For Quick Alerts
ALLOW NOTIFICATIONS  
For Daily Alerts

ನಿದ್ದೆ ಕೆಡಿಸುವ ಹಲ್ಲು ನೋವಿಗೆ, ಪವರ್ ಫುಲ್ ಮನೆಮದ್ದು

By Manu
|

ಹಲ್ಲುನೋವು ಎದುರಾದರೆ ಇದನ್ನು ಅನುಭವಿಸಿದವರಿಗೇ ಇದರ ಕಷ್ಟ ಗೊತ್ತು. ಇದಕ್ಕೆ ಹಲವಾರು ಕಾರಣಗಳಿವೆ. ಹಲ್ಲುಗಳಲ್ಲಿ ಕುಳಿ, ಒಸಡುಗಳಲ್ಲಿ ಸೋಂಕು, ತೆರೆದಿರುವ ಹಲ್ಲಿನ ಬೇರು, ಸೀಳಿದ ಹಲ್ಲು, ಹಲ್ಲಿನ ಕುಳಿಯನ್ನು ತುಂಬಿದ್ದುದು ಸಡಿಲವಾಗಿರುವುದು, ದವಡೆಯ ಬೋನಿನಲ್ಲಿ ಸೋಂಕು ಇತ್ಯಾದಿಗಳು. ಅಯ್ಯೋ ವಿಪರೀತ ಹಲ್ಲು ನೋವು, ನಿದ್ದೆಯೇ ಬರುತ್ತಿಲ್ಲ

ಅತಿಯಾದ ಹಲ್ಲುನೋವಿಗೆ ಪ್ರಮುಖವಾಗಿ ಹಲ್ಲಿನ ಬುಡದಲ್ಲಿ ಆದ ಸೋಂಕು ಕಾರಣವಾಗಿದೆ. ಪಲ್ಪ್ ಎಂದು ಕರೆಯಲಾಗುವ ಈ ಭಾಗದಲ್ಲಿ ಅತಿ ಹೆಚ್ಚಿನ ನರಾಗ್ರಗಳಿದ್ದು ಇವು ಅತಿ ಸಂವೇದನಾಶೀಲವಾಗಿರುತ್ತವೆ. ಈ ಭಾಗದಲ್ಲಿ ಸೋಂಕು ಉಂಟಾಗಲು ಕೆಲವಾರು ಕಾರಣಗಳಿವೆ. ಈ ನೋವನ್ನು ಕಡಿಮೆಗೊಳಿಸಲು ಕೆಲವು ಮನೆಮದ್ದುಗಳಿದ್ದು ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ:

ಉಪ್ಪು ಮತ್ತು ಕಾಳುಮೆಣಸು

ಉಪ್ಪು ಮತ್ತು ಕಾಳುಮೆಣಸು

ಇವುಗಳಲ್ಲಿರುವ ಬ್ಯಾಕ್ಟ್ರೀರಿಯಾ ಮತ್ತು ಉರಿಯೂತ ನಿವಾರಕ ಗುಣಗಳು ಒಸಡುಗಳಲ್ಲಿ ಆಗಿರುವ ಸೋಂಕು ನಿವಾರಿಸಿ ನೋವು ಕಡಿಮೆಯಾಗಲು ನೆರವಾಗುತ್ತವೆ.

* ಒಂದು ಬೋಗುಣಿಯಲ್ಲಿ ಸಮಪ್ರಮಾಣದಲ್ಲಿ ಉಪ್ಪು ಮತ್ತು ಕಾಳುಮೆಣಸು ಬೆರೆಸಿ ಕೆಲವು ಹನಿ ನೀರು ಸೇರಿಸಿ ದಪ್ಪನೆಯ ಲೇಪನ ತಯಾರಿಸಿ

* ಈ ಲೇಪನವನ್ನು ನೋವು ಕೊಡುತ್ತಿರುವ ಭಾಗದ ಮೇಲೆ ಹಚ್ಚಿ ಕೆಲವು ನಿಮಿಷ ಹಾಗೇ ಬಿಡಿ. ಬಳಿಕ ಬಾಯಿಯನ್ನು ಮುಕ್ಕಳಿಸಿ ಉಗಿಯಿರಿ.

* ಈ ವಿಧಾನವನ್ನು ದಿನಕ್ಕೆ ಎರಡು ಬಾರಿಯಂತೆ ನೋವು ಕಡಿಮೆಯಾಗುವವರೆಗೆ ಮುಂದುವರೆಸಿ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಇದರ ಪ್ರತಿಜೀವಕ ಮತ್ತು ಔಶಧೀಯ ಗುಣಗಳು ಹಲ್ಲುನೋವನ್ನು ಕಡಿಮೆಗೊಳಿಸಲು ಶಕ್ತವಾಗಿವೆ.

* ಹಸಿ ಬೆಳ್ಳುಳ್ಳಿ ಜಜ್ಜಿ ಅಥವಾ ಪುಡಿಯನ್ನು ಉಪಯೋಗಿಸಿ ಕೊಂಚ ಉಪ್ಪು ಸೇರಿಸಿ ಮಿಶ್ರಣ ಮಾಡಿ. ಕೊಂಚ ನೀರು ಸೇರಿಸಿ ದಪ್ಪನೆಯ ಲೇಪನವನ್ನಾಗಿಸಿ.

* ಈ ಲೇಪನವನ್ನು ಬಾಧಿತ ಹಲ್ಲಿನ ಮೇಲೆ ಇರಿಸಿ. ಸಾಧ್ಯವಾದರೆ ಹಸಿ ಬೆಳ್ಳುಳ್ಳಿಯ ಎಸಳನ್ನು ಬಾಧಿತ ಹಲ್ಲಿನ ಮೇಲೆ ಇಟ್ಟು ಜಗಿಯಿರಿ.

* ಈ ವಿಧಾನವನ್ನು ದಿನಕ್ಕೆರಡು ಬಾರಿಯಂತೆ ಕೆಲವು ದಿನ ಅನುಸರಿಸಿ.

ಲವಂಗ

ಲವಂಗ

ಲವಂಗದ ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ನಿವಾರಕ, ಆಂಟಿ ಆಕ್ಸಿಡೆಂಟು ಮತ್ತು ಅರವಳಿಕೆ ನೀಡುವ ಗುಣಗಳು ಹಲ್ಲುನೋವನ್ನು ಕಡಿಮೆಗೊಳಿಸಲು ನೆರವಾಗುತ್ತವೆ. ಅದರಲ್ಲೂ ಸೋಂಕು ಉಂಟಾಗಿ ನೋವಾಗುತ್ತಿದ್ದರೆ ಈ ವಿಧಾನ ಸೂಕ್ತವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಲವಂಗ

ಲವಂಗ

* ಎರಡು ಲವಂಗಗಳನ್ನು ನುಣ್ಣಗೆ ಅರೆದು ಕೊಂಚ ಆಲಿವ್ ಎಣ್ಣೆ ಅಥವಾ ಬೇರಾವುದಾದರೂ ಅಡುಗೆ ಎಣ್ಣೆ ಬೆರೆಸಿ ಸೋಂಕು ತಗುಲಿದ ಭಾಗಕ್ಕೆ ಹಚ್ಚಿ

* ಪರ್ಯಾಯವಾಗಿ ಹತ್ತಿಯುಂಡೆಯನ್ನು ಲವಂಗದ ಎಣ್ಣೆಯಲ್ಲಿ ಅದ್ದಿ ನೋವಿರುವ ಭಾಗದಲ್ಲಿರಿಸಿ ಕಚ್ಚಿಕೊಳ್ಳಿ.

* ಇನ್ನೊಂದು ವಿಧಾನದಲ್ಲಿ ಕೊಂಚ ಬಿಸಿನೀರಿಗೆ ಕೆಲವು ಹನಿ ಲವಂಗದ ಎಣ್ಣೆ ಬೆರೆಸಿ ಮುಕ್ಕಳಿಸಿ.

ಈರುಳ್ಳಿ

ಈರುಳ್ಳಿ

ಇದರ ಕೀಟಾಣುವಿರೋಧಿ ಮತ್ತು ನಂಜುನಿರೋಧಕ ಗುಣಗಳು ಹಲ್ಲುನೋವು ಕಡಿಮೆಗೊಳಿಸಲು ನೆರವಾಗುತ್ತವೆ. ವಿಶೇಷವಾಗಿ ಒಸಡಿನಲ್ಲಿ ಸೋಂಕು ಉಂಟಾಗಿದ್ದರೆ ಈ ವಿಧಾನ ಉತ್ತಮವಾಗಿದೆ.

ಹಸಿ ಈರುಳ್ಳಿಯನ್ನು ನೋವಿರುವ ಹಲ್ಲುಗಳ ಭಾಗದಲ್ಲಿ ಅಗಿಯಿರಿ. ಇಲ್ಲದಿದ್ದರೆ ಕೆಲವು ನಿಮಿಷಗಳವೆರೆಗೆ ಹಸಿ ಈರುಳ್ಳಿಯ ಭಾಗವೊಂದನ್ನು ಒಸಡಿಗೆ ತಗಲುವಂತೆ ಇರಿಸಿ.

ಉಗುರುಬೆಚ್ಚನೆಯ ಉಪ್ಪುನೀರು

ಉಗುರುಬೆಚ್ಚನೆಯ ಉಪ್ಪುನೀರು

ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಅರ್ಧ ಚಮಚ ಉಪ್ಪು ಸೇರ್‍ಇಸಿ ಈ ನೀರಿನಿಂದ ಬಾಯಿಯನ್ನು ಮುಕ್ಕಳಿಸುತ್ತಾ ಇರಿ. ಇದರಿಮ್ದ ಸೋಂಕು ಉಂಟಾಗಿದ್ದ ಒಸಡಿನಲ್ಲಿರುವ ಬ್ಯಾಕ್ಟೀರಿಯಾಗಳು ತೊಲಗಿ ಸೋಂಕು ಹಾಗೂ ನೋವು ಕಡಿಮೆಯಾಗುತ್ತದೆ.

English summary

Effective Home Remedies for Toothache

Toothaches can vary greatly, from mild soreness to an unbearable throbbing pain in your teeth or around your jaws. Some of the main causes of toothaches are cavities, an infection, an exposed tooth root, a cracked tooth, gum disease, a loose filling, or jaw joint disorder. So here are some home remedies to cure Toothache have a look
X
Desktop Bottom Promotion