For Quick Alerts
ALLOW NOTIFICATIONS  
For Daily Alerts

ಜೀರಿಗೆ ಬೆರೆಸಿದ ಬೆಲ್ಲದ ನೀರು, ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ

By Manu
|

ಗಾಳಿಯಲ್ಲಿ ಹತ್ತು ಹಲವು ರೀತಿಯ ಬ್ಯಾಕ್ಟೀರಿಯಾ ವೈರಸ್ಸುಗಳು ಹಾರಾಡಿಕೊಂಡಿದ್ದು ನಮ್ಮ ದೇಹವನ್ನು ಸದಾ ಆಕ್ರಮಣ ಮಾಡುತ್ತಲೇ ಇರುತ್ತವೆ. ಆದರೆ ಇವಕ್ಕೆಲ್ಲಾ ನಮ್ಮ ದೇಹದ ರೋಗ ನಿರೋಧಕ ಶಕ್ತಿ ತಕ್ಕ ಬುದ್ಧಿ ಕಲಿಸಿ ಹಿಮ್ಮೆಟ್ಟಿಸುತ್ತದೆ. ಒಂದು ವೇಳೆ ಈ ಶಕ್ತಿ ಕುಂಠಿತಗೊಂಡರೆ? ಆಗ ಚಿಕ್ಕಪುಟ್ಟ ಬ್ಯಾಕ್ಟೀರಿಯಾಗಳೂ ನಿಮ್ಮ ಆರೋಗ್ಯವನ್ನು ಕೆಡಿಸಬಲ್ಲವು. ನಿರುಪಾಯರಾಗಿ ವೈದ್ಯರ ಬಳಿ ಸಾಗಿ ಔಷಧಗಳನ್ನು ಸೇವಿಸಬೇಕಾಗುತ್ತದೆ.

ಇದರಲ್ಲಿ ವಿನಿಯೋಗಿಸಲಾಗುವ ಹಣಕ್ಕಿಂತಲೂ ವ್ಯರ್ಥವಾದ ಸಮಯವೇ ಹೆಚ್ಚು ಅಮೂಲ್ಯವಾಗಿದೆ. ಆದರೆ ಕೊಂಚ ಜಾಣತನ ಉಪಯೋಗಿಸಿದರೆ ಈ ತೊಂದರೆಗೆ ಸಿಲುಕಿಕೊಳ್ಳುವುದನ್ನು ತಪ್ಪಿಸಬಹುದು. ಹೇಗೆಂದರೆ ನಮ್ಮ ಜೀವ ನಿರೋಧಕ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸುವುದು. ಇದು ಹೇಗೆ? ಜಾಣತನ ಉಪಯೋಗಿಸಲು ಕೇವಲ ಅಡುಗೆ ಮನೆಗೆ ಧಾವಿಸಿದರೆ ಸಾಕು. ಬೆಲ್ಲದಲ್ಲಿರುವ ಅದ್ಭುತ ಆರೋಗ್ಯಕರ ಗುಣಗಳು

ನಮ್ಮ ಅಡುಗೆಯಲ್ಲಿ ಬಳಸುವ ಸಮಾನ್ಯ ಪರಿಕರಗಳಲ್ಲಿ ಅಸಾಮಾನ್ಯ ಔಷಧೀಯ ಗುಣಗಳಿವೆ. ನಿತ್ಯವೂ ಇವುಗಳನ್ನು ಸರಿಯಾದ ಕ್ರಮದಲ್ಲಿ ಸೇವಿಸುತ್ತಾ ಬಂದರೆ ಆರೋಗ್ಯ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಹಲವಾರು ವೈರಸ್ಸು ಬ್ಯಾಕ್ಟೀರಿಯಾಗಳ ಧಾಳಿಗೆ ಬಗ್ಗದಿರಲು ದೇಹ ತಯಾರಾಗುತ್ತದೆ. ಇದರಲ್ಲಿ ಒಂದು ಪ್ರಮುಖ ವಿಧಾನವೆಂದರೆ ಬೆಲ್ಲದ ನೀರಿನಲ್ಲಿ ಜೀರಿಗೆ ಬೆರೆಸಿ ಕುಡಿಯುವುದು. ಶೀತ, ಗಂಟಲು ಕೆರೆತ ಸಮಸ್ಯೆಗೆ, ಜೀರಿಗೆ ಕಷಾಯ

ಒಂದು ದೊಡ್ಡ ಲೋಟ ನೀರಿಗೆ ಒಂದು ದೊಡ್ಡಚಮಚದಷ್ಟು ಬೆಲ್ಲವನ್ನು ಪುಡಿಮಾಡಿ ಮತ್ತು ಒಂದು ಚಿಕ್ಕ ಚಮಚ ಜೀರಿಗೆ ಬೆರೆಸಿ ಈ ನೀರನ್ನು ಚೆನ್ನಾಗಿ ಕುದಿಸಿ. ಕೆಲವು ನಿಮಿಷಗಳ ಬಳಿಕ ಈ ನೀರನ್ನು ಸೋಸಿ ಇನ್ನೊಂದು ಲೋಟದಲ್ಲಿ ಸಂಗ್ರಹಿಸಿ. ಈ ನೀರನ್ನು ಪ್ರತಿದಿನ ಉಪಾಹಾರಕ್ಕೂ ಮುನ್ನ ಸೇವಿಸುತ್ತಾ ಬನ್ನಿ. ಈ ಅದ್ಭುತ ಪೇಯವನ್ನು ಕುಡಿಯುವುದರಿಂದ ಯಾವ ರೀತಿಯ ಲಾಭಗಳಿವೆ ಎಂಬುದನ್ನು ನೋಡೋಣ...

ಹೊಟ್ಟೆಯುಬ್ಬರಿಕೆಯನ್ನು ತಡೆಯುತ್ತದೆ

ಹೊಟ್ಟೆಯುಬ್ಬರಿಕೆಯನ್ನು ತಡೆಯುತ್ತದೆ

ಬೆಲ್ಲ ಮತ್ತು ಜೀರಿಗೆಯ ನೀರು ಕ್ಷಾರೀಯವಾಗಿದ್ದು ಹೊಟ್ಟೆಯಲ್ಲಿನ ಆಮ್ಲೀಯತೆಯನ್ನು ಸಂತುಲಿತಗೊಳಿಸುತ್ತದೆ. ಪರಿಣಾಮವಾಗಿ ಕರುಳುಗಳಲ್ಲಿ ಅನಿಲ ಉತ್ಪತ್ತಿಯಾಗುವುದು ನಿಂತು ಇದರ ಮೂಲಕ ಎದುರಾಗುವ ಆಮ್ಲೀಯತೆ, ಹೊಟ್ಟೆಯುರಿ, ಅಪಾನವಾಯು ಮೊದಲಾದವು ಇಲ್ಲವಾಗುತ್ತವೆ.

ದೇಹದ ಬಿಸಿಯನ್ನು ತಗ್ಗಿಸುತ್ತದೆ

ದೇಹದ ಬಿಸಿಯನ್ನು ತಗ್ಗಿಸುತ್ತದೆ

ಯಾವುದೋ ವೈರಸ್ಸಿನ ಧಾಳಿಯನ್ನೆದುರಿಸಲು ದೇಹ ತಾಪಮಾನವನ್ನು ಕೊಂಚ ಹೆಚ್ಚಿಸುತ್ತದೆ. ಬೆಲ್ಲ ಜೀರಿಗೆಯ ನೀರನ್ನು ಕುಡಿಯುವುದರಿಂದ ಈ ವೈರಸ್ಸನ್ನು ಎದುರಿಸುವ ಶಕ್ತಿ ಪಡೆಯುವ ಕಾರಣ ಈಗ ದೇಹಕ್ಕೆ ಬಿಸಿಯಾಗಿಸುವ ಅಗತ್ಯವಿಲ್ಲದಾಗಿ ಬೆಚ್ಚಗಾಗಿದ್ದ ದೇಹ ಸರಿಯಾದ ಪ್ರಮಾಣಕ್ಕೆ ಬಂದು ತಲುಪುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ದೇಹದ ಬಿಸಿಯನ್ನು ತಗ್ಗಿಸುತ್ತದೆ

ದೇಹದ ಬಿಸಿಯನ್ನು ತಗ್ಗಿಸುತ್ತದೆ

ತನ್ಮೂಲಕ ಈ ಕಾರಣದಿಂದ ಎದುರಾಗುವ ತಲೆನೋವು, ಚಳಿಜ್ವರ, ನಡುಕ, ಉರಿಯೂತ ಮೊದಲಾದ ತೊಂದರೆಗಳೂ ಇಲ್ಲವಾಗುತ್ತವೆ.

ಮೈ ಕೈ ನೋವು ಇಲ್ಲವಾಗಿಸುತ್ತದೆ

ಮೈ ಕೈ ನೋವು ಇಲ್ಲವಾಗಿಸುತ್ತದೆ

ಬೆಲ್ಲ ಜೀರಿಗೆಯ ನೀರಿನಲ್ಲಿರುವ ಉರಿಯೂತ ನಿವಾರಕ ಗುಣ ದೇಹದಲ್ಲಿ ಹಲವಾರು ಸೋಂಕುಗಳಿಂದ ರಕ್ಷಿಸುತ್ತದೆ. ಅಲ್ಲದೇ ಸೋಂಕು ಉಂಟಾಗಿದ್ದ ಸ್ನಾಯುಗಳಿಗೆ ಹೆಚ್ಚಿನ ರಕ್ತ ಪರಿಚಲನೆಯನ್ನು ನೀಡುವ ಮೂಲಕ ಮೈ ಕೈ ನೋವನ್ನು ಬಹಳಷ್ಟು ಮಟ್ಟಿಗೆ ತಗ್ಗಿಸುತ್ತದೆ.

ಮಾಸಿಕ ಚಕ್ರವನ್ನು ಕ್ರಮಬದ್ದವಾಗಿಸುತ್ತದೆ

ಮಾಸಿಕ ಚಕ್ರವನ್ನು ಕ್ರಮಬದ್ದವಾಗಿಸುತ್ತದೆ

ಈ ಸರಳ ಪೇಯ ಮಹಿಳೆಯರ ಪಾಲಿಗೆ ಅದ್ಭುತ ಪೇಯವಾಗಿದೆ. ನಿಯಮಿತವಾಗಿ ಸೇವಿಸುತ್ತಾ ಬರುವ ಮೂಲಕ ಮಹಿಳೆಯರಲ್ಲಿ ರಸದೂತಗಳು ಸರಿಯಾದ ಪ್ರಮಾಣ ಮತ್ತು ಸರಿಯಾದ ಅಂತರದಲ್ಲಿ ಸ್ರವಿಸುವಂತಾಗಿ ಮಾಸಿಕ ಋತುಚಕ್ರಗಳು ಕ್ರಮಬದ್ದವಾಗುತ್ತವೆ. ಅಲ್ಲದೇ ಮಾಸಿಕ ದಿನಗಳಲ್ಲಿ ಎದುರಾಗುವ ನೋವನ್ನೂ ಕಡಿಮೆಗೊಳಿಸುತ್ತದೆ.

ನೈಸರ್ಗಿಕ ವಿರೇಚಕವಾಗಿದೆ

ನೈಸರ್ಗಿಕ ವಿರೇಚಕವಾಗಿದೆ

ಈ ಅದ್ಭುತ ಪೇಯ ಒಂದು ಉತ್ತಮ ವಿರೇಚಕವೂ ಆಗಿದೆ. ಅಂದರೆ ಹೊಟ್ಟೆಯಲ್ಲಿನ ವಿಷಕಾರಿ ಮತ್ತು ಕಲ್ಮಶಗಳನ್ನು ಹೊರಹಾಕಿ ಸ್ವಚ್ಛಗೊಳಿಸಲು ನೆರವಾಗುತ್ತದೆ. ಇದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಲೂ ಸಾಧ್ಯವಾಗುತ್ತದೆ.

ರಕ್ತಹೀನತೆಯಿಂದ ರಕ್ಷಿಸುತ್ತದೆ

ರಕ್ತಹೀನತೆಯಿಂದ ರಕ್ಷಿಸುತ್ತದೆ

ಬೆಲ್ಲ ಜೀರಿಗೆಯ ನೀರನ್ನು ಕುಡಿಯುವುದರಿಂದ ಇದರಲ್ಲಿರುವ ಉತ್ತಮ ಪೋಷಕಾಂಶಗಳು ಮತ್ತು ಖನಿಜಗಳು ಕೆಂಪುರಕ್ತಕಣಗಳು ಹೆಚ್ಚು ಹೆಚ್ಚಾಗಿ ಉತ್ಪತ್ತಿಯಾಗಲು ನೆರವಾಗುತ್ತವೆ. ಇದರಿಂದ ರಕ್ತಹೀನತೆಯ ತೊಂದರೆ ಇಲ್ಲವಾಗುತ್ತದೆ.

English summary

Drink Jeera And Jaggery Water, Watch What Happens To Your Body!

Just mix 1 teaspoon of jeera and 1 tablespoon of jaggery to a pan of water. Now, boil the water, with the ingredients in it. Boil for few minutes and collect the mixture in a cup. Your drink is now ready for consumption. You can consume this drink every morning, before breakfast. To learn about how jaggery and jeera water can improve your health, you can read more, below.
Story first published: Wednesday, June 29, 2016, 11:10 [IST]
X
Desktop Bottom Promotion