ಆರೋಗ್ಯ ರಕ್ಷಕ- 'ತುಳಸಿ ಎಲೆಯ' ಜಬರ್ದಸ್ತ್ ಪವರ್

By: Arshad
Subscribe to Boldsky

ತಾರುಣ್ಯದಲ್ಲಿದ್ದ ಶಕ್ತಿ ವಯಸ್ಸಾಗುತ್ತಿದ್ದಂತೆಯೇ ಉಡುಗುತ್ತಾ ಬರುತ್ತದೆ. ಆದರೆ ಇದು ಅತಿ ಕಡಿಮೆಯಾಗಿದೆ ಎಂದು ಅನ್ನಿಸಿದರೆ ಅಜ್ಜಿಯ ಈ ಮನೆಮದ್ದು ನಿಮ್ಮ ನೆರವಿಗೆ ಬರಬಲ್ಲುದು. ನಮ್ಮ ಹಿರಿಯರು ದಿನದ ಪ್ರಥಮ ಆಹಾರಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದ್ದರು. ಅದರಲ್ಲೂ ಘನ ಆಹಾರದ ಬದಲು ದ್ರವಾಹಾರ ಮತ್ತು ತುಳಸಿ ಎಲೆಗಳನ್ನು ತಿನ್ನುವುದಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದರು. ದಿನನಿತ್ಯ ತುಳಸಿ ಬೆರೆಸಿದ ಹಾಲು ಕುಡಿಯಿರಿ- ಆರೋಗ್ಯ ಪಡೆಯಿರಿ 

ಆರೋಗ್ಯವನ್ನು ವೃದ್ಧಿಸುವ ಮತ್ತು ದಿನದ ಚೈತನ್ಯವನ್ನು ಮರುಕಳಿಸಲು ಸಮರ್ಥವಿರುವ ಒಂದು ಪೇಯ ನಮ್ಮ ಅಜ್ಜಿಯ ಮನೆಮದ್ದಿನಲ್ಲಿ ಪ್ರಮುಖವಾಗಿತ್ತು. ಇದನ್ನು ತಯಾರಿಸುವುದು ಬಹಳ ಸುಲಭ. ಒಂದು ಲೋಟ ತಣ್ಣೀರಿನಲ್ಲಿ ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿದ ನಾಲ್ಕೈದು ತುಳಸಿ ಎಲೆಗಳನ್ನು ಜಜ್ಜಿ ಹಾಕಿ ಮತ್ತು ಒಂದು ದೊಡ್ಡಚಮಚ ಜೇನು ಬೆರೆಸಿ ಚೆನ್ನಾಗಿ ಕಲಕಿ ದಿನದ ಪ್ರಥಮ ಆಹಾರವಾಗಿ ಎಲೆಗಳ ಸಹಿತ ಈ ನೀರನ್ನು ಗಟಗಟ ಕುಡಿದರಾಯಿತು ಅಷ್ಟೇ.

ಬಳಿಕ ಸುಮಾರು ಮುಕ್ಕಾಲು ಗಂಟೆಯವರೆಗೂ ಏನನ್ನೂ ಸೇವಿಸಬಾರದು. ಬಳಿಕ ಅಲ್ಪ ಉಪಾಹಾರ ಸೇವಿಸಿ ದಿನದ ಚಟುವಟಿಕೆಗಳನ್ನು ಪ್ರಾರಂಭಿಸಿದರೆ ಆರೋಗ್ಯವೂ ವೃದ್ಧಿಸುತ್ತದೆ ಹಾಗೂ ಯೌವನವೂ ಮರುಕಳಿಸುತ್ತದೆ. ಬನ್ನಿ, ಈ ಪೇಯದ ಪರಿಣಾಮಗಳೇನು ಎಂಬುದನ್ನು ನೋಡೋಣ....   

ರೋಗನಿರೋಧಕ ವ್ಯವಸ್ಥೆ ಉತ್ತಮಗೊಳ್ಳುತ್ತದೆ

ಇದರಲ್ಲಿರುವ ನೈಸರ್ಗಿಕ ಪೋಷಕಾಂಶಗಳು ನಮ್ಮ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುವ ಜೊತೆಗೇ ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ.

ಸಾಮಾನ್ಯ ಶೀತವನ್ನು ಕಡಿಮೆ ಮಾಡುತ್ತದೆ

ಈ ಅದ್ಭುತ ಪೇಯ ವೈರಸ್ಸುಗಳ ಧಾಳಿಯಿಂದ ರಕ್ಷಿಸಲು ನಮ್ಮ ರೋಗ ನಿರೋಧಕ ಶಕ್ತಿ ಪ್ರಯೋಗಿಸುವ ಅಸ್ತ್ರವಾದ ಶೀತ ನೆಗಡಿಗಳನ್ನೂ ಕಡಿಮೆ ಮಾಡುತ್ತದೆ. ಏಕೆಂದರೆ ದೇಹವನ್ನು ಪ್ರವೇಶಿಸುವ ಹಲವು ಕೀಟಾಣು, ವೈರಸ್ಸುಗಳನ್ನು ತುಳಸಿಯಲ್ಲಿರುವ ಪೋಷಕಾಂಶಗಳು ಸಮರ್ಥವಾಗಿ ಎದುರಿಸುತ್ತವೆ.  ಆರೋಗ್ಯ ರಕ್ಷಕ- ತುಳಸಿ ಎಲೆಯ ವೈಶಿಷ್ಟ್ಯ ಒಂದೇ, ಎರಡೇ?

ಕೆಮ್ಮಿಗೂ ಉತ್ತಮವಾಗಿದೆ

ತುಳಸಿ ಎಲೆಗಳು ಮತ್ತು ಜೇನಿನ ಮಿಶ್ರಣ ಕೆಮ್ಮಿಗೆ ಅತ್ಯುತ್ತಮವಾದ ಔಷಧಿಯಾಗಿದ್ದು ಇದರಿಂದ ಸತತವಾಗಿ ಕಾಡುವ ಕೆಮ್ಮು ಮತ್ತು ಇತರ ಶ್ವಾಸ ಸಂಬಂಧಿ ತೊಂದರೆಗಳು ಇಲ್ಲವಾಗುತ್ತವೆ. ಈ ದ್ರವ ಒಂದು ನೈಸರ್ಗಿಕ ಕಫನಿವಾರಕವೂ ಆಗಿದೆ.

ಅಲರ್ಜಿಗಳನ್ನು ಕಡಿಮೆ ಮಾಡುತ್ತದೆ

ತುಳಸಿ ಮತ್ತು ಜೇನಿನ ಮಿಶ್ರಣದ ಈ ಪೇಯದಲ್ಲಿ ಪ್ರತಿಜೀವಕ ಮತ್ತು ಕೀಟಾಣುನಿರೋಧಕ ಗುಣಗಳಿರುವ ಕಾರಣ ಚರ್ಮದ ಪೋಷಣೆಗೆ ನೆರವಾಗುತ್ತದೆ ಹಾಗೂ ಇದರ ಮೂಲಕ ಎದುರಾಗುವ ಅಲರ್ಜಿಗಳಿಂದ ರಕ್ಷಿಸುತ್ತದೆ.

ವೃದ್ಧಾಪ್ಯವನ್ನು ಮುಂದೂಡುತ್ತದೆ

ಈ ಉತ್ತಮ ಮನೆಮದ್ದಿನಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ನುಗಳು, ಪೋಷಕಾಂಶಗಳು ಮತ್ತು ಆಂಟಿ ಆಕ್ಸಿಡೆಂಟುಗಳಿರುವ ಕಾರಣ ಇವು ಸವೆದ ಜೀವಕೋಶಗಳ ಬದಲಿಗೆ ಹೊಸ ಜೀವಕೋಶಗಳು ಹುಟ್ಟಲು ನೆರವಾಗುತ್ತವೆ. ಪರಿಣಾಮವಾಗಿ ಚರ್ಮದ ಸೆಳೆತ ಹೆಚ್ಚುತ್ತದೆ ಮತ್ತು ವೃದ್ಧಾಪ್ಯ ತಡವಾಗುತ್ತದೆ.

ಮೂತ್ರಪಿಂಡದ ಕಲ್ಲುಗಳನ್ನು ಕರಗಿಸುತ್ತದೆ

ಈ ದ್ರವದ ಸೇವನೆಯಿಂದ ವಿಶೇಷವಾಗಿ ಮೂತ್ರಪಿಂಡಗಳಲ್ಲಿ ಆಗಿರುವ ಕಲ್ಲುಗಳು ನಿಧಾನವಾಗಿ ಕರಗತೊಡಗುತ್ತವೆ. ಪರಿಣಾಮವಾಗಿ ಮೂತ್ರಪಿಂಡಗಳ ಕ್ಷಮತೆ ಹೆಚ್ಚುತ್ತದೆ ಮತ್ತು ದೇಹದಲ್ಲಿ ಉಳಿಯಬಹುದಾಗಿದ್ದ ವಿಷಕಾರಿ ವಸ್ತುಗಳು ಸುಲಭವಾಗಿ ವಿಸರ್ಜನೆಗೊಂಡು ಆರೋಗ್ಯ ವೃದ್ಧಿಸುತ್ತದೆ.  ಜ್ವರ-ಶೀತಕ್ಕೆ ಮನೆಯಂಗಳದ ತುಳಸಿ ಎಲೆಗಳೇ ಸಾಕು!

ಹೃದಯದ ಕ್ಷಮತೆ ಹೆಚ್ಚಿಸುತ್ತದೆ

ಈ ಪೇಯದ ಸೇವನೆಯಿಂದ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಇದರಿಂದ ರಕ್ತಪರಿಚಲನೆ ಉತ್ತಮಗೊಂಡು ಹೃದಯಯ ಮೇಲೆ ಬೀಳಬಹುದಾಗಿದ್ದ ಒತ್ತಡದಿಂದ ರಕ್ಷಣೆ ದೊರಕಿದಂತಾಗುತ್ತದೆ.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Thursday, September 8, 2016, 23:31 [IST]
English summary

Benifits of Eating Tulsi leaves With Honey Every Morning?

Just take about 4-5 leaves of tulsi in a cup, clean them well, add a tablespoon of honey to the cup, over the leaves. You can now mix the ingredients with a finger and your health remedy is ready to be consumed. Consume this health recipe every morning, before breakfast, to notice the amazing difference it will bring to your body. read more...
Please Wait while comments are loading...
Subscribe Newsletter