For Quick Alerts
ALLOW NOTIFICATIONS  
For Daily Alerts

ದಿನಕ್ಕೆ ಒಂದೆರಡು 'ನೆನೆಸಿಟ್ಟ ಬಾದಾಮಿ' ಸೇವಿಸಿ-ಆರೋಗ್ಯ ಪಡೆಯಿರಿ

ಬಾದಾಮಿ ಬೀಜದ ಹೊರಮೈಯ್ಯನ್ನು ಸುಲಭವಾಗಿ ತೆಗೆದುಹಾಕುವ ನಿಟ್ಟಿನಲ್ಲಿ ನಾವು ಈ ಕಾಳುಗಳನ್ನು ನೀರಿನಲ್ಲಿ ನೆನೆಸಿಡಬೇಕಾಗುತ್ತದೆ. ನೀರಿನಲ್ಲಿ ನೆನೆಹಾಕಿದ ಬಾದಾಮಿ ಕಾಳುಗಳ ಸೇವನೆಯು ನಿಜಕ್ಕೂ ಅನೇಕ ಆಯಾಮಗಳಲ್ಲಿ ಉಪಯೋಗವಾಗುತ್ತದೆ...

By Manu
|

ಬಾದಾಮಿ ಬಗ್ಗೆ ತಿಳಿಯದವರು ತುಂಬಾ ಕಡಿಮೆ. ಬಾದಾಮಿಯಲ್ಲಿರುವ ಪೋಷಕಾಂಶಗಳು ನಮ್ಮ ದೇಹದ ಆರೋಗ್ಯಕ್ಕೆ ತುಂಬಾ ಸಹಕಾರಿ. ಬಾದಾಮಿಯು ಮೆದುಳಿಗೆ ಕೂಡ ಒಳ್ಳೆಯದು. ಮರದಲ್ಲಿ ಬೆಳೆಯುವ ಬಾದಾಮಿಯ ಹಣ್ಣಿನಿಂದ ಬೀಜ ತೆಗೆಯಲಾಗುತ್ತದೆ. ಇದರಲ್ಲಿ ಕೆಲವು ಬಾದಾಮಿ ಸಿಹಿ ಹಾಗೂ ಇನ್ನು ಕೆಲವು ಕಹಿಯಾಗಿರುವುದು. ಕಹಿ ಬಾದಾಮಿಯನ್ನು ಎಣ್ಣೆ ತಯಾರಿಸಲು ಬಳಸಲಾಗುತ್ತದೆ. ಅದೇ ಸಿಹಿ ಬಾದಾಮಿ ತಿನ್ನಲು ಹಾಗೂ ಆಹಾರದಲ್ಲಿ ಬಳಸುತ್ತಾರೆ. ಬಾದಾಮಿಯಲ್ಲಿ ಉನ್ನತ ಮಟ್ಟದ ಪೋಷಕಾಂಶಗಳಿವೆ. ಇದರಲ್ಲಿ ಪ್ರಮುಖ ಪ್ರೋಟೀನ್ ಗಳಾದ ಒಮೆಗಾ-3, ಕೊಬ್ಬಿನಾಮ್ಲ, ಒಮೆಗಾ-6 ಕೊಬ್ಬಿನಾಮ್ಲ, ವಿಟಮಿನ್ ಇ, ಕ್ಯಾಲ್ಸಿಯಂ, ಫೋಸ್ಪರಸ್, ಸತು, ಹೀರಿಕೊಳ್ಳುವ ಮತ್ತು ಹೀರಿಕೊಳ್ಳದ ನಾರಿನಾಂಶಗಳಿವೆ.

ತಿನ್ನುವಾಗ ಕುರುಕುರು ಆಗುವಂತಹ ಬಾದಾಮಿಯನ್ನು ಹಾಗೆ ತಿನ್ನಬಹುದು. ಇದನ್ನು ಹಲವಾರು ಸಿಹಿ ತಿಂಡಿಗಳಿಗೆ ಬಳಸುತ್ತಾರೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಾ ಇರುವವರಿಗೆ ಇದು ತುಂಬಾ ಸಹಕಾರಿ. ಕಚ್ಚಾ ಬಾದಾಮಿ ತಿನ್ನುವ ಬದಲು ನೆನೆಸಿಟ್ಟ ಬಾದಾಮಿ ತಿಂದರೆ ಅದರಿಂದ ಹೆಚ್ಚಿನ ಲಾಭಗಳು ಇವೆ ಎಂದು ಪೋಷಕಾಂಶ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬಾದಾಮಿ ನೆನೆಸಿಟ್ಟು ತಿಂದರೆ ಆಗ ಅದರಲ್ಲಿನ ವಿಷಕಾರಿ ಅಂಶವು ಹೊರಹೋಗುವುದು, ಫೈಟಿಕ್ ಆಮ್ಲ ಬಿಡುಗಡೆ ಮಾಡುವುದು ಮತ್ತು ಗ್ಲುಟೇನ್ ಅಂಶವನ್ನು ನಾಶ ಮಾಡುವುದು. ಇದರಿಂದ ಬಾದಾಮಿಯಿಂದ ನೀವು ಹೆಚ್ಚಿನ ಪೋಷಕಾಂಶಗಳನ್ನು ಪಡೆಯಬಹುದು. ನೆನೆಸಿಟ್ಟ ಬಾದಾಮಿಯಿಂದ ಆಗುವಂತಹ ಕೆಲವೊಂದು ಆರೋಗ್ಯ ಲಾಭಗಳ ಬಗ್ಗೆ ನಾವಿಲ್ಲಿ ತಿಳಿದುಕೊಳ್ಳುವ....

ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ

ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ

ನೆನೆಸಿಟ್ಟ ಬಾದಾಮಿಯಲ್ಲಿ ಲೈಪೇಸ್ (lipase) ಎಂಬ ಕಿಣ್ವ ಬಿಡುಗಡೆಯಾಗುತ್ತದೆ. ಈ ಕಿಣ್ವ ಜೀರ್ಣಕ್ರಿಯೆಯನ್ನು ಸುಲಭವಾಗಿಸುತ್ತದೆ. ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಟಾಪ್ 20 ಟಿಪ್ಸ್

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಕೆಲವೇ ಆಹಾರಗಳಲ್ಲಿ ಬಾದಾಮಿ ಮುಂಚೂಣಿಯಲ್ಲಿದೆ. ಅಲ್ಲದೇ ಇದು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಅಧಿಕಗೊಳಿಸಿ ಒಟ್ಟಾರೆ ರಕ್ತದ ಕೊಲೆಸ್ಟ್ರಾಲ್ ಮಟ್ಟ ಸಮತೋಲನದಲ್ಲಿರಿಸುವ ಮೂಲಕ ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಮಾರಕ ಕೊಲೆಸ್ಟ್ರಾಲ್ ಬಗ್ಗೆ ಇರುವ ಅಚ್ಚರಿಯ ಸಂಗತಿಗಳು

ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ಬಾದಾಮಿಯನ್ನು ನೆನೆಸಿದ ಬಳಿಕ ಇದರಲ್ಲಿ ಆಲ್ಫಾ ಟೋಕೋಫೆರಾಲ್ ಎಂಬ ರಾಸಾಯನಿಕ ಉತ್ಪತ್ತಿಯಾಗುತ್ತದೆ. ಇದು ರಕ್ತದ ಒತ್ತಡವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಧಿಕ ರಕ್ತದೊತ್ತಡ ತಡೆಯಲು ಗಿಡಮೂಲಿಕೆಗಳು

ಅಧಿಕ ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ಅಧಿಕ ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ಇದರಲ್ಲಿರುವ ಅಸಂತುಲಿತ ಕೊಬ್ಬು (monosaturated fat) ಹೊಟ್ಟೆಯಲ್ಲಿ ಅತಿ ನಿಧಾನವಾಗಿ ಜೀರ್ಣವಾಗುವ ಮೂಲಕ ಹೆಚ್ಚು ಹೊತ್ತಿನವರೆಗೆ ಹೊಟ್ಟೆ ತುಂಬಿರುವ ಸೂಚನೆಯನ್ನು ನೀಡುತ್ತಿರುತ್ತದೆ. ಇದೇ ಕಾರಣದಿಂದ ಅನಗತ್ಯವಾಗಿ ಸಿದ್ಧ ಆಹಾರಗಳನ್ನು ಸೇವಿಸುವುದು ಬೇಡಬಾಗಿ ತೂಕ ಇಳಿಸುವ ಕ್ರಿಯೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರಕುತ್ತದೆ.

ವೃದ್ಧಾಪ್ಯವನ್ನು ದೂರಾಗಿಸುತ್ತದೆ

ವೃದ್ಧಾಪ್ಯವನ್ನು ದೂರಾಗಿಸುತ್ತದೆ

ಬಾದಾಮಿಯಲ್ಲಿರುವ ಆಂಟಿ ಆಕ್ಸಿಡೆಂಟುಗಳ ಪ್ರಮಾಣ ನೆನೆಸಿದ ಬಳಿಕ ಇನ್ನಷ್ಟು ಹೆಚ್ಚುವ ಕಾರಣ ದೇಹದಲ್ಲಿ ಕ್ಯಾನ್ಸರ್‪ಗೆ ಕಾರಣವಾಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡಲು ದೇಹ ಹೆಚ್ಚಿನ ಸಾಮರ್ಥ್ಯ ಪಡೆಯುತ್ತದೆ. ಇದು ಚರ್ಮದಲ್ಲಿ ನೆರಿಗೆ ಮೂಡುವುದನ್ನುತಡವಾಗಿಸಿ ವೃದ್ಧಾಪ್ಯವನ್ನೂ ತಡವಾಗಿಸುತ್ತದೆ. ಅಚ್ಚರಿಯಾದರೂ ನಿಜ, ವೃದ್ಧಾಪ್ಯಕ್ಕೆ ಇವೇ ಕಾರಣ..

ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ

ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ

ಕೆಲವು ಸಂಶೋಧನೆಗಳ ಮೂಲಕ ನೆನೆಸಿಟ್ಟ ಬಾದಾಮಿಯನ್ನು ನಿಯಮಿತವಾಗಿ ಸೇವಿಸುವ ಮೂಲಕ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿಡಬಹುದೆಂಬುದನ್ನು ಕಂಡುಕೊಳ್ಳಲಾಗಿದೆ.

 ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ಅಪರೂಪವಾಗಿರುವ ವಿಟಮಿನ್ B17 ಎಂಬ ಪೋಷಕಾಂಶ ಬಾದಾಮಿಯಲ್ಲಿದ್ದರೂ ನೆನೆಸಿಟ್ಟ ಬಳಿಕವೇ ಲಭ್ಯವಾಗುತ್ತದೆ. ಈ ಪೋಷಕಾಂಶಕ್ಕೆ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣವಿದ್ದು ಪ್ರತಿದಿನವೂ ನಾಲ್ಕಾರು ನೆನೆಸಿಟ್ಟ ಬಾದಾಮಿಗಳನ್ನು ತಿನ್ನುವ ಮೂಲಕ ಹಲವು ಬಗೆಯ ಕ್ಯಾನ್ಸರ್‌ಗಳಿಂದ ರಕ್ಷಣೆ ಪಡೆಯಬಹುದು. ಕ್ಯಾನ್ಸರ್, ಮಧುಮೇಹ ನಿಯಂತ್ರಿಸುವ ಪವರ್ ನುಗ್ಗೆಸೊಪ್ಪಿನಲ್ಲಿದೆ

 ಹುಟ್ಟಿನಿಂದ ಬರುವ ಊನಗಳಿಂದ ರಕ್ಷಣೆ ಪಡೆಯಬಹುದು

ಹುಟ್ಟಿನಿಂದ ಬರುವ ಊನಗಳಿಂದ ರಕ್ಷಣೆ ಪಡೆಯಬಹುದು

ನೆನೆಸಿಟ್ಟ ಬಾದಾಮಿಗಳನ್ನು ಸೇವಿಸುವ ಮೂಲಕ ದೇಹದಲ್ಲಿ ಫೋಲಿಕ್ ಆಮ್ಲ ಎಂಬ ರಾಸಾಯನಿಕ ಉತ್ಪತ್ತಿಯಾಗುತ್ತದೆ. ಇದು ವಿಶೇಷವಾಗಿ ಗರ್ಭಿಣಿಯರಿಗೆ ಅತಿ ಉತ್ತಮವಾಗಿದ್ದು ಇದರಿಂದ ಹುಟ್ಟುವ ಮಗು ಯಾವುದೇ ಊನವಿಲ್ಲದೇ ಆರೋಗ್ಯಕರವಾಗಿ ಜನಿಸಲು ನೆರವಾಗುತ್ತದೆ.

English summary

Benefits and Uses Of Soaked Almonds which should surprise you

he health benefits of soaked almonds are almost unlimited. Here, we have put together some of the most important medicinal values of this ‘wonder food’:
X
Desktop Bottom Promotion