ನೆನಪಿಡಿ- ವಾಂತಿಯಾದ ಬಳಿಕ ಈ ಆಹಾರಗಳಿಂದ ದೂರವಿರಿ

By: manu
Subscribe to Boldsky

ಅತ್ಯಂತ ಅಹಿತಕರ ಅನುಭವ ಎಂದರೆ ವಾಕರಿಕೆ ಮತ್ತು ವಾಂತಿಯ ಬಳಿಕ ಆಗುವ ಅನುಭವ. ಸಾಮಾನ್ಯವಾಗಿ ಹೊಟ್ಟೆಯಲ್ಲಿ ಆಮ್ಲೀಯತೆಯುಂಟಾದರೆ ಎದುರಾಗುವ ಎದೆಯುರಿ ತೀಕ್ಷ್ಣವಾದ ಉರಿಯನ್ನು ಉಂಟುಮಾಡುತ್ತದೆ.    ಮುಜುಗರವನ್ನುಂಟು ಮಾಡುವ ವಾಂತಿ ಸಮಸ್ಯೆಗೆ ಫಲಪ್ರದ ಮನೆಮದ್ದುಗಳು

ವಾಕರಿಕೆಯಾಗಲು ಪರಸ್ಪರ ಹೊಂದಿಕೊಳ್ಳದ ಆಹಾರಗಳನ್ನು ಸೇವಿಸುವುದು ಪ್ರಮುಖ ಕಾರಣವಾಗಿದೆ. ಏಕೆಂದರೆ ಕೆಲವು ಆಹಾರಗಳ ಸಂಯೋಜನೆ ಹೊಟ್ಟೆಯಲ್ಲಿ ಆಮ್ಲೀಯತೆ ಅಥವಾ ಕ್ಷಾರೀಯತೆ ಹೆಚ್ಚಿಸುತ್ತದೆ.   ವಾಂತಿ ಸಮಸ್ಯೆ-ನೀವು ತಿಳಿಯಲೇಬೇಕಾದ ಸತ್ಯ ಸಂಗತಿಗಳು!

ಇವುಗಳು ಹೊಟ್ಟೆಯಲ್ಲಿಯೇ ಕೆಲವಾರು ಅನಿಲಗಳನ್ನು ನೊರೆಯಂತೆ ಉತ್ಪತ್ತಿ ಮಾಡುತ್ತದೆ. ಈ ನೊರೆ ಹೊಟ್ಟೆಯಿಂದ ಹೊರಹೋಗುವ ಪ್ರಯತ್ನದಲ್ಲಿ ಅನ್ನನಾಳಕ್ಕೆ ಪ್ರಚೋದನೆ ನೀಡುತ್ತದೆ. ಇದೇ ವಾಕರಿಕೆ.   ಪ್ರಯಾಣದ ವೇಳೆಯಲ್ಲಿ ವಾಂತಿಯ ಸಮಸ್ಯೆಗೆ ಪರಿಹಾರವೇನು?

ಇದು ಹೆಚ್ಚುತ್ತಿದ್ದಂತೆಯೇ ಅನ್ನನಾಳದ ಒತ್ತಡ ಮೀರಿ ಪಿಚಕಾರಿಯಂತೆ ಬಾಯಿಯ ಮೂಲಕ ಹೊರಬರುತ್ತದೆ. ಇದೇ ವಾಂತಿ. ಆಹಾರ ತಜ್ಞರು ಈ ಸ್ಥಿತಿಗೆ ಕೆಲವಾರು ಆಹಾರಗಳ ಸಂಯೋಜನೆಯನ್ನು ಕಂಡುಕೊಂಡಿದ್ದು ಇವುಗಳನ್ನು ಅನುಸರಿಸದಿರಲು ಸಲಹೆ ನೀಡುತ್ತಾರೆ. ಬನ್ನಿ, ಈ ವಿಧಾನಗಳನ್ನು ಮುಂದೆ ಓದಿ.....     

ಅಧಿಕ ಪ್ರಮಾಣದ ನೀರು

ವಾಂತಿಯಾದ ಬಳಿಕ ನೀರು ಕುಡಿಯುವಂತೆ ಹೆಚ್ಚಿನವರು ಸಲಹೆ ನೀಡುತ್ತಾರೆ. ಆದರೆ ವಾಂತಿಯ ಬಳಿಕ ಕೊಂಚವೇ ನೀರು ಕುಡಿದರೆ ಸಾಕು. ಹೆಚ್ಚಿನ ನೀರು ಕುಡಿದರೆ ಹೊಟ್ಟೆಯಲ್ಲಿ ಉಳಿದಿದ್ದ ಅಜೀರ್ಣವಾದ ಆಹಾರ ಮತ್ತೊಮ್ಮೆ ಹೊಟ್ಟೆ ತುಂಬಿ ವಾಂತಿಯಾಗುವ ಸಂಭವವಿರುತ್ತದೆ.

ಅಧಿಕ ಪ್ರಮಾಣದ ನೀರು

ಆದ್ದರಿಂದ ಅರ್ಧ ಲೋಟಕ್ಕೂ ಕಡಿಮೆ ನೀರು ಅಥವಾ ಸಾಧ್ಯವಾದರೆ ಚಿಕ್ಕ ಐಸ್ ತುಂಡೊಂದನ್ನು ಬಾಯಿಯಲ್ಲಿಟ್ಟು ಕರಗಿದ ನೀರನ್ನು ಕುಡಿಯುವುದೇ ಉತ್ತಮ.

ಹಸಿ ತರಕಾರಿ ಅಥವಾ ಸ್ಮೂಥಿಗಳು

ವಾಂತಿಯ ಬಳಿಕ ನಾರಿನ ಪ್ರಮಾಣ ಹೆಚ್ಚಿರುವ ತರಕಾರಿಗಳು ಅಥವಾ ಇವುಗಳಿಂದ ತಯಾರಿಸಿದ ಸ್ಮೂಥಿ ದ್ರವಗಳನ್ನು ಕುಡಿಯುವ ಮೂಲಕ ಇದು ಮತ್ತೊಮ್ಮೆ ಹೊಟ್ಟೆಯನ್ನು ಪ್ರಚೋದಿಸಿ ವಾಂತಿಗೆ ಕಾರಣವಾಗಬಹುದು.

ಟೀ ಅಥವಾ ಕಾಫಿ

ವಾಂತಿಯಾದ ಬಳಿಕ ಟೀ ಕಾಫಿಗಳನ್ನು ಸರ್ವಥಾ ಸೇವಿಸಬಾರದು. ಅಷ್ಟೇ ಅಲ್ಲ, ವಾಂತಿಯಾದ ದಿನವಿಡೀ ಕಾಫಿ ಟೀಗಳನ್ನು ಸೇವಿಸದೇ ಇರುವುದೇ ಉತ್ತಮ. ಏಕೆಂದರೆ ಕಾಫಿ ಮತ್ತು ಟೀಯಲ್ಲಿರುವ ಕೆಫೀನ್ ಮತ್ತೊಮ್ಮೆ ಹೊಟ್ಟೆಯಲ್ಲಿ ಪ್ರಚೋದನೆ ನೀಡುವ ಸಾಧ್ಯತೆಯಿದೆ. ಇದು ಇನ್ನೊಮ್ಮೆ ವಾಂತಿಯಾಗಲು ಕಾರಣವಾಗುತ್ತದೆ.

ಖಾರವಾದ ಆಹಾರಗಳು

ಮಸಾಲೆ ವಸ್ತುಗಳಿರುವ ಯಾವುದೇ ಆಹಾರವನ್ನು ವಾಂತಿಯಾದ ಬಳಿಕ ಸೇವಿಸಬಾರದು. ಕೆಲವು ಘಂಟೆಗಳ ಬಳಿಕವೂ! ಏಕೆಂದರೆ ಮಸಾಲೆ ವಸ್ತುಗಳು ಸುಲಭವಾಗಿ ಜೀರ್ಣವಾಗುವುದಿಲ್ಲ ಮತ್ತು ಹೊಟ್ಟೆಯಲ್ಲಿ ಮತ್ತೊಮ್ಮೆ ಆಮ್ಲೀಯತೆಯುಂಟುಮಾಡುತ್ತದೆ. ಇದರಿಂದ ಮತ್ತೊಮ್ಮೆ ವಾಂತಿಯಾಗುವ ಸಾಧ್ಯತೆಯಿದೆ.

ಉಪ್ಪಿನ ಮತ್ತು ಎಣ್ಣೆಯ ಜ್ಜಿಡ್ಡಿನ ಆಹಾರಗಳು

ಸಾಮಾನ್ಯವಾಗಿ ವಾಂತಿಯಾದ ಕೆಲವು ಘಂಟೆಗಳ ಬಳಿಕ ಹಸಿವಾಗಲು ಪ್ರಾರಂಭವಾಗುತ್ತದೆ. ಈ ಹಸಿವು ಸಾಮಾನ್ಯವಾಗಿ ಉಪ್ಪಿನ ಅಥವಾ ಖಾರದ ವಸ್ತುಗಳನ್ನೇ ಬಯಸುತ್ತದೆ. ಆದರೆ ಈ ಆಹಾರಗಳು ಹೊಟ್ಟೆಯಲ್ಲಿ ಮತ್ತೊಮ್ಮೆ ಪ್ರಚೋದನೆ ನೀಡುತ್ತದೆ. ಇದು ವಾಕರಿಕೆಗೆ ಕಾರಣವಾಗುತ್ತದೆ. ವಾಕರಿಕೆ ಹೆಚ್ಚಾದರೆ ಮತ್ತೊಮ್ಮೆ ವಾಂತಿಯಾಗುವ ಸಂಭವವಿದೆ. ಆದ್ದರಿಂದ ಎಣ್ಣೆಯಲ್ಲಿ ಕರಿದ, ಹುರಿದ, ಉಪ್ಪಿನ ಅಂಶವಿರುವ ಯಾವುದೇ ಆಹಾರವನ್ನು ಆ ದಿನ ಸೇವಿಸದಿರುವುದೇ ಹಿತಕರ.

ಬುರುಗು ಬರುವ ಲಘು ಪಾನೀಯಗಳು

ವಾಂತಿಯಾದ ಅಳಿಕ ಬುರುಗು ಬರುವ ಯಾವುದೇ ಲಘು ಪಾನೀಯ ಕುಡಿದರೆ ಇದು ತಕ್ಷಣವೇ ಹೊಟ್ಟೆಯಲ್ಲಿ ಭಾರೀ ಪ್ರಮಾಣದ ಬುರುಗು ಮೂಡಿಸಲು ಕಾರಣವಾಗುತ್ತದೆ.

ಬುರುಗು ಬರುವ ಲಘು ಪಾನೀಯಗಳು

ಏಕೆಂದರೆ ಬುರುಗು ಮೂಡಿಸಲು ಬಳಸಲಾಗಿರುವ ಕೆಫೀನ್ ಹೊಟ್ಟೆಯ ಒಳಭಾಗವನ್ನು ಪ್ರಚೋದಿಸಿ ಇನ್ನಷ್ಟು ವಾಕರಿಕೆಗೆ ಕಾರಣವಾಗುತ್ತದೆ. ಆದ್ದರಿಂದ ಎಷ್ಟೇ ಆಕರ್ಷಣೆ ಒಡ್ಡಿದರೂ ಲಘು ಪಾನೀಯ ವಾಂತಿಯಾದ ದಿನ ಬೇಡವೇ ಬೇಡ.

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Friday, October 28, 2016, 13:17 [IST]
English summary

Foods to avoid after vomiting

One of the most uneasy and uncomfortable feeling is how you feel right after vomiting or throwing up. Dealing with nausea and acidity after a bout of vomiting is another problem. By eating the right foods and avoiding certain food items, you can avoid nausea, another bout of vomiting and excessive acidity. So health experts says you should avoid these food items at all costs after vomiting.
Please Wait while comments are loading...
Subscribe Newsletter