For Quick Alerts
ALLOW NOTIFICATIONS  
For Daily Alerts

ಮನೆ ಔಷಧ: ಕಿಡ್ನಿ ಕಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ

ಪ್ರತಿಯೊಬ್ಬರ ಕಿಡ್ನಿಳಲ್ಲಿಯೂ ಚಿಕ್ಕ ಚಿಕ್ಕ ಕಲ್ಲುಗಳಿದ್ದೇ ಇರುತ್ತವೆ. ಸತತವಾಗಿ ನೀರು ಕುಡಿಯುವ ಮತ್ತು ಮೂತ್ರವಿಸರ್ಜಿಸುವ ಮೂಲಕ ಈ ಕಲ್ಲುಗಳೂ ಕರಗುತ್ತಾ ಹೋಗುತ್ತವೆ. ಆದರೆ ಮೂತ್ರ ತಡೆದು ಹಿಡಿದಷ್ಟೂ ಈ ಕಲ್ಲುಗಳ ಸಾಂದ್ರತೆ ಹೆಚ್ಚುತ್ತದೆ.

By Manu
|

ನಮ್ಮ ದೇಹದ ಅತಿ ಮುಖ್ಯ ಅಂಗಗಳಲ್ಲಿ ಮೂತ್ರಪಿಂಡಗಳೂ ಒಂದು. ಇವು ಸತತವಾಗಿ ನಮ್ಮ ದೇಹದಲ್ಲಿ ಆಹಾರದ ಮೂಲಕ ಆಗಮಿಸಿದ್ದ ವಿಷಕಾರಿ ವಸ್ತುಗಳನ್ನು, ಕಲ್ಮಶಗಳನ್ನು ನಿವಾರಿಸಿ ಹೊರಹಾಕುತ್ತವೆ. ವಿಶೇಷವಾಗಿ ನೀರಿನಲ್ಲಿ ಕರಗಿದ್ದ ಉಪ್ಪು ಮತ್ತು ಇತರ ಲವಣಗಳನ್ನು ಸೋಸಿ ಮೂತ್ರದ ಮೂಲಕ ಹೊರಹಾಕುತ್ತವೆ. ಕಿಡ್ನಿ ಕಲ್ಲು ಕರಗಿಸುವ, ಹಿತ್ತಲ ಗಿಡದ ಮದ್ದು

ಕೆಲವು ಸಂದರ್ಭಗಳಲ್ಲಿ ಈ ಲವಣಗಳು ಹರಳುಗಟ್ಟಿ ಮೂತ್ರಪಿಂಡಗಳ ಒಳಗೇ ಉಳಿದುಕೊಳ್ಳುತ್ತವೆ. ಇವೇ ಮೂತ್ರಪಿಂಡಗಳ ಕಲ್ಲು. ಸರಿಸುಮಾರಾಗಿ ಪ್ರತಿಯೊಬ್ಬರ ಮೂತ್ರಪಿಂಡಗಳಲ್ಲಿಯೂ ಚಿಕ್ಕ ಚಿಕ್ಕ ಕಲ್ಲುಗಳಿದ್ದೇ ಇರುತ್ತವೆ. ಆದರೆ ಸತತವಾಗಿ ನೀರು ಕುಡಿಯುವ ಮತ್ತು ನಿಯಮಿತವಾಗಿ ಮೂತ್ರವಿಸರ್ಜಿಸುವ ಮೂಲಕ ಈ ಕಲ್ಲುಗಳೂ ಕರಗುತ್ತಾ ಹೋಗುತ್ತವೆ.

ಮೂತ್ರ ತಡೆದು ಹಿಡಿದಷ್ಟೂ ಈ ಕಲ್ಲುಗಳ ಸಾಂದ್ರತೆ ಹೆಚ್ಚುತ್ತದೆ. ಒಂದು ಹಂತದಲ್ಲಿ ಇವು ದೊಡ್ಡದಾಗುತ್ತಾ ಮೂತ್ರಪಿಂಡಗಳ ಒಳಗೆ ಒತ್ತಡ ನೀಡುವ ಮೂಲಕ ನೋವು ಕೊಟ್ಟು ತಮ್ಮ ಇರುವಿಕೆಯನ್ನು ತೋರ್ಪಡಿಸುತ್ತವೆ. ಆಗ ತಡಬಡಾಯಿಸಿ ನೋವು ತಡೆಯಲಾರದೇ ಎಲ್ಲರೂ ವೈದ್ಯರ ಬಳಿ ಓಡುತ್ತಾರೆ. ಕಿಡ್ನಿ ಕಲ್ಲುಗಳ ನಿವಾರಣೆಗೆ ಇಲ್ಲಿದೆ ಸೂಕ್ತ ಪರಿಹಾರ

ಈ ಸ್ಥಿತಿ ಬರದೇ ಇರಲು ನಿಯಮಿತವಾಗಿ ನೀರು ಕುಡಿಯುತ್ತಿರುವುದು, ಮೂತ್ರ ತಡೆಗಟ್ಟದಿರುವುದು, ಲವಣಗಳನ್ನು ಹೆಚ್ಚಾಗಿ ಸೇವಿಸದೇ ಇರುವುದು ಮೊದಲಾದ ಕ್ರಮಗಳನ್ನು ನಮ್ಮ ಜೀವನದ ಅಭ್ಯಾಸವಾಗಿಸಬೇಕು. ಒಂದು ವೇಳೆ ಮಾಹಿತಿಯ ಕೊರತೆಯಿಂದ ಈಗಾಗಲೇ ತಡವಾಗಿದ್ದು ಮೂತ್ರಪಿಂಡಗಳಲ್ಲಿ ಕಲ್ಲು ಮೂಡಿದ್ದರೆ ಇವನ್ನು ಸಮರ್ಥವಾಗಿ ಹೊರಹಾಕಲು ಸುಲಭ ಮತ್ತು ಸಮರ್ಥವಾದ ವಿಧಾನವೊಂದಿದೆ, ಬನ್ನಿ, ಈ ವಿಧಾನ ಯಾವುದು ಎಂಬುದನ್ನು ನೋಡೋಣ.....


ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

1. ಒಂದು ಮುಷ್ಟಿಯಷ್ಟು ಕೊತ್ತಂಬರಿ ಅಥವಾ ಪಾರ್ಸ್ಲೆ ಎಲೆಗಳು (ದಂಟು ನಿವಾರಿಸಿದ್ದು)

2. ನೀರು ಸುಮಾರು ಒಂದು ಲೀಟರ್

ತಯಾರಿಕಾ ವಿಧಾನ

ತಯಾರಿಕಾ ವಿಧಾನ

*ಎಲೆಗಳನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ.

*ಒಂದು ಚಿಕ್ಕ ಪಾತ್ರೆಯಲ್ಲಿ ಕೊಂಚ ನೀರು ಹಾಕಿ ಹೆಚ್ಚಿದ ಎಲೆಗಳನ್ನು ಇದರಲ್ಲಿ ಬೆರೆಸಿ

*ಈ ನೀರನ್ನು ಬಿಸಿಮಾಡಿ. ನೀರು ಕುದಿಯಲು ಪ್ರಾರಂಭವಾದ ಬಳಿಕ ಮುಚ್ಚಳ ಮುಚ್ಚದೇ ಮಧ್ಯಮ ಉರಿಯಲ್ಲಿ ಇನ್ನೂ ಹತ್ತು ನಿಮಿಷ ಕುದಿಸಿ.

ತಯಾರಿಕಾ ವಿಧಾನ

ತಯಾರಿಕಾ ವಿಧಾನ

ಬಳಿಕ ಉರಿ ಆರಿಸಿ ಹಾಗೇ ತಣಿಯಲು ಬಿಡಿ.

ಪೂರ್ಣವಾಗಿ ತಣಿದ ಬಳಿಕ ಈ ನೀರನ್ನು ಸೋಸಿ ಒಂದು ಬಾಟಲಿಯಲ್ಲಿ ಸಂಗ್ರಹಿಸಿ ಫ್ರಿಜ್ಜಿನಲ್ಲಿಡಿ. ಈ ನೀರನ್ನು ತಣ್ಣಗಿದ್ದಂತೆಯೇ ಇಡಿಯ ದಿನ ನೀರಿನ ಬದಲಿಗೆ ಕುಡಿಯಿರಿ. ಸಾಧ್ಯವಾದಷ್ಟು ಬೇರೆ ಯಾವುದೇ ದ್ರವವನ್ನು ಸೇವಿಸದಿರಿ.

ಮೂತ್ರದ ಬಣ್ಣದಲ್ಲಿ ಬದಲಾವಣೆ.....

ಮೂತ್ರದ ಬಣ್ಣದಲ್ಲಿ ಬದಲಾವಣೆ.....

ಕೆಲವೇ ದಿನಗಳಲ್ಲಿ ನಿಮ್ಮ ಮೂತ್ರದ ಬಣ್ಣ ಬದಲಾಗಿರುವುದನ್ನು ಗಮನಿಸುತ್ತೀರಿ. ಮೂತ್ರದ ಬಣ್ಣ ಬಿಳಿಯಾಗಿದ್ದಷ್ಟೂ ಉತ್ತಮ. ಅಂದರೆ ಮೂತ್ರಪಿಂಡಗಳಲ್ಲಿದ್ದ ಕಲ್ಲುಗಳು ಕರಗಿ ನೀರಾಗಿ ಹರಿದಿರುವುದನ್ನು ಇದು ಖಚಿತಪಡಿಸುತ್ತದೆ.

ಇತರ ಕಲ್ಮಶವನ್ನೂ ದೇಹದಿಂದ ಹೊರಹಾಕುತ್ತದೆ...

ಇತರ ಕಲ್ಮಶವನ್ನೂ ದೇಹದಿಂದ ಹೊರಹಾಕುತ್ತದೆ...

ಇದರಿಂದ ಬರೆಯ ಕಲ್ಲುಗಳು ಮಾತ್ರವಲ್ಲ, ದೇಹದಲ್ಲಿರುವ ಇತರ ಕಲ್ಮಶ ಮತ್ತು ವಿಷಕಾರಿ ವಸ್ತುಗಳನ್ನೂ ಹೊರಹಾಕಲು ಸಾಧ್ಯವಾಗುತ್ತದೆ.

ಇತರ ಕಲ್ಮಶವನ್ನೂ ದೇಹದಿಂದ ಹೊರಹಾಕುತ್ತದೆ...

ಇತರ ಕಲ್ಮಶವನ್ನೂ ದೇಹದಿಂದ ಹೊರಹಾಕುತ್ತದೆ...

ಒಂದು ವೇಳೆ ನೀರು ಕುದಿಸಿ ಸೋಸಲು ವ್ಯವಧಾನ ಅಥವಾ ಸಮಯವಿಲ್ಲದಿದ್ದರೆ ಕೊತ್ತಂಬರಿ ಸೊಪ್ಪು ಅಥವಾ ಪಾರ್ಸ್ಲೆ ಎಲೆಗಳನ್ನು ಜಜ್ಜಿ ಟೀಪುಡಿಯ ಬದಲು ಬಿಸಿನೀರಿಗೆ ಬಳಸಿ ಹಾಲಿಲ್ಲದೇ ಕೊಂಚವೇ ಸಕ್ಕರೆ ಬೆರೆಸಿ ಟೀ ಬದಲಿಗೆ ಕುಡಿಯಿರಿ. ಇದರಿಂದ ಕೊಂಚ ಹೆಚ್ಚು ಸಮಯ ತಗಲುತ್ತದಾದರೂ ನಿಧಾನವಾಗಿ ಮೂತ್ರಪಿಂಡದ ಕಲ್ಲುಗಳು ಇಲ್ಲವಾಗುತ್ತವೆ.

English summary

Chuck Out Kidney Stones From The Body With This Amazing Remedy

Kidneys are vital and important organs of the body, as they help in cleansing the body off toxins and excess salt. Hence, it is important to get rid of kidney stones from the body. So, if your question is, how to remove kidney stones naturally, read this article to find out. It is important to ensure that the kidneys are properly cleansed, so that they function normally without any glitch.
X
Desktop Bottom Promotion