For Quick Alerts
ALLOW NOTIFICATIONS  
For Daily Alerts

ಮಂಡಿ ನೋವೇ? ಇಲ್ಲಿದೆ ನೋಡಿ ಸಿಂಪಲ್ ಮನೆಮದ್ದು

By Super Admin
|

ನಮ್ಮ ಶರೀರದ ಹೆಚ್ಚಿನ ಭಾರವನ್ನು ಹೊರುವ ಗಂಟುಗಳೆಂದರೆ ಪಾದಗಳು ಮತ್ತು ಮೊಣಕಾಲು ಅಥವಾ ಮೊಣಗಂಟು. ಆದರೆ ಭಾರವನ್ನು ಅಡ್ಡಲಾಗಿ ಹೊರುವ ಪಾದಗಳ ಗಂಟಿಗಿಂತಲೂ ಕಾಲು ಮಡಚಿದಾಗ ಒಂದು ಕೋನದಲ್ಲಿ ಹೊರಬೇಕಾದ ಮೊಣಕಾಲುಗಳು ಹೆಚ್ಚಿನ ಸೆಳೆತಕ್ಕೆ ಒಳಗಾಗುತ್ತವೆ. ಇದರಿಂದಾಗಿ ನಮ್ಮ ನಿತ್ಯದ ಚಟುವಟಿಕೆಗಳಿಗೆ ಮಿಗಿಲಾದ ಯಾವುದೇ ಚಟುವಟಿಕೆ, ಉದಾಹರಣೆಗೆ ಯಾವತ್ತೂ ಇಲ್ಲದೇ ಒಂದು ದಿನ ಓಡಿದರೆ, ಹೊಸದಾಗಿ ವ್ಯಾಯಮವನ್ನು ಪ್ರಾರಂಭಿಸಿದರೆ ಈ ಮೊಣಗಂಟಿಗೆ ಬೀಳುವ ಹೆಚ್ಚಿನ ಭಾರ ನೋವಿಗೆ ಕಾರಣವಾಗುತ್ತದೆ. ಯಮಯಾತನೆ ನೀಡುವ ಮೊಣಕಾಲು ನೋವಿಗೆ ಪರಿಹಾರವೇನು?

ಇದೇ ಕಾರಣಕ್ಕೆ ಯಾವುದೇ ವ್ಯಾಯಮವನ್ನು ಪ್ರಥಮ ದಿನಗಳಲ್ಲಿ ಹೆಚ್ಚಾಗಿ ಮಾಡದಿರಲು, ಬದಲಿಗೆ ನಿಧಾನವಾಗಿ ಹಂತಹಂತವಾಗಿ ಏರಿಸುತ್ತಾ ಹೋಗುವಂತೆ ದೈಹಿಕ ಶಿಕ್ಷಕರು ನಿರ್ದೇಶಿಸುತ್ತಾರೆ. ಆದರೆ ಕೆಲವೊಮ್ಮೆ ಅನಿವಾರ್ಯವಾಗಿ ಮಾಡಲೇಬೇಕಾದ ಕೆಲವು ಕಾರ್ಯಗಳಿಂದಾಗಿ ಮೊಣಕಾಲಿನಲ್ಲಿ ನೋವು ಪ್ರಾರಂಭವಾಗಬಹುದು. ಈ ನೋವು ನಮ್ಮ ನಿತ್ಯದ ಇತರ ಕೆಲಸಗಳಿಗೂ ಬಾಧೆಯುಂಟು ಮಾಡಬಹುದು. ಮಂಡಿ ನೋವಿಗೆ ತ್ವರಿತವಾಗಿ ಸಾಂತ್ವನ ನೀಡುವ ಮನೆಮದ್ದು

ಇದನ್ನು ಕಡಿಮೆಮಾಡಲು ನೋವು ನಿವಾರಕಗಳ ಬಳಕೆ ಸರ್ವಥಾ ಆರೋಗ್ಯಕ್ಕೆ ಒಳ್ಳೆಯದಲ್ಲ. ಬದಲಿಗೆ ಸುಲಭವಾಗಿ ಮತ್ತು ಹೆಚ್ಚಿನ ಖರ್ಚಿಲ್ಲದೇ ಮನೆಯಲ್ಲಿಯೇ ತಯಾರಿಸಬಹುದಾದ ಸುಲಭ ಮನೆಮದ್ದುಗಳಿಂದ ಈ ನೋವನ್ನು ಕಡಿಮೆ ಮಾಡಿಕೊಳ್ಳಬಹುದು. ಬನ್ನಿ, ಯಾವ ವಿಧಾನಗಳು ಸೂಕ್ತ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ:

ಕರ್ಪೂರದ ಎಣ್ಣೆ

ಕರ್ಪೂರದ ಎಣ್ಣೆ

ನೋವಿರುವ ಭಾಗಕ್ಕೆ ಕರ್ಪೂರದ ಎಣ್ಣೆ ಹಚ್ಚುವ ಮೂಲಕ ರಕ್ತಪರಿಚಲನೆ ಹೆಚ್ಚುತ್ತದೆ ಹಾಗೂ ಸೆಳೆತ ಮತ್ತು ಒತ್ತಡವನ್ನು ನಿವಾರಿಸಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಕರ್ಪೂರದ ಎಣ್ಣೆ ಸಿದ್ಧರೂಪದಲ್ಲಿ ಸಿಗುತ್ತದೆಯಾದರೂ ಎಲ್ಲೆಡೆ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಒಂದು ವೇಳೆ ನಿಮ್ಮ ನಗರದಲ್ಲಿ ಲಭ್ಯವಿಲ್ಲದಿದ್ದರೆ ನೀವೇ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕರ್ಪೂರದ ಎಣ್ಣೆ

ಕರ್ಪೂರದ ಎಣ್ಣೆ

ಇದಕ್ಕಾಗಿ ಒಂದು ಕಪ್ ಕೊಬ್ಬರಿ ಎಣ್ಣೆಯನ್ನು ಕೊಂಚವೇ ಬಿಸಿ ಮಾಡಿ, ಅಂದರೆ ಬರೆ ಕರಗಿದರೆ ಸಾಕು, ಕುದಿ ಬರಬಾರದು, ಇದಕ್ಕೆ ಒಂದು ಚಿಕ್ಕಚಮಚ ಪುಡಿಮಾಡಿದ ಕರ್ಪೂರದ ಬಿಲ್ಲೆಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣ ತಣಿಯಲು ಬಿಟ್ಟು ಒಂದು ಚಿಕ್ಕ ಡಬ್ಬಿಯಲ್ಲಿ ಸಂಗ್ರಹಿಸಿ. ಮಂಡಿನೋವಿದ್ದರೆ ದಿನಕ್ಕೆರಡು ಬಾರಿ ಕೊಂಚ ಪ್ರಮಾಣವನ್ನು ನೋವಿರುವಲ್ಲಿ ಕೊಂಚ ಮಸಾಜ್ ಮೂಲಕ ಹಚ್ಚಿ. ನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.

ಓಮ

ಓಮ

ಪುಟ್ಟ ಜೀರಿಗೆಯಂತೆ ಕಾಣುವ ಓಮದ ಕಾಳುಗಳಲ್ಲಿರುವ ಅರಿವಳಿಕಾ ಮತ್ತು ಉರಿಯೂತ ನಿವಾರಕ ಗುಣಗಳು ಮಂಡಿನೋವಿನ ಶಮನಕ್ಕೂ ಉತ್ತಮ ಪರಿಹಾರ ನೀಡುತ್ತವೆ. ಉರಿಯೂತ ಅಥವಾ ಸಂಧಿವಾತದಿಂದಾಗಿ ಎದುರಾಗಿದ್ದ ಊತ, ಚರ್ಮ ಕೆಂಪಗಾಗಿರುವುದು ಮೊದಲಾದ ತೊಂದರೆಗಳೂ ಸುಲಭವಾಗಿ ಮತ್ತು ಶೀಘ್ರವಾಗಿ ಕಡಿಮೆಯಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಓಮ

ಓಮ

ಇದಕ್ಕಾಗಿ ಕೊಂಚ ಓಮದ ಕಾಳುಗಳನ್ನು ನೀರಿನೊಂದಿಗೆ ಬೆರೆಸಿ ಕಲ್ಲಿನಲ್ಲಿ ಅರೆದು (ಮಿಕ್ಸಿಯಲ್ಲಿ ಅರೆಯಬಾರದು, ಬಿಸಿಗೆ ಸುಟ್ಟುಹೋಗುತ್ತದೆ) ಈ ಲೇಪನವನ್ನು ನೋವಿದ್ದ ಮಂಡಿಗಳ ಮೇಲೆ ಹಚ್ಚಿದರೆ ಶೀಘ್ರವಾಗಿ ಗುಣವಾಗುತ್ತದೆ.

ಹರಳೆಣ್ಣೆ

ಹರಳೆಣ್ಣೆ

ಸಂಧಿವಾತಕ್ಕೆ ಹರಳೆಣ್ಣೆಯ ಮಸಾಜ್ ಬಹಳ ಪುರಾತನ ವಿಧಾನವಾಗಿದೆ. ಈ ವಿಧಾನವನ್ನು ಇನ್ನಷ್ಟು ಉತ್ತಮವಾಗಿಸಲು ಕೊಂಚ ಬಿಸಿನೀರಿನ ಶಾಖ ನೀಡಿದರೆ ಸಾಕು. ಹರಳೆಣ್ಣೆಯಲ್ಲಿರುವ ಉರಿಯೂತ ನಿವಾರಕ ಗುಣ ಗಂಟುಗಳ ನಡುವೆ ಉಂಟಾಗಿದ್ದ ಉರಿಯೂತವನ್ನು ನಿವಾರಿಸಲು ಮಾತ್ರವಲ್ಲದೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ನೈಸರ್ಗಿಕವಾದ ಪ್ರತಿಜೀವಕಗಳನ್ನು ಸೃಷ್ಟಿಸಿಕೊಳ್ಳಲು ನೆರವಾಗುತ್ತದೆ.

ಅರಿಶಿನ

ಅರಿಶಿನ

ಅರಿಶಿನ ನಿಸರ್ಗ ಒದಗಿಸಿದ ಅತ್ಯುತ್ತಮ ನಂಜುನಿರೋಧಕವಾಗಿದ್ದು ದೇಹದ ಹತ್ತು ಹಲವು ನೋವುಗಳಿಗೆ ಅತ್ಯುತ್ತಮ ಪರಿಹಾರ ಒದಗಿಸುತ್ತದೆ. ಮಂಡಿನೋವು, ಸಂಧಿವಾತಕ್ಕೂ ಅರಿಶಿನ ಉತ್ತಮವಾಗಿದೆ. ಅರಿಶಿನದಲ್ಲಿರುವ ಕುರ್ಕುಮಿನ್ (curcumin) ಎಂಬ ಪೋಷಕಾಂಶ ಒಂದು ಉತ್ತಮ ಉರಿಯೂತ ನಿವಾರಕವಾಗಿದ್ದು ಮಂಡಿನೋವನ್ನು ನಿವಾರಿಸಲು ಸಮರ್ಥವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅರಿಶಿನ

ಅರಿಶಿನ

ಕೊಂಚ ಅರಿಶಿನವನ್ನು ನೀರಿನೊಂದಿಗೆ ಬೆರೆಸಿ ಲೇಪನ ತಯಾರಿಸಿ ನೋವಿದ್ದ ಕಡೆ ದಿನಕ್ಕೆರಡು ಬಾರಿ ಕೊಂಚವೇ ಮಸಾಜ್ ನೊಂದಿಗೆ ಹಚ್ಚಿ ಒಣಗಲು ಬಿಡಿ. ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಬಿಟ್ಟು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡರೆ ಶೀಘ್ರವೇ ನೋವು ಕಡಿಮೆಯಾಗುತ್ತದೆ.

ಐಸ್ ಪ್ಯಾಕ್

ಐಸ್ ಪ್ಯಾಕ್

ಒಂದು ವೇಳೆ ನೋವು ಚಿಕ್ಕದಾಗಿದ್ದರೆ ಮತ್ತು ಇಂದೇ ಪ್ರಾರಂಭವಾಗಿದ್ದರೆ ಇದಕ್ಕೆ ಹೆಚ್ಚಿನ ಆರೈಕೆ ಬೇಕಾಗಿಲ್ಲ, ಕೇವಲ ಮಂಜುಗಡ್ಡೆಯ ಆರೈಕೆ ಸಾಕು. ನೋವಿರುವ ಮೊಣಗಂಟಿನ ಮೇಲೆ ಮತ್ತು ಪಕ್ಕದಲ್ಲಿ ಆವರಿಸುವಂತೆ ಕೊಂಚ ಮಂಜುಗಡ್ಡೆಯ ತುಂಡುಗಳನ್ನು ಒಂದು ಚೀಲದ ಮೂಲಕ ಇರಿಸಿ ಕೊಂಚ ಹೊತ್ತು ಬಿಟ್ಟು ತೆಗೆದರೆ ನೋವು ಕಡಿಮೆಯಾಗುವುದು... ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಐಸ್ ಪ್ಯಾಕ್

ಐಸ್ ಪ್ಯಾಕ್

ಮಾತ್ರವಲ್ಲ, ಬಾವು ಕಡಿಮೆಯಾಗುತ್ತದೆ ಹಾಗೂ ಉರಿಯೂತವಾಗುವ ಸಾಧ್ಯತೆಯನ್ನೂ ಕಡಿಮೆಮಾಡುತ್ತದೆ. ವಿಶೇಷವಾಗಿ ಆಟದ ಸಮಯದಲ್ಲಿ ಎದುರಾಗುವ ನೋವಿಗೆ ಈ ವಿಧಾನ ಹೆಚ್ಚು ಸೂಕ್ತವಾಗಿದೆ.

English summary

Common home remedies for knee pain that work!

Be it after the first day at a gym or exercising like running or brisk walking, most people experience knee pain. And instead of trying natural ways to deal with it, we prefer popping a painkiller. But there are few home remedies with pain relieving properties that help you deal with knee pain at home. The last one is the most effective.
Story first published: Wednesday, July 20, 2016, 19:51 [IST]
X
Desktop Bottom Promotion