For Quick Alerts
ALLOW NOTIFICATIONS  
For Daily Alerts

ಎಚ್ಚರ: ಬೆಚ್ಚಿ ಬೀಳಿಸುವ ಲಿವರ್ ಕ್ಯಾನ್ಸರ್‌ನ ಲಕ್ಷಣಗಳು!

By Super Admin
|

ಇಂದಿನ ದಿನಗಳಲ್ಲಿ ಆಧುನಿಕ ರೀತಿಯ ಚಿಕಿತ್ಸೆಗಳು ಇದೆಯಾದರೂ ಅದಕ್ಕಾಗಿ ಸಾಕಷ್ಟು ವೆಚ್ಚ ಮಾಡಬೇಕಾಗುತ್ತದೆ. ಎಲ್ಲಾ ಕ್ಯಾನ್ಸರ್‌ನಂತೆ ಯಕೃತ್‌ನ ಕ್ಯಾನ್ಸರ್ ಕೂಡ ಆರಂಭದಲ್ಲಿ ಯಾವುದೇ ಲಕ್ಷಣವನ್ನು ತೋರಿಸುವುದಿಲ್ಲ. ನಿಮ್ಮ ಲಿವರ್ ಕೂಡ ಅಪಾಯದಲ್ಲಿ ಸಿಲುಕಿರಬಹುದು!

ಕ್ಯಾನ್ಸರ್ ಗಡ್ಡೆ ಬೆಳೆಯುತ್ತಿರುವಂತೆ ಅಥವಾ ಕ್ಯಾನ್ಸರ್ ಕೋಶಗಳು ದೇಹದ ಇತರ ಭಾಗಗಳಿಗೆ ಸ್ಥಳಾಂತವಾಗುತ್ತಿರುವಂತೆ ಕೆಲವೊಂದು ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭವಾಗುತ್ತದೆ, ಅವು ಯಾವುದು ಎಂಬುದನ್ನು ಮುಂದೆ ಓದಿ... ಇದುವೇ ಕ್ಯಾನ್ಸರ್ ನಿಯಂತ್ರಿಸುವ ಪವರ್ ಫುಲ್ ಜ್ಯೂಸ್

ಹೊಟ್ಟೆ ನೋವು

ಹೊಟ್ಟೆ ನೋವು

ಹೊಟ್ಟೆಯ ಮೇಲ್ಭಾಗದಲ್ಲಿ ಬಲದ ಬದಿಯಲ್ಲಿ ನಿಮಗೆ ಯಾವಾಗಲೂ ನೋವು ಕಾಣಿಸಿಕೊಳ್ಳುತ್ತಾ ಇದ್ದರೆ ಇದು ಯಕೃತ್‌ನ ಕ್ಯಾನ್ಸರ್ ಆಗಿರಲೂಬಹುದು! ಆನ್ಕೊಲೊಗಿಸ್ಟ್ ಅಥವಾ ಲಿವರ್ ತಜ್ಞರನ್ನು ಭೇಟಿಯಾಗಿ ಇದಕ್ಕೆ ಚಿಕಿತ್ಸೆ ಪಡೆದುಕೊಂಡರೆ ಒಳ್ಳೆಯದು.

ಹೊಟ್ಟೆಯಲ್ಲಿ ಗಡ್ಡೆ

ಹೊಟ್ಟೆಯಲ್ಲಿ ಗಡ್ಡೆ

ಮೇಲ್ಭಾಗದ ಕತ್ತಿನ ಭಾಗದಲ್ಲಿ ಗಡ್ಡೆಯು ಯಕೃತ್ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು. ಹೊಟ್ಟೆಯ ಕೆಳಗಿನ ಅಥವಾ ಮೇಲಿನ ಭಾಗದಲ್ಲಿ ಗಡ್ಡೆ ಕಾಣಿಸಿಕೊಳ್ಳುವುದು, ಹೊಟ್ಟೆ ಭಾರವಾದಂತೆ ಆಗುವುದು ಯಕೃತ್ ಕ್ಯಾನ್ಸರ್‌ನ ಲಕ್ಷಣಗಳಾಗಿರಬಹುದು.

ಕಾಮಾಲೆ

ಕಾಮಾಲೆ

ಕಾಮಾಲೆಯಿಂದ ಬಳಲುತ್ತಿರುವ ಪ್ರತಿಯೊಬ್ಬರು ಯಕೃತ್ ಕ್ಯಾನ್ಸರ್‌ಗೆ ತುತ್ತಾಗಬೇಕೆಂದಿಲ್ಲ. ಆದರೆ ಇದು ಯಕೃತ್ ಗೆ ಹಾನಿಯಾಗಿರುವ ಲಕ್ಷಣವಾಗಿದೆ. ಇದು ಮುಂದೆ ಕ್ಯಾನ್ಸರ್ ಆಗಿ ಪರಿವರ್ತನೆಗೊಳ್ಳಬಹುದು. ಕಣ್ಣುಗಳು, ಚರ್ಮ ಹಳದಿಯಾಗುವುದು, ಹಳದಿ ಮೂತ್ರ ಇವುಗಳ ಬಗ್ಗೆ ತಕ್ಷಣ ಚಿಕಿತ್ಸೆ ಪಡೆಯಬೇಕು. ಇವುಗಳನ್ನು ಕಡೆಗಣಿಸಬಾರದು. ಜಾಂಡೀಸ್ ರೋಗ: ವೈದ್ಯರಿಗೆ ಸವಾಲೆಸೆಯುವ ಹಳ್ಳಿ ಮದ್ದು!

ಜ್ವರ

ಜ್ವರ

ಜ್ವರವನ್ನು ಯಕೃತ್ ಕ್ಯಾನ್ಸರ್‌ನ ಲಕ್ಷಣವೆಂದು ಪಟ್ಟಿ ಮಾಡುವುದು ಕಷ್ಟ. ಯಾಕೆಂದರೆ ಜ್ವರ ಹಲವಾರು ರೋಗ ಮತ್ತು ಸೋಂಕಿನ ಲಕ್ಷಣವಾಗಿರುತ್ತದೆ. ಬಾತುಕೊಂಡಿರುವ ಹೊಟ್ಟೆ ಅಥವಾ ಹೊಟ್ಟೆ ನೋವಿನೊಂದಿಗೆ ಕಡಿಮೆ ಪ್ರಮಾಣದಲ್ಲಿ ಜ್ವರವಿದ್ದರೆ ಇದನ್ನು ಕಡೆಗಣಿಸದೆ ವೈದ್ಯರನ್ನು ಭೇಟಿಯಾಗಿ.

ನಿಶ್ಯಕ್ತಿ

ನಿಶ್ಯಕ್ತಿ

ಯಕೃತ್ ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳಲ್ಲಿ ಇದು ಒಂದಾಗಿದೆ. ನೀವು ಸಾಕಷ್ಟು ವಿಶ್ರಾಂತಿ ಪಡೆದ ಬಳಿಕವೂ ದೈನಂದಿನ ಕೆಲಸ ಕಾರ್ಯಗಳನ್ನು ಮಾಡುತ್ತಿರುವಾಗ ನಿಶ್ಯಕ್ತಿ ಆವರಿಸುತ್ತಾ ಇದ್ದರೆ ಇದನ್ನು ಕಡೆಗಣಿಸಬೇಡಿ. ನಿಶ್ಯಕ್ತಿಯೊಂದಿಗೆ ಹೊಟ್ಟೆಯ ನೋವು ಮತ್ತು ಜ್ವರ ಇದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ.

ಹಸಿವಾಗದೆ ಇರುವುದು

ಹಸಿವಾಗದೆ ಇರುವುದು

ಹೊಟ್ಟೆ ತುಂಬಿದಂತೆ ಆಗುವುದು ಅಥವಾ ಹಸಿವು ಆಗದೆ ಇರುವುದು ಯಕೃತ್‌ಗೆ ಹಾನಿಯಾಗಿರುವ ಅಥವಾ ಯಕೃತ್ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು. ಯಾಕೆಂದರೆ ಯಕೃತ್ ಸರಿಯಾಗಿ ಕಾರ್ಯನಿರ್ವಹಿಸದೆ ಇರುವ ಕಾರಣ ಅದರಲ್ಲಿನ ವಿಷಕಾರಿ ಅಂಶಗಳು ಹಾಗೆಯೇ ಉಳಿದುಕೊಳ್ಳುತ್ತದೆ.

ಹೊಟ್ಟೆ ಉಬ್ಬರ

ಹೊಟ್ಟೆ ಉಬ್ಬರ

ಹೊಟ್ಟೆ ಉಬ್ಬರ ಕಾಣಿಸಿಕೊಂಡರೆ ಇದನ್ನು ನೀವು ಕಡೆಗಣಿಸಬಾರದು. ಯಾಕೆಂದರೆ ಇದು ಯಕೃತ್‌ನಲ್ಲಿ ಕ್ಯಾನ್ಸರ್ ಗಡ್ಡೆಯ ಬೆಳವಣಿಗೆ ಅಥವಾ ಅತಿಯಾದ ನೀರು ಶೇಖರಣೆಯಿಂದ ಆಗಿರಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹೊಟ್ಟೆ ಉಬ್ಬರ

ಹೊಟ್ಟೆ ಉಬ್ಬರ

ಇದರಿಂದಾಗಿ ಯಕೃತ್ ಮತ್ತು ಹೊಟ್ಟೆಯ ಮೇಲೆ ಒತ್ತಡ ಬೀಳುವುದು. ಇದು ಯಕೃತ್‌ನ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ ಯಕೃತ್‌ಗೆ ಹಾನಿಯನ್ನು ಉಂಟು ಮಾಡಬಹುದು.

English summary

Common signs and symptoms of liver cancer

Just like other types of cancer, liver cancer also doesn’t show any key symptoms during the initial stage of the disease. However, as the cancer grows larger or the cancerous cells migrate to various parts of the body, you might experience few symptoms. Health experts light on some of the common signs of liver cancer, have a look
X
Desktop Bottom Promotion