For Quick Alerts
ALLOW NOTIFICATIONS  
For Daily Alerts

ಮೂರು ತಿಂಗಳಿಗೊಮ್ಮೆ ಅಡುಗೆ ಎಣ್ಣೆ, ಬದಲಿಸಲು ಮರೆಯದಿರಿ

By Arshad
|

ಭಾರತೀಯ ಅಡುಗೆ ಎಂದರೆ ಅದರಲ್ಲಿ ಹಲವಾರು ಸಾಂಬಾರ ಪದಾರ್ಥಗಳು ಮತ್ತು ಎಣ್ಣೆ ಇರಲೇಬೇಕು ಎಂಬುದು ಒಂದು ಅನಿಯಮಿತ ಕಡ್ಡಾಯವಾಗಿದೆ. ಅದರಲ್ಲೂ ಎಣ್ಣೆ ಇಲ್ಲದೆ ಅಡುಗೆ ಮಾಡುವ ಕುಟುಂಬವೇ ಭಾರತದಲ್ಲಿಲ್ಲ. ಬೆಳಗ್ಗಿನ ಉಪಾಹಾರದಿಂದ ಹಿಡಿದು ರಾತ್ರಿಯ ಊಟದವರೆಗೂ ತಿನ್ನುವ ಯಾವುದೇ ಆಹಾರವಾದಲಿ, ಅದರಲ್ಲಿ ಕೆಲವಾದರೂ ಎಣ್ಣೆ ಬಳಸಲ್ಪಟ್ಟಿರುವುದೇ ಆಗಿದೆ. ಹಬೆಯಲ್ಲಿ ಬೇಯುವ ಇಡ್ಲಿಯೂ ಎಣ್ಣೆಯಿಂದ ಹೊರತಲ್ಲ, ಇಡ್ಲಿ ಅಂಟಿಕೊಳ್ಳದಂತೆ ಪಾತ್ರೆಗೆ ಕೊಂಚ ಎಣ್ಣೆಯನ್ನು ಸವರುತ್ತಾರೆ. ರೊಟ್ಟಿ, ಚಪಾತಿ, ಸಾರು, ಸಾಂಬಾರು, ಮಾಂಸದ ಅಡುಗೆ, ಮೀನಿನ ಅಡುಗೆ ಯಾವುದೇ ಇರಲಿ, ಎಣ್ಣೆಯಂತೂ ಬೇಕೇ ಬೇಕು. ಅಡುಗೆ ಎಣ್ಣೆ ಆಯ್ಕೆಯ ವಿಷಯದಲ್ಲಿ ಎಚ್ಚರ ತಪ್ಪದಿರಿ..!

ಭಾರತದಾದ್ಯಂತ ಅಡುಗೆಗಳಲ್ಲಿರುವ ವೈವಿಧ್ಯಗಳಿಗೆ ಅನುಸಾರವಾಗಿ ಎಣ್ಣೆಯ ಬಳಕೆಯೂ ಹೆಚ್ಚು ಕಡಿಮೆಯಾಗಬಹುದೇ ವಿನಃ ಎಣ್ಣೆಯ ಬಳಕೆ ಇಲ್ಲದಿರುವ ಯಾವುದೇ ಮನೆಯೇ ಇಲ್ಲ. ಒಂದು ವಿಚಿತ್ರವೆಂದರೆ ಅಡುಗೆ ಒಂದೇ ಆದರೂ ಇದರನ್ನು ತಯಾರಿಸುವ ವಿಧಾನ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತಾ ಹೋಗುತ್ತದೆ. ಉದಾಹರಣೆಗೆ ಉಪ್ಪಿಟ್ಟು. ಬೆಂಗಳೂರಿನಲ್ಲಿ ಮಾಡಿದಂತಹ ಉಪ್ಪಿಟ್ಟನ್ನು ಮಂಗಳೂರಿನಲ್ಲಿ ಮಾಡುವುದಿಲ್ಲ. ಮಧುಮೇಹಿಗಳೇ ಅಡುಗೆ ಎಣ್ಣೆಯ ಕುರಿತು ಎಚ್ಚರವಿರಲಿ

ಇದೇ ಪ್ರಕಾರ ಪ್ರದೇಶದಿಂದ ಪ್ರದೇಶಕ್ಕೆ ಬಳಸಲ್ಪಡುವ ಅಥವಾ ಹೆಚ್ಚಿನ ಜನರ ಅಪೇಕ್ಷೆಯ ಎಣ್ಣೆಯೂ ಬದಲಾಗುತ್ತಾ ಹೋಗುತ್ತದೆ. ಉತ್ತರ ಭಾರತದಲ್ಲಿ ಸಾಸಿವೆ ಎಣ್ಣೆಯ ಬಳಕೆ ಹೆಚ್ಚಿದ್ದರೆ ದಕ್ಷಿಣದಲ್ಲಿ ಶೇಂಗಾ, ಸೂರ್ಯಕಾಂತಿ ಎಣ್ಣೆಯ ಬಳಕೆ ಹೆಚ್ಚು, ಪಶ್ಚಿಮದಲ್ಲಿ ಹತ್ತಿಕಾಳು ಎಣ್ಣೆಯ ಬಳಕೆ ಹೆಚ್ಚು ವ್ಯಾಪಕವಾಗಿದೆ. ಎಣ್ಣೆಯ ಬಳಕೆ ಕಡಿಮೆ ಮಾಡಿ ಎಂದು ಆಹಾರ ತಜ್ಞರು ಹೇಳುತ್ತಾ ಬಂದಿದ್ದರೂ ಭಾರತೀಯರು ಇದಕ್ಕೆ ಕಿವಿಗೊಟ್ಟಂತೆ ಕಾಣುತ್ತಿಲ್ಲ. ಆದ್ದರಿಂದ ಎಣ್ಣೆಯ ಬಳಕೆ ಕಡಿಮೆ ಮಾಡಿಕೊಳ್ಳದಿದ್ದರೂ ಪ್ರತಿ ಮೂರು

ತಿಂಗಳಿಗೊಮ್ಮೆ ಬದಲಾಯಿಸಿ ಎಂದು ಈಗ ವೈದ್ಯರು ಕಿವಿಮಾತು ಹೇಳುತ್ತಿದ್ದಾರೆ. ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಯಾವುದೇ ಎಣ್ಣೆಯಲ್ಲಿ ಒಂದಲ್ಲಾ ಒಂದು ಕೆಟ್ಟಗುಣ ಇದ್ದೇ ಇರುತ್ತದೆ. ಒಂದು ಎಣ್ಣೆಗೆ ಒಗ್ಗಿಕೊಂಡ ದೇಹ ಇದೇ ಎಣ್ಣೆಗೆ ದಾಸನಾಗಿ ಈ ಎಣ್ಣೆಯ ಕೆಟ್ಟ ಕೊಬ್ಬು ಮೊದಲಾದ ಗುಣಗಳನ್ನೆಲ್ಲಾ ಸಾಂದ್ರಗೊಳಿಸುತ್ತಾ ಹೋಗುತ್ತದೆ. ದೇಹದ ಸ್ವಾಸ್ಥ್ಯಕ್ಕಾಗಿ ಆರೋಗ್ಯಕರವಾದ ಅಡುಗೆ ಎಣ್ಣೆ ಯಾವುದು?

ಆದ್ದರಿಂದ ಆಗಾಗ ಎಣ್ಣೆ ಬದಲಿಸುವ ಮೂಲಕ ಹಿಂದಿನ ಎಣ್ಣೆಯ ಮೂಲಕ ಸಾಂದ್ರಗೊಂಡ ಕೆಟ್ಟ ಕೊಬ್ಬನ್ನು ನಿವಾರಿಸಲು ಸಾಧ್ಯವಾಗುತ್ತದೆ. ಆದರೆ ಇದೇ ವೇಳೆ ಈ ಎಣ್ಣೆಯ ಕೊಬ್ಬು ಇನ್ನೊಂದೆಡೆ ಸಂಗ್ರಹವಾಗಲು ತೊಡಗುತ್ತದೆ. ಇದೇ ಕಾರಣಕ್ಕೆ ಪ್ರತಿಬಾರಿ ಬೇರೆ ಬೇರೆ ಎಣ್ಣೆ ಬಳಸಿ ಎಂದು ವೈದ್ಯರು ತಿಳಿಸುತ್ತಾರೆ. ವೈದ್ಯರ ಸಲಹೆಯನ್ನು ಪಾಲಿಸಲು ಕೆಳಗಿನ ಮಾಹಿತಿ ನಿಮಗೆ ನೆರವಾಗಲಿವೆ ಮುಂದೆ ಓದಿ...

ತೌಡಿನ ಎಣ್ಣೆ: (ಅಕ್ಕಿ ಎಣ್ಣೆ)

ತೌಡಿನ ಎಣ್ಣೆ: (ಅಕ್ಕಿ ಎಣ್ಣೆ)

ಅಕ್ಕಿಯನ್ನು ಪಾಲಿಶ್ ಮಾಡಿದಾಗ ಉದುರಿದ ಪುಡಿಯೇ ತೌಡು. ಇದರಿಂದ ಹಿಂಡಿ ತೆಗೆದ ಎಣ್ಣೆಯಲ್ಲಿ ಅಸಂತುಲಿತ ಕೊಬ್ಬಿನ ಆಮ್ಲ(monounsaturated fatty acid) ಹೆಚ್ಚಿನ ಪ್ರಮಾಣದಲ್ಲಿದೆ. ಅಲ್ಲದೇ ಇದರಲ್ಲಿ ಒರೈಜನಾಲ್ (oryzanol) ಎಂಬ ಪೋಷಕಾಂಶವೂ ಇದ್ದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಈ ಎಣ್ಣೆಯ ಬಳಕೆಯಿಂದ ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನೂ ನಿಯಂತ್ರಿಸಬಹುದು. ಇವುಗಳ ಹೊರತಾಗಿ ಇದರಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಇ ಸಹಾ ಇದೆ. ಈ ಪೋಷಕಾಂಶ ಚರ್ಮದ ಪೋಷಣೆಗೆ ನೆರವಾಗುವ ಮೂಲಕ ಚರ್ಮದ ಆರೋಗ್ಯ ಮತ್ತು ಕಾಂತಿಯನ್ನೂ ಹೆಚ್ಚಿಸುತ್ತದೆ. ಈ ಎಲ್ಲಾ ಕಾರಣಗಳಿಂದ ತೌಡೆಣ್ಣೆ ಆರೋಗ್ಯಕರ ಎಣ್ಣೆಯ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಆರೋಗ್ಯಕರ ಎಣ್ಣೆಗಳ ಪಟ್ಟಿಯಲ್ಲಿ ಆಲಿವ್ ಎಣ್ಣೆಗೆ ಎರಡನೆಯ ಸ್ಥಾನ ಸಿಕ್ಕಿದೆ. ಇದರಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು ಇದ್ದು ಸಂಧಿವಾತ ಕಡಿಮೆಗೊಳಿಸಲು ಅತ್ಯುತ್ತಮವಾಗಿದೆ. ನಿಯಮಿತವಾಗಿ ಆಲಿವ್ ಎಣ್ಣೆಯ ಬಳಕೆಯಿಂದ ಪಾರ್ಕಿನ್ಸನ್ ಕಾಯಿಲೆ ಮತ್ತು ಆಲ್ಝೀಮರ್ಸ್ ಕಾಯಿಲೆ ಬರುವ ಸಾಧ್ಯತೆ ಕಡಿಮೆಯಾಗುತ್ತದೆ. ಇದರೊಂದಿಗೆ ಹೃದಯದ ಆರೋಗ್ಯವೂ ಹೆಚ್ಚುತ್ತದೆ ಹಾಗೂ ಕೆಟ್ಟ ಕೊಲೆಸ್ಟಾಲ್ ಕಡಿಮೆಗೊಳಿಸುವ ಮೂಲಕ ಹೃದಯ ಸ್ತಂಭನದ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ.

ಸೂರ್ಯಕಾಂತಿ ಎಣ್ಣೆ

ಸೂರ್ಯಕಾಂತಿ ಎಣ್ಣೆ

ಆರೋಗ್ಯಕರ ಎಣ್ಣೆಗಳ ಪಟ್ಟಿಯಲ್ಲಿ ಮೂರನೆಯ ಸ್ಥಾನ ಪಡೆದಿರುವ ಸೂರ್ಯಕಾಂತಿ ಎಣ್ಣೆ ದಕ್ಷಿಣ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಇದರ ನಿಯಮಿತ ಸೇವನೆಯಿಂದ ರಕ್ತನಾಳಗಳಲ್ಲಿ ರಕ್ತಪರಿಚಲನೆ ಸುಗಮಗೊಳ್ಳುವ ಮೂಲಕ ಹೃದಯಕ್ಕೆ ಹೆಚ್ಚಿನ ಭಾರವಾಗುವ ಸಂಭವ ನಿವಾರಣೆಯಾಗುತ್ತದೆ. ಅಲ್ಲದೇ ಕ್ಯಾನ್ಸರ್ ಗೆ ಕಾರಣವಾಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ಕೊಲ್ಲುವ ಮೂಲಕ ವಿವಿಧ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನೂ ಕಡಿಮೆಗೊಳಿಸುತ್ತದೆ. ಈ ಎಣ್ಣೆಯಲ್ಲಿ ವಿವಿಧ ಆಂಟಿ ಆಕ್ಸಿಡೆಂಟುಗಳಿದ್ದು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ನರವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಸಂಧಿವಾತ ಮತ್ತು ಆರ್ಥ್ರೈಟಿಸ್ ರೋಗಗಳಿಂದ ಬಳಲುವವರ ಬೇನೆಯನ್ನೂ ಕಡಿಮೆ ಮಾಡುತ್ತದೆ.

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ

ಚಳಿಗಾಲದಲ್ಲಿ ಗಟ್ಟಿಯಾಗುತ್ತದೆ ಎಂಬ ಒಂದೇ ಕಾರಣವನ್ನು ನೀಡಿ ಕೆಟ್ಟ ಎಣ್ಣೆ ಎಂದು ಅಪಪ್ರಚಾರ ಮಾಡಿದರೂ ಶತಮಾನಗಳಿಂದ ಭಾರತೀಯರ ನೆಚ್ಚಿನ ಅಡುಗೆ ಎಣ್ಣೆಯಾದ ಕೊಬ್ಬರಿ ಎಣ್ಣೆ ಆರೋಗ್ಯಕರ ಎಣ್ಣೆಯಲ್ಲಿ ನಾಲ್ಕನೆಯ ಸ್ಥಾನ ಪಡೆದಿದೆ. ನಿಯಮಿತವಾಗಿ ಸೇವಿಸುವ ಮೂಲಕ ಇದು ರೋಗ ನಿರೋಧಕ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ ಹಾಗೂ ಜೀವರಾಸಾಯನಿಕ ಕ್ರಿಯೆಯನ್ನು ಹೆಚ್ಚಿಸುತ್ತದೆ. ಅಲ್ಲದೆ ಕೊಬ್ಬರಿ ಎಣ್ಣೆಯಲ್ಲಿ ಆರೋಗ್ಯಕರ ಸಂತುಲಿತ ಕೊಬ್ಬು (saturated fat) ಇರುವ ಕಾರಣ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ.

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ

ಪಟ್ಟಿಯಲ್ಲಿ ಐದನೆಯ ಸ್ಥಾನ ಪಡೆದಿರುವ ಸಾಸಿವೆ ಎಣ್ಣೆ ಉತ್ತರಭಾರತ, ಪಂಜಾಬ್, ರಾಜಸ್ಥಾನಗಳಲ್ಲಿ ಅತಿ ಹೆಚ್ಚು ಬಳಕೆಯಲ್ಲಿದೆ. ಇದು ಹಸಿವನ್ನು ಹೆಚ್ಚಿಸುತ್ತದೆ ಹಾಗೂ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ನಿಯಮಿತ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಕೆಮ್ಮು ಶೀತ ನೆಗಡಿ ಮೊದಲಾದ ತೊಂದರೆಗಳಿಂದಲೂ ರಕ್ಷಣೆ ನೀಡುತ್ತದೆ. ಅಲ್ಲದೇ ಉರಿಯೂತ ನಿವಾರಿಸಲು, ದೇಹದೊಳಗೆ ನುಸುಳಿರುವ ಜಂತುಗಳು, ಕ್ರಿಮಿಗಳನ್ನು ಹೊಡೆದೋಡಿಸಲು ನೆರವಾಗುತ್ತದೆ ಹಾಗೂ ಚರ್ಮದ ಸಹಜವರ್ಣ ಪಡೆಯಲೂ ನೆರವಾಗುತ್ತದೆ.

ಎಳ್ಳೆಣ್ಣೆ

ಎಳ್ಳೆಣ್ಣೆ

ನೀರಿನಂತೆಯೇ ತೆಳ್ಳಗಿರುವ ಎಳ್ಳೆಣ್ಣೆ ಮಧುಮೇಹಿಗಳಿಗೆ ಮತ್ತು ಅಧಿಕ ರಕ್ತದೊತ್ತಡದ ರೋಗಿಗಳಿಗೆ ವರದಾನವಾಗಿದೆ. ನಿಯಮಿತವಾಗಿ ಸೇವಿಸುವ ಮೂಲಕ ಮಧುಮೇಹದ ನಿಯಂತ್ರಣ ಮತ್ತು ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಅಲ್ಲದೇ ಬಾಯಿಯ ತೊಂದರೆಗಳನ್ನು ನಿವಾರಿಸಲೂ ಎಳ್ಳೆಣ್ಣೆ ಸೂಕ್ತವಾಗಿದೆ. ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಕಡಿಮೆಗೊಳಿಸಲು ಮತ್ತು ಮಾನಸಿಕ ಒತ್ತಡದಿಂದ ಹೊರಬರಲು ನೆರವಾಗುವ ಗುಣದ ಕಾರಣ ಈ ಎಣ್ಣೆ ಪಟ್ಟಿಯಲ್ಲಿ ಆರನೆಯ ಸ್ಥಾನ ಪಡೆದಿದೆ.

ಶೇಂಗಾ ಎಣ್ಣೆ

ಶೇಂಗಾ ಎಣ್ಣೆ

ಅಸಂತುಲಿತ ಕೊಬ್ಬು (monounsaturated fats), ಬಹುಅಸಂತುಲಿತ ಕೊಬ್ಬು (polyunsaturated fats) ಮತ್ತು ಒಮೆಗಾ 3 ಕೊಬಿನ ಆಮ್ಲ ಇರುವ ಕಾರಣದಿಂದ ಏಳನೆಯ ಸ್ಥಾನ ಪಡೆದಿರುವ ಶೇಂಗಾ ಎಣ್ಣೆಯ ನಿಯಮಿತ ಸೇವನೆಯಿಂದ ಶಕ್ತಿಯ ವರ್ಧನೆ ಮತ್ತು ಹೃದಯ ಸಂಬಂಧಿ ತೊಂದರೆಗಳ ಸಂಭವ ಕಡಿಮೆಯಾಗುತ್ತದೆ. ವಿಶೇಷವಾಗಿ ಹುರಿಯಲು ಬಳಸಿದಾಗ ತಿಂಡಿಗಳಿಗೆ ನೀಡುವ ರುಚಿಯ ಕಾರಣ ಶೇಂಗಾ ಎಣ್ಣೆಯನ್ನು ಹೆಚ್ಚಾಗಿ ಹುರಿಯಲು ಮತ್ತು ಕರಿಯಲು ಬಳಸಲಾಗುತ್ತದೆ.

ಪಾಮೋಲಿನ್ ಎಣ್ಣೆ

ಪಾಮೋಲಿನ್ ಎಣ್ಣೆ

ವಾಸ್ತವವಾಗಿ ಸಂತುಲಿತ ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಹೃದಯಕ್ಕೆ ಉತ್ತಮವಲ್ಲದಿದ್ದರೂ ಇದರಲ್ಲಿರುವ ಕೆಲವು ಆಂಟಿ ಆಕ್ಸಿಡೆಂಟುಗಳು ಮತ್ತು ವಿಟಮಿನ್ ಇ ಲಭ್ಯತೆಯ ಕಾರಣದಿಂದ ಈ ಎಣ್ಣೆಗೆ ಎಂಟನೆಯ ಸ್ಥಾನ ದೊರಕಿದೆ. ವಿಟಮಿನ್ ಇ ಮತ್ತು ಬೀಟಾ ಕ್ಯಾರೋಟಿನ್ ಚರ್ಮದ ಕಾಂತಿ ಹೆಚ್ಚಿಸಲು ನೆರವಾಗುತ್ತದೆ ಹಾಗೂ ಸಂಧಿವಾತ, ಆಲ್ಝೀಮರ್ಸ್ ಕಾಯಿಲೆಗಳು ಬರದಂತೆ ತಡೆಯುತ್ತದೆ. ಎರಡೂ ಕಡೆ ತಾಳೆ ಹಾಕಿ ನೋಡಿದಾಗ ಹೃದಯಕ್ಕೆ ಉತ್ತಮವಲ್ಲದಿದ್ದರೂ ಉಳಿದಂತೆ ಉತ್ತಮವಾಗಿರುವ ಎಣ್ಣೆಯನ್ನು ಹೃದಯರೋಗಿಗಳು, ಮಧುಮೇಹಿಗಳು ಸೇವಿಸದಿರುವುದು ಉತ್ತಮ.

ಹತ್ತಿಕಾಳು ಎಣ್ಣೆ

ಹತ್ತಿಕಾಳು ಎಣ್ಣೆ

ಒಮೆಗಾ 3 ಕೊಬ್ಬಿನ ಆಮ್ಲ ಅತಿಹೆಚ್ಚಿನ ಪ್ರಮಾಣದಲ್ಲಿರುವ ಈ ಎಣ್ಣೆ ಸಸ್ಯಹಾರಿಗಳ ನೆಚ್ಚಿನ ಎಣ್ಣೆಯಾಗಿದೆ. ಕರುಳುಗಳಲ್ಲಿ ಉರಿಯೂತ, ಮೊಳೆ, ಹುಣ್ಣು ಉಂಟುಮಾಡುವ Crohn's disease ಎಂಬ ರೋಗಕ್ಕೆ ಇದು ಔಷಧದಂತೆ ಕೆಲಸ ಮಾಡುತ್ತದೆ. ಇದೇ ಕಾರಣಕ್ಕೆ ಪಟ್ಟಿಯಲ್ಲಿ ಇದು ಒಂಭತ್ತನೆಯ ಸ್ಥಾನ ಪಡೆದಿದೆ.

ತುಪ್ಪ

ತುಪ್ಪ

ಕೊಂಚ ದುಬಾರಿ ಎಂಬ ಒಂದು ಕಾರಣ ಬಿಟ್ಟರೆ ಬೇರೆ ಯಾವುದೇ ಎಣ್ಣೆಗೆ ಕಡಿಮೆಯಿಲ್ಲದ ತುಪ್ಪ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪೂರಕವಾಗಿದೆ. ವಿಶೇಷವಾಗಿ ಜೀರ್ಣಕ್ರಿಯೆ ಹೆಚ್ಚಿಸುವ ಮೂಲಕ ಮತ್ತು ಮೂಳೆಗಳನ್ನು ದೃಢಗೊಳಿಸಲು ನೆರವಾಗುತ್ತದೆ. ಅಲ್ಲದೇ ನಿಯಮಿತ ಸೇವನೆಯ ಮೂಲಕ ಮೆದುಳಿನ ಚುರುಕುತನ ಹೆಚ್ಚಲೂ ನೆರವಾಗುತ್ತದೆ. ಇದೇ ಕಾರಣಕ್ಕೆ ಪಟ್ಟಿಯಲ್ಲಿ ತುಪ್ಪಕ್ಕೆ ಹತ್ತನೆಯ ಸ್ಥಾನ ದೊರಕಿದೆ.


English summary

Change Your Cooking Oil Every Three Months, Even Doctors Say So!

In the article, we are sharing the benefits of some healthy cooking oils. This list might make it easier for you to pick a different oil the next time you go for your household shopping. Take a look.
X
Desktop Bottom Promotion