For Quick Alerts
ALLOW NOTIFICATIONS  
For Daily Alerts

ಆರೋಗ್ಯದ ದೃಷ್ಟಿಯಿಂದ ದಿನಂಪ್ರತಿ ಇಂತಹ ಆಹಾರಗಳನ್ನು ಸೇವಿಸಿ

By vani nayak
|

ಇಂದಿನ ಗಡಿಬಿಡಿಯ ಜೀವನದಲ್ಲಿ ನಾವುಗಳು ಯಾವ ಆಹಾರವನ್ನು ಸೇವಿಸುತ್ತಿದ್ದೇವೆ ಎಂದು ಯೋಚಿಸುವುದನ್ನೇ ಮರೆತುಬಿಟ್ಟಿದ್ದೇವೆ. ಯಾವುದು ಸುಲಭವಾಗಿ ಸಿಗುತ್ತದೋ ಧೀರ್ಘಕಾಲದಲ್ಲಿ ಅದರಿಂದ ಆಗುವ ದುಷ್ಪರಿಣಾಮದ ಬಗ್ಗೆಯೂ ಯೋಚಿಸದೇ ತಿಂದುಬಿಡುತ್ತೇವೆ.

ಕೆಲವೊಮ್ಮೆ ದಿನದ ಬಹು ಮುಖ್ಯವಾದ ಆಹಾರ ಸೇವನೆಯಾದ ಬೆಳಗಿನ ತಿಂಡಿಯನ್ನೇ ಕೆಲಸಗಳ ಒತ್ತಡದಲ್ಲಿ ಮರೆತುಬಿಡುತ್ತೇವೆ. ಹೀಗೆ ಮಾಡುವುದರಿಂದ ನಮ್ಮ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಿ ರೋಗಗಳು ಬರುವ ಸಾಧ್ಯತೆ ಇರುತ್ತದೆ.

ಅನಾರೋಗ್ಯಕರ ಅನಿಯಮಿತ ಆಹಾರ ಸೇವನೆಯಿಂದ ಬೊಜ್ಜು, ಸೋಮಾರಿತನ ಬರುತ್ತದೆ. ಮೊದಲೇ ಇದಕ್ಕೆ ಸೂಕ್ತ ಪರಿಹಾರ ತೆಗೆದುಕೊಳ್ಳದಿದ್ದರೆ, ಮುಂದೆ, ಎಡಿಎಚ್ ಡಿ, ಆಲ್ಜೈಮರ್ಸ್, ಸಕ್ಕರೆ ಕಾಯಿಲೆ, ಹೈ ಬಿಪಿ, ಹೃದಯಕ್ಕೆ ಸಂಬಂಧಪಟ್ಟ ರೋಗಗಳು ಬರಬಹುದು. ಮಧುಮೇಹ ರೋಗ- ಆಹಾರಗಳ ಸೇವನೆಯಲ್ಲಿ ನಿಗಾ ವಹಿಸಿ...

ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದಿದ್ದರೆ, ಉತ್ತಮವಾದ ಆಹಾರವನ್ನು ಸೇವಿಸಬೇಕೆಂದಿದ್ದರೆ, ಇಲ್ಲಿ ಕೆಲವು ಆಹಾರಪದಾರ್ಥಗಳನ್ನು ಪಟ್ಟಿಯನ್ನು ನೀಡಲಾಗಿದೆ. ಇದನ್ನು ದಿನಂಪ್ರತಿ ಸೇವಿಸಿದರೆ ಆರೋಗ್ಯವಂತರಾಗಿ ರೋಗಮುಕ್ತರಾಗುತ್ತೀರಿ.

Foods That Repair A Day Of Unhealthy Eating

ದಿನಂಪ್ರತಿ ಮೀನನ್ನು ತಿನ್ನಬೇಕು. ಆಯ್ಲಿ ಫಿಶ್‌ಗಳಾದ ಸಾಲ್ಮನ್, ಮ್ಯಾಕೆರೆಲ್ ಮತ್ತು ಸಾರ್ಡೈನ್ಸ್ ಡಿಎಚ್ಎ, ವಿಟಮಿನ್ ಡಿ ಹಾಗು ಸೆಲೀನಿಯಮ್‌ಯಿಂದ ಸಮೃದ್ಧವಾಗಿರುತ್ತದೆ. ಇವು ನೆನೆಪಿನ ಶಕ್ತಿಯನ್ನು ವೃದ್ಧಿಸಿ, ಅತಿಯಾದ ಫ್ರುಕ್ಟೋಸ್‌ಯಿಂದ ಹಾನಿಯಾದ ಮೆದುಳಿನ ಅಂಗಾಶವನ್ನು ಗುಣಪಡಿಸಿ ಉರಿಯೂತದಿಂದಾಗುವ ಹಾನಿಯನ್ನು ತಪ್ಪಿಸುತ್ತದೆ. ದೇಹದೊಳಗಿನ ಕಲ್ಮಶ ಹೊರಹಾಕುವ ಮನೆಮದ್ದುಗಳು

ನೀವು ಶಾಕಾಹಾರಿಗಳಾದರೆ, ದಿನ ನಿತ್ಯದ ಆಹಾರದಲ್ಲಿ ಮೀನನ್ನು ಸೇವಿಸಲಾಗದಿದ್ದಲ್ಲಿ ಅಗಸೆ ಬೀಜ, ಚಿಯಾ ಬೀಜವನ್ನು ಸೇವಿಸಬೇಕು. ಇವು ಕ್ಯಾಲ್ಸಿಯಮ್, ಪ್ರೋಟೀನ್ ಮತ್ತು ಉತ್ಕರ್ಷಣ ದಿಂದ ಸಮೃದ್ಧವಾಗಿರುತ್ತದೆ. ಅತಿ ಹೆಚ್ಚು ನಾರಿನಾಂಶವಿದ್ದು ಒಮೇಗ3 ಯಿಂದ ಕೂಡಿರುತ್ತದೆ.

ನಾರಿನಾಂಶವು ದೇಹದಲ್ಲಿನ ಟಾಕ್ಸಿನ್ಸ್ ತೆಗೆದು ಹಾಕಿ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಇವುಗಳನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಸೇವಿಸುವುದು ಅತೀ ಮುಖ್ಯ. ಆಲೋವೀರವನ್ನು ಕ್ಲೆನ್ಸರ್ ಎಂದೇ ಹೇಳುತ್ತಾರೆ. ಇಡೀ ದಿನ ಅನಾರೋಗ್ಯಕರ ಆಹಾರವನ್ನು ಸೇವಿಸಿದ ಮೇಲೆ, ಆಲೋವೀರದ ತಿರುಳು ಅಥವಾ ಅದರ ರಸವನ್ನು ತೆಗೆದುಕೊಳ್ಳಬೇಕು. ಇದು ಕರುಳನ್ನು ಸ್ವಚ್ಛ ಮಾಡಿ, ಉರಿಊತಗಳನ್ನು ಶಮನ ಮಾಡುತ್ತದೆ. ಇದರಲ್ಲಿ ಅಮೀನೋ ಆಸಿಡ್, ವಿಟಮಿನ್ಸ್ ಹಾಗು ಮಿನರಲ್ಸ್‌ಗಳೂ ಹೇರಳವಾಗಿರುತ್ತದೆ.

ದಿನ ಪೂರ್ತಿ ಅನಾರೋಗ್ಯಕರ, ವಿಪರೀತವಾಗಿ ಆಹಾರವನ್ನು ಸೇವಿಸಿದರೆ, ರಾತ್ರಿ ಹೊತ್ತು ಲಗು ಉಪಹಾರ ಮಾಡಬೇಕು. ಇದಕ್ಕೆ ನೀವು ಚಿಕನ್ ಮತ್ತು ಫಿಶ್‌ಗಳ ಮೂಳೆಗಳಿಂದ ಮಾಡಿದ ಸಾರನ್ನು ತೆಗೆದುಕೊಳ್ಳಬೇಕು. ಇದು ದೇಹಕ್ಕೆ ಬೇಕಾಗಿರುವ ಮಿನರಲ್ಸ್ ಮತ್ತು ಪೌಷ್ಠಿಕಾಂಶವನ್ನು ಕೊಡುತ್ತದೆ ಹಾಗು ಸುಲಭವಾಗಿ ಪಚನವಾಗುತ್ತದೆ.

English summary

Foods That Repair A Day Of Unhealthy Eating

In this fast-paced life, we all have forgotten to sit and think about the food that we are eating. We grab anything that is convenient to us and end up eating it, without even thinking what it can do to our body in the long run. Sometimes we even end up skipping the most important meal of the day, breakfast. These habits can play havoc with our body and lead to certain diseases.
Story first published: Monday, August 22, 2016, 20:23 [IST]
X
Desktop Bottom Promotion