For Quick Alerts
ALLOW NOTIFICATIONS  
For Daily Alerts

ಸರಿಯಾಗಿ ಮೂತ್ರ ಬರುವುದಿಲ್ಲವೇ? ಇಲ್ಲಿದೆ ಫಲಪ್ರದ ಮನೆಮದ್ದು

By Arshad
|

ಸಾಮಾನ್ಯವಾಗಿ ಶೌಚಾಲಯದ ವ್ಯವಸ್ಥೆ ಇಲ್ಲದೆಡೆ ಉದ್ಯೋಗಸ್ಥ ಮಹಿಳೆಯರು ಅತೀವ ತೊಂದರೆ ಅನುಭವಿಸುತ್ತಾರೆ. ಅನಿವಾರ್ಯವಾಗಿ ಮೂತ್ರವನ್ನು ಬಹಳ ಹೊತ್ತಿನವರೆಗೆ ತಡೆದು ಹಿಡಿದಿಟ್ಟುಕೊಳ್ಳಬೇಕಾಗುತ್ತದೆ. ಆದರೆ ಕೆಲವರಲ್ಲಿ ಮನೆಯಲ್ಲಿದ್ದರೂ ಬಹುಕಾಲದವರೆಗೆ ಮೂತ್ರಕ್ಕೆ ಅವಸರವಾಗದೇ ಇರುವುದು ಯಾವುದೋ ಒಂದು ತೊಂದರೆಯಾಗಿರಬಹುದು. ಆಗಾಗ್ಗೆ ಮೂತ್ರ ವಿಸರ್ಜನೆ ಮಾಡಬೇಕಾದ ಅನಿವಾರ್ಯತೆಯೇ?

ಅಸಂತುಲಿತ ಆಹಾರ, ಔಷಧಿಗಳ ಅಡ್ಡಪರಿಣಾಮಗಳು, ರಜೋ ನಿವೃತ್ತಿ ಕಾಲ, ಥೈರಾಯ್ಡ್ ಗ್ರಂಥಿಯ ಸ್ರಾವದಲ್ಲಿ ಏರುಪೇರು, ಯಕೃತ್ ಅಥವ ಮೂತ್ರಪಿಂಡಗಳ ಕ್ಷಮತೆಯಲ್ಲಿ ಏರುಪೇರು ಮೊದಲಾದವು ಇದಕ್ಕೆ ಪ್ರಮುಖ ಕಾರಣವಾಗಿವೆ. ಈ ತೊಂದರೆಗೆ ಕೆಲವು ಫಲಪ್ರದ ಮನೆಮದ್ದುಗಳಿವೆ, ಅವು ಯಾವುದು ಎಂಬುದನ್ನು ಮುಂದೆ ಓದಿ...

ಸತತವಾಗಿ ನೀರು ಕುಡಿಯುತ್ತಿರಿ

ಸತತವಾಗಿ ನೀರು ಕುಡಿಯುತ್ತಿರಿ

ಹೆಚ್ಚು ನೀರು ಸೇವಿಸುವ ಮೂಲಕ ಬಲವಂತವಾಗಿಯಾದರೂ ಮೂತ್ರದ ಪ್ರಮಾಣವನ್ನು ಹೆಚ್ಚಿಸಬಹುದು. ಆದರೆ ಈ ನೀರನ್ನು ಒಮ್ಮೆಲೇ ಕುಡಿಯಬಾರದು. ಸ್ವಲ್ಪ ಸ್ವಲ್ಪವಾಗಿ ಇಡಿಯ ದಿನ ಕುಡಿಯುತ್ತಿರಬೇಕು. ಉತ್ತಮವಾದ ವಿಧಾನವೆಂದರೆ ಪ್ರತಿ ಗಂಟೆಗೆ ಒಂದು ಚಿಕ್ಕ ಲೋಟದಷ್ಟು ನೀರು ಕುಡಿಯುವುದು. ಒಮ್ಮೆಲೇ ಅತಿ ಹೆಚ್ಚು ನೀರು ಕುಡಿದರೂ ಇದು ಕೆಲವು ಸೂಕ್ಷ್ಮ ಅಂಗಗಳ ಮೇಲೆ ಅತೀವ ಒತ್ತಡ ಹೇರಿ ಅಪಾಯಕಾರಿಯಾಗಿ ಪರಿಣಮಿಸಬಹುದು.

ಕಡಿಮೆ ಪ್ರಮಾಣದ ಉಪ್ಪು ಮತ್ತು ಸಕ್ಕರೆ

ಕಡಿಮೆ ಪ್ರಮಾಣದ ಉಪ್ಪು ಮತ್ತು ಸಕ್ಕರೆ

ಆಹಾರದ ಮೂಲಕ ಸೇವಿಸುವ ಉಪ್ಪನ್ನು ಹೊರಹಾಕಲು ನಮ್ಮ ಜೀವಕೋಶಗಳು ಬಹಳವಾಗಿ ಶ್ರಮಿಸಬೇಕಾಗುತ್ತದೆ. ಈ ಶ್ರಮ ಅಲ್ಲಿ ವ್ಯರ್ಥವಾದ ಕಾರಣ ನೀರನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಸೋಲುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕಡಿಮೆ ಪ್ರಮಾಣದ ಉಪ್ಪು ಮತ್ತು ಸಕ್ಕರೆ

ಕಡಿಮೆ ಪ್ರಮಾಣದ ಉಪ್ಪು ಮತ್ತು ಸಕ್ಕರೆ

ಅಲ್ಲದೆಹೆಚ್ಚಿನ ಸಕ್ಕರೆಯ ಸೇವನೆಯಿಂದಲೂ ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಾಗುತ್ತದೆ, ಪರಿಣಾಮವಾಗಿ ಉಪ್ಪನ್ನು, ಅದರಲ್ಲೂ ವಿಶೇಷವಾಗಿ ಸೋಡಿಯಂ ಲವಣಗಳನ್ನು ಹೊರಹಾಕುವ ಸಾಮರ್ಥ್ಯವನ್ನು ಕಡಿಮೆಗೊಳಿಸುತ್ತದೆ. ಆದ್ದರಿಂದ ಆದಷ್ಟು ಸಕ್ಕರೆ ಮತ್ತು ಉಪ್ಪು ರಹಿತ ಆಹಾರವನ್ನು ಸೇವಿಸಬೇಕು.

ನೈಸರ್ಗಿಕ ಮೂತ್ರವರ್ಧಕಗಳನ್ನು ಸೇವಿಸಿ

ನೈಸರ್ಗಿಕ ಮೂತ್ರವರ್ಧಕಗಳನ್ನು ಸೇವಿಸಿ

ಮೂತ್ರವನ್ನು ಬಲವಂತವಾಗಿ ಹೆಚ್ಚಿಸಲು ಕೆಲವು ಔಷಧಿಗಳಿವೆ. ಆದರೆ ಅನಿವಾರ್ಯವಾದ ಹೊರತು ನೈಸರ್ಗಿಕ ಮೂತ್ರವರ್ಧಕಗಳನ್ನೇ ಪ್ರಥಮವಾಗಿ ಆಯ್ದುಕೊಳ್ಳಿ. ಎಳನೀರು ನಿಸರ್ಗದಲ್ಲಿ ಲಭ್ಯವಿರುವ ಅತ್ಯುತ್ತಮ ಮೂತ್ರವರ್ಧಕ. ಇದರ ಹೊರತಾಗಿ ಕ್ರ್ಯಾನ್ಬೆರಿ ಜ್ಯೂಸ್, ಹಸಿ ಕೋಸಿನ ಎಲೆಗಳು, ಸೇಬಿನ ಶಿರ್ಕಾ, ಹಸಿರು ಟೀ, ಪಾರ್ಸ್ಲೇ ಎಲೆಗಳು, ದೊಡ್ಡಜೀರಿಗೆ ಕುದಿಸಿದ ನೀರು ಮೊದಲಾದವು ನೈಸರ್ಗಿಕ ಮೂತ್ರವರ್ಧಕಗಳಾಗಿದ್ದು ಆರೋಗ್ಯವನ್ನು ವೃದ್ಧಿಸುತ್ತವೆ.

ಗಿಡಮೂಲಿಕೆಗಳ ಟೀ

ಗಿಡಮೂಲಿಕೆಗಳ ಟೀ

ಪಾರ್ಲ್ಸೇ ಎಲೆಗಳನ್ನು ಕೊಂಚ ನೀರಿನಲ್ಲಿ ಕುದಿಸಿ ಇದಕ್ಕೆ ನಿಮ್ಮ ಆಯ್ಕೆಯ ಟೀ ಪುಡಿಯನ್ನು ಕೊಂಚ ಹಾಕಿ ಸೋಸಿ ಕುಡಿಯುವ ಮೂಲಕವೂ ಮೂತ್ರದ ಪ್ರಮಾಣ ಹೆಚ್ಚುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳಿಗ್ಗೆದ್ದ ಬಳಿಕ ಬೆಳ್ಳುಳ್ಳಿಯ ಒಂದೆರಡು ಎಸಳುಗಳನ್ನು ಹಸಿಯಾಗಿ ಖಾಲಿಹೊಟ್ಟೆಯಲ್ಲಿ ತಿನ್ನುವ ಮೂಲಕವೂ ಉತ್ತಮ ಪರಿಹಾರ ಪಡೆಯಬಹುದು. ಇದು ಕೊಬ್ಬನ್ನು ಕಡಿಮೆಗೊಳಿಸಲೂ ಉತ್ತಮವಾಗಿದೆ.

ಐಸ್ ಪ್ಯಾಕ್

ಐಸ್ ಪ್ಯಾಕ್

ಒಂದು ವೇಳೆ ಮೂತ್ರ ಕಟ್ಟಿಕೊಂಡಿದ್ದು ಹೊಟ್ಟೆಯ ಅಥವಾ ಕೆಳಹೊಟ್ಟೆಯ ಭಾಗದಲ್ಲಿ ಕೊಂಚ ನೋವು ಅನ್ನಿಸುತ್ತಿದ್ದರೆ ಆ ಭಾಗಕ್ಕೆ ತೆಳುವಾದ ಬಟ್ಟೆಯಲ್ಲಿ ಕೆಲವು ಐಸ್ ತುಂಡುಗಳನ್ನಿರಿಸಿ ಮಡಚಿ ಈ ಬಟ್ಟೆಯನ್ನು ಕೊಂಚ ಹೊತ್ತಿನವರೆಗೆ ಇಡಿ. ಇದರಿಂದ ಮೂತ್ರ ಕಟ್ಟಿಕೊಂಡಿದ್ದರೆ ಮುಂದುವರೆಯಲು ನೆರವಾಗುತ್ತದೆ. ಆದರೆ ಇದು ಮಧುಮೇಹಿಗಳಿಗೆ ಸಲ್ಲದು.

English summary

Effective Home Remedies For Treating Water Retention

While water retention is normal if you are pregnant or menstruating, it needs cure if you are not. It could indicate imbalanced diet, drug reaction, menopause, thyroid, liver or kidney disorders among others. Here are some ways you can treat it at home:Have lots of water: More water means less water retention but make sure that your water intake is evenly spread out through the day. Guzzling water down in a short period of time can lead to water intoxication
Story first published: Monday, February 22, 2016, 20:22 [IST]
X
Desktop Bottom Promotion