಳು ಈ ಸಕ್ಕರೆಯನ್ನು ರಕ್ತಕ್ಕೆ ತಕ್ಷಣವೇ ಸೇರಿಸಿಕೊಳ್ಳುವ ಕಾರಣ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಥಟ್ಟನೇ ಏರುತ್ತದೆ. ಇದು ಹಲವು ತೊಂದರೆಗಳಿಗೆ ನಾಂದಿ ಹಾಡುತ್ತದೆ.   ಸಕ್ಕರೆ ಹಿಂದಿರುವ ಕರಾಳ ಸತ್ಯ: ಇಲ್ಲಿದೆ 10 ಪುರಾವೆಗಳು

ಟೊಮೆಟೊ

ಖಾಲಿಹೊಟ್ಟೆಯಲ್ಲಿ ತಿನ್ನಬಾರದ ಇನ್ನೊಂದು ಆಹಾರವೆಂದರೆ ಟೊಮಾಟೋ ಅಥವಾ ಟೊಮೆಟೊ ಆಧಾರಿತ ಖಾದ್ಯಗಳು.

ಟೊಮೆಟೊ

ಏಕೆಂದರೆ ಇದರಲ್ಲಿರುವ ಕೆಲವು ಆಮ್ಲಗಳು ನಮ್ಮ ಜೀರ್ಣರಸಗಳೊಂದಿಗೆ ಬೆರೆತ ತಕ್ಷಣ ಪೂರ್ಣವಾಗಿ ಜೀರ್ಣಗೊಳ್ಳದೇ ಚಿಕ್ಕ ಚಿಕ್ಕ ಕಲ್ಲುಗಳಾಗಿಬಿಡುತ್ತವೆ. ಇವು ಕರುಳುಗಳಿಗೆ ಅಪಾಯ ಒಡ್ಡಬಲ್ಲವು.

ಖಾರವಾದ ಆಹಾರಗಳು

ಖಾಲಿ ಹೊಟ್ಟೆಯಲ್ಲಿ ಖಾರವಾದ ಮಸಾಲೆಯುಕ್ತ ಆಹಾರಗಳನ್ನು ಸೇವಿಸಿದರೆ ಮೊದಲೇ ಆಮ್ಲೀಯವಾಗಿದ್ದ ನಮ್ಮ ಜೀರ್ಣರಸ ಇನ್ನಷ್ಟು ಆಮ್ಲೀಯವಾಗುತ್ತದೆ.

ಖಾರವಾದ ಆಹಾರಗಳು

ಖಾಲಿಹೊಟ್ಟೆಯಲ್ಲಿ ನಮ್ಮ ಜೀರ್ಣರಸಗಳು ಹೊಟ್ಟೆಯ ಒಳಪದರವನ್ನು ಸುಡುತ್ತಿರುತ್ತವೆ. ಈ ಆಹಾರದ ಸೇವನೆಯ ಮೂಲಕ ಸುಡುವುದು ಇನ್ನಷ್ಟು ಹೆಚ್ಚುತ್ತದೆ. ಪರಿಣಾಮ, ಹೊಟ್ಟೆನೋವು, ಹೊಟ್ಟೆಯಲ್ಲಿ ಉರಿ ಪ್ರಾರಂಭವಾಗುತ್ತದೆ.

ಬಾಳೆಹಣ್ಣು

ಇದೊಂದು ಉತ್ತಮ ಆಹಾರವಾದರೂ ಖಾಲಿಹೊಟ್ಟೆಯಲ್ಲಿ ಸೇವಿಸಲು ತಕ್ಕುದಲ್ಲ. ಏಕೆಂದರೆ ಇದರಲ್ಲಿರುವ ಮೆಗ್ನೀಶಿಯಂ ತಕ್ಷಣವೇ ರಕ್ತದಲ್ಲಿರುವ ಕ್ಯಾಲ್ಸಿಯಂ ನೊಂದಿಗೆ ಬೆರೆತು ಸಮತೋಲನವನ್ನು ಏರುಪೇರಾಗಿಸುತ್ತದೆ.

ಸಿಹಿಗೆಣಸು

ಸಿಹಿಗೆಣಸನ್ನೂ ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಏಕೆಂದರೆ ಇದರಲ್ಲಿರುವ ಟ್ಯಾನಿನ್ ಮತ್ತು ಪೆಕ್ಟಿಕ್ ಪೋಷಕಾಂಶಗಳು ಜೀರ್ಣರಸದೊಂದಿಗೆ ಬೆರೆತಾಗ ಹೊಟ್ಟೆಯ ಒಳಪದರವನ್ನು ಇನ್ನಷ್ಟು ಪ್ರಚೋದನೆಗೊಳಿಸಿ ಹೆಚ್ಚಿನ ಜಠರರಸ ಸ್ರವಿಸಲು ಕಾರಣವಾಗುತ್ತದೆ.

ಸಿಹಿಗೆಣಸು

ಇದು ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ವಿಪರೀತವಾಗಿ ಹೆಚ್ಚಿಸಿ ಹೊಟ್ಟೆಯುರಿ, ಹೊಟ್ಟೆಯುಬ್ಬರ, ಹುಳಿತೇಗು, ಎದೆಯುರಿ ಮೊದಲಾದ ತೊಂದರೆಗಳನ್ನು ಉಂಟುಮಾಡುತ್ತದೆ.

ಮೊಸರು

ಖಾಲಿಹೊಟ್ಟೆಯಲ್ಲಿ ಬರೆಯ ಮೊಸರನ್ನೂ ಸೇವಿಸಬಾರದು. ಏಕೆಂದರೆ ಇದರಲ್ಲಿರುವ ಬ್ಯಾಕ್ಟೀರಿಯಾಗಳು ಖಾಲಿ ಹೊಟ್ಟೆಯಲ್ಲಿ ಜಠರದಲ್ಲಿರುವ ಜೀರ್ಣರಸದೊಂದಿಗೆ ಬೆರೆತು ಇನ್ನಷ್ಟು ಆಮ್ಲೀಯವಾಗಿಸುತ್ತವೆ. ಇದು ಹೊಟ್ಟೆಯ ಪದರವನ್ನು ಇನ್ನಷ್ಟು ಸುಡಲು ಕಾರಣವಾಗುತ್ತದೆ.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

English summary

Foods You Should Avoid On An Empty Stomach

There are certain foods which you should avoid eating on an empty stomach in order to prevent any kind of health hazards. Here is a list of foods which should be avoided on an empty stomach. Take a look.
Please Wait while comments are loading...
Subscribe Newsletter