For Quick Alerts
ALLOW NOTIFICATIONS  
For Daily Alerts

ಸಾವಿನ ಕೂಪಕ್ಕೆ ತಳ್ಳುತ್ತಿದೆ, ಮೊಬೈಲ್ ಫೋನ್‌ಗಳ ವಿಕಿರಣ!

By manu
|

ಮೊಬೈಲ್ ಫೋನುಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಾಗ ಈ ಮಟ್ಟದಲ್ಲಿ ನಮ್ಮ ಜೀವನವನ್ನು ಬದಲಿಸುತ್ತದೆ ಎಂದು ಸ್ವತಃ ಮೊಬೈಲ್ ತಯಾರಕರೇ ಅಂದುಕೊಂಡಿರಲಿಲ್ಲ. ಟಿಶ್ಯೂ ಕಾಗದಗಳು ಬಂದ ಬಳಿಕ ಕರ್ಚೀಫ್ ಎಂಬ ಕರವಸ್ತ್ರ ಕಾಣೆಯಾಗಿರುವಂತೆಯೇ ಮೊಬೈಲ್, ಅದರಲ್ಲೂ ಸ್ಮಾರ್ಟ್ ಫೋನ್ ಬಂದ ಬಳಿಕ ಬಹುತೇಕ ವಸ್ತುಗಳು ಕಾಣೆಯಾಗಿವೆ. ಅಲಾರಾಂ, ಕ್ಯಾಮೆರಾ, ಫೋನ್ ನಂಬ್ರದ ಪುಸ್ತಕ, ಟಾರ್ಚು, ಕ್ಯಾಲ್ಕುಲೇಟರ್ ಇತ್ಯಾದಿ. ಎಷ್ಟೋ ಜನರು ಇಂದು ಮೊಬೈಲಿನ ದಾಸರೇ ಆಗಿ ಹೋಗಿದ್ದಾರೆ. ಆದರೆ ಮೊಬೈಲು ಕಾರ್ಯನಿರ್ವಹಿಸುವ ತರಂಗಾಂತರಗಳಿಗೆ ನಿತ್ಯವೂ ನಮ್ಮ ಶರೀರಗಳನ್ನು ಒಡ್ಡುವುದು ಆರೋಗ್ಯಕರವೇ? ಹಾಸಿಗೆ ಬಳಿ ಮೊಬೈಲ್ ಇಟ್ಟುಕೊಂಡರೆ ಅಪಾಯ ಗ್ಯಾರೆಂಟಿ..

ಸಧ್ಯಕ್ಕೆ ಫೋನುಗಳ ತರಂಗಾಂತರಗಳು ಅಪಾಯಕರ ಎಂಬುದನ್ನು ಯಾವುದೇ ಸಂಶೋಧನೆ ಸಾಬೀತುಪಡಿಸಿಲ್ಲ. ಆದರೆ ಕೆಲವು ಅಧ್ಯಯನಗಳ ಮೂಲಕ ಈ ಕಿರಣಗಳು ಕೊಂಚವಾದರೂ ಆಪಾಯಕರವೇ ಎಂದು ಪ್ರತಿಪಾದಿಸಿವೆ. ಸತತ ಬಳಕೆಯಿಂದ ಮೊಬೈಲಿನಿಂದ ಹೊರಹೊಮ್ಮುವ ವಿಕಿರಣಗಳು ನಮ್ಮ ಪ್ರತಿ ಜೀವಕೋಶದ ಡಿಎನ್ ಎ ಅಥವಾ ಜೀವತಂತುಗಳ ಮೇಲೇ ಪ್ರಭಾವ ಬೀರಬಹುದು. ಅದರಲ್ಲೂ ಗರ್ಭಿಣಿಯರಿಗೆ ಇದರ ಪರಿಣಾಮ ತೀರಾ ಹೆಚ್ಚಾಗುತ್ತದೆ. ಅಲ್ಲದೇ ಕೆಲವು ಬಗೆಯ ಕ್ಯಾನ್ಸರ್ ಸಹಾ ವಿಕಿರಣಗಳ ಮೂಲಕ ಉಲ್ಬಣಗೊಳ್ಳುತ್ತದೆ ಎಂಬುದನ್ನು ಕಂಡುಕೊಳ್ಳಲಾಗಿದೆ. ಅಯ್ಯಯ್ಯೋ ಫೋನ್ ಸಹವಾಸವೇ ಬೇಡ! ಏನಿದರ ರಹಸ್ಯ?

ಇನ್ನೂ ಕೆಲವು ಅಧ್ಯಯನಗಳಲ್ಲಿ ಕಂಡುಕೊಂಡಾ ಪ್ರಕಾರ ಈ ವಿಕಿರಣಗಳು ನಮ್ಮ ಶರೀರದ ವಂಶವಾಹಿನಿಯ ಮಾಹಿತಿ ಬದಲಾಗಬಹುದು. ಅಲ್ಲದೇ ಕಣ್ಣಿನ ಕ್ಯಾನ್ಸರ್, ಥೈರಾಯ್ಡ್ ಗ್ರಂಥಿಯ ಕ್ಯಾನ್ಸರ್, ಮೆಲನೋಮಾ ಎಂಬ ಒಂದು ಬಗೆಯ ಚರ್ಮದ ಕ್ಯಾನ್ಸರ್, ರಕ್ತದ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಸಹಿತ ಇನ್ನೂ ಹಲವು ಕ್ಯಾನ್ಸರ್ ರೋಗಗಳಿಗೆ ಕಾರಣವಾಗಬಹುದು. ಇದರಿಂದ ತಡೆಯಬಹುದಾದ ಮಾರ್ಗಗಳನ್ನು ಅನುಸರಿಸಿ ಸಾಧ್ಯವಾದಷ್ಟು ಈ ವಿಕಿರಣಗಳಿಂದ ದೂರವಿರುವುದೇ ಸಧ್ಯಕ್ಕೆ ನಾವು ಕೈಗೊಳ್ಳಬಹುದಾದ ಮುನ್ನೆಚ್ಚರಿಕೆಗಳು. ಇವುಗಳಲ್ಲಿ ಪ್ರಮುಖವಾದುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ, ಮುಂದೆ ಓದಿ..

ಮುನ್ನೆಚ್ಚರಿಕೆ #1

ಮುನ್ನೆಚ್ಚರಿಕೆ #1

ಸಾಮಾನ್ಯವಾಗಿ ನಮಗೆ ಎಲ್ಲಾ ಹೊತ್ತಿನಲ್ಲಿ ಕರೆಗಳು ಬರುವುದಿಲ್ಲ. ಯಾವ ಹೊತ್ತಿನಲ್ಲಿ ಕರೆಗಳು ಬರುವುದಿಲ್ಲವೋ ಆಗ ಮೊಬೈಲನ್ನು ಏರ್ ಪ್ಲೇನ್ ಮೋಡ್ ನಲ್ಲಿರಿಸಿ. ಇದರಿಂದ ವಿಕಿರಣದ ಸಾಧ್ಯತೆ ಕಡಿಮೆಯಾಗುತ್ತದೆ.

ಮುನ್ನೆಚ್ಚರಿಕೆ #2

ಮುನ್ನೆಚ್ಚರಿಕೆ #2

ಸಾಧ್ಯವಾದಷ್ಟು ಹೆಚ್ಚು ಇಯರ್ ಫೋನ್ ಬಳಸಿ. ಇದರಿಂದ ಮೊಬೈಲಿನ ವಿಕಿರಣಗಳು ನೇರವಾಗಿ ಮೆದುಳಿಗೆ ತಲುಪುವುದನ್ನು ತಡೆಯಬಹುದು. ಆದರೆ ಬ್ಲೂಟೂಥ್ ಬೇಡ ಏಕೆಂದರೆ ಇದರಲ್ಲಿಯೂ ವಿಕಿರಣಗಳಿವೆ...!

ಮುನ್ನೆಚ್ಚರಿಕೆ #3

ಮುನ್ನೆಚ್ಚರಿಕೆ #3

ಸಿಗ್ನಲ್ ಕಡಿಮೆ ಇರುವಲ್ಲಿ ಜೀವ ಹೋಗುವಷ್ಟು ತುರ್ತಾದ ಕರೆ ಮಾಡಲೇಬೇಕಾದ ಅಗತ್ಯವಿಲ್ಲದ ವಿನಃ ಕರೆ ಮಾಡಲು ಹೋಗಬೇಡಿ.

ಮುನ್ನೆಚ್ಚರಿಕೆ #4

ಮುನ್ನೆಚ್ಚರಿಕೆ #4

ಮೊಬೈಲಿನಲ್ಲಿ ಸಾಧ್ಯವಾದಷ್ಟು ಕಡಿಮೆ ಸಮಯ ಮಾತನಾಡಿ. ಹೆಚ್ಚು ಹೊತ್ತು ಮಾತನಾಡುವುದಿದ್ದರೆ ಲ್ಯಾಂಡ್ ಲೈನ್ ಉತ್ತಮ. ಯಾವತ್ತಿಗೂ ಎದುರು ಬದುರಾಗಿ ಸ್ವತಃ ಭೇಟಿಯಾಗಿ ಕುಶಲ ಮಾತನಾಡುವುದು ಎಲ್ಲಕ್ಕಿಂತ ಉತ್ತಮ.

ಮುನ್ನೆಚ್ಚರಿಕೆ #5

ಮುನ್ನೆಚ್ಚರಿಕೆ #5

ಮೊಬೈಲುಗಳನ್ನು ಕೊಂಡೊಯ್ಯುವಾಗ ಶರ್ಟಿನ ಜೇಬಿನಲ್ಲಿಟ್ಟುಕೊಳ್ಳುವ ಬದಲು ಕೈಯಲ್ಲಿ ಹಿಡಿದುಕೊಂಡು ಹೋಗುವುದು ಉತ್ತಮ. ಒಟ್ಟಾರೆ ತಲೆ ಮತ್ತು ಎದೆಗಿಂತ ಮೊಬೈಲು ದೂರವಿದ್ದಷ್ಟೂ ಒಳ್ಳೆಯದು.

ಮುನ್ನೆಚ್ಚರಿಕೆ #6

ಮುನ್ನೆಚ್ಚರಿಕೆ #6

ಎಲ್ಲೆಲ್ಲಿ ಸಂದೇಶ ಕಳಿಸಿ ಮಾಹಿತಿ ರವಾನಿಸಲು ಸಾಧ್ಯವೋ ಅಲ್ಲೆಲ್ಲಾ ಈ ವ್ಯವಸ್ಥೆ ಅನುಸರಿಸಿ. ಏಕೆಂದರೆ ಪ್ರತಿ ಕರೆಯಲ್ಲಿಯೂ ವಿಕಿರಣಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು.

ಮುನ್ನೆಚ್ಚರಿಕೆ #7

ಮುನ್ನೆಚ್ಚರಿಕೆ #7

ಮೊಬೈಲಿಗೆ ದಾಸರಾಗಬೇಡಿ. ಮೊಬೈಲು ನಮ್ಮ ಅನುಕೂಲಕ್ಕೆ ಇದೆಯೇ ಹೊರತು ನಾವು ಅದರ ಅನುಕೂಲಕ್ಕಲ್ಲ. ಸುಮ್ಮಸುಮ್ಮನೇ ಕರೆ ಮಾಡಲು ಹೋಗಬೇಡಿ. ಅಗತ್ಯವಿದ್ದರೆ ಮಾತ್ರ ಕರೆ ಮಾಡಿ, ಚುಟುಕಾಗಿ ಹೇಳಬೇಕೆಂದಿದ್ದನ್ನು ತಿಳಿಸಿ ಇಟ್ಟುಬಿಡಿ. ಮೊಬೈಲಿನಲ್ಲಿರುವ ಸಾವಿರಾರು ಆಪ್ ಗಳನ್ನು ಪ್ರಯತ್ನಿಸಲು ಹೋಗಬೇಡಿ. ನಿಮಗೆ ನಿಜವಾಗಿಯೂ ಯಾವುದು ಅಗತ್ಯವಿದೆಯೋ ಅವನ್ನು ಮಾತ್ರ ಸಂದರ್ಭಾನುಸಾರ ಬಳಸಿ.

ಮುನ್ನೆಚ್ಚರಿಕೆ #8

ಮುನ್ನೆಚ್ಚರಿಕೆ #8

ರಾತ್ರಿ ಮಲಗುವ ಮುನ್ನ ಮೊಬೈಲನ್ನು ಯಾವತ್ತೂ ನಿಮ್ಮ ತಲೆಯ ಬಳಿ ಇರಿಸಬೇಡಿ. ಸಾಧ್ಯವಾದಷ್ಟು ದೂರ ಇರಿಸಿ.

English summary

Does Mobile Radiation Kill Us Slowly?

Mobile phones have become a part of our lives. Today, we carry them in our pockets wherever we go. We keep texting, chatting or talking throughout the day holding these phones every closely. But is it really healthy? Some studies clearly claim that mobile phones could even alter your genetic material. Certain other health issues which are said to be linked with the radiation are eye cancer, thyroid cancer, melanoma, leukemia, breast cancer and several other types of cancers.
X
Desktop Bottom Promotion