ನೆನಪಿಡಿ: ಟೀ ಕಾಫಿಗೆ ಒಮ್ಮೆ ಕುದಿಸಿದ ನೀರನ್ನೇ ಬಳಸಿ...

ಇಡಿಯ ದಿನ ಕುದಿಯುತ್ತಲೇ ಇರುವ ನೀರನ್ನೂ ಬಳಸುವುದು ಕ್ಷೇಮವಲ್ಲ. ಬನ್ನಿ, ಈ ನೀರನ್ನು ಕುಡಿಯುವ ಮೂಲಕ ಯಾವ ರೀತಿಯ ತೊಂದರೆಗಳು ಎದುರಾಗುತ್ತವೆ ಎಂಬುದನ್ನು ಮುಂದೆ ನೋಡೋಣ....

By: manu
Subscribe to Boldsky

ಸಾಮಾನ್ಯವಾಗಿ ಟೀ ಅಥವಾ ಕಾಫಿ ತಯಾರಿಸಲು ಒಮ್ಮೆ ನೀರು ಕುದಿಸಲು ಪ್ರಾರಂಭಿಸಿದಾಗ ಯಾವುದೋ ಕಾರಣದಿಂದ ಆತ್ತ ಹೋಗಿ ಮತ್ತೆ ಇತ್ತ ಬರುವುದರೊಳಗೆ ಈ ನೀರು ತಣ್ಣಗಾಗಿರುತ್ತದೆ. ನಾವೆಲ್ಲರೂ ಮತ್ತೊಮ್ಮೆ ಯೋಚಿಸದೇ ಇದೇ ನೀರನ್ನು ಮತ್ತೊಮ್ಮೆ ಕುದಿಸಿ ಟೀ ಕಾಫಿ ತಯಾರಿಸುತ್ತೇವೆ. ಆದರೆ ಈ ಅಭ್ಯಾಸ ಅನಾರೋಗ್ಯಕರವಾಗಿದೆ ಎಂದು ಇತ್ತೀಚಿನ ಸಂಶೋಧನೆಗಳು ತಿಳಿಸುತ್ತವೆ.  ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗುವ 10 ಲಾಭಗಳು

ಅಷ್ಟೇ ಅಲ್ಲ, ನೀರು ಕುದಿಯಲು ಪ್ರಾರಂಭವಾದ ತಕ್ಷಣ ಉರಿಯನ್ನು ಆರಿಸಬೇಕು. ಈ ನೀರನ್ನು ಮತ್ತಷ್ಟು ಕುದಿಸುವುದರಿಂದಲೂ ನೀರು ಇನ್ನಷ್ಟು ಅಪಾಯಕಾರಿಯಾಗುತ್ತಾ ಹೋಗುತ್ತದೆ. ಈ ನೀರು ಹೇಗೆ ಅಪಾಯಕಾರಿ? ಈ ಪ್ರಶ್ನೆಗೆ ತಜ್ಞರು ಏನು ಉತ್ತರ ನೀಡಿದ್ದಾರೆ ಎಂಬುದನ್ನು ನೋಡೋಣ.... ಅದಕ್ಕಿಂತ ಮೊದಲು ನೀರು ಕುದಿಸುವುದರಿಂದ ಏನು ಪ್ರಯೋಜನಗಳಿವೆ ಎಂಬುದರ ಕುರಿತ ಮಾಹಿತಿಯನ್ನೂ ನೀಡಿದ್ದೇವೆ ಮುಂದೆ ಓದಿ....                ಬಾಟಲಿ ನೀರು ನಲ್ಲಿ ನೀರಿಗಿಂತಲೂ ಹೆಚ್ಚು ಅಪಾಯಕಾರಿ!

ನೀರು ಕುದಿಸುವುದರಿಂದ ಆಗುವ ಲಾಭ.....

ನೀರಿನಲ್ಲಿ ಕೆಲವು ಲವಣಗಳು ಮತ್ತು ಇತರ ಸಂಯೋಜನೆಯುಳ್ಳ ಕಣಗಳು ಕರಗಿರುತ್ತವೆ. ಲವಣಗಳು ಅಗತ್ಯವಾದರೂ ಈ ಕಣಗಳು ನಮಗೆ ಹಾನಿಕರ. ಆದ್ದರಿಂದ ನೀರನ್ನು ಕುದಿಸಿದಾಗ ಈ ಕಣಗಳು ಆವಿಯಾಗಿ ಲವಣಗಳು ಮಾತ್ರ ಉಳಿದುಕೊಳ್ಳುತ್ತವೆ. ಇದು ಸುರಕ್ಷಿತವಾಗಿದೆ....

ನೀರು ಕುದಿಸುವುದರಿಂದ ಆಗುವ ಲಾಭ.....

ಆದರೆ ಕುದಿಸುವಿಕೆಯನ್ನು ಮುಂದುವರೆಸಿದಾಗ ನೀರಿನಲ್ಲಿ ಉಳಿದಿದ್ದ ಇತರ ಕಣಗಳು ಮತ್ತು ಲವಣಗಳು ಮರುಸಂಯೋಜನೆಗೊಳ್ಳುತ್ತವೆ. ಈಗ ನೀರು ಮತ್ತೊಮ್ಮೆ ಅಸುರಕ್ಷಿತವಾಗುತ್ತದೆ.

ಟೀ ಕಾಫಿಗೆ ಒಮ್ಮೆ ಕುದಿಸಿದ ನೀರನ್ನೇ ಬಳಸಿ.....

ಆದ್ದರಿಂದ ಮುಂದಿನ ಬಾರಿ ಟೀ ಕಾಫಿ ತಯಾರಿಸುವಾಗ ಒಮ್ಮೆ ಕುದಿಸಿದ ನೀರನ್ನು ಬಳಸಿ. ಇಡಿಯ ದಿನ ಕುದಿಯುತ್ತಲೇ ಇರುವ ನೀರನ್ನೂ ಬಳಸುವುದು ಕ್ಷೇಮವಲ್ಲ. ಬನ್ನಿ, ಈ ನೀರನ್ನು ಕುಡಿಯುವ ಮೂಲಕ ಯಾವ ರೀತಿಯ ತೊಂದರೆಗಳು ಎದುರಾಗುತ್ತವೆ ಎಂಬುದನ್ನು ಮುಂದೆ ಓದಿ....

ಜಠರ ಮತ್ತು ಕರುಳುಗಳಲ್ಲಿ ತೊಂದರೆ

ಮರು ಕುದಿಸಿದ ನೀರಿನಲ್ಲಿ ಉತ್ಪತ್ತಿಯಾಗಿರುವ ಕಣಗಳು ಹೊಟ್ಟೆಯಲ್ಲಿ ನಿಧಾನವಾಗಿ ನೋವು ಬರಲು ಕಾರಣವಾಗುತ್ತವೆ. ನಾವೆಲ್ಲರೂ ಇದನ್ನು ಸಾಮಾನ್ಯವಾಗಿ ನಿರ್ಲಕ್ಷಿಸುತ್ತೇವೆ. ಆದರೆ ಸತತವಾದ ಈ ನೋವು ಬೆಳೆದು ಹೆಮ್ಮೆರವಾಗಲು ಈ ನೀರೇ ಕಾರಣವಾಗುತ್ತದೆ.

ನರವ್ಯವಸ್ಥೆಯ ತೊಂದರೆಗಳು

ವಿಶ್ವದಾದ್ಯಂತ ಹಲವೆಡೆ ಈ ಬಗ್ಗೆ ನಡೆಸಿದ ಸಂಶೋಧನೆಯ ಮೂಲಕ ನೀರಿನಲ್ಲಿರುವ ಫ್ಲೋರೈಡ್ ಅಂಶ ಹಲವಾರು ನರವ್ಯವಸ್ಥೆಯ ತೊಂದರೆಗಳಿಗೆ ಕಾರಣವಾಗುತ್ತದೆ. ವಿಶೇಷವಾಗಿ ಮಕ್ಕಳ ಬುದ್ಧಿಮತ್ತೆ ಬೆಳೆಯದಿರಲು ಕಾರಣವಾಗಿದೆ. ಟೂಥ್ ಪೇಸ್ಟ್‌ನಲ್ಲಿ ಈ ಅಂಶ ಅಗತ್ಯವಾಗಿದ್ದು ಇದೇ ಕಾರಣಕ್ಕೆ ಟೂಥ್ ಪೇಸ್ಟ್ ನೊರೆಯನ್ನು ನುಂಗಬಾರದು.

ನರವ್ಯವಸ್ಥೆಯ ತೊಂದರೆಗಳು

ಹಿಂದೊಮ್ಮೆ ಕೋಲ್ಗೇಟ್ ಜಾಹೀರಾತಿನಲ್ಲಿ ಬೇಬಿ ಗುಡ್ಡು ಎಂಬ ಬಾಲಕಿ ಈ ಪೇಸ್ಟ್ ಚಪ್ಪರಿಸುವ ದೃಶ್ಯವನ್ನು ನಿವಾರಿಸಿ ಮತ್ತೊಮ್ಮೆ ತೋರಿಸಿದ ಘಟನೆಗೆ ಈ ವಾಸ್ತವವೇ ಕಾರಣ. ಮರು ಕುದಿಸಿದ ನೀರಿನಲ್ಲಿ ಫ್ಲೋರೈಡ ಅಂಶ ಗಾಢವಾಗುತ್ತಾ ಹೋಗುತ್ತದೆ ಎಂಬುದನ್ನು ಕಂಡುಕೊಳ್ಳಲಾಗಿದೆ.

ಕ್ಯಾನ್ಸರ್ ಆವರಿಸುವ ಸಾಧ್ಯತೆ

ಈ ನೀರಿನಲ್ಲಿ ಮರು ಸಂಯೋಜನೆಗೊಂಡ ಕಣಗಳಲ್ಲಿ ನೈಟ್ರೇಟುಗಳ ಪ್ರಮಾಣ ಹೆಚ್ಚು. ಈ ನೈಟ್ರೇಟುಗಳು ದೇಹದಲ್ಲಿದ್ದರೆ ವಿಶೇಷವಾಗಿ ಕರುಳು, ಗರ್ಭಕೋಶ, ಮೂತ್ರಕೋಶ ಮತ್ತು ಮೇದೋಜೀರಕ ಗ್ರಂಥಿಗಳಿಗೆ ಕ್ಯಾನ್ಸರ್ ಆವರಿಸುವ ಸಾಧ್ಯತೆ ಹೆಚ್ಚುತ್ತದೆ.

ಹೃದಯದ ತೊಂದರೆಗಳು ಹೆಚ್ಚುತ್ತವೆ

ಮರು ಕುದಿಸಿದ ನೀರಿನಲ್ಲಿ ಸಂಯೋಜನೆಗೊಂಡ ಲವಣಗಳಲ್ಲಿ ಅತಿ ಅಪಾಯಕಾರಿ ಎಂದರೆ ಆರ್ಸೆನಿಕ್. ಈ ಲವಣ ಹೃದಯಕ್ಕೆ ಮಾರಕವಾಗಿದ್ದು ಸ್ತಂಭನದ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಮೂತ್ರಪಿಂಡಕ್ಕೂ ಮಾರಕ

ಈ ಆರ್ಸೆನಿಕ್ ನಮ್ಮ ಮೂತ್ರಪಿಂಡಗಳಿಗೂ (ಕಿಡ್ನಿ) ಮಾರಕವಾಗಿದ್ದು ಇದನ್ನು ನಿವಾರಿಸಲು ಮೂತ್ರಪಿಂಡಗಳು ಬಹಳಷ್ಟು ಶ್ರಮಪಡಬೇಕಾಗುತ್ತದೆ. ಒಂದು ವೇಳೆ ಇದರ ಸಾಂದ್ರತೆ ಹೆಚ್ಚಿದ್ದರೆ ಮೂತ್ರಪಿಂಡದ ವೈಫಲ್ಯಕ್ಕೂ ಕಾರಣವಾಗಬಹುದು.

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Thursday, November 3, 2016, 15:33 [IST]
English summary

Do You Re-boil Water? Then You Should Stop It Immediately

Boiling water is good but when this water is re-boiled then it turns dangerous for one's health. Let's learn how re-boiling and boiling the water for too long affect our health through this article. Here are a few health problems that one can develop due to consumption of re-boiled water. Take a look.
Please Wait while comments are loading...
Subscribe Newsletter