For Quick Alerts
ALLOW NOTIFICATIONS  
For Daily Alerts

ಐದೇ ದಿನದಲ್ಲಿ ಬೊಜ್ಜು ನಿಯಂತ್ರಣಕ್ಕೆ! ಈ ಟಿಪ್ಸ್ ಪಾಲಿಸಿ

By Arshad
|

ನಮ್ಮ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬುಗಳಲ್ಲಿ ಕರಗಿಸಲು ಅತ್ಯಂತ ಕಷ್ಟಕರವಾದ ಕೊಬ್ಬು ಎಂದರೆ ಸೊಂಟದ ಸುತ್ತ ತುಂಬಿಕೊಂಡಿರುವ ಕೊಬ್ಬು. ಏಕೆಂದರೆ ನಮ್ಮ ದೇಹ ಈ ಭಾಗದಲ್ಲಿ ಮೊದಲಾಗಿ ಕೊಬ್ಬಿನ ಸಂಗ್ರಹ ಪ್ರಾರಂಭಿಸಿದರೂ ಉಪಯೋಗಿಸುವಾಗ ಅತ್ಯಂತ ಕಡೆಯದಾಗಿ ಬಳಸಿ ಕೊಳ್ಳುತ್ತದೆ. ಕೊಬ್ಬು ಕರಗಿಸಲು ನಡೆಸುವ ನಮ್ಮ ಪ್ರಯತ್ನಗಳೆಲ್ಲಾ ದೇಹದ ಉಳಿದ ಭಾಗದ ಕೊಬ್ಬನ್ನೆಲ್ಲಾ ಬಳಸಿ ಖಾಲಿಯಾದ ಬಳಿಕವೇ ಈ ಕೊಬ್ಬು ಕರಗಲು ಪ್ರಾರಂಭವಾಗುತ್ತದೆ. ಆದ್ದರಿಂದ ಈ ಕೊಬ್ಬು ಕರಗಿಸಲು ಸತತ ವ್ಯಾಯಮ, ಆಹಾರದಲ್ಲಿ ನಿಯಂತ್ರಣ, ಅನಾರೋಗ್ಯ ಆಹಾರಗಳಿಗೆ ಕಡಿವಾಣ ಮೊದಲಾದವು ಅಗತ್ಯವಾಗಿದೆ. ನಿಮ್ಮ ಪ್ರಯತ್ನಕ್ಕೆ ನಿಸರ್ಗದ ನೆರವನ್ನೂ ಪಡೆಯಬಹುದು. ಬರೀ 15 ದಿನಗಳಲ್ಲಿಯೇ ಬೊಜ್ಜು ಕರಗಿಸುವ 'ಅದ್ಭುತ ಜ್ಯೂಸ್'

ಸುಲಭವಾಗಿ ಲಭ್ಯವಿರುವ ತರಕಾರಿ ಸೊಪ್ಪುಗಳಿಂದ ತಯಾರಾದ ಈ ಸುಲಭ ಪೇಯವನ್ನು ನಿತ್ಯವೂ ಕುಡಿದು ನಿಮ್ಮ ತೂಕ ಇಳಿಕೆಯ ಇತರ ಚಟುವಟಿಕೆಗಳನ್ನು ಮುಂದುವರೆಸಿದರೆ ಐದೇ ದಿನದಲ್ಲಿ ಇದರ ಪರಿಣಾಮವನ್ನು ಅರಿಯಬಹುದು. ಇದಕ್ಕಾಗಿ ಒಂದು ಲೋಟ ನೀರಿನಲ್ಲಿ ಕೊಂಚ ಪಾರ್ಸ್ಲೆ ಎಲೆಗಳು ಮತ್ತು ಒಂದು ಲಿಂಬೆಹಣ್ಣ ರಸವನ್ನು ಸೇರಿಸಿ ಪ್ರತಿದಿನ ಬೆಳಿಗ್ಗೆ ದಿನದ ಪ್ರಥಮ ಆಹಾರವಾಗಿ ಸೇವಿಸಿ. ಪ್ರಥಮ ಐದೇ ದಿನಗಳಲ್ಲಿ ತೂಕದಲ್ಲಿ ಇಳಿಕೆ ಪ್ರಾರಂಭವಾಗುವುದನ್ನು ಗಮನಿಸಬಹುದು. ಸ್ಥೂಲಕಾಯ ಅತಿಯಾಗಿದ್ದರೆ ಸುಮಾರು ಹತ್ತು ದಿನಗಳು ಬೇಕಾಗಬಹುದು. ದೇವರೇ, ಈ ದೇಹದ ಕೊಬ್ಬನ್ನು ಹೇಗಪ್ಪಾ ಕರಗಿಸುವುದು?

ಇದು ದೇಹಕ್ಕೆ ಅಗತ್ಯವಾದ ಖನಿಜಗಳು ಮತ್ತು ವಿಟಮಿನ್‌ಗಳನ್ನು ನೀಡುವುದರ ಜೊತೆಗೇ ತೂಕವನ್ನು ಇಳಿಸಲೂ ನೆರವಾಗುತ್ತದೆ. ಯಾವುದೇ ಅಡ್ಡಪರಿಣಾಮಗಳಿಲ್ಲದ ಕಾರಣ ಸುರಕ್ಷಿತವೂ ಆಗಿದೆ. ಪಾರ್ಸ್ಲೆ ಎಲೆಗಳಲ್ಲಿ ಜೀರ್ಣಕ್ರಿಯೆಯನ್ನು ಚುರುಕುಗೊಳಿಸುವ ಪೋಷಕಾಂಶಗಳಿರುವ ಕಾರಣ ಹೆಚ್ಚಿನ ಕೊಬ್ಬನ್ನು ಬಳಸುವುದೇ ಇದರ ಗುಟ್ಟು. ಅಲ್ಲದೇ ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕಲು ಮತ್ತು ಹೊಟ್ಟೆ ತುಂಬಿರುವ ಭಾವನೆಯನ್ನೂ ಮೂಡಿಸುವ ಮೂಲಕ ಅನಾರೋಗ್ಯಕರ ಆಹಾರ ಸೇವಿಸುವ ಬಯಕೆಗೂ ಕಡಿವಾಣ ಹಾಕಿ ತೂಕ ಏರಿಸುವ ಸಾಧ್ಯತೆಯನ್ನು ತಪ್ಪಿಸುತ್ತದೆ. ಇದರ ಹೊರತಾಗಿ ತೂಕ ಇಳಿಸಲು ಕೆಳಗಿನ ಸ್ಲೈಡ್ ಷೋ ಮೂಲಕ ನೀಡಲಾಗಿರುವ ವಿಧಾನಗಳು ಹೆಚ್ಚು ಸಹಕಾರಿಯಾಗಿವೆ:

ಸಕ್ಕರೆಯಿಂದ ದೂರವಿರಿ

ಸಕ್ಕರೆಯಿಂದ ದೂರವಿರಿ

ಸಾಮಾನ್ಯವಾಗಿ ದಿನದ ಅವಧಿಯಲ್ಲಿ ಕುಡಿಯುವ ಟೀ, ಕಾಫಿ, ಜ್ಯೂಸ್, ತಿನ್ನುವ ಸಿಹಿತಿಂಡಿಗಳು ಮೊದಲಾದವುಗಳ ಮೂಲಕ ಅಪಾರವಾದ ಪ್ರಮಾಣದಲ್ಲಿ ಸಕ್ಕರೆ ಹರಿದುಬರುತ್ತದೆ. ದೇಹ ಇದನ್ನೆಲ್ಲಾ ಕೊಬ್ಬಿಗೆ ಪರಿವರ್ತಿಸುವುದರಿಂದ ಸಕ್ಕರೆ ಕಡಿಮೆ ಮಾಡದೇ ತೂಕ ಇಳಿಸಲು ಯತ್ನಿಸುವುದೇ ಹಾಸ್ಯಾಸ್ಪದ. ಆದ್ದರಿಂದ ಸಕ್ಕರೆ ಇರುವ ಯಾವುದೇ ಸಿಹಿ, ಪೇಯ, ಅದರಲ್ಲೂ ಏಳು ಪಟ್ಟು ಹೆಚ್ಚು ಸಕ್ಕರೆ ಇರುವ ಲಘುಪಾನೀಯಗಳನ್ನು ನಿರಾಕರಿಸಲು ಎಷ್ಟೇ ಕಷ್ಟವಾದರೂ ಬೇಡ ಎನ್ನಿ. ಬದಲಿಗೆ ಕೇವಲ ನೀರು ಕುಡಿದು ನನ್ನ ಪಾಲಿಗೆ ಇದೇ ಜ್ಯೂಸ್ ಎಂದು ಸಮಾಧಾನ ಪಟ್ಟುಕೊಳ್ಳಿ.

ಪ್ರೋಟೀನ್ ಹೆಚ್ಚಿರುವ ಆಹಾರ ಸೇವಿಸಿ

ಪ್ರೋಟೀನ್ ಹೆಚ್ಚಿರುವ ಆಹಾರ ಸೇವಿಸಿ

ಬೆಳಿಗ್ಗೆ ಮತ್ತು ಮಧ್ಯಾಹ್ನ ಹೆಚ್ಚಿನ ಪ್ರೋಟೀನುಗಳಿರುವ ಆಹಾರವನ್ನು ಸೇವಿಸಿ. ಪ್ರೋಟೀನು ಎಂದಾಕ್ಷಣ ಹೆಚ್ಚಿನವರು ಕೋಳಿಮಾಂಸವನ್ನೇ ಉದಾಹರಿಸುತ್ತಾರೆ. ಆದರೆ ಇದಕ್ಕಿಂತಲೂ ಹೆಚ್ಚಿನ ಪ್ರೋಟೀನು ಮೊಳಕೆ ಬರಿಸಿದ ಧಾನ್ಯಗಳಲ್ಲಿದೆ. ಇದು ಕರಗಲು ಹೆಚ್ಚಿನ ಕೊಬ್ಬು ಬಳಸುವ ಮೂಲಕ ದೇಹದ ತೂಕವನ್ನು ಕರಗಿಸಲು ನೆರವಾಗುತ್ತದೆ.

ಅನ್ನ, ಅಕ್ಕಿಯ ಖಾದ್ಯಗಳನ್ನು ಕಡಿಮೆ ಮಾಡಿ

ಅನ್ನ, ಅಕ್ಕಿಯ ಖಾದ್ಯಗಳನ್ನು ಕಡಿಮೆ ಮಾಡಿ

ಅಕ್ಕಿಯಲ್ಲಿ ಸರಾಸರಿ 15% ಕಾರ್ಬೋಹೈಡ್ರೇಟುಗಳಿವೆ. ಉಳಿದಂತೆ ಎಲ್ಲವೂ ದೇಹಕ್ಕೆ ಉತ್ತಮವಾದರೆ ಕಾರ್ಬೋಹೈಡ್ರೇಟುಗಳ ಪ್ರಮಾಣ ಕೊಬ್ಬು ಹೆಚ್ಚಳಕ್ಕೆ ಕಾರಣವಾಗಿದೆ. ಆದ್ದರಿಂದ ಅಕ್ಕಿಯನ್ನು ಪೂರ್ಣವಾಗಿ ತ್ಯಜಿಸದೇ ದಿನದಲ್ಲಿ ಸೇವಿಸುವ ಪ್ರಮಾಣವನ್ನು ಮಾತ್ರ ಕಡಿಮೆ ಮಾಡಬೇಕು.

ನಾರಿನ ಪ್ರಮಾಣವನ್ನು ಹೆಚ್ಚಿಸಿ

ನಾರಿನ ಪ್ರಮಾಣವನ್ನು ಹೆಚ್ಚಿಸಿ

ನಾರುಗಳಲ್ಲಿ ಎರಡು ವಿಧ. ಕರಗುವ (ಉದಾಹರಣೆಗೆ ಬಾಳೆಹಣ್ಣು) ಮತ್ತು ಕರಗದ ನಾರು (ಉದಾಹರಣೆಗೆ ಗೋಧಿಯ ಭೂಸಾ). ಸೊಂಟದ ಸುತ್ತಳತೆ ಕರಗಿಸಲು ಕರಗದ ನಾರು ಹೆಚ್ಚಿರುವ ಆಹಾರಗಳನ್ನೇ ಪ್ರಮುಖ ಆಹಾರವಾಗಿ ಸೇವಿಸಿ. ಉದಾಹರಣೆಗೆ ಇಡಿಯ ಗೋಧಿಯ ಹಿಟ್ಟಿನ ಖಾದ್ಯಗಳು, ನವಣೆ, ರಾಗಿ, ಜೋಳ ಮೊದಲಾದ ಧಾನ್ಯಗಳು, ಹಸಿರು ಸೊಪ್ಪು, ಹಸಿಯಾಗಿ ತಿನ್ನಬಹುದಾದ ತರಕಾರಿಗಳು ಇತ್ಯಾದಿ.

ಸಾಧ್ಯವಾದಷ್ಟು ಓಡಿ

ಸಾಧ್ಯವಾದಷ್ಟು ಓಡಿ

ಓಡಿ ಎಂದರೆ ಮೈಲುಗಟ್ಟಲೇ ಓಡುವುದಲ್ಲ. ಬದಲಿಗೆ ಪ್ರತಿದಿನ ಒಂದು ನಿಗದಿತ ಸಮಯದಲ್ಲಿ ಐದೇ ನಿಮಿಷವಾದರೂ ಕೊಂಚ ವೇಗವಾಗಿ ಓಡಬೇಕು. ಇದು ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸಿ ಉಸಿರಾಟದ ವೇಗವನ್ನೂ ಹೆಚ್ಚಿಸಬೇಕು. ಓಟ ಆಗುವುದಿಲ್ಲ ಎಂದರೆ ವೇಗದ ನಡಿಗೆ, ಸೈಕ್ಲಿಂಗ್ ಇತ್ಯಾದಿ, ಒಟ್ಟಾರೆ ಯಾವುದೋ ಚಟುವಟಿಕೆ ನಿಮ್ಮ ಹೃದಯತದ ಬಡಿತದ ವೇಗವನ್ನು ಹೆಚ್ಚಿಸಬೇಕು.

ಸಾಕಷ್ಟು ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯಿರಿ

ನೀರನ್ನು ಹೆಚ್ಚು ಕುಡಿಯುವುದರಿಂದ ಎರಡು ಪ್ರಯೋಜನಗಳಿವೆ. ಮೊದಲನೆಯದು, ದೇಹಕ್ಕೆ ಅಗತ್ಯವಿರುವ ನೀರು ಒದಗಿಸುವುದು, ಎರಡನೆಯದು ಹಸಿವನ್ನು ತಗ್ಗಿಸುವುದು. ಇದರಿಂದಲೂ ತೂಕ ಇಳಿಯಲು ನೆರವಾಗುತ್ತದೆ.

ಹಸಿರು ಟೀ ಕುಡಿಯಿರಿ

ಹಸಿರು ಟೀ ಕುಡಿಯಿರಿ

ದಿನಕ್ಕೆ ಎರಡು ಲೋಟ ಹಾಲಿಲ್ಲದ ಹಸಿರು ಟೀ ಸೇವಿಸುವ ಮೂಲಕ ಹಸಿರು ಟೀಯಲ್ಲಿರುವ ಗುಣಪಡಿಸುವ ಗುಣಗಳ ಜೊತೆಗೇ ಕೊಬ್ಬನ್ನು ಕರಗಿಸಲೂ ಸಾಧ್ಯವಾಗುತ್ತದೆ.

ಲಿಂಬೆಯ ರಸ

ಲಿಂಬೆಯ ರಸ

ಲಿಂಬೆಯ ರಸದಲ್ಲಿ ಸಿಟ್ರಿಕ್ ಆಮ್ಲದ ಜೊತೆಗೇ ಪೆಕ್ಟಿನ್ ಎಂಬ ನಾರು ಸಹಾ ಇದೆ. ಈ ನಾರು ಹಸಿವನ್ನು ನಿಯಂತ್ರಿಸುವಲ್ಲಿ ಅಧ್ಬುತ ಪಾತ್ರ ವಹಿಸುತ್ತದೆ. ಏಕೆಂದರೆ ಸುಲಭವಾಗಿ ಜೀರ್ಣವಾಗದ ಈ ನಾರನ್ನು ಜೀರ್ಣಿಸಿಕೊಳ್ಳಲು ನಮ್ಮ ಜೀರ್ಣಾಂಗಗಳು ಶ್ರಮಿಸುವ ಭರದಲ್ಲಿ ಮೆದುಳಿಗೆ ಹೆಚ್ಚುವರಿ ಆಹಾರ ಬೇಕೆಂದು ನೀಡುವ ಸೂಚನೆಯನ್ನು ತಡವಾಗಿಸುತ್ತವೆ. ಅಲ್ಲದೇ ಸಿಟ್ರಿಕ್ ಆಮ್ಲ ಜೀರ್ಣವ್ಯವಸ್ಥೆಯಲ್ಲಿ ಸಹಕರಿಸುವ ಜೊತೆಗೇ ಮಲಿನ ಪದಾರ್ಥಗಳನ್ನು ದೇಹದಿಂದ ಹೊರಹಾಕಲೂ ನೆರವಾಗುತ್ತದೆ.

ಬಾದಾಮಿ

ಬಾದಾಮಿ

ನಿತ್ಯವೂ ನಾಲ್ಕು ಅಥವಾ ಐದು ಬಾದಾಮಿಗಳನ್ನು (ಮಕ್ಕಳಿಗೆ ಮೂರು ಸಾಕು) ನಿತ್ಯವೂ ಸೇವಿಸುತ್ತಾ ಬರುವುದರಿಂದ ಇದರಲ್ಲಿರುವ ವಿಟಮಿನ್ ಇ ರಕ್ತದ ಕೊಲೆಸ್ಟ್ರಾಲ್ ಕರಗಿಸಿ ಜೀವರಾಸಾಯನಿಕ ಕ್ರಿಯೆಯನ್ನು ಹೆಚ್ಚಿಸುತ್ತದೆ, ತನ್ಮೂಲಕ ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ.

ಬಾಳೆಹಣ್ಣು

ಬಾಳೆಹಣ್ಣು

ಊಟದ ಬಳಿಕ ಬಾಳೆಹಣ್ಣು ತಿನ್ನುವುದರಿಂದ ಅದರಲ್ಲಿರುವ ವಿವಿಧ ಕಿಣ್ವಗಳು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತವೆ. ಅಲ್ಲದೇ ಹೆಚ್ಚಿನ ಪೊಟ್ಯಾಶಿಯಂ ಮತ್ತು ಇತರ ಪೋಷಕಾಂಶಗಳು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ, ತನ್ಮೂಲಕ ಸೊಂಟದ ಸುತ್ತಳತೆಯನ್ನು ಕಿರಿದಾಗಿಸುತ್ತದೆ.

ಹಸಿರುದ್ರಾಕ್ಷಿ

ಹಸಿರುದ್ರಾಕ್ಷಿ

ದ್ರಾಕ್ಷಿಹಣ್ಣನ್ನು ತಿನ್ನುವ ಮೊದಲು ಚೆನ್ನಾಗಿ ತೊಳೆದುಕೊಳ್ಳೀ. ಹಸಿರು ದ್ರಾಕ್ಷಿಯ ರಸವನ್ನು ನಿತ್ಯವೂ ಕುಡಿಯುವ ಮೂಲಕ ಹತ್ತೇ ದಿನದಲ್ಲಿ ಹತ್ತು ಪೌಂಡ್ (ನಾಲ್ಕೂವರೆ ಕೇಜಿ) ತೂಕ ಇಳಿದಿರುವುದು ಪರೀಕ್ಷೆಗಳ ಮೂಲಕ ಸಾಬೀತಾಗಿದೆ. ಇದಕ್ಕಾಗಿ ಪ್ರತಿನಿತ್ಯ ಹಸಿರು ದ್ರಾಕ್ಷಿಗಳ ತಾಜಾ ಜ್ಯೂಸ್ ದಿನದ ಒಂದೇ ಹೊತ್ತಿನಲ್ಲಿ ಸೇವಿಸುತ್ತಾ ಬರಬೇಕು. ಹಸಿರು ದ್ರಾಕ್ಷಿಯಿಲ್ಲದಿದ್ದರೆ ಕಪ್ಪು ದ್ರಾಕ್ಷಿಯನ್ನೂ ಸೇವಿಸಬಹುದು, ಆದರೆ ಹಸಿರು ದ್ರಾಕ್ಷಿಯಷ್ಟು ಪರಿಣಾಮಕಾರಿಯಲ್ಲ.

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು

ಕಲ್ಲಂಗಡಿಯಲ್ಲಿ ಅತ್ಯಧಿಕ ಪ್ರಮಾಣದ ನೀರು ಇದೆ. ಅಲ್ಲದೇ ಉತ್ತಮ ಪ್ರಮಾಣದ ವಿಟಮಿನ್ ಎ, ಸಿ ಮತ್ತು ಅಮೈನೋ ಆಮ್ಲಗಳಿವೆ. ಪ್ರತಿದಿನ ಕಲ್ಲಂಗಡಿಯನ್ನು ಸೇವಿಸುವುದರಿಂದ ಸೊಂಟದ ಕೊಬ್ಬು ಕರಗಲು ನೆರವಾಗುತ್ತದೆ.

ಬೆಳ್ಳುಳ್ಳಿಯನ್ನು ಹೆಚ್ಚು ಹೆಚ್ಚು ಬಳಸಿ

ಬೆಳ್ಳುಳ್ಳಿಯನ್ನು ಹೆಚ್ಚು ಹೆಚ್ಚು ಬಳಸಿ

ಬೆಳ್ಳುಳ್ಳಿಯನ್ನು ನಿಮ್ಮ ಆಹಾರದ ಮೂಲಕ ಸೇವಿಸುವುದರಿಂದ ಜೀರ್ಣಾಂಗಗಳ ಕಾರ್ಯಕ್ಷಮತೆ ಹೆಚ್ಚುತ್ತದೆ. ವಿಶೇಷವಾಗಿ ಕರುಳಿನ ಹುಣ್ಣು, ಅಜೀರ್ಣತೆ, ಹೊಟ್ಟೆಯ ಉರಿ ಮೊದಲಾದವುಗಳನ್ನು ತಡೆಯುವ ಬೆಳ್ಳುಳ್ಳಿ ಅಧಿಕ ಮತ್ತು ಕಡಿಮೆ ರಕ್ತದೊತ್ತಡವನ್ನು ತಹಬಂದಿಗೆ ತರುವ ಗುಣವಿದೆ.

ಬಳಕೆಯ ವಿಧಾನ

ಒಂದು ಕಪ್ ತಣ್ಣನೆಯ ಅಥವಾ ಉಗುರುಬೆಚ್ಚನೆಯ ನೀರಿಗೆ ಒಂದು ಲಿಂಬೆಹಣ್ಣಿನ ರಸವನ್ನು ಹಿಂಡಿರಿ ಮೂರು ಎಸಳು ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಹಸಿಯಾಗಿಯೇ ಅಗಿಯಿರಿ ಮತ್ತು ಲಿಂಬೆರಸ ಹಿಂಡಿದ ನೀರಿನ ಜೊತೆ ಅಗಿದ ಬೆಳ್ಳುಳ್ಳಿಯನ್ನು ನುಂಗಿ. ಈ ನೀರನ್ನು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿದ ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬೇಡಿ. ಎರಡು ವಾರದಲ್ಲಿಯೇ ಸೊಂಟದ ಸುತ್ತಳತೆ ಕಡಿಮೆಯಾಗುವ ಲಕ್ಷಣಗಳು ಗೋಚರಿಸತೊಡಗುತ್ತವೆ

ತರಕಾರಿ ಮತ್ತು ಎಲೆಗಳನ್ನು ಕುದಿಸಿದ ನೀರು ಕುಡಿಯಿರಿ

ತರಕಾರಿ ಮತ್ತು ಎಲೆಗಳನ್ನು ಕುದಿಸಿದ ನೀರು ಕುಡಿಯಿರಿ

ಸೊಂಟದ ಸುತ್ತಳತೆ ಕಡಿಮೆಗೊಳಿಸಲು ವಿವಿಧ ತರಕಾರಿ ಮತ್ತು ಸೊಪ್ಪುಗಳು ತಮ್ಮದೇ ರೀತಿಯ ನೆರವು ನೀಡುತ್ತವೆ. ಇವೆಲ್ಲವನ್ನೂ ಕ್ರೋಢೀಕರಿಸಿದ ವಿಧಾನ ಶೀಘ್ರವೇ ಪರಿಣಾಮ ಬೀರಲು ತೊಡಗುತ್ತದೆ.

ಬಳಕೆಯ ವಿಧಾನ

*ಎರಡು ಲೀಟರ್ ನೀರಿಗೆ ಕೆಳಗಿನ ತರಕಾರಿಗಳನ್ನು ಸೇರಿಸಿ, ಒಂದು ಮಧ್ಯಮ ಗಾತ್ರದ ಸೌತೆ ಸಿಪ್ಪೆ ಸಹಿತವಾಗಿ ಚಿಕ್ಕದಾಗಿ ಕತ್ತರಿಸಿದ್ದು

*ಸುಮಾರು ಎರಡು ಇಂಚಿನಷ್ಟು ಗಾತ್ರದ ಹಸಿಶುಂಠಿ, ಜಜ್ಜಿದ್ದು (ತುರಿದದ್ದಾದರೆ ಸುಮಾರು ಒಂದು ಚಿಕ್ಕಚಮಚ)

*ಲಿಂಬೆಹಣ್ಣು- 1 (ಚಿಕ್ಕದಾದರೆ 2) ಹಿಂಡಿ ತೆಗೆದ ರಸ ಪುದಿನಾ ಎಲೆಗಳು-ಸುಮಾರು ಹನ್ನೆರಡು (ಬೆರಳುಗಳಲ್ಲಿ ಹಿಚುಕಿದ್ದು) ಎಲ್ಲವನ್ನೂ ನೀರಿನಲ್ಲಿ ಮುಳುಗಿಸಿ ಮುಚ್ಚಳ ಮುಚ್ಚಿ ಇಡಿಯ ರಾತ್ರಿ ನೆನೆಸಿಡಿ.

*ಮರುದಿನ ಈ ತರಕಾರಿಗಳು ಹಾಗೇ ಇರುವಂತೆ ಈ ನೀರನ್ನು ಇಡಿಯ ದಿನ ಸ್ವಲ್ಪ ಸ್ವಲ್ಪವಾಗಿ ಕುಡಿಯುತ್ತಾ ಇರಿ.

*ಕೆಲವೇ ದಿನಗಳಲ್ಲಿ ಪರಿಣಾಮ ಗೋಚರಿಸಲು ತೊಡಗುತ್ತದೆ.

ಸೇಬು ಮತ್ತು ದೊಡ್ಡಜೀರಿಗೆ ರಸ

ಸೇಬು ಮತ್ತು ದೊಡ್ಡಜೀರಿಗೆ ರಸ

ಒಂದು ಸೇಬಿಗೆ ಒಂದು ಚಮಚದ ಪ್ರಮಾಣದಲ್ಲಿ ದೊಡ್ಡಜೀರಿಗೆಯನ್ನು ಕೊಂಚಕಾಲ ನೆನೆಸಿಟ್ಟು ಅದೇ ನೀರಿಗೆ ಸೇಬುಹಣ್ಣನ್ನು ಕತ್ತರಿಸಿ ಮಿಕ್ಸಿಯಲ್ಲಿ ಗೊಟಾಯಿಸಿ. ಇದು ಒಂದು ವಿಶಿಷ್ಟವಾದ ರುಚಿಯ ಜೊತೆ ಆರೋಗ್ಯವನ್ನೂ ನೀಡುವುದು ಮತ್ತು ಕೊಬ್ಬನ್ನೂ ಕರಗಿಸುವುದು.

ಹಚ್ಚ ಹಸಿರು ಜ್ಯೂಸ್!

ಹಚ್ಚ ಹಸಿರು ಜ್ಯೂಸ್!

ಇದುವರೆಗೆ ಹಸಿರು ರಸವನ್ನು ಸೇವಿಸದೇ ಇದ್ದಲ್ಲಿ ಮೊದಲು ಈ ಸಂಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ. ಇದರಲ್ಲಿ ಸೂಕ್ತ ಪ್ರಮಾಣದ ವಿಟಮಿನ್ ಮತ್ತು ಖನಿಜಗಳಿವೆ ಹಾಗೂ ಅಲ್ಪಪ್ರಮಾಣದಲ್ಲಿ ಸೆಲ್ಯುಲೋಸ್ ಇದೆ. ಸಮಪ್ರಮಾಣದಲ್ಲಿ ಅನಾನಾಸ್, ಹಸಿರು ಸೇಬು ಮತ್ತು ಒಂದು ಲೋಟಕ್ಕೆ ಅರ್ಧ ಇಂಚು ಗಾತ್ರದ ಶುಂಠಿ ಮತ್ತು ಎರಡು ದೊಡ್ಡ ಚಮಚದಷ್ಟು ಅಚ್ಚು ಮೂಡ ಸೊಪ್ಪು (ಅಥವಾ parsley leaves) (ಇದು ನೋಡಲು ಕೊತ್ತಂಬರಿ ಸೊಪ್ಪಿನಂತೆಯೇ ಇರುತ್ತದೆ, ಆದರೆ ರುಚಿಯಲ್ಲಿ ಬದಲಾವಣೆ ಇರುತ್ತದೆ) ಮತ್ತು ಇಷ್ಟೇ ಪ್ರಮಾಣದ ಕೇಲ್ ಎಲೆಗಳನ್ನು ಹಾಕಿ ಮಿಕ್ಸಿಯಲ್ಲಿ ಗೊಟಾಯಿಸಿ. ದಿನಕ್ಕೊಂದು ಲೋಟ ಈ ಜ್ಯೂಸ್ ಕುಡಿಯುವುದರಿಂದ ಬೊಜ್ಜು ನಿಧಾನವಾಗಿ ಕರಗುತ್ತದೆ.

English summary

Drink This To Burn Belly Fat In 5 Days

Belly fat is stubborn fat and getting rid of it isn't easy, and if you don't have the time or the patience to follow diets or exercise programs, then try this simple remedy. This remedy is said to work well for belly fat and it also provides your body of many vitamins and minerals. Also, parsley enhances your digestion and also helps your body excrete fluids and eliminate the bloated feeling.
X
Desktop Bottom Promotion