For Quick Alerts
ALLOW NOTIFICATIONS  
For Daily Alerts

ಪ್ರತಿನಿತ್ಯ ಕ್ಯಾರೆಟ್ ಜ್ಯೂಸ್ ಕುಡಿಯಿರಿ-ಆರೋಗ್ಯ ಪಡೆಯಿರಿ

By Super Admin
|

ಭೂಮಿ ಮೇಲೆ ಬೆಳೆಯುವ ಯಾವುದೇ ತರಕಾರಿ, ಹಣ್ಣುಹಂಪಲುಗಳಾಗಲಿ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇದ್ದೇ ಇರುತ್ತದೆ. ಅದರಲ್ಲೂ ನೆಲದ ಅಡಿಯಲ್ಲಿ ಬೆಳೆಯುವಂತಹ ಆಲೂಗಡ್ಡೆ, ಈರುಳ್ಳಿ, ಮತ್ತಿತರರಲ್ಲಿ ಪೋಷಕಾಂಶಗಳು ಹೇರಳವಾಗಿರುತ್ತದೆ. ಇದನ್ನು ಬಳಸುವುದರಿಂದ ನಾವು ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬಹುದಾಗಿದೆ.

Healthy ways a glass of carrot juice can help you become healthy!

ಅದರಲ್ಲೂ ನೆಲದ ಅಡಿಯಲ್ಲಿ ಬೆಳೆಯುವಂತಹ ಕ್ಯಾರೆಟ್ ಅನ್ನು ನಾವು ಸಲಾಡ್ ಮತ್ತು ಇತರ ಪದಾರ್ಥಗಳಲ್ಲಿ ಬಳಸುತ್ತೇವೆ. ಕೆಲವರಿಗೆ ಇದು ಇಷ್ಟವಾಗದಿರಬಹುದು. ಇಂತಹವರು ಇದನ್ನು ಜ್ಯೂಸ್ ಮಾಡಿ ಕುಡಿದರೆ ಅದರಿಂದ ಅಪಾರ ಲಾಭವನ್ನು ಪಡೆಯಬಹುದಾಗಿದೆ. ಇನ್ನು ತಡ ಯಾಕೆ? ತಕ್ಷಣ ಒಂದು ಲೋಟ ಕ್ಯಾರೆಟ್ ಜ್ಯೂಸ್ ಮಾಡಿಕೊಂಡು ಕುಡಿಯಿರಿ.

ವಿಟಮಿನ್ ಎ ಯಿಂದ ಸಮೃದ್ಧ
ಕ್ಯಾರೆಟ್ ನಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ ಎಂದು ಪ್ರತಿಯೊಬ್ಬರಿಗೂ ತಿಳಿದ ವಿಚಾರವಾಗಿದೆ. ಕ್ಯಾರೆಟ್‌ನಲ್ಲಿರುವ ಬೆಟಾ ಕ್ಯಾರೊಟಿನ್ ಎನ್ನುವ ಅಂಶವು ದೇಹದಲ್ಲಿ ವಿಟಮಿನ್ ಎ ಯನ್ನು ಉತ್ಪತ್ತಿ ಮಾಡುತ್ತದೆ. ವಿಟಮಿನ್ ಎ ಕಣ್ಣಿನ ದೃಷ್ಟಿಗೆ ಒಳ್ಳೆಯದು ಮತ್ತು ಕಣ್ಣುಗಳನ್ನು ಆರೋಗ್ಯವಾಗಿರಿಸುತ್ತದೆ. ಸಮೃದ್ಧ ಪೋಷಕಾಂಶಗಳ ಆಗರ- ಕ್ಯಾರೆಟ್ ಜ್ಯೂಸ್

ಸ್ತನ ಕ್ಯಾನ್ಸರ್ ತಡೆಯುವುದು
ನ್ಯೂಟ್ರಿಷನ್ ಮತ್ತು ಕ್ಯಾನ್ಸರ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯೊಂದರ ಪ್ರಕಾರ ಸತತ ಮೂರು ವಾರಗಳ ಕಾಲ ಕ್ಯಾರೆಟ್ ಜ್ಯೂಸ್ ಅನ್ನು ಕುಡಿಯುವುದರಿಂದ ಪ್ಲಾಸ್ಮಾ ಕ್ಯಾರೊಟೆನೈಡ್ ಹೆಚ್ಚಾಗಿ ಆಕ್ಸಿಡೇಟಿವ್ ಒತ್ತಡ ಕಡಿಮೆಯಾಗಿದೆಯಂತೆ. ಈ ಮೊದಲೇ ಸ್ತನ ಕ್ಯಾನ್ಸರ್ ನ ಚಿಕಿತ್ಸೆಗೆ ಗುರಿಯಾಗಿರುವ ಮಹಿಳೆಯರಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಇದು ವಿಫಲವಾಗಿದೆ.

ಧೂಮಪಾನಿಗಳಲ್ಲಿ ಡಿಎನ್ ಎ ನಷ್ಟವನ್ನು ಕಡಿಮೆಗೊಳಿಸಿದೆ
ಹಲವಾರು ರೀತಿಯ ಕ್ಯಾನ್ಸರ್‌ನ ಅಪಾಯವನ್ನು ಎದುರಿಸುವಂತಹ ಧೂಮಪಾನಿಗಳಲ್ಲಿ ಲೈಂಪೋಸೈಟಿಕ್ ಡಿಎನ್ ಎ ನಷ್ಟವಾಗುವುದನ್ನು ಕ್ಯಾರೆಟ್‌ನಲ್ಲಿರುವ ಬೆಟಾ ಕ್ಯಾರೊಟಿನ್ ಅಂಶವು ತಡೆಯುವುದು.

ಹೃದಯದ ಆರೋಗ್ಯ
ಕ್ಯಾರೆಟ್ ಜ್ಯೂಸ್‌ನ್ನು ನಿಯಮಿತವಾಗಿ ಕುಡಿಯುವುದರಿಂದ ಪ್ರತೀ ಹೃದಯ ಬಡಿತದ ಮಧ್ಯೆ ಉಂಟಾಗುವಂತಹ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ನ್ಯೂಟ್ರಿಷನ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯಿಂದ ತಿಳಿದುಬಂದಿದೆ. ಪರ್ಫೆಕ್ಟ್ ಆರೋಗ್ಯಕ್ಕೆ ಸೇವಿಸಲೇಬೇಕು ಕ್ಯಾರೆಟ್

ಚರ್ಮ ಮತ್ತು ಕೂದಲಿನ ಕಾಂತಿಗೆ
ಕ್ಯಾರೆಟ್ ಜ್ಯೂಸ್‌ನಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಮತ್ತು ಪೊಟಾಶಿಯಂ ಇದೆ. ಇದು ಕೋಶಗಳನ್ನು ಪುನರ್ ಉತ್ಪತ್ತಿ ಮಾಡಿ ಚರ್ಮ ಮತ್ತು ಕೂದಲು ನೈಸರ್ಗಿಕ ಕಾಂತಿಯನ್ನು ಪಡೆಯಲು ನೆರವಾಗುತ್ತದೆ.

ರಕ್ತದ ಸಕ್ಕರೆ ನಿಯಂತ್ರಣ
ಒಂದು ಲೋಟ ಕ್ಯಾರೆಟ್ ಜ್ಯೂಸ್‌ನಲ್ಲಿ ತುಂಬಾ ಕಡಿಮೆ ಕ್ಯಾಲರಿಯಿದೆ ಮತ್ತು ಅದರಲ್ಲಿರುವ ಸಕ್ಕರೆಯಲ್ಲಿ ಪ್ರಮುಖ ಪೋಷಕಾಂಶ ಹಾಗೂ ಖನಿಜಾಂಶಗಳಿವೆ. ಇದರಿಂದ ಸಕ್ಕರೆ ಅಂಶವನ್ನು ನಿಯಂತ್ರಿಸಿ ಮಧುಮೇಹವನ್ನು ಸರಿಯಾಗಿಟ್ಟುಕೊಳ್ಳಲು ನೆರವಾಗುವುದು. ಕ್ಯಾರೆಟ್ ಜ್ಯೂಸ್ ರೆಸಿಪಿಗಾಗಿ ಲಿಂಕ್ ಕ್ಲಿಕ್ ಮಾಡಿ

English summary

Carrot juice can help you become healthy!

Carrots are not just a salad ingredient and you can use it in curries, dals, cakes or carrot halwa. However, if this orange veggie doesn’t interest you much you can try and have a glass of carrot juice to reap its benefits. Here are ways in which a glass of carrot juice can keep you healthy.
X
Desktop Bottom Promotion