For Quick Alerts
ALLOW NOTIFICATIONS  
For Daily Alerts

ಸೊಳ್ಳೆ ಕಡಿತದ ಉರಿ ಶಮನಕ್ಕೆ ಒಂದು ಬಾಳೆಹಣ್ಣು ಸಾಕು!

By Arshad
|

ಕೆಲವರ ರಕ್ತ ಹೆಚ್ಚು ರುಚಿ ಎಂದೋ ಏನೋ, ಅವರನ್ನೇ ಹುಡುಕಿ ಸೊಳ್ಳೆಗಳು ಕಚ್ಚುತ್ತವೆ. ಇದರರ್ಥ ಇತರರನ್ನು ಕಚ್ಚುವುದಿಲ್ಲ ಎಂದಲ್ಲ, ಆದರೆ ಕೆಲವು ರಕ್ತದ ಗುಂಪಿನವರನ್ನು ಹೆಚ್ಚು ಕಚ್ಚುತ್ತವೆ. ಕಚ್ಚಿದ ಬಳಿಕ ಚರ್ಮದಲ್ಲಿ ಏಳುವ ದದ್ದು, ಇಲ್ಲಿ ಉಂಟಾಗುವ ಅಸಾಧ್ಯ ಉರಿ ಈ ಸೊಳ್ಳೆಗಳನ್ನೇ ನಿರ್ನಾಮ ಮಾಡುವ ಕುರಿತು ಮನದಲ್ಲಿ ಛಲ ಹುಟ್ಟಿಸುತ್ತವೆ. ಸೊಳ್ಳೆ ಕಡಿತದಿಂದ ಪಾರಾಗಬೇಕೆ?

mosquito bite

ಆದರೆ ಹೆಚ್ಚಿನವರು ಈ ಆರಂಭಶೂರತ್ವವನ್ನು ಮೆರೆದು ಕೊಂಚ ಸಮಯದಲ್ಲಿಯೇ ಮರೆತು ಬಿಡುತ್ತಾರೆ. ಆದರೆ ಸೊಳ್ಳೆಗಳು ಮಕ್ಕಳಿಗೆ ಕಚ್ಚಿದರೆ ಉರಿ ತಾಳಲಾರದೇ ಅಳುವ ಮಕ್ಕಳನ್ನು ನೋಡಿದಾಗ ಮಾತ್ರ ಕರುಳು ಚುರ್ರೆನ್ನದಿರುವುದಿಲ್ಲ. ಸೊಳ್ಳೆಗಳನ್ನು ಓಡಿಸಲೆಂದು ಹಿಂದೆ ಮಾಸ್ಕ್ವಿಟೋ ಕಾಯಿಲ್ ಎಂಬ ಹೊಗೆಬತ್ತಿಗಳು ಬಹಳವಾಗಿ ಪ್ರಚಲಿತವಿದ್ದವು. ಸೊಳ್ಳೆ ಕಡಿತಗಳಿಂದ ಪಾರಾಗಲು ಕೆಲ ಸಲಹೆಗಳು

ಕ್ರಮೇಣ ಇವುಗಳ ಸ್ಥಾನವನ್ನು ಮೆಷೀನುಗಳೂ, ದ್ರವಗಳನ್ನು ಆವಿಯಾಗಿಸುವ ಉಪಕರಣಗಳೂ ಆಕ್ರಮಿಸಿವೆ. ಸೊಳ್ಳೆಗಳನ್ನು ನಿಗ್ರಹಿಸುವುದು ಅಷ್ಟು ಸುಲಭವಲ್ಲ. ಇದಕ್ಕೆ ಊರಿಗೇ ಊರೇ ಜೊತೆಯಾಗಬೇಕಾಗುತ್ತದೆ. ಸದ್ಯಕ್ಕೆ ಅಂತಹ ಯಾವುದೇ ಪ್ರಯತ್ನ ಇಲ್ಲದಿದ್ದರೆ ನಿಮ್ಮ ಮನೆಗೆ ಸೊಳ್ಳೆಗಳು ಪ್ರವೇಶಿಸದಂತೆ ಎಚ್ಚರಿಕೆ ವಹಿಸುವುದೇ ಅನಿವಾರ್ಯ ಮಾರ್ಗ.

ಆದರೂ ಒಂದು ವೇಳೆ ಸೊಳ್ಳೆ ಕಚ್ಚಿಯೇ ಬಿಟ್ಟಿದ್ದರೆ ಇದರ ಉರಿ ಮತ್ತು ದದ್ದುಗಳನ್ನು ಶಮನಗೊಳಿಸಲು ಕೆಲವಾರು ವಿಧಾನಗಳಿವೆ. ಈ ಅಸಾಧ್ಯ ಉರಿಯನ್ನು ತಕ್ಷಣವೇ ಕಡಿಮೆಗೊಳಿಸಲು ಏನೂ ಸಿಗದಿದ್ದರೆ ಬಾಳೆಹಣ್ಣೇ ಸಾಕು. ಬಾಳೆಹಣ್ಣಿನ ತಿರುಳು ಮಾತ್ರವಲ್ಲ, ಸಿಪ್ಪೆಯ ಒಳಭಾಗವೂ ಈ ಉರಿಯನ್ನು ಶಮನಗೊಳಿಸಲು ಸಶಕ್ತವಾಗಿವೆ. ಸಿಪ್ಪೆಯ ಮೇಲೆ ಚುಕ್ಕೆ ಬಿದ್ದ ಬಾಳೆಹಣ್ಣಿನ ಅದ್ಭುತ ಪವರ್....

ಸೊಳ್ಳೆ ಕಚ್ಚಿದ ಕಡೆ ಚೆನ್ನಾಗಿ ಹಣ್ಣಾದ ಬಾಳೆಹಣ್ಣಿನ ತಿರುಳನ್ನು ಕೊಂಚವಾಗಿ ಸಂಗ್ರಹಿಸಿ ತೆಳುವಾಗಿ ಹಚ್ಚಿ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಇದರಿಂದ ತಕ್ಷಣವೇ ಉರಿ ಕಡಿಮೆಯಾಗಿ ದದ್ದುಗಳು ನಿಧಾನವಾಗಿ ಇಳಿಯುತ್ತವೆ.

ಇನ್ನೊಂದು ವಿಧಾನವೆಂದರೆ ಸೊಳ್ಳೆ ಕಚ್ಚಿದ ಜಾಗವನ್ನು ಮೊದಲು ಸ್ವಚ್ಛಗೊಳಿಸಿ ಬಳಿಕ ಬಾಳೆಸಿಪ್ಪೆಯ ಒಳಭಾಗ ಆವರಿಸುವಂತೆ ಈ ಭಾಗದ ಮೇಲಿರಿಸಿ ಸುಮಾರು ಐದರಿಂದ ಹತ್ತು ನಿಮಿಷದ ಬಳಿಕ ತೆಗೆಯಿರಿ. ಬಾಳೆ ಹಣ್ಣಿನ ಸಿಪ್ಪೆಯ 10 ಅದ್ಭುತ ಪ್ರಯೋಜನಗಳು

ಈ ನಡುವೆ ಬಾಳೆಸಿಪ್ಪೆಯನ್ನು ಕೊಂಚ ನಯವಾಗಿ ಸ್ವಲ್ಪ ಒತ್ತಡದೊಂದಿಗೆ ಉಜ್ಜುತ್ತಾ ಇರಬೇಕು. ಈ ವಿಧಾನದಿಂದ ಎಷ್ಟೇ ದೊಡ್ಡ ಕಡಿತವಾಗಿದ್ದರೂ ಶೀಘ್ರವೇ ಉರಿ ಕಡಿಮೆಯಾಗಿ ದದ್ದು ಇಳಿಯುತ್ತದೆ.

English summary

Banana is all you need to treat a mosquito bite

Do mosquitoes love you? I know of a few people that are more prone to mosquito bites than the others and if you are one of them you definitely don’t like the blisters and itching that follows after the mosquito has sucked some blood out of you. And if these nasty mosquitoes bite your little one, you will do everything you can to save your baby from the mosquito bites. Neem has been used to keep mosquitoes away since a very long time.
Story first published: Thursday, September 29, 2016, 19:26 [IST]
X
Desktop Bottom Promotion