For Quick Alerts
ALLOW NOTIFICATIONS  
For Daily Alerts

ಊತ-ಸ್ನಾಯು ಸೆಳೆತಕ್ಕೆ, ಹಿಡಿಯಷ್ಟು 'ನುಗ್ಗೆ ಸೊಪ್ಪು' ಸಾಕು!

ನುಗ್ಗೆ ಎಲೆಗಳು ಕೊಂಚ ಕಹಿಯಾಗಿರುವ ಕಾರಣ ಹೆಚ್ಚಿನವರು ಇದರ ಬಗ್ಗೆ ಒಲವು ತೋರುವುದಿಲ್ಲ. ಕೊಳ್ಳುವವರೂ ಇಲ್ಲದೇ ಇದು ಮಾರಾಟಕ್ಕೂ ಬರುವುದಿಲ್ಲ. ಆದರೆ ಈ ಸೊಪ್ಪಿನ ಬಗ್ಗೆ ಅರಿತಿರಿವವರಿಗೆ ಗೊತ್ತು ಇದರ ತಾಕತ್ತು...

By manu
|

ಸಾಂಬಾರಿನ ಒಂದು ಅವಿಭಾಜ್ಯ ಅಂಗವಾಗಿರುವ ನುಗ್ಗೇಕಾಯಿಯನ್ನು ಕಂಡರೆ ಹೆಚ್ಚಿನವರಿಗೆ ಅಸಡ್ಡೆ. ಇದರ ರೂಪ ಕಂಡೇ ಇದಕ್ಕೆ ಟಿಂಬರ್ ಎಂಬ ಅಡ್ಡಹೆಸರಿನಿಂದ ಅವಹೇಳನವನ್ನೂ ಮಾಡುತ್ತಾರೆ. ಆದರೆ ವಾಸ್ತವವಾಗಿ ನುಗ್ಗೇಕಾಯಿ ಹಲವು ಆರೋಗ್ಯಕರ ಗುಣಗಳ ಆಗರವಾಗಿದೆ. ಅಂತೆಯೇ ಇದರ ಚಿಕ್ಕ ಚಿಕ್ಕ ಎಲೆಗಳೂ ಹಲವು ವಿಧದಲ್ಲಿ ಆರೋಗ್ಯಕ್ಕೆ ಪೂರಕವಾಗಿವೆ. ನುಗ್ಗೆಕಾಯಿ ಎಲೆಗಳ ಸೌಂದರ್ಯವರ್ಧಕ ಗುಣಗಳು

Drumstick leaves

ಆದರೆ ಈ ಎಲೆಗಳು ಕೊಂಚ ಕಹಿಯಾಗಿರುವ ಕಾರಣ ಹೆಚ್ಚಿನವರು ಇದರ ಬಗ್ಗೆ ಒಲವು ತೋರುವುದಿಲ್ಲ. ಕೊಳ್ಳುವವರೂ ಇಲ್ಲದೇ ಇದು ಮಾರಾಟಕ್ಕೂ ಬರುವುದಿಲ್ಲ.

ಆದರೆ ಈ ಸೊಪ್ಪಿನ ಬಗ್ಗೆ ಅರಿತಿರಿವವರಿಗೆ ಇದರ ಮಧುಮೇಹ ನಿವಾರಕ (antihyperglycaemic (anti-diabetes) ಗುಣದ ಬಗ್ಗೆ ಖಂಡಿತಾ ಗೊತ್ತಿರುತ್ತದೆ. ಆದರೆ ಈ ಸೊಪ್ಪು ಬಾವು ಮತ್ತು ಸ್ನಾಯುಗಳ ಸೆಳೆತವನ್ನು ಕಡಿಮೆ ಮಾಡಲು ಅದ್ಭುತ ಔಷಧಿಯೂ ಹೌದು ಎಂದು ಗೊತ್ತಿರಲಿಕ್ಕಿಲ್ಲ. ಕಾಯಿ ಕಾಯಿ ನುಗ್ಗೆಕಾಯಿಯ ಪವರ್‌ಗೆ ತಲೆಬಾಗಲೇಬೇಕು!

ಕ್ರೀಡಾಪಟುಗಳಿಗೆ ಆಗಾಗ ಚಿಕ್ಕಪುಟ್ಟ ಗಾಯಗಳು, ಬಿದ್ದು ಅಥವಾ ಜಜ್ಜಿ ಕೆಲವು ಕಡೆ ಬಾವು ಬರುತ್ತದೆ. ಸ್ನಾಯುಗಳನ್ನು ವಿಪರೀತವಾಗಿ ದಣಿಸಿದಾಗ ಕೆಲವೊಮ್ಮೆ ಸೆಳೆತಕ್ಕೂ ಒಳಗಾಗುತ್ತವೆ. ಈಜುಪಟುಗಳು, ಸ್ಲೈಕಲ್ ತುಳಿಯುವವರು ಕಾಲಿನ ಮೀನಖಂಡದ ಸೆಳೆತಕ್ಕೆ ಸಾಮಾನ್ಯವಾಗಿ ಒಳಗಾಗುತ್ತಾರೆ. ನುಗ್ಗೆ ಸೊಪ್ಪಿನ ರೆಸಿಪಿ: ಸರ್ವ ರೋಗಕ್ಕೂ ರಾಮಬಾಣ

ಈ ಭಾಗದಲ್ಲಿ ಕೊಂಚ ನುಗ್ಗೆಸೊಪ್ಪನ್ನು ಅರೆದು ಹಚ್ಚಿ ಒಣಗಲು ಬಿಟ್ಟರೆ ಶೀಘ್ರದಲ್ಲಿಯೇ, ಯಾವುದೇ ಅಡ್ಡಪರಿಣಾಮವಿಲ್ಲದೇ ಈ ಬಾವು ಮತ್ತು ಸೆಳೆತ ಇಲ್ಲವಾಗುತ್ತದೆ. ಮುಂದಿನ ಬಾರಿ ನಿಮ್ಮ ಆತ್ಮೀಯರಲ್ಲಿ ಯಾರಿಗೇ ಆದರೂ ಈ ತರಹದ ತೊಂದರೆ ಎದುರಾದರೆ ತಕ್ಷಣ ಹಚ್ಚಲು ಕೊಂಚ ನುಗ್ಗೆಸೊಪ್ಪನ್ನು ಅರೆದು ಫ್ರಿಜ್ಜಿನಲ್ಲಿ ಶೇಖರಿಸಿಡಿ.

ಈ ಎಲೆಗಳು ನೈಸರ್ಗಿಕವಾದ ನೋವು ನಿವಾರಕವಾಗಿದೆ. ಅಂದರೆ ನೋವನ್ನು ನಿಜವಾಗಿಯೂ ಕಡಿಮೆ ಮಾಡಿ ನೋವನ್ನು ಇಲ್ಲವಾಗಿಸುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ನೋವು ನಿವಾರಕ ಅಥವಾ ಪೇಯ್ನ್ ಕಿಲ್ಲರ್ ಮಾತ್ರೆಗಳು ನೋವನ್ನು ನಿವಾರಿಸುವುದಿಲ್ಲ, ಬದಲಿಗೆ ನೋವಿನ ಸೂಚನೆಯನ್ನು ಮೆದುಳಿಗೆ ತಲುಪದಂತೆ ಮಾಡುತ್ತವೆ ಅಷ್ಟೇ. ಮಧುಮೇಹ, ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ- ನುಗ್ಗೆ ಸೊಪ್ಪು

ಈ ಸೊಪ್ಪಿನಲ್ಲಿರುವ ಉರಿಯೂತ ನಿವಾರಕ ಗುಣ ಸ್ನಾಯುಗಳ ಸೆಳೆತ ಮತ್ತು ಬಾವನ್ನು ಕಡಿಮೆ ಮಾಡುತ್ತದೆ ಜೊತೆಗೇ ದೇಹದ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಇದರಿಂದ ದೇಹ ಇನ್ನಷ್ಟು ರೋಗಾಣುಗಳ ಬಾಧೆಗೆ ತುತ್ತಾಗದಂತೆ ನೋಡಿಕೊಳ್ಳುತ್ತದೆ.

ಅಲ್ಲದೇ ಈ ಸೊಪ್ಪು ಒಂದು ಉತ್ತಮ ಸೂಕ್ಷ್ಮಜೀವಿ ನಿವಾರಕವೂ ಆಗಿದ್ದು ಗಾಯದಿಂದ ಸೋಂಕು ಆಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇದೇ ಕಾರಣಕ್ಕೆ ಆಯುರ್ವೇದ ಮತ್ತು ಯುನಾನಿ ವೈದ್ಯಪದ್ಧತಿಯಲ್ಲಿ ಈ ಸೊಪ್ಪನ್ನು ನಂಜುನಿವರಕವಾಗಿ ಬಳಲಾಗುತ್ತದೆ. ಚೋಟುದ್ದ ನುಗ್ಗೆಯಲ್ಲಿದೆ ಲೆಕ್ಕಕ್ಕೆ ಸಿಗದ ಆರೋಗ್ಯ ಗುಣಗಳು

ಈ ಸೊಪ್ಪಿನ ಬಳಕೆ ಹೇಗೆ?
ಒಂದು ವೇಳೆ ಪೆಟ್ಟಾಗಿ ಬಾವು ಬಂದಿದ್ದರೆ ಅಥವಾ ಸ್ನಾಯುಗಳ ಸೆಳೆತದಿಂದ ಅಪಾರ ನೋವು ಆಗುತ್ತಿದ್ದರೆ ಸಾಧ್ಯವಾದಷ್ಟೂ ತಾಜಾ ಎಲೆಗಳನ್ನು ಅರೆದು ತಕ್ಷಣ ಈ ಭಾಗಕ್ಕೆ ಹಚ್ಚಬೇಕು. ಒಂದು ವೇಳೆ ಸಾಧ್ಯವಿಲ್ಲದಿದ್ದರೆ ಸಮಯಾವಕಾಶ ಸಿಕ್ಕಾಗ ಈ ಎಲೆಗಳನ್ನು ಅರೆದು ಒಂದು ಬಾಟಲಿಯಲ್ಲಿ ಫ್ರಿಜ್ಜಿನಲ್ಲಿ ಭದ್ರವಾಗಿ ಶೇಖರಿಸಿ ಅಗತ್ಯ ಬಿದ್ದಾಗ ಉಪಯೋಗಿಸಬಹುದು.

ಈ ಎಲೆಗಳನ್ನು ತುರಿಕೆಗೂ ಅತ್ಯಂತ ಸಮರ್ಥವಾದ ಔಷಧಿಯ ರೂಪದಲ್ಲಿ ಬಳಸಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಉರಿಯೂತ ಉಂಟಾದಾಗ ದೇಹದ ಇತರ ಭಾಗಗಳಲ್ಲಿಯೂ ತುರಿಕೆ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಎಲೆಗಳನ್ನು ಅರೆದು ಬಾವು ಅಥವಾ ಊತ ಬಂದಿದ್ದ ಸ್ಥಳದಲ್ಲಿ ನಿಧಾನವಾದ ಮಸಾಜ್ ಮೂಲಕ ಹಚ್ಚಬೇಕು. ಇದರಿಂದ ಬಾವು ಕಡಿಮೆಯಾಗುವ ಜೊತೆಗೇ ತುರಿಕೆಯೂ ಕಡಿಮೆಯಾಗುತ್ತದೆ....

English summary

Drumstick leaves – natural remedy for swelling and muscle cramps

Drumstick leaves act as a natural analgesic, which when applied externally can provide pain relief. Moreover, the leaves also contain natural anti-inflammatory compounds, which not only relieve pain and inflammation but also modulate the immune system, thereby preventing further worsening of the condition.
X
Desktop Bottom Promotion