For Quick Alerts
ALLOW NOTIFICATIONS  
For Daily Alerts

ಶೀತ, ಕೆಮ್ಮು, ಗಂಟಲು ನೋವಿನ ಸಮಸ್ಯೆಗೆ ಸುಲಭೋಪಾಯ

By Jayasubramanya
|

ಶೀತ, ಕೆಮ್ಮು ಮತ್ತು ಕಟ್ಟುವಿಕೆಯಂತಹ ಸಮಸ್ಯೆಗಳು ಬೇರೆ ಬೇರೆ ಋತುಮಾನಗಳಲ್ಲಿ ಕಾಣಿಸಿಕೊಳ್ಳುವಂಹ ಸಮಸ್ಯೆಗಳಾಗಿವೆ. ಹವಾಮಾನ ಬದಲಾವಣೆಯಿಂದಾಗಿ ಹೆಚ್ಚಿನವರಲ್ಲಿ ಈ ಸಮಸ್ಯೆ ಸಾಮಾನ್ಯವಾಗಿದೆ.

ಇನ್ನು ಧೂಳು ಮತ್ತು ಕಲುಷಿತ ವಾತಾವರಣ ಈ ಸ್ಥಿತಿಯನ್ನು ಹೆಚ್ಚು ಕೆಟ್ಟದಾಗಿಸಲಿದ್ದು ಉಸಿರಾಟದ ತೊಂದರೆಯನ್ನು ಉಂಟುಮಾಡುತ್ತದೆ. ರಾತ್ರಿ ಮಲಗಿರುವ ಸಮಯದಲ್ಲಿ ಕೂಡ ಕೆಮ್ಮು ನೆಗಡಿ ನಿಮಗೆ ಎಚ್ಚರವಾಗುವಂತೆ ಮಾಡಿ ನಿಮಗೆ ತೊಂದರೆಯನ್ನು ಉಂಟುಮಾಡುತ್ತದೆ. ಇದರಿಂದ ಉಸಿರಾಟದಲ್ಲಿ ನಿಮಗೆ ಸಮಸ್ಯೆಯುಂಟಾಗುತ್ತದೆ.

DIY: Recipe To Cure Cold And Congestion

ಈ ಸಮಯದಲ್ಲಿ ನಿಮಗೆ ತೋಚಿರುವ ಔಷಧಿಗಳನ್ನು ಸೇವಿಸುವುದಕ್ಕಿಂತ ಮುನ್ನ ವೈದ್ಯರನ್ನು ಹೋಗಿ ಕಾಣಿ. ನಂತರ ಔಷಧಗಳನ್ನು ಸೇವಿಸಿ. ನೈಸರ್ಗಿಕ ವಿಧಾನದಲ್ಲಿ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳುವುದು ಇನ್ನಷ್ಟು ಸುಲಭ ವಿಧಾನವಾಗಿದ್ದು ಇದರಿಂದ ಕೂಡ ಕೆಮ್ಮು, ಶೀತ ಮತ್ತು ಕಟ್ಟುವಿಕೆ ಸಮಸ್ಯೆಗಳನ್ನು ದೂರಮಾಡಿಕೊಳ್ಳಬಹುದು. ಹಾಗಿದ್ದರೆ ನೈಸರ್ಗಿಕ ವಿಧಾನವನ್ನು ನಿಮ್ಮದಾಗಿಸಿಕೊಂಡು ಪರಿಹಾರ ಕಂಡುಕೊಳ್ಳಲು ಈ ಲೇಖನದಲ್ಲಿ ಸಲಹೆ ಇದೆ. ಹಾಗಿದ್ದರೆ ಈ ನೈಸರ್ಗಿಕ ರೆಸಿಪಿಯನ್ನು ಹೇಗೆ ತಯಾರಿಸಿಕೊಳ್ಳುವುದು ಎಂಬುದನ್ನು ಕಂಡುಕೊಳ್ಳೋಣ. ಶೀತ, ಕೆಮ್ಮು ಉಪಟಳ ತಡೆಯುವ ಮನೆಮದ್ದು

ಸಾಮಾಗ್ರಿಗಳು
1. ಫಿಲ್ಟರ್ ಮಾಡದೇ ಇರುವ ಹಸಿ ಆಪಲ್ ಸೀಡರ್ ವಿನೇಗರ್ - 1/4 ಕಪ್
2. ಲಿಂಬೆ ರಸ - 1/4 ಕಪ್
3. ಹಸಿ ಜೇನು - 2 ಚಮಚಗಳು
4. ಒಣ ಶುಂಠಿ ಪುಡಿ - 1 ಚಮಚ
5. ಮೆಣಸಿನ ಪುಡಿ - 1/2 ಚಮಚ
6.ಕಾಳು ಮೆಣಸಿನ ಹುಡಿ - ಚಿಟಿಕೆಯಷ್ಟು


7. ಅರಿಶಿನ ಹುಡಿ - 1/2 ಚಮಚ
8. ಮಿಶ್ರಣ ಮಾಡುವ ಪಾತ್ರೆ
9.ತಂತಿ ಕೂರ್ಚ (ವಿಸ್ಕ್)
10.ಅಳತೆ ಮಾಡುವ ಕಪ್ಸ್
11.ಸಂಗ್ರಹಿಸಿಡಲು ಡಬ್ಬ ಶೀತ ಆದಾಗ ಏನು ಮಾಡಬೇಕು, ಏನು ಮಾಡಬಾರದು?

ತಯಾರಿ ವಿಧಾನ
1. ಮಿಶ್ರಣ ಮಾಡುವ ಪಾತ್ರೆಯನ್ನು ತೆಗೆದುಕೊಳ್ಳಿ
2. ಹಸಿ ಆಪಲ್ ಸೀಟರ್ ವಿನೇಗರ್ ಅನ್ನು ಪಾತ್ರೆಗೆ ಹಾಕಿ.
3. ಇದಕ್ಕೆ ಲಿಂಬೆ ರಸವನ್ನು ಹಿಂಡಿ
4. ಈ ಮಿಶ್ರಣಕ್ಕೆ ಜೇನನ್ನು ಸೇರಿಸಿ.

5. ಮೆಣಸಿನ ಪುಡಿಯನ್ನು ಹಾಕಿ. ನಿಮಗೆ ಮೆಣಸಿನ ಹುಡಿ ಸಿಗಲಿಲ್ಲ ಎಂದಾದಲ್ಲಿ, ಮೆಣಸಿನ ಪದರಗಳನ್ನು ಬಳಸಿ
6. ಒಣ ಶುಂಠಿ ಹುಡಿಯನ್ನು ಹಾಕಿ.
7. ಅರಿಶಿನ ಸೇರಿಸಿ
8. ಕಾಳುಮೆಣಸಿನ ಪುಡಿಯನ್ನು ಉದುರಿಸಿ.
9. ಈಗ ವಿಸ್ಕ್ ಬಳಸಿ ಎಲ್ಲಾ ಸಾಮಾಗ್ರಿಗಳನ್ನು ಚೆನ್ನಾಗಿ ಕಲಸಿಕೊಳ್ಳಿ.
10. ನಿಮ್ಮ ಮನೆಯಲ್ಲೇ ತಯಾರು ಮಾಡಿದ ನೈಸರ್ಗಿಕ ಔಷಧಿ ಸಿದ್ಧವಾಗಿದೆ.
11. ಇದನ್ನು ಗ್ಲಾಸ್ ಕಂಟೈನರ್‎ಗೆ ಸುರಿಯಿರಿ ಮತ್ತು ರೆಫ್ರಿಜರೇಟರ್‭‎ನಲ್ಲಿ ಎತ್ತಿಟ್ಟುಕೊಳ್ಳಿ. ಇದನ್ನು ಹಲವಾರು ವಾರಗಳವರೆಗೆ ನಿಮಗೆ ಬಳಸಿಕೊಳ್ಳಬಹುದು.

ಈ ಔಷಧವನ್ನು ಬಳಸುವುದು ಹೇಗೆ?
ಈ ರೆಸಿಪಿಯಲ್ಲಿ ಬಳಸಲಾದ ಈ ಎಲ್ಲಾ ಸಾಮಾಗ್ರಿಗಳು ಸುಲಭವಾಗಿ ದೊರೆಯುತ್ತದೆ. ಇನ್ನು ಇದರ ಸಿದ್ಧತೆ ಕೂಡ ಹೆಚ್ಚು ಕಷ್ಟವಲ್ಲ. ಶೀತ, ಕೆಮ್ಮಿಗೆ ಮನೆಯಲ್ಲೇ ತಯಾರು ಮಾಡಲಾದ ಔಷಧ ನಿಮಗೆ ಬೇಕು ಎಂದಾದಲ್ಲಿ, ನಿಮಗೆ ಇದು ನಿಜಕ್ಕೂ ಸಹಾಯಕ. ದೊಡ್ಡವರಿಗೆ 2 ಚಮಚದಷ್ಟು ಮದ್ದು ಆರಾಮವನ್ನು ನೀಡುತ್ತದೆ. ಇನ್ನು ಮಗುವಿಗೆ ದಿನಕ್ಕೆ 1 ಚಮಚದಷ್ಟು ಈ ಔಷಧವನ್ನು ನೀಡಿದರೆ ಸಾಕು. 1 ವರ್ಷಕ್ಕಿಂತ ಒಳಗಿನ ಮಕ್ಕಳಿಗೆ ಈ ಔಷಧವನ್ನು ನೀಡಬೇಡಿ. ಸೇವಿಸುವ ಮುನ್ನ ಮಿಶ್ರಣವನ್ನು ಚೆನ್ನಾಗಿ ಕುಲುಕಿಸಿಕೊಳ್ಳಿ, ಇಲ್ಲದಿದ್ದರೆ ಹುಡಿ ಅಡಿಭಾಗದಲ್ಲಿ ಹಾಗೆಯೇ ಇರುತ್ತದೆ.

ಔಷಧದ ಪ್ರಯೋಜನಗಳು:
1.ಆಪಲ್ ಸೀಡರ್ ವಿನೇಗರ್‭‎ನಲ್ಲಿರುವ ಅಂಶಗಳು ನಿಮ್ಮ ರೋಗವರ್ಧಕ ಶಕ್ತಿಯನ್ನು ವೃದ್ಧಿಸುತ್ತದೆ ಮತ್ತು ಲೋಳೆಯ ದಟ್ಟಣೆಯನ್ನು ನಿರಾಳಗೊಳಿಸಿ ದಟ್ಟಣೆಯಿಂದ ಗಾಳಿಯ ಆಡುವಿಕೆಯನ್ನು ಮುಕ್ತವಾಗಿಸುತ್ತದೆ.
2. ಲಿಂಬೆ ರಸದಲ್ಲಿರುವ ವಿಟಮಿನ್ ಸಿ ಅಂಶವು ದಟ್ಟಣೆ ಮತ್ತು ಶೀತಕ್ಕೆ ಹೆಚ್ಚು ಪ್ರಯೋಜನಕಾರಿಯಾದುದು. ಸೋಂಕಿನ ವಿರುದ್ಧ ಹೋರಾಡುವ ಶಕ್ತಿಯನ್ನು ಈ ರಸ ನಿಮಗೆ ನೀಡುತ್ತದೆ.
3.ಜೇನು ಗುಣಪಡಿಸುವ ಅಂಶಗಳನ್ನು ಹೊಂದಿದೆ. ಶೀತದೊಂದಿಗೆ ನಿಮೆಗ ಕೆಮ್ಮಿದೆ ಎಂದಾದಲ್ಲಿ, ಜೇನು ಉತ್ತಮ ಮದ್ದಾಗಿದೆ.
4.ಮೆಣಸಿನ ಹುಡಿ ಕ್ಯಾಪ್ಸಸಿನ್ ಅನ್ನು ಒಳಗೊಂಡಿದ್ದು, ಸೈನಸ್ ಅನ್ನು ಒಣಗಿಸುತ್ತದೆ.
5.ನೋಯುತ್ತಿರುವ ಗಂಟಲಿನಿಂದ ಬಳಲುತ್ತಿದ್ದೀರಿ ಎಂದಾದಲ್ಲಿ, ಶುಂಠಿಯನ್ನು ನಿಮಗೆ ಬಳಸಬಹುದು. ನಿಮ್ಮ ದೇಹವನ್ನು ಇದು ಬೆಚ್ಚಗೆ ಇರಿಸುತ್ತದೆ ಮತ್ತು ರಕ್ತ ಸಂಚಾರವನ್ನು ಸರಾಗವಾಗಿಸಿ ದಟ್ಟಣೆಯನ್ನು ಸುಧಾರಿಸುತ್ತದೆ.
6.ಅರಿಶಿನದಲ್ಲಿರುವ ಉರಿಯೂತ ವಿರೋಧಿ ಗುಣಲಕ್ಷಣಗಳು ಉರಿಯೂತವನ್ನು ನಿವಾರಿಸುತ್ತದೆ. ಮತ್ತು ಹೆಚ್ಚುವರಿ ಸೋಂಕಿಗೆ ಒಳಗಾಗದಂತೆ ನಿಮ್ಮನ್ನು ತಡೆಯುತ್ತದೆ.
7.ಕರಿಮೆಣಸು ಕಫವನ್ನು ನಿವಾರಿಸಿ ಉಸಿರುಕಟ್ಟಿದ ಮೂಗನ್ನು ನಿರಾಳಗೊಳಿಸುತ್ತದೆ. ವೇಗವಾಗಿ ಗುಣಮುಖರಾಗಲು ಈ ಔಷಧವನ್ನು ಬಳಸುತ್ತಿರುವಾಗ, ಆರೋಗ್ಯಕರ ಆಹಾರ ಸೇವನೆಯನ್ನು ನೀವು ಮಾಡಬೇಕು. ಸಾಧ್ಯವಾದಷ್ಟು ನೀರು ಕುಡಿಯಿರಿ. ದಟ್ಟಣೆಯಿಂದ ನಿವಾರಣೆ ಪಡೆದುಕೊಳ್ಳಲು ಹಾಟ್ ಸ್ಟೀಮ್ ಸಹಕಾರಿಯಾಗಿದೆ. ಸಾಕಷ್ಟು ವಿಶ್ರಾಂತಿಯನ್ನು ಪಡೆದುಕೊಳ್ಳಿ. ಇದರಿಂದ ನಿಮ್ಮ ದೇಹಕ್ಕೆ ಪ್ರತಿ ಹೋರಾಡುವ ಶಕ್ತಿ ದೊರೆಯುತ್ತದೆ.

English summary

DIY: Recipe To Cure Cold And Congestion

Cold, cough and congestion can happen due to various reasons. During the seasonal changes, this problem is commonly seen in many people. Besides, the dust and pollution can make the situation worse. If your air passage gets congested, it becomes very difficult to breathe. Here is a detail recipe of a homemade decongestant, which can cure your problem and make you breathe easily. Read on to know more.
X
Desktop Bottom Promotion