ತಲೆ ನೋವಿಗೆ ಮಾತ್ರೆ ಬಿಡಿ-ಒಮ್ಮೆ ಮನೆಮದ್ದು ಪ್ರಯತ್ನಿಸಿ

By: manu
Subscribe to Boldsky

ತಲೆನೋವು ಕಾಡಿದರೆ ನಮಗೆ ತಕ್ಷಣ ನೆನಪಾಗುವುದು ಮೆಡಿಕಲ್. ಮೆಡಿಕಲ್‌ಗೆ ಹೋಗಿ ತಲೆನೋವಿಗೆ ಮಾತ್ರೆ ಕೊಡಿ ಎಂದು ಕೇಳಿ ಅದನ್ನು ತೆಗೆದುಕೊಳ್ಳುತ್ತೇವೆ. ಯಾವಾಗಲೂ ತಲೆನೋವು ಕಾಡಿದಾಗ ಮಾತ್ರೆ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಇದರಿಂದ ಹಲವಾರು ರೀತಿಯ ಅಡ್ಡಪರಿಣಾಮಗಳು ಉಂಟಾಗಬಹುದು. ಜೀವ ಹಿಂಡುವ ಮೈಗ್ರೇನ್ ತಲೆ ನೋವಿಗೆ ತ್ವರಿತ ಮನೆಮದ್ದು 

ಪದೇ ಪದೇ ತಲೆನೋವು ನಿಮ್ಮನ್ನು ಕಾಡುತ್ತಾ ಇದೆ ಎಂದಾದರೆ ಆಗ ನೀವು ವೈದ್ಯರನ್ನು ಭೇಟಿಯಾಗಿ ಅವರಿಂದ ಚಿಕಿತ್ಸೆ ಪಡೆಯುವುದು ಸೂಕ್ತ. ಆದರೆ ಕೆಲವೊಂದು ಮನೆಮದ್ದುಗಳು ತಲೆನೋವನ್ನು ನಿವಾರಣೆ ಮಾಡುವಂತಹ ಸಾಮರ್ಥ್ಯ ಹೊಂದಿದೆ. ಒಂದೇ ಗಂಟೆಯಲ್ಲಿ ಮಾತ್ರೆಯಿಲ್ಲದೆ ತಲೆನೋವು ಮಾಯ!

ಇದನ್ನು ಪ್ರಯತ್ನಿಸಿದರೆ ತಲೆನೋವು ನಿವಾರಣೆ ಸಾಧ್ಯವಿದೆ. ಒತ್ತಡದಿಂದಾಗಿ ತಲೆನೋವು ಕಾಣಿಸಿಕೊಳ್ಳುತ್ತಾ ಇದ್ದರೆ ಅದನ್ನು ಹೋಗಲಾಡಿಸಲು ಇಲ್ಲಿ ಕೆಲವೊಂದು ಮನೆಮದ್ದನ್ನು ಬಳಸಬಹುದಾಗಿದೆ...

ಆಲೂಗಡ್ಡೆ

ಒಂದು ಆಲೂಗಡ್ಡೆ ತೆಗೆದುಕೊಂಡು ಅದನ್ನು ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ. ಆ ತುಂಡನ್ನು ಹಣೆಗೆ ಉಜ್ಜಿಕೊಳ್ಳಿ. ಕೆಲವು ಹೊತ್ತಿನ ಬಳಿಕ ತಲೆನೋವು ನೈಸರ್ಗಿಕವಾಗಿ ಕಡಿಮೆಯಾಗುವುದು.

ಶುಂಠಿ

ಕುದಿಯುತ್ತಿರುವ ಒಂದು ಕಪ್ ನೀರಿಗೆ ಜಜ್ಜಿದ ಶುಂಠಿ ಹಾಕಿಕೊಳ್ಳಿ. 15 ನಿಮಿಷಗಳ ಕಾಲ ಇದನ್ನು ಕುದಿಯಲು ಬಿಡಿ ಮತ್ತು ಕೆಲವು ಹನಿ ನಿಂಬೆನೀರನ್ನು ಇದಕ್ಕೆ ಹಾಕಿಕೊಂಡು ಕುಡಿಯಿರಿ.

ಬೆಳ್ಳುಳ್ಳಿ

ಬೆಳ್ಳುಳ್ಳಿಯನ್ನು ಜಜ್ಜಿಕೊಂಡು ಅದನ್ನು ಹಣೆಗೆ ಹಚ್ಚಿಕೊಳ್ಳಿ. ಅದರ ಮೇಲೆ ಬಟ್ಟೆ ಹಾಕಿಕೊಳ್ಳಿ. ಸ್ವಲ್ಪ ಸಮಯದ ಬಳಿಕ ನಿಮಗೆ ಆರಾಮವೆನಿಸುವುದು.

ನೀರು

ನಿರ್ಜಲೀಕರಣದಿಂದಾಗಿ ನಿಮಗೆ ತಲೆನೋವು ಕಾಣಿಸಿಕೊಳ್ಳುತ್ತಾ ಇದೆ ಎಂದಾದರೆ ಮೂರು ಲೋಟ ನೀರು ಕುಡಿದು ನೋಡಿ. ನಿಮಗೆ ತುಂಬಾ ಆರಾಮವೆನಿಸುವುದು.

ತಲೆಗೆ ಮಸಾಜ್

10 ನಿಮಿಷಗಳ ಕಾಲ ಬಿಸಿ ತೆಂಗಿನ ಎಣ್ಣೆಯಿಂದ ತಲೆಗೆ ಮಸಾಜ್ ಮಾಡಿಕೊಳ್ಳಿ. ಇದು ತಲೆಬುರುಡೆಗೆ ರಕ್ತಸಂಚಾರವನ್ನು ಸುಗುಮಗೊಳಿಸುವ ಕಾರಣ ತಲೆನೋವು ಕಡಿಮೆಯಾಗುವುದು.

ಎಲೆಕೋಸಿನ ಎಲೆ

ಎಲೆಕೋಸಿನ ಒಂದು ಎಲೆಯನ್ನು ಸರಿಯಾಗಿ ಜಜ್ಜಿಕೊಳ್ಳಿ. ಅದನ್ನು ಹಣೆಗೆ ಇಟ್ಟುಕೊಳ್ಳಿ. ಅದರ ನೀರು ನಿಮ್ಮ ಹಣೆಗೆ ಸರಿಯಾಗಿ ಹರಡಲಿ.

ಹಾಲು ಹಾಕದ ಕಾಫಿ

ಹಾಲು ಹಾಕದ ಕಾಫಿಗೆ ಕೆಲವು ಹನಿ ನಿಂಬೆರಸವನ್ನು ಹಾಕಿಕೊಳ್ಳಿ. ಇದನ್ನು ಕುಡಿದರೆ ನಿಮಗೆ ತಕ್ಷಣ ಪರಿಹಾರ ಸಿಗುವುದು.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

English summary

Do Folk Remedies Cure Headache?

if you are suffering from frequent headaches, it is always better to go to a doctor to get the actual reason diagnosed. Home remedies may not help in sorting out certain chronic issues.
Please Wait while comments are loading...
Subscribe Newsletter