For Quick Alerts
ALLOW NOTIFICATIONS  
For Daily Alerts

ಬಾದಾಮಿ: ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು!

By Manu
|

ಅನಾದಿ ಕಾಲದಿಂದಲೂ ಮಾನವ ಪ್ರತಿಯೊಂದರಲ್ಲೂ ಸಂಶೋಧನೆ ಮಾಡುತ್ತಲೇ ಬಂದಿದ್ದಾನೆ. ತಾನು ತಿನ್ನುವ ಆಹಾರದಿಂದ ಹಿಡಿದು ಬಳಸುವ ಸಾಧನಗಳಲ್ಲೂ ಆತನ ಸಂಶೋಧನೆ ನಡೆದಿದೆ ಮತ್ತು ಅದು ಮುಂದುವರಿಯುತ್ತಲೇ ಇದೆ. ನಾವು ತಿನ್ನುವಂತಹ ಆಹಾರಗಳ ಬಗ್ಗೆ ಪ್ರತೀ ದಿನವೂ ಸಂಶೋಧನೆಗಳು ನಡೆಯುತ್ತಲೇ ಇರುತ್ತದೆ ಮತ್ತು ಅದರಿಂದ ಏನಾದರೂ ವರದಿಗಳು ಬರುತ್ತಿರುತ್ತದೆ.

ಆಹಾರದಲ್ಲಿರುವ ವಿವಿಧ ರೀತಿಯ ಪೋಷಕಾಂಶಗಳು ಮತ್ತು ವಿಟಮಿನ್‌ಗಳಿಂದ ನಮ್ಮ ದೇಹಕ್ಕೆ ಯಾವ ರೀತಿಯ ಲಾಭವಿದೆ ಎನ್ನುವುದನ್ನು ಈ ಸಂಶೋಧನೆಗಳಿಂದ ತಿಳಿದುಕೊಳ್ಳುತ್ತೇವೆ.

Benefits Of Eating Almonds For The Brain

ಬಾದಾಮಿಯ ಬಗ್ಗೆ ವಿಜ್ಞಾನಿಗಳು ನಡೆಸಿರುವಂತಹ ಸಂಶೋಧನೆಯಲ್ಲಿ ಅದರಲ್ಲಿರುವಂತಹ ಪೋಷಕಾಂಶಗಳು ಮೆದುಳಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದು ತಿಳಿದುಬಂದಿದೆ. ಈ ಸಂಶೋಧನೆಯಲ್ಲಿ ಕಂಡುಬಂದ ಬಾದಾಮಿಯಿಂದ ಮೆದುಳಿಗೆ ಆಗುವ ಪ್ರಯೋಜನಗಳು ಯಾವುದೆಂದು ತಿಳಿಯಲು ಈ ಲೇಖನವನ್ನು ಓದುತ್ತಾ ಹೋಗಿ. ಬಾದಾಮಿಯಿಂದ ಹಲವಾರು ರೀತಿಯ ಆರೋಗ್ಯ ಲಾಭಗಳೊಂದಿಗೆ ಮೆದುಳಿಗೂ ಲಾಭವಿದೆ. ಇದನ್ನು ನಿಮ್ಮ ಮಗುವಿನ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ನೆನೆಸಿಟ್ಟ ಬಾದಾಮಿ ಬೀಜದ ಚಮತ್ಕಾರಕ್ಕೆ ಬೆರಗಾಗಲೇಬೇಕು!

ಪ್ರೋಟೀನ್‌ಗಳ ಆಗರ
ಬಾದಾಮಿಯಲ್ಲಿರುವಂತಹ ಪ್ರೋಟೀನ್‌ಗಳು ಮೆದುಳಿಗೆ ತುಂಬಾ ಒಳ್ಳೆಯದೆಂದು ಸಾಬೀತಾಗಿದೆ. ಇದು ಮೆದುಳಿಗೆ ಶಕ್ತಿಯನ್ನು ಒದಗಿಸುವುದು ಮಾತ್ರವಲ್ಲದೆ ಮೆದುಳಿಗೆ ಆಗಿರುವಂತಹ ಸಣ್ಣಪುಟ್ಟ ತೊಂದರೆಗಳನ್ನು ಇದು ನಿವಾರಿಸುತ್ತದೆ. ಇದು ಮೆದುಳಿನ ಜ್ಞಾನದ ಕ್ರಿಯೆಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ನಿರ್ಹಹಿಸುತ್ತದೆ. ನೆನಪಿನ ಶಕ್ತಿಯ ಸಾಮರ್ಥ್ಯವನ್ನು ವೃದ್ಧಿಸಲು ಇದು ನೆರವಾಗುವುದು.

ಬಾದಾಮಿಯಲ್ಲಿ ಒಳ್ಳೆಯ ಗುಣಮಟ್ಟದ ಸತು ಲಭ್ಯ
ದೇಹದ ಬೆಳವಣಿಗೆಗೆ ಅದರಲ್ಲೂ ಮೆದುಳಿಗೆ ಖನಿಜಾಂಶವಾಗಿರುವ ಸತು ಅಗತ್ಯವಾಗಿ ಬೇಕೇಬೇಕು. ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದರೊಂದಿಗೆ ಇದರಲ್ಲಿನ ಬಲಿಷ್ಠವಾಗಿರುವ ಆ್ಯಂಟಿ ಆಕ್ಸಿಡೆಂಟ್ ಗಳು ಮಾನವನ ದೇಹದ ರಕ್ತದಲ್ಲಿರುವ ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು. ಫ್ರೀ ರ್ಯಾಡಿಕಲ್ ಮೆದುಳಿನ ಕೋಶಗಳಿಗೆ ಹಾನಿ ಮಾಡುವ ಕಾರಣ ಅವುಗಳನ್ನು ನಿಯಂತ್ರಣದಲ್ಲಿಟ್ಟು ಮೆದುಳಿನ ಆರೋಗ್ಯವನ್ನು ಹೆಚ್ಚಿಸುವುದು.

ವಿಟಮಿನ್
ಮೆದುಳಿನ ಕ್ರಿಯೆಗಳು ಆರೋಗ್ಯಕರವಾಗಿ ಸಾಗಲು ಬೇಕಾಗುವಂತಹ ವಿಟಮಿನ್ ಗಳು ಬಾದಾಮಿಯಲ್ಲಿ ಸಮೃದ್ಧವಾಗಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಬಾದಾಮಿಯಲ್ಲಿರುವ ವಿಟಮಿನ್ ಬಿ6 ಮೆದುಳಿನ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳುವುದು. ಬಾದಾಮಿಯನ್ನು ತಿನ್ನುವುದರಿಂದ ಮೆದುಳಿನ ಬೆಳವಣಿಗೆಯಾವುದು, ನೆನಪಿನ ಶಕ್ತಿ ಹೆಚ್ಚಾಗುವುದು ಮಾತ್ರವಲ್ಲದೆ ಅದರಲ್ಲಿರುವ ವಿಟಮಿನ್ ಮೆದುಳಿಗೆ ವಯಸ್ಸಾಗದಂತೆ ನೋಡಿಕೊಳ್ಳುವುದು. ಈ ಕಾರಣದಿಂದಾಗಿ ಮನುಷ್ಯನ ದೇಹಕ್ಕೆ ವಯಸ್ಸಾದರೂ ಮೆದುಳಿಗೆ ವಯಸ್ಸಾಗುವುದಿಲ್ಲ. ವಿಟಮಿನ್ ಇ ಮೆದುಳಿನ ಜ್ಞಾನ ಶಕ್ತಿಯನ್ನು ಮತ್ತಷ್ಟು ವೃದ್ಧಿಸುತ್ತದೆ.

English summary

Benefits Of Eating Almonds For The Brain

Most of the living beings depend on plants as a source of food. Even man, the wisest living being on this planet, depends on the green plants and trees for food and its various nutrients. Various plant products, including leaves, fruits and vegetables have different nutritive values and they fulfill the demand of the human body. Like various tree and plant products, almonds have some great nutritive values for the human body.
Story first published: Wednesday, August 3, 2016, 20:29 [IST]
X
Desktop Bottom Promotion