ಡೊಳ್ಳು ಹೊಟ್ಟೆ ಕರಗಿಸುವ ಜಬರ್ದಸ್ತ್ ಆಹಾರಗಳಿವು!

ಹೊಟ್ಟೆಯ ಬೊಜ್ಜು ಕರಗಬೇಕೆಂದರೆ, ನಿತ್ಯದ ಚಟುವಟಿಕೆಗಳನ್ನು ಹೆಚ್ಚಿಸುವ ಹೊರತಾಗಿ ಆಹಾರದಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುವ ಮೂಲಕ ನಿಧಾನವಾಗಿಯಾದರೂ ಸರಿ, ನಿಮಗೆ ಸಪಾಟಾದ ಹೊಟ್ಟೆ ಖಂಡಿತವಾಗಿ ಲಭ್ಯವಾಗುತ್ತದೆ.

By: manu
Subscribe to Boldsky

ನಮಗೆಲ್ಲರಿಗೂ ಸಪಾಟಾದ ಹೊಟ್ಟೆ ಮತ್ತು ಸಪೂರವಾದ ಸೊಂಟ ಬೇಕು. ಆದರೆ ಇದಕ್ಕಾಗಿ ಸಮಯ ವ್ಯಯಿಸಲು ಅಥವಾ ವ್ಯಾಯಾಮ ಮಾಡಲು ಮಾತ್ರ ನಾವು ತಯಾರಿಲ್ಲ! ವಾಸ್ತವವಾಗಿ ವಿಸ್ತಾರವಾದ ಸೊಂಟ ಮತ್ತು ಉಬ್ಬಿರುವ ಹೊಟ್ಟೆ ನಮ್ಮ ಆಲಸಿತನದ ಸ್ಪಷ್ಟ ಸೂಚನೆಗಳಾಗಿವೆ. ವ್ಯಾಯಾಮದ ಕೊರತೆ, ಅಗತ್ಯಕ್ಕೂ ಹೆಚ್ಚು ಆಹಾರ ಸೇವನೆ, ಇಡಿಯ ದಿನ ಕುಳಿತೇ ಇರುವುದು ಮೊದಲಾದ ಇಂದಿನ ದಿನಗಳ ಜೀವನಕ್ರಮದ ಕಾಣಿಕೆಯಾಗಿ ಹೆಚ್ಚಿನ ಎಲ್ಲಾ ಜನರ ಹೊಟ್ಟೆಗಳು ಉಬ್ಬಿವೆ.   ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಟಿಪ್ಸ್

ಇದರಿಂದ ಹಲವಾರು ಕಾಯಿಲೆಗಳು, ಆರೋಗ್ಯಸಂಬಂಧಿ ತೊಂದರೆಗಳು, ಕೊಲೆಸ್ಟ್ರಾಲ್ ಹೆಚ್ಚಳ, ಮಧುಮೇಹ, ಹೃದಯಸಂಬಂಧಿ ತೊಂದರೆಗಳು, ಸಂಧಿಗಳಲ್ಲಿ ನೋವು ಮೊದಲಾದ ತೊಂದರೆಗಳು ಎದುರಾಗುವ ಸಾಧ್ಯತೆ ಹೆಚ್ಚಾಗುತ್ತದೆ. ತದ್ವಿರುದ್ಧವಾಗಿ ಉತ್ತಮ ವ್ಯಾಯಾಮ, ಸೂಕ್ತ ಆಹಾರ ಕ್ರಮ ಅನುಸರಿಸಿಕೊಂಡು ಬರುವ ವ್ಯಕ್ತಿಗಳು ಸಪಾಟಾದ ಹೊಟ್ಟೆಯನ್ನು ಹೊಂದಿದ್ದು ಇದು ಆರೋಗ್ಯದ ಲಕ್ಷಣವೂ ಆಗಿದೆ.   ಬರೀ 15 ದಿನಗಳಲ್ಲಿಯೇ ಬೊಜ್ಜು ಕರಗಿಸುವ 'ಅದ್ಭುತ ಜ್ಯೂಸ್'

ನಮ್ಮ ದೇಹದಲ್ಲಿ ಅತ್ಯಂತ ಕಡೆಯದಾಗಿ, ಮತ್ತು ಅತಿ ಕಷ್ಟದಲ್ಲಿ ಕರಗುವ ಕೊಬ್ಬು ಎಂದರೆ ಹೊಟ್ಟೆ-ಸೊಂಟದ ಕೊಬ್ಬು. ಆದ್ದರಿಂದ ಸಪಾಟಾದ ಹೊಟ್ಟೆ ಬೇಕೆಂದರೆ ದೇಹದ ಇತರ ಎಲ್ಲಾ ಭಾಗಗಳಲ್ಲಿ ಸಂಗ್ರಹವಾಗಿದ್ದ ಕೊಬ್ಬೆಲ್ಲಾ ಕರಗುವುದು ಅನಿವಾರ್ಯ. ಆರೋಗ್ಯ ಟಿಪ್ಸ್: ಹೊಟ್ಟೆಯ ಬೊಜ್ಜು ಕರಗಿಸುವ, ಅದ್ಭುತ ಜ್ಯೂಸ್

ನಿತ್ಯದ ಚಟುವಟಿಕೆಗಳನ್ನು ಹೆಚ್ಚಿಸುವ ಹೊರತಾಗಿ ಆಹಾರದಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುವ ಮೂಲಕ ನಿಧಾನವಾಗಿಯಾದರೂ ಸರಿ, ನಿಮಗೆ ಸಪಾಟಾದ ಹೊಟ್ಟೆ ಖಂಡಿತವಾಗಿ ಲಭ್ಯವಾಗುತ್ತದೆ.  


ಮೊಟ್ಟೆ

ಒಂದು ಮೊಟ್ಟೆಯಲ್ಲಿ ಸುಮಾರು ಆರು ಗ್ರಾಂ ಪ್ರೋಟೀನ್ ಮತ್ತು ಕೇವಲ ಎಪ್ಪತ್ತು ಕ್ಯಾಲೋರಿಗಳಿವೆ. ಆದ್ದರಿಂದ ನಿಮ್ಮ ಉಪಾಹಾರದಲ್ಲಿ ಮೈದಾರೊಟ್ಟಿ, ದೋಸೆಯ ಬದಲು ಒಂದೇ ಒಂದು ಮೊಟ್ಟೆ ಮತ್ತು ಗೋಧಿಹಿಟ್ಟಿನ ಒಂದೇ ರೊಟ್ಟಿ ಸೇವಿಸಿದರೆ ಸಾಕಾಗುತ್ತದೆ. ಇದರಿಂದ ಸ್ನಾಯುಗಳು ಇನ್ನಷ್ಟು ಬಲಿಷ್ಟಗೊಳ್ಳುತ್ತವೆ ಹಾಗೂ ಕೊಬ್ಬನ್ನು ನಿವಾರಿಸಲು ಅಗತ್ಯವಾದ ವ್ಯಾಯಾಮಕ್ಕಾಗಿ ಹೆಚ್ಚಿನ ಶಕ್ತಿ ಪಡೆಯಲು ಸಾಧ್ಯವಾಗುತ್ತದೆ.

ಸೇಬಿನ ಶಿರ್ಕಾ (Apple Cider Vinegar)

ಹೊಟ್ಟೆಯ ಕೊಬ್ಬು ಕರಗಲು ಸೇಬಿನ ಶಿರ್ಕಾ ಸಹಾ ಉತ್ತಮ ಆಯ್ಕೆಯಾಗಿದೆ. ನಿತ್ಯವೂ ಕೊಂಚ ಪ್ರಮಾಣದಲ್ಲಿ ಇದನ್ನು ಆಹಾರದಲ್ಲಿ ಬೆರೆಸಿ ಸೇವಿಸುವ ಮೂಲಕ ರಕ್ತದಲ್ಲಿ ಸಕ್ಕರೆಯ ಅಂಶವನ್ನು ನಿಯಂತ್ರಿಸುತ್ತದೆ ಹಾಗೂ ತಕ್ಷಣ ಹಸಿವಾಗುವುದನ್ನೂ ತಡೆಯುತ್ತದೆ. ಇದರಿಂದ ಅನಗತ್ಯವಾಗಿ ಆಹಾರ ಸೇವಿಸುವುದು ಕಡಿಮೆಯಾಗಿ ಹೊಟ್ಟೆಯ ಕೊಬ್ಬು ಕರಗಲು ಪ್ರಾರಂಭವಾಗುತ್ತದೆ.

ಆಲಿವ್

ಹೊಟ್ಟೆಯ ಕೊಬ್ಬು ಕರಗಿಸಲು ಆಲಿವ್ ಸಹಾ ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳು ಕೊಬ್ಬನ್ನು ಕರಗಿಸಲು ಸಮರ್ಥವಾಗಿದ್ದು ಇದರಲ್ಲಿ ಕ್ಯಾಲೋರಿಗಳೂ ಕಡಿಮೆ ಇರುವ ಕಾರಣ ಕೊಬ್ಬು ಶೀಘ್ರವಾಗಿ ಕರಗುತ್ತದೆ.

ಮೊಸರು

ಮೊಸರಿನಲ್ಲಿರುವ ಜೀರ್ಣಕ್ರಿಯೆಗೆ ಸಹಕರಿಸುವ ಬ್ಯಾಕ್ಟೀರಿಯಾಗಳು ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ನೆರವಾಗುವ ಜೊತೆಗೇ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಪ್ರೋಟೀನುಗಳು ಸ್ನಾಯುಗಳ ಬೆಳವಣಿಗೆಗೆ ನೆರವಾಗುತ್ತವೆ. ಈ ಸ್ನಾಯುಗಳು ತೂಕ ಇಳಿಸುವ ವ್ಯಾಯಾಮಗಳಿಗೆ ಹೆಚ್ಚಿನ ನೆರವು ನೀಡಿ ಕೊಬ್ಬನ್ನು ಕರಗಿಸಲು ನೆರವಾಗುತ್ತವೆ.

ಲಿಂಬೆ

ಲಿಂಬೆರಸ ಆಮ್ಲೀಯವಾಗಿದ್ದು ಹೊಟ್ಟೆಯಲ್ಲಿ ಸಂಗ್ರಹವಾಗಿದ್ದ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಮತ್ತು ವಿಸರ್ಜಿಸಲು ನೆರವಾಗುತ್ತದೆ. ಅಲ್ಲದೇ ಕಲ್ಮಶಗಳನ್ನು ನಿವಾರಿಸಲು ತ್ವರೆ ಮಾಡುತ್ತದೆ. ಈ ಕೆಲಸಕ್ಕಾಗಿ ದೇಹದಲ್ಲಿ ಸಂಗ್ರಹಗೊಂಡಿದ್ದ ಕೊಬ್ಬನ್ನು ಬಳಸಬೇಕಾಗಿ ಬರುವ ಕಾರಣ ಕೊಬ್ಬು ಶೀಘ್ರವಾಗಿ ಕರಗುತ್ತದೆ.  ಬೆಳಗಿನ ಜಾವ ಲಿಂಬೆ ರಸ ಬೆರೆಸಿದ ನೀರನ್ನು ಸೇವಿಸಲು ಮರೆಯದಿರಿ!

ಸಿಹಿಗುಂಬಳ ಕಾಯಿ

ಸಿಹಿಗುಂಬಳ ಕಾಯಿಯಲ್ಲಿರುವ ಪ್ರೋಟೀನುಗಳು ಸುಲಭವಾಗಿ ಜೀರ್ಣವಾಗುವುದು ಮಾತ್ರವಲ್ಲ, ಜೀರ್ಣವಾಗಲು ಹೆಚ್ಚಿನ ಕೊಬ್ಬನ್ನು ಬಳಸುವ ಮೂಲಕ ಸಪಾಟಾದ ಹೊಟ್ಟೆಯನ್ನು ಪಡೆಯಲು ನೆರವಾಗುತ್ತದೆ.

ತೆಂಗಿನ ಕಾಯಿ

ತೆಂಗಿನಲ್ಲಿ ಒಮೆಗಾ 3 ಕೊಬ್ಬಿನ ಆಮ್ಲಗಳು ಹೆಚ್ಚಿನ ಪ್ರಮಾಣದಲ್ಲಿದ್ದು ದೇಹವನ್ನು ಒಳಗಿನಿಂದ ಪೋಷಿಸುತ್ತದೆ. ಅಲ್ಲದೇ ಇದರಲ್ಲಿ ದೇಹಕ್ಕೆ ಅನಗತ್ಯವಾದ ಅನಾರೋಗ್ಯಕರ ಕ್ಯಾಲೋರಿಗಳಿಲ್ಲವಾದುದರಿಂದ ಹೊಟ್ಟೆಯ ಕೊಬ್ಬು ಕರಗಿಸುವ ವ್ಯಾಯಾಮಗಳು ಹೆಚ್ಚಿನ ಫಲ ನೀಡುತ್ತದೆ.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Friday, November 18, 2016, 13:11 [IST]
English summary

Common Foods For A Flat Tummy That Really Work!

A flat stomach is also a sign of health because it shows that the person follows a healthy lifestyle! Excess fat accumulation around the tummy can lead to a number of disorders, like high cholesterol, diabetes and cardiovascular diseases. To have a flat tummy and remain fit in general, you need to incorporate certain foods into your daily diet. So, here is a list of foods that can help you attain a flat stomach and they actually work, have a look!
Please Wait while comments are loading...
Subscribe Newsletter