ಕೆಮ್ಮು , ಶೀತಕ್ಕೆ ಅರಿಶಿನ-ಕರಿಮೆಣಸಿನ ಬಿಸಿ ಬಿಸಿ ಹಾಲು!

ಬಿಸಿಹಾಲಿಗೆ ಅರಿಶಿನ ಹಾಗೂ ಕರಿಮೆಣಸಿನ ಹುಡಿಯನ್ನು ಹಾಕಿ ಕುಡಿಯುವುದರಿಂದ ಕೆಮ್ಮು ಹಾಗೂ ಶೀತವನ್ನು ನಿವಾರಣೆ ಮಾಡಬಹುದು

By: manu
Subscribe to Boldsky

ಚಳಿಗಾಲ ಆರಂಭವಾಗುತ್ತಿರುವಂತೆ ಶೀತ, ಕೆಮ್ಮು ಸಾಮಾನ್ಯವಾಗಿ ಪ್ರತಿಯೊಬ್ಬರನ್ನು ಕಾಡಲು ಆರಂಭಿಸುತ್ತದೆ. ಒಂದೆರಡು ದಿನದಲ್ಲಿ ಇದು ಕಡಿಮೆಯಾಗದೆ ಇದ್ದರೆ ನಾವು ವೈದ್ಯರನ್ನು ಭೇಟಿಯಾಗುತ್ತೇವೆ. ಆದರೆ ಮನೆಯಲ್ಲಿ ಮಾಡುವಂತಹ ಕೆಲವೊಂದು ಮದ್ದುಗಳು ಇಂತಹ ಸಾಮಾನ್ಯ ಕೆಮ್ಮು ಹಾಗೂ ಶೀತವನ್ನು ಗುಣಪಡಿಸುವುದು. ಬಿಸಿಹಾಲಿಗೆ ಅರಿಶಿನ ಹಾಗೂ ಕರಿಮೆಣಸಿನ ಹುಡಿಯನ್ನು ಹಾಕಿ ಕುಡಿಯುವುದರಿಂದ ಕೆಮ್ಮು ಹಾಗೂ ಶೀತವನ್ನು ನಿವಾರಣೆ ಮಾಡಬಹುದು ಎಂದು ನಾವೆಲ್ಲರೂ ಕೇಳಿದ್ದೇವೆ. 9 ಭಯಂಕರ ಕಾಯಿಲೆಗೆ ಮನೆಮದ್ದು ಈ ಕರಿಮೆಣಸು!   

Pepper
 

ಆದರೆ ಇದು ನಿಜವಾಗಿಯೂ ಒಳ್ಳೆಯ ಔಷಧಿಯೇ? ಅಥವಾ ಕೇವಲ ಕಟ್ಟುಕತೆಯೇ ಎನ್ನುವ ಪ್ರಶ್ನೆ ಸಹಜ. ಯಾಕೆಂದರೆ ಕೆಲವು ಮಂದಿ ಹಲವಾರು ಮನೆಮದ್ದುಗಳನ್ನು ಪ್ರಯೋಗಿಸಿ ಅದರಿಂದ ಪರಿಣಾಮ ಕಾಣದೆ ಕಂಗೆಟ್ಟು ಅದರ ಸಹವಾಸವೇ ಬೇಡ ಅಂದುಕೊಂಡಿದ್ದಾರೆ.

ಬಿಸಿ ಹಾಲಿಗೆ ಅರಿಶಿನ ಹಾಗೂ ಕರಿಮೆಣಸಿನ ಹುಡಿಯನ್ನು ಹಾಕಿ ಕುಡಿಯುವುದರಿಂದ ಕೆಮ್ಮು ಹಾಗೂ ಶೀತ ಕಡಿಮೆಯಾಗುತ್ತದೆ ಎನ್ನಲಾಗುತ್ತದೆ. ಇದರ ಬಗ್ಗೆ ನಾವು ತಿಳಿದುಕೊಳ್ಳುವ. ಹಾಲು-ಅರಿಶಿನದ ಜೋಡಿ ಮಾಡಲಿದೆ ಕಮಾಲಿನ ಮೋಡಿ! 

turmeric and pepper milk
 

ಮನೆಮದ್ದನ್ನು ತಯಾರಿಸುವ ಹಾಗೂ ಬಳಸುವ ವಿಧಾನ
ಕೆಮ್ಮು ಹಾಗೂ ಶೀತಕ್ಕೆ ಪರಿಹಾರ ನೀಡುವಂತಹ ಈ ಮನೆಮದ್ದನ್ನು ತಯಾರಿಸಲು ಒಂದು ಲೋಟ ಹಾಲಿಗೆ ಅರ್ಧ ಚಮಚ ಕರಿಮೆಣಸಿನ ಹುಡಿ ಮತ್ತು ಎರಡು ಚಮಚ ಅರಿಶಿನವನ್ನು ಹಾಕಿ ಸರಿಯಾಗಿ ಕಳಸಿಕೊಳ್ಳಿ. ಈ ಮದ್ದನ್ನು ದಿನದಲ್ಲಿ ಎರಡು ಸಲ ಕುಡಿದರೆ ಪರಿಹಾರ ಕಾಣಬಹುದು. ಜ್ವರ ಶೀತಕ್ಕೆ ಸಿದ್ಧೌಷಧ-ಬೆಳ್ಳುಳ್ಳಿ ಕರಿಮೆಣಸು ರಸಂ    

cough
 

ಮನೆಮದ್ದು ಯಾವ ರೀತಿ ಕೆಲಸ ಮಾಡುವುದು?
ಬಿಸಿ ಹಾಲು, ಕರಿಮೆಣಸಿನ ಹುಡಿ ಮತ್ತು ಅರಿಶಿನದ ಮಿಶ್ರಣವು ಗಂಟಲನ್ನು ಶಮನಗೊಳಿಸಿ ಕೆಮ್ಮು ಹಾಗೂ ಶೀತದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳು ಹೇಳಿವೆ. ಬಿಸಿ ಹಾಲು ಗಂಟಲಿನಲ್ಲಿರುವಂತಹ ಕಫವನ್ನು ದೂರ ಮಾಡುತ್ತದೆ. ಇದರಿಂದ ಕೆಮ್ಮು ಹಾಗೂ ಗಂಟಲಿನಲ್ಲಿ ಉಂಟಾಗುವಂತಹ ಕಿರಿಕಿರಿ ಕಡಿಮೆಯಾಗಿ ಪರಿಹಾರ ಸಿಗುತ್ತದೆ. 

Turmeric milk
 

ಅರಿಶಿನ ಮತ್ತು ಕರಿಮೆಣಸಿನಲ್ಲಿ ಉರಿಯೂತ ಶಮನಕಾರಿ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇರುವ ಕಾರಣದಿಂದ ಬ್ಯಾಕ್ಟೀರಿಯಾದಿಂದ ಆಗುವಂತಹ ಸೋಂಕವನ್ನು ನಿವಾರಣೆ ಮಾಡುತ್ತದೆ. ಇದರಿಂದ ಸಾಮಾನ್ಯ ಶೀತ ಹಾಗೂ ಕೆಮ್ಮನ್ನು ಶಮನ ಮಾಡುತ್ತದೆ.

cough

ಮುಂದಿನ ಸಲ ನಿಮಗೆ ಕೆಮ್ಮು ಹಾಗೂ ಶೀತ ಕಾಣಿಸಿಕೊಂಡರೆ ಅರಿಶಿನ, ಕರಿಮೆಣಸಿನ ಹುಡಿ ಹಾಕಿ ಬಿಸಿ ಹಾಲು ಕುಡಿಯಿರಿ. ಇದು ಖಂಡಿತವಾಗಿಯೂ ನಿಮ್ಮ ಶೀತ ಹಾಗೂ ಕೆಮ್ಮನ್ನು ನಿವಾರಿಸುವುದು.

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Saturday, November 26, 2016, 10:33 [IST]
English summary

Can Hot Milk With Haldi & Pepper Actually Treat Cough?

Many a times, certain home remedies for disorders make us question whether they are just one of those numerous myths that exist everywhere, or if they actually do what they say, right?Most of us would have tried home remedies for certain ailments and disorders that would not have worked well for us, discouraging us from trying other natural remedies!
Please Wait while comments are loading...
Subscribe Newsletter