For Quick Alerts
ALLOW NOTIFICATIONS  
For Daily Alerts

ಬಾಯಿ ದುರ್ವಾಸನೆಗೆ ನೈಸರ್ಗಿಕ ಮೌತ್‎ವಾಶ್

By Jaya subramanya
|

ಜೀವನದಲ್ಲಿ ನಗು ಒಂದು ದಿವ್ಯವೌಷಧ ಎಂದು ಹೇಳುತ್ತಾರೆ. ಈ ನಗು ಸುಂದರವಾಗಿರಬೇಕು ಎಂದಾದಲ್ಲಿ ಹೊಳೆಯುವ ಮುತ್ತಿನಂತಹ ದಂತಪಂಕ್ತಿ ನಮ್ಮದಾಗಬೇಕು. ದುರ್ವಾಸನೆ ಇಲ್ಲದ ಶ್ವಾಸವನ್ನು ನಾವು ಹೊರಬಿಡಬೇಕು. ಇದಕ್ಕಾಗಿ ಬಾಯಿಯ ಸ್ವಚ್ಛತೆಯ ಕಡೆಗೆ ನಾವು ಹೆಚ್ಚಿನ ಗಮನ ನೀಡಬೇಕಾಗುತ್ತದೆ. ನಿಮ್ಮ ನಗು ನಿಮ್ಮ ವ್ಯಕ್ತಿತ್ವದ ಭೂಷಣವಾಗಿರುವುದರಿಂದ ಹಲ್ಲುಗಳ ಮತ್ತು ಬಾಯಿಯ ಬಗ್ಗೆ ನೀವು ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಬಾಯಿ ವಾಸನೆ? ಇಲ್ಲಿದೆ ನೈಸರ್ಗಿಕ ಮೌತ್ ವಾಶ್

ಹಾಗಿದ್ದರೆ ಬಾಯಿಯ ಸೌಂದರ್ಯಕ್ಕೆ ಮಾರಕವಾಗಿರುವ ಹುಳುಕು ಹಲ್ಲು, ದುರ್ವಾಸನೆ, ವಸಡುಗಳ ಹಾನಿ, ಸೋಂಕು ಮುಂತಾದುವನ್ನು ಉತ್ತಮಪಡಿಸಬೇಕು ಎಂದಾದಲ್ಲಿ ನಾವು ನಿಯಮಿತವಾಗಿ ಹಲ್ಲುಜ್ಜಿಕೊಂಡು, ಮೌತ್ ವಾಶ್ ಅನ್ನು ಬಳಸಿಕೊಂಡು ಬಾಯಿಯ ಆರೋಗ್ಯವನ್ನು ಉತ್ತಮಪಡಿಸಬೇಕು. ಬಾಯಿಯನ್ನು ಶುಚಿಯಾಗಿಸುವ ಮತ್ತು ಹಲ್ಲುಗಳನ್ನು ಬೆಳ್ಳಗಾಗಿಸುವ ರಾಸಾಯನಿಕ ಮೌತ್ ವಾಶ್‎ಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿವೆ ಆದರೆ ಇದರಿಂದ ನಿಮ್ಮ ಸಮಸ್ಯೆ ಇನ್ನಷ್ಟು ಬಿಗಡಾಯಿಸುವುದು ಖಂಡಿತ. ಬಾಯಿ ದುರ್ವಾಸನೆ ತಡೆಗೆ, ಸ್ಟೆಪ್ ಬೈ ಸ್ಟೆಪ್ ಟಿಪ್ಸ್

ಇದಕ್ಕೆ ಪರಿಹಾರವೆಂದರೆ ಮನೆಯಲ್ಲೇ ತಯಾರಿಸುವ ಮೌತ್ ವಾಶ್‎ಗಳನ್ನು ಬಳಸಿ ಇದನ್ನು ನಿವಾರಿಸಿಕೊಳ್ಳುವುದಾಗಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ನೈಸರ್ಗಿಕ ಮತ್ತು ಸುರಕ್ಷಿತ ಮೌತ್‎ವಾಶ್‎ ರೆಸಿಪಿಗಳನ್ನು ನಾವು ನೀಡುತ್ತಿದ್ದು, ನಿಮ್ಮ ಹಲ್ಲುಗಳನ್ನು ಸ್ವಚ್ಛವಾಗಿಸುವುದರ ಜೊತೆಗೆ ಇನ್ನಷ್ಟು ಬಿಳಿಯಾಗಿಸುತ್ತದೆ, ಮುಂದೆ ಓದಿ...

ಮನೆಯಲ್ಲೇ ತಯಾರಿಸಬಹುದಾದ ಮೌತ್ ವಾಶ್ ರೆಸಿಪಿಗಳು

ಮನೆಯಲ್ಲೇ ತಯಾರಿಸಬಹುದಾದ ಮೌತ್ ವಾಶ್ ರೆಸಿಪಿಗಳು

ರೆಸಿಪಿ 1:

ಸಾಮಾಗ್ರಿಗಳು: ಬೇಕಿಂಗ್ ಸೋಡಾ, ಟೀ ಟ್ರಿ ಆಯಿಲ್, ಪುದೀನಾ ಎಣ್ಣೆ ಹಾಗೂ ನೀರು

ಈ ನೈಸರ್ಗಿಕ ಸಾಮಾಗ್ರಿಗಳು ಹಲ್ಲುಗಳನ್ನು ಬಿಳಿಯಾಗಿಸುವುದರ ಜೊತೆಗೆ ಅವನ್ನು ಸ್ವಚ್ಛಮಾಡುತ್ತದೆ. ಪುದೀನಾದಿಂದ ಮಿಂಟ್ ಸುವಾಸನೆ ನಿಮಗೆ ದೊರೆಯಲಿದ್ದು ಮೌತ್‎ವಾಶ್‎ಗೆ ಇದನ್ನು ಸೇರಿಸುವುದರ ಜೊತೆಗೆ ಬಳಸಲು ಸುಲಭವಾಗಿಸುತ್ತದೆ.

ರೆಸಿಪಿ 2:

ರೆಸಿಪಿ 2:

ಲವಂಗದೆಣ್ಣೆ, ದಾಲ್ಚಿನ್ನಿ ಮತ್ತು ನೀರು

ಈ ನೈಸರ್ಗಿಕ ಮೌತ್‎ವಾಶ್ ಸುಗಂಧಿತ ಪರಿಮಳದೊಂದಿಗೆ ನಿಮ್ಮ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ. ಈ ಎಣ್ಣೆಗಳಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಅಂಶಗಳು ಸೋಂಕುಗಳು ಮತ್ತು ಹುಳುಕನ್ನು ಬೇರಿನಿಂದಲೇ ಕಿತ್ತೊಗೆಯುತ್ತದೆ.

ಮಾಡುವ ವಿಧಾನ:

ಉಗುರು ಬೆಚ್ಚನೆಯ ನೀರಿನಲ್ಲಿ 2 ಚಮಚದಷ್ಟು ಎಣ್ಣೆಗಳನ್ನು ಮಿಶ್ರ ಮಾಡಿಕೊಳ್ಳಿ

ಕಪ್‎ನಲ್ಲಿ ಈ ದ್ರಾವಣವನ್ನು ತೆಗೆದುಕೊಂಡು ಚೆನ್ನಾಗಿ ಕಲಕಿ.

ಬಳಸಲು ನಿಮ್ಮ ಮೌತ್‎ವಾಶ್ ಈಗ ಸಿದ್ಧವಾಗಿದೆ.

ಹೆಚ್ಚಿನ ಪ್ರಮಾಣದಲ್ಲಿ ಈ ದ್ರಾವಣವನ್ನು ಸಿದ್ಧಪಡಿಸಿ ತಂಪಾದ, ಒಣ ಜಾಗದಲ್ಲಿ ಇದನ್ನು ಇರಿಸಿಕೊಳ್ಳಬಹುದಾಗಿದೆ.

ರೆಸಿಪಿ 3

ರೆಸಿಪಿ 3

ಸಾಮಾಗ್ರಿಗಳು: ಆಪಲ್ ಸೀಡರ್ ವಿನೇಗರ್ ಮತ್ತು ನೀರು

ನಿಮ್ಮ ಹಲ್ಲಿನಲ್ಲಿ ರಚನೆಯಾಗಿರುವ ಪಾಚಿ ಮತ್ತು ಬ್ಯಾಕ್ಟೀರಿಯಾವನ್ನು ಹೋಗಲಾಡಿಸಲು ಸಹಕಾರಿಯಾಗಿದೆ. ಆಪಲ್ ಸೀಡರ್ ವಿನೇಗರ್ ಆಸಿಡಿಕ್ ಅಂಶವನ್ನು ಒಳಗೊಂಡಿರುವುದರಿಂದ ಇದನ್ನು ನಿತ್ಯವೂ ಬಳಸುವುದರಿಂದ ನಿಮ್ಮ ಹಲ್ಲು ಗಟ್ಟಿಯಾಗುತ್ತದೆ ಮತ್ತು ಸೋಂಕುಗಳಿಂದ ಮುಕ್ತವಾಗಿರುತ್ತದೆ.

ಮಾಡುವ ವಿಧಾನ:

3 ಚಮಚದಷ್ಟು ಆಪಲ್ ಸೀಡರ್ ವಿನೇಗರ್ ಅನ್ನು ಉಗುರು ಬೆಚ್ಚನೆಯ ನೀರಿನಲ್ಲಿ ಮಿಶ್ರಮಾಡಿ. ಇದನ್ನು ಚೆನ್ನಾಗಿ ಕಲಸಿ ದಿನದಲ್ಲಿ ಎರಡು ಬಾರಿ ಈ ದ್ರಾವಣವನ್ನು ಬಳಸಿ ಬಾಯಿ ಸ್ವಚ್ಛಮಾಡಿ.

ರೆಸಿಪಿ 4

ರೆಸಿಪಿ 4

ಲಿಂಬೆ, ಗ್ಲಿಸರಿನ್ ಮತ್ತು ನೀರು

ಲಿಂಬೆಯು ನಿಮ್ಮ ಹಲ್ಲುಗಳನ್ನು ಬಿಳಿಯಾಗಿಸಿ ದೋಷಕಾರಿ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಗ್ಲಿಸರಿನ್ ಉರಿಯೂತವನ್ನು ಹೋಗಲಾಡಿಸಿ ನಿಮ್ಮ ವಸಡುಗಳನ್ನು ಆರೋಗ್ಯವಾಗಿರಿಸುತ್ತದೆ.

ಮಾಡುವ ವಿಧಾನ

ಒಂದು ಕಪ್‎ನಲ್ಲಿ ಸ್ವಲ್ಪ ಲಿಂಬೆ ರಸ ಮತ್ತು 2 ಚಮಚ ಗ್ಲಿಸರಿನ್ ಅನ್ನು ತೆಗೆದುಕೊಳ್ಳಿ.

ಚೆನ್ನಾಗಿ ಕಲಸಿ ಈ ದ್ರಾವಣಕ್ಕೆ ಸ್ವಲ್ಪ ಉಗುರು ಬೆಚ್ಚನೆಯ ನೀರನ್ನು ಸೇರಿಸಿಕೊಳ್ಳಿ

ಬಳಸಲು ಮೌತ್‎ವಾಶ್ ಇದೀಗ ಸಿದ್ಧವಾಗಿದೆ.

ಉತ್ತಮ ಫಲಿತಾಂಶಗಳಿಗಾಗಿ ದಿನಕ್ಕೆ ಎರಡುಬಾರಿ ಇದನ್ನು ಬಳಸಿ.

ರೆಸಿಪಿ 5

ರೆಸಿಪಿ 5

ಸಾಮಾಗ್ರಿಗಳು:ಅಲೊವೇರಾ, ಬೇಕಿಂಗ್ ಸೋಡಾ, ಪುದೀನಾ ಎಣ್ಣೆ ಮತ್ತು ನೀರು

ಈ ಮಿಶ್ರಣವು ನಿಮ್ಮ ಹಲ್ಲುಗಳನ್ನು ಸ್ವಚ್ಛವಾಗಿಸುತ್ತದೆ ಮತ್ತು ಹಾನಿಕಾರಕ ಮೈಕ್ರೊಬ್ಸ್‎ಗಳನ್ನು ನಿವಾರಿಸುತ್ತದೆ. ಉರಿಯೂತ ನಿವಾರಕ ಗುಣವನ್ನು ಹೊಂದಿರುವ ಅಲೊವೇರಾ ವಸಡುಗಳನ್ನು

ಆರೋಗ್ಯವಾಗಿರಿಸುತ್ತದೆ ಅಂತೆಯೇ ಈ ದ್ರಾವಣದಲ್ಲಿರುವ ಪುದೀನಾ ಸುವಾಸನೆ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ.

ಮಾಡುವ ವಿಧಾನ:

2 ಚಮಚದಷ್ಟು ಬೇಕಿಂಗ್ ಸೋಡಾವನ್ನು ತೆಗೆದುಕೊಳ್ಳಿ ಇದಕ್ಕೆ ಪುದೀನಾ ಎಣ್ಣೆ ಮತ್ತು ಅಲೊವೇರಾವನ್ನು ಸೇರಿಸಿ.

ಉಗರು ಬೆಚ್ಚನೆಯ ನೀರನ್ನು ಸೇರಿಸಿಕೊಂಡು ಚೆನ್ನಾಗಿ ಕಲಸಿ ನಿಮ್ಮ ಬಾಯಿಯನ್ನು ಈ ಮಿಶ್ರಣದೊಂದಿಗೆ ತೊಳೆದುಕೊಳ್ಳಿ ಮತ್ತು ಉತ್ತಮ ಫಲಿತಾಂಶಕ್ಕಾಗಿ ಇದನ್ನು ನಿತ್ಯವೂ ಬಳಸಿ.

ರೆಸಿಪಿ 6

ರೆಸಿಪಿ 6

ಸಾಮಾಗ್ರಿಗಳು: ಬೇವಿನ ರಸ, ಪುದೀನಾ ಎಣ್ಣೆ ಮತ್ತು ನೀರು ಆಂಟಿಸೆಪ್ಟಿಕ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಅಂಶಗಳನ್ನು ಒಳಗೊಂಡಿರುವ ಬೇವು ಬಾಯಿಯಲ್ಲಿರುವ ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ತೊಡೆದು ಹಾಕುತ್ತದೆ. ಆದ್ದರಿಂದ ಈ ಮೌತ್‎ವಾಶ್ ಸೋಂಕು ನಿವಾರಕದಂತೆ ವರ್ತಿಸಿ, ನಿಮಗೆ ತಾಜಾ ಮತ್ತು ಪುದೀನಾ ಸುಗಂಧವನ್ನು ಒದಗಿಸುತ್ತದೆ.

ಮಾಡುವ ವಿಧಾನ:

ಬೇವಿನ ಎಲೆಗಳನ್ನು ಮಿಕ್ಸರ್‎ನಲ್ಲಿ ಗ್ರೈಂಡ್ ಮಾಡಿಕೊಳ್ಳಿ. ಎರಡು ಚಮಚದಷ್ಟು ಬೇವಿನ ರಸ, 2 ಚಮಚ ಪುದೀನಾ ಎಣ್ಣೆ ಮತ್ತು ಬೆಚ್ಚನೆಯ ನೀರನ್ನು ಕಪ್‎ನಲ್ಲಿ ಹಾಕಿ.ಈ ಸಾಮಾಗ್ರಿಗಳನ್ನು ಚೆನ್ನಾಗಿ ಕಲಸಿಕೊಳ್ಳಿಮೌತ್‎ವಾಶ್ ಬಳಸಲು ಸಿದ್ಧವಾಗಿದೆ.ಉತ್ತಮ ಫಲಿತಾಂಶಕ್ಕಾಗಿ ದಿನಕ್ಕೆರಡು ಬಾರಿ ಇದನ್ನು ಬಳಸಿ

English summary

DIY: Effective Homemade Mouthwash Recipes

There are many chemical-based mouthwashes out there that promise to make our teeth pearly white, but if we are unsure about their safety, then it is best to try homemade mouthwashes that can be made using simple ingredients available easily at home! Let's have a look at some of the natural and safe mouthwash recipes, which are super-effective in making your teeth clean and much more whiter.
X
Desktop Bottom Promotion