ಬೆಡ್‌ರೂಮ್‌ನಲ್ಲಿ ವಿಜೃಂಭಿಸಲು ನೆರವಾಗುವ ವಯಾಗ್ರ ಜ್ಯೂಸ್

ಕೆಲವೊಮ್ಮೆ ಕೆಲವಾರು ಕಾರಣಗಳಿಂದ ಶಯನ ಸಮಯದಲ್ಲಿ ಅಗತ್ಯವಿದ್ದಷ್ಟು ಶಕ್ತಿ ಇರದೇ ಸಂಗಾತಿಯ ಅಗತ್ಯತೆಯನ್ನು ಪೂರೈಸಲು ಸಾಧ್ಯವಾಗುವುದಿಲ್ಲ...ಅದಕ್ಕೆಂದೇ ಒಂದು ನೈಸರ್ಗಿಕ ವಯಾಗ್ರ ಜ್ಯೂಸ್ ನೀಡಿದ್ದೇವೆ ಮುಂದೆ ಓದಿ....

By: Arshad
Subscribe to Boldsky

ವಿವಾಹದ ವಿಧಿಗಳಲ್ಲಿ ಬೋಧಿಸುವ ಮಂತ್ರದಲ್ಲಿನ ಒಂದು ಸಾಲಿನಲ್ಲಿ 'ಶಯನೇಶು ವೇಶ್ಯಾ' ಎಂಬ ಪದವೂ ಬರುತ್ತದೆ. ಪತಿ ಪತ್ನಿಯರ ನಡುವೆ ಭಾವನಾತ್ಮಕ ಸಂಬಂಧವೇ ಹೆಚ್ಚಿನ ಮಹತ್ವ ಪಡೆದರೂ ಶಾರೀರಿಕ ಸಂಬಂಧವೂ ಒಂದು ಮುಖ್ಯವಾದ ಅಂಗವಾಗಿದೆ.

ಸಂತತಿ ಮುಂದುವರೆಸಲು ನಿಸರ್ಗ ನೀಡಿರುವ ಒಂದು ಕ್ರಿಯೆಯೂ ಹೌದು. ಸಂಬಂಧ ಯಶಸ್ವಿಯಾಗಲು ಭಾವನಾತ್ಮಕವಾಗಿ ಆತ್ಮಗಳ ಮಿಲನದ ಜೊತೆಗೇ ದೇಹಗಳ ಮಿಲನವೂ ಅಗತ್ಯ. ನಿಯಮಿತವಾಗಿ ಶಾರೀರಿಕ ಸುಖವನ್ನು ಪಡೆಯುತ್ತಾ ಬಂದಿರುವ ದಂಪತಿಗಳು ಹೆಚ್ಚು ಸುಖ, ನೆಮ್ಮದಿ ಮತ್ತು ದೀರ್ಘಾಯಸ್ಸನ್ನು ಪಡೆಯುತ್ತಾರೆ ಎಂದು ಹಲವಾರು ಸಂಶೋಧನೆಗಳು ಸಾಬೀತುಪಡಿಸಿವೆ. ವಯಾಗ್ರದಂತೆ ಕೆಲಸ ಮಾಡುವ 10 ಅದ್ಭುತ ಆಹಾರಗಳು 

ಕೆಲವೊಮ್ಮೆ ಕೆಲವಾರು ಕಾರಣಗಳಿಂದ ಶಯನ ಸಮಯದಲ್ಲಿ ಅಗತ್ಯವಿದ್ದಷ್ಟು ಶಕ್ತಿ ಇರದೇ ಸಂಗಾತಿಯ ಅಗತ್ಯತೆಯನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಏರುತ್ತಿರುವ ವಯಸ್ಸಿನೊಂದಿಗೆ ಕೆಲವು ಶಕ್ತಿಗಳು ಉಡುಗುವುದು ಪ್ರಮುಖ ಕಾರಣವಾದರೆ ಆಹಾರದಲ್ಲಿ ಕೆಲವು ಪೋಷಕಾಂಶಗಳ ಕೊರತೆ ಇನ್ನೊಂದು ಕಾರಣ. ಈ ಕೊರತೆಯನ್ನು ಕೆಲವು ಔಷಧಿಗಳು ಮತ್ತು ಮನೆಮದ್ದುಗಳು ಸಮರ್ಥವಾಗಿ ತುಂಬಬಲ್ಲವು. ವಯಾಗ್ರಾ ಇಂತಹ ಒಂದು ಸಮರ್ಥ ಔಷಧಿಯಾಗಿದೆ.

ಆದರೆ ಈ ಔಷಧಿಯನ್ನು ಸೇವಿಸುವ ಮುನ್ನ ವೈದ್ಯರ ಸಲಹೆ ಮತ್ತು ತಪಾಸಣೆ ಅಗತ್ಯವಾಗಿದ್ದು ವೈದ್ಯರ ಸಲಹೆ ಮೇರೆಗೆ ಮಾತ್ರವೇ ಸೂಕ್ತ ಪ್ರಮಾಣದಲ್ಲಿ ಮಾತ್ರ ಸೇವಿಸುವುದು ಅಗತ್ಯವಾಗಿದೆ. ಪತ್ರಿಕೆಗಳನ್ನು ಬರುವ ಜಾಹೀರಾತುಗಳಂತೂ ಸುಳ್ಳಿನ ಸರಮಾಲೆಯಾಗಿದ್ದು ಇವುಗಳನ್ನು ಸೇವಿಸುವುದರಿಂದ ಯಾವುದೋ ಕಾಣದ ಕೇಳದ ತೊಂದರೆಯನ್ನು ಅನುಭವಿಸಬೇಕಾಗಿ ಬರಬಹುದು. ಮನೆಯಲ್ಲೇ ನೈಸರ್ಗಿಕ ವಯಾಗ್ರ ತಯಾರಿಸಿ 

ಈ ತೊಂದರೆಯನ್ನು ನೀಗಿಸಲು ನಿಸರ್ಗವೂ ಕೆಲವಾರು ಪರಿಕರಗಳನ್ನು ನೀಡಿದ್ದು ಇವುಗಳ ಸರಿಯಾದ ಸೇವನೆಯಿಂದಲೂ ವಯಾಗ್ರಾದಂತಹ ಪರಿಣಾಮವನ್ನೇ ಪಡೆಯಬಹುದು. ಪುರುಷರೂ, ಮಹಿಳೆಯರೂ ಸೇವಿಸಬಹುದಾಗಿದ್ದು ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ. ಬನ್ನಿ, ಈ ಸಾರ್ಮಥ್ಯವಿರುವ ಪೇಯವನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ.....  


ಅಗತ್ಯವಿರುವ ಸಾಮಾಗ್ರಿಗಳು

*ಲಿಂಬೆ ಮತ್ತು ಕಲ್ಲಂಗಡಿ

ಅಗತ್ಯವಿರುವ ಸಾಮಾಗ್ರಿಗಳು

ಕಲ್ಲಂಗಡಿ ಹಣ್ಣಿನಲ್ಲಿ ಉತ್ತಮ ಪ್ರಮಾಣದ ನೀರು ಇದೆ. ಅಲ್ಲದೇ ಇದರಲ್ಲಿರುವ ಪೋಷಕಾಂಶಗಳಲ್ಲಿ ಕಾಮೋತ್ತೇಜಕ ಗುಣಗಳೂ ಇವೆ. ಈ ಪೋಷಕಾಂಶಗಲ್ಲಿ ಪ್ರಮುಖವಾಗಿರುವ ಸಿಟ್ರುಲೈನ್ ಮತ್ತು ಲೈಕೋಪಿನ್ ಎಂಬುವು ಈ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ. ಸಿಟ್ರುಲೈನ್ ಸೇವನೆಯಿಂದ ವಿಶೇಷವಾಗಿ ಪುರುಷರ ಜನನಾಂಗದ ರಕ್ತನಾಳಗಳಲ್ಲಿ ಹೆಚ್ಚಿನ ರಕ್ತ ತುಂಬಿಕೊಳ್ಳಲು ಸಾಧ್ಯವಾಗುತ್ತದೆ. ಇದು ಹೆಚ್ಚಿನ ಹೊತ್ತು ಉದ್ರೇಕವನ್ನು ತಡೆದುಹಿಡಿದಿಟ್ಟುಕೊಳ್ಳಲು ನೆರವಾಗುತ್ತದೆ. ಕಲ್ಲಂಗಡಿ ಹಣ್ಣು ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆಯಂತೆ!

ಲಿಂಬೆ ಜ್ಯೂಸ್

ಇದಕ್ಕೆ ಜೊತೆಯಾಗಿರುವ ಲಿಂಬೆರಸದಲ್ಲಿರುವ ಕೆಲವು ವಿಟಮಿನ್ನು ಮತ್ತು ಖನಿಜಗಳಲ್ಲಿ ಕಾಮೋತ್ತೇಜಕ ಗುಣಗಳಿವೆ. ಈ ಎರಡೂ ರಸಗಳನ್ನು ಬೆರೆಸಿ ನಿಯಮಿತವಾಗಿ ಸೇವಿಸುತ್ತಾ ಬಂದರೆ ಕೆಲವೇ ದಿನಗಳಲ್ಲಿ ಲೈಂಗಿಕ ಶಕ್ತಿ ಗಣನೀಯವಾಗಿ ಏರುವುದನ್ನು ಗಮನಿಸಬಹುದು. ಆದರೆ ಈ ರಸದಲ್ಲಿ ಸಕ್ಕರೆಯಾಗಲೀ, ಉಪ್ಪನ್ನಾಗಲೀ ಅಥವಾ ಇನ್ನಾವುದೇ ಪರಿಕರವನ್ನು ಸೇರಿಸಬಾರದು.

ಹಂತ #1

ಮೊದಲು ಕಲ್ಲಂಗಡಿ ಹಣ್ಣನ್ನು ಎರಡು ಭಾಗಗಳಾಗಿ ಕತ್ತರಿಸಿ ಒಂದು ಭಾಗದ ತಿರುಗಳನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ, ಬೀಜಗಳನ್ನು ನಿವಾರಿಸಿ.

ಹಂತ #2

ಮಿಕ್ಸಿಯ ಬ್ಲೆಂಡರಿನಲ್ಲಿ ಈ ತುಂಡುಗಳನ್ನು ಕಡೆದು ತೆಳುಬಟ್ಟೆಯಲ್ಲಿ ಸೋಸಿ ನೀರನ್ನು ಸಂಗ್ರಹಿಸಿ

ಹಂತ #3

ಒಂದು ಚಿಕ್ಕ ಪಾತ್ರೆಯಲ್ಲಿ ಈ ರಸವನ್ನು ಸುರಿದು ಚಿಕ್ಕ ಉರಿಯಲಿ ಕುದಿ ಬರುವಷ್ಟು ಬಿಸಿಮಾಡಿ.

ಹಂತ #4

ಈ ರಸಕ್ಕೆ ಕೆಲವು ಹನಿ ಲಿಂಬೆರಸವನ್ನು ಸೇರಿಸಿ

ಹಂತ #4

ಕುದಿಸುವಿಕೆಯನ್ನು ಚಿಕ್ಕ ಉರಿಯಲ್ಲಿ ಮುಂದುವರೆಸಿ, ಸುಮಾರು ಅರ್ಧವಾದ ಬಳಿಕ ಉರಿ ಆರಿಸಿ.

ಹಂತ #5

ಈ ರಸವನ್ನು ಮುಂದಿನ ಒಂದು ಗಂಟೆಯ ಕಾಲ ಹಾಗೇ ತಣಿಯಲು ಬಿಡಿ.

ಹಂತ #6

ಈ ರಸವನ್ನು ಒಂದು ಗಾಜಿನ ಬಾಟಲಿಯಲ್ಲಿ ಹಾಕಿಟ್ಟು ತಣ್ಣಗಿನ ಮತ್ತು ಒಣ ಸ್ಥಳದಲ್ಲಿ ಸಂಗ್ರಹಿಸಿ

ಹಂತ #7

ಈ ರಸವನ್ನು ದಿನಕ್ಕೆ ಎರಡು ಬಾರಿ ಖಾಲಿಹೊಟ್ಟೆಯಲ್ಲಿ ಸೇವಿಸಬೇಕು. ಬೆಳಿಗ್ಗೆ ಎದ್ದ ತಕ್ಷಣ ಹಾಗೂ ರಾತ್ರಿ ಊಟಕ್ಕೂ ಮೊದಲು.

ಹಂತ #8

ನಿಮ್ಮ ದೇಹದ ತೂಕಕ್ಕನುಗುಣವಾಗಿ ಈ ರಸದ ಪ್ರಮಾಣವನ್ನು ಸೇವಿಸಬೇಕು. ಸಾಧಾರಣ ಮೈಕಟ್ಟಿನವರು ಪ್ರತಿಬಾರಿ ಎರಡು ದೊಡ್ಡಚಮದಿಂದ 1/3ರಷ್ಟು ಕಪ್ ಪ್ರಮಾಣದಲ್ಲಿ ದಿನಕ್ಕೆರಡು ಬಾರಿ ಸೇವಿಸಬೇಕು. ದೇಹದ ತೂಕ ಹೆಚ್ಚಿದಂತೆ ಈ ಪ್ರಮಾಣವನ್ನೂ ಕೊಂಚ ಹೆಚ್ಚಿಸಬಹುದು.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Saturday, November 26, 2016, 23:14 [IST]
English summary

DIY: Natural Viagra Drink For Stronger Love In Bed

Intimacy is one of key elements in a meaningful relationship. Along with trust, communication and love, sex also takes one of the top most places in the making of a successful relationship. So, it is also important to keep your sex lives spiced up! Popular researches have claimed that couples who have healthy and active sex lives are comparatively happier and even live longer.
Please Wait while comments are loading...
Subscribe Newsletter