For Quick Alerts
ALLOW NOTIFICATIONS  
For Daily Alerts

ಕಣ್ಣಿನ ದೃಷ್ಟಿ ಸಾಮರ್ಥ್ಯ ಕಾಪಾಡಲು ಆಯುರ್ವೇದ ಟಿಪ್ಸ್

By Hemanth
|

ಸಣ್ಣ ಮಕ್ಕಳಲ್ಲೇ ಕಣ್ಣಿನ ದೃಷ್ಟಿ ಸಮಸ್ಯೆ ಕಾಣಿಸುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದೆ. ಜೀವನಶೈಲಿ, ವಾತಾವರಣದಲ್ಲಿನ ಬದಲಾವಣೆ ಇವುಗಳಿಗೆ ಪ್ರಮುಖ ಕಾರಣವಾಗಿದೆ. ಕಣ್ಣಿನ ದೃಷ್ಟಿ ಸರಿಯಿಲ್ಲವೆಂದರೆ ಸಂಪೂರ್ಣ ದೇಹವೇ ನಿಸ್ತೇಜವಾದಂತೆ. ದೃಷ್ಟಿ ಇದ್ದರೆ ಮಾತ್ರ ನಾವು ಬಾಹ್ಯ ಲೋಕವನ್ನು ನೋಡಿಕೊಂಡು ಅದನ್ನು ಅನುಭವಿಸಲು ಸಾಧ್ಯ. ಇಲ್ಲವಾದಲ್ಲಿ ಎಲ್ಲವೂ ಕತ್ತಲೆ. ಆಧುನಿಕ ಯುಗದಲ್ಲಿ ಬಳಕೆಯಾಗುತ್ತಿರುವ ಟಿವಿ ಹಾಗೂ ಕಂಪ್ಯೂಟರ್‌ನಿಂದಾಗಿ ಕಣ್ಣಿನ ದೃಷ್ಟಿ ದೋಷವು ಸಾಮಾನ್ಯವಾಗುತ್ತಿದೆ. ದಣಿದ ಕಣ್ಣುಗಳಿಗೆ, ತ್ವರಿತ ಸಾಂತ್ವನ ನೀಡುವ ಮನೆಮದ್ದು

ವಂಶವಾಹಿನಿ, ವಯಸ್ಸಾಗುವುದು, ಕಣ್ಣಿನ ಮೇಲೆ ಬೀಳುತ್ತಿರುವ ಅತಿಯಾದ ಒತ್ತಡ ಹಾಗೂ ಪೋಷಕಾಂಶಗಳ ಕೊರತೆಯಿಂದ ಕಣ್ಣಿನ ದೃಷ್ಟಿ ಕಡಿಮೆಯಾಗಬಹುದು. ಕಣ್ಣಿನ ದೃಷ್ಟಿಯನ್ನು ಲೇಸರ್ ಚಿಕಿತ್ಸೆ, ಲೆನ್ಸ್ ಮತ್ತು ಕನ್ನಡಕಗಳಿಂದ ಸರಿಪಡಿಸಿಕೊಳ್ಳಬಹುದಾಗಿದೆ. ಆದರೆ ಆಯುರ್ವೇದದ ಮೂಲಕ ಕಣ್ಣಿನ ದೃಷ್ಟಿಯನ್ನು ಸರಿಪಡಿಸಿಕೊಳ್ಳಲು ನಿರ್ಧರಿಸಿದ್ದರೆ ನಿಮಗೆ ಕೆಲವೊಂದು ಸಲಹೆಗಳು ನಮ್ಮಲ್ಲಿವೆ. ಕೆಲವೊಂದು ಔಷಧಿ ಹಾಗೂ ಗಿಡಮೂಲಿಕೆಗಳಿಂದ ನಿಮ್ಮ ಕಣ್ಣಿನ ದೃಷ್ಟಿ ಸಮಸ್ಯೆಯನ್ನು ನೀಗಿಸಿಕೊಳ್ಳುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳಿ. ದಣಿದ ಕಣ್ಣುಗಳಿಗೆ, ತ್ವರಿತ ಸಾಂತ್ವನ ನೀಡುವ ಮನೆಮದ್ದು

ತ್ರಿಫಲ

ತ್ರಿಫಲ

ಕಣ್ಣಿನ ದೃಷ್ಟಿಯನ್ನು ಸರಿಪಡಿಸಿಕೊಳ್ಳಲು ಹಲವಾರು ಮಂದಿ ಆಯುರ್ವೇದಿಕ್ ತಜ್ಞರು ಹೇಳುವ ಹೆಸರೇ ತ್ರಿಫಲ. ಮೂರು ಹಣ್ಣುಗಳ ಮಿಶ್ರಣವು ತ್ರಿದೋಶವನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಕಣ್ಣಿನ ದೃಷ್ಟಿ ದೋಷ ನಿವಾರಣೆಗೆ ಇದು ಒಳ್ಳೆಯ ಮದ್ದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತ್ರಿಫಲ

ತ್ರಿಫಲ

ರಾತ್ರಿ ಮಲಗುವ ಮೊದಲು ತ್ರಿಫಲವನ್ನು ನೀರಿನಲ್ಲಿ ನೆನೆಸಿಡಿ ಮತ್ತು ಬೆಳಿಗ್ಗೆ ಅದರ ನೀರನ್ನು ಗಾಳಿಸಿ ತೆಗೆದು ಕಣ್ಣನ್ನು ತೊಳೆದರೆ ಆಗ ಕಣ್ಣಿನ ಸಮಸ್ಯೆ ನಿವಾರಣೆಯಾಗುವುದು. ದಿನಾಲೂ ಹೀಗೆ ಕಣ್ಣನ್ನು ತೊಳೆದರೆ ದೃಷ್ಟಿ ದೋಷ ನಿವಾರಣೆಯಾಗುವುದು.

ನೆಲ್ಲಿಕಾಯಿ

ನೆಲ್ಲಿಕಾಯಿ

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಕಣ್ಣಿನ ದೃಷ್ಟಿ ಸಮಸ್ಯೆಗೆ ಇದನ್ನು ಬಳಸಲು ಆಯುರ್ವೇದದಲ್ಲಿ ಸೂಚಿಸಲಾಗುತ್ತದೆ. ನಿಮಗೆ ಕಣ್ಣಿನ ದೃಷ್ಟಿದೋಷವಿದ್ದರೆ ಆಗ ನೆಲ್ಲಿಕಾಯಿಯನ್ನು ಆಹಾರದಲ್ಲಿ ಬಳಸಿಕೊಳ್ಳಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನೆಲ್ಲಿಕಾಯಿ

ನೆಲ್ಲಿಕಾಯಿ

ಒಣಗಿಸಿದ ನೆಲ್ಲಿಕಾಯಿ, ನೆಲ್ಲಿಕಾಯಿ ಹುಡಿ ಅಥವಾ ಅದರ ಜ್ಯೂಸ್ ನ್ನು ಕುಡಿಯಬಹುದು. ದಿನಾಲು ಒಂದು ಲೋಟ ನೆಲ್ಲಿಕಾಯಿ ಜ್ಯೂಸ್ ಅಥವಾ ಒಂದು ಚಮಚ ನೆಲ್ಲಿಕಾಯಿ ಹುಡಿಯನ್ನು ನೀರಿನೊಂದಿಗೆ ಸೇವಿಸಿದರೆ ನಿಮ್ಮ ಕಣ್ಣಿನ ದೃಷ್ಟಿ ಸರಿಯಾಗುವುದು.

ಕ್ಯಾರೆಟ್

ಕ್ಯಾರೆಟ್

ಕ್ಯಾರೆಟ್‌ನಲ್ಲಿ ವಿಟಮಿನ್ ಎ ಅಗಾಧವಾಗಿದೆ. ಕಣ್ಣಿಗೆ ಬೇಕಾಗಿರುವ ಕಬ್ಬಿಣಾಂಶ, ಪ್ರೋಸ್ಪರಸ್, ಮತ್ತು ಕ್ಯಾಲ್ಸಿಯಂ ಇದರಲ್ಲಿದೆ. ಇಷ್ಟೊಂದು ಪೋಷಕಾಂಶಗಳನ್ನು ಹೊಂದಿರುವ ಕ್ಯಾರೆಟ್ ನ್ನು ಆಯುರ್ವೇದ ವೈದ್ಯರು ಕಣ್ಣಿನ ದೃಷ್ಟಿ ಉತ್ತಮ ಪಡಿಸಲು ಬಳಸಲು ಸಲಹೆ ನೀಡುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕ್ಯಾರೆಟ್

ಕ್ಯಾರೆಟ್

ದಿನಾಲೂ ಒಂದು ಲೋಟ ಕ್ಯಾರೆಟ್ ಜ್ಯೂಸ್ ಕುಡಿದರೆ ನಿಮ್ಮ ಕಣ್ಣಿನ ದೃಷ್ಟಿ ಉತ್ತಮವಾಗುವುದು. ದಿನಾಲೂ ಇದನ್ನು ಸಲಾಡ್ ರೂಪದಲ್ಲಿ ಬಳಸಬಹುದು.

ಬಾದಾಮಿ

ಬಾದಾಮಿ

ಇದು ಕೇವಲ ರುಚಿ ಮಾತ್ರವಲ್ಲದೆ ವಿಟಮಿನ್ ಇ, ಒಮೆಗಾ-3, ಆ್ಯಂಟಿಆಕ್ಸಿಡೆಂಟ್ ಗಳಿಂದ ತುಂಬಿ ಹೋಗಿದೆ. ಇದರಲ್ಲಿರುವ ಪ್ರತಿಯೊಂದು ಪೋಷಕಾಂಶಗಳು ಕಣ್ಣಿನ ದೃಷ್ಟಿಯನ್ನು ಉತ್ತಮಪಡಿಸಲು ನೆರವಾಗುವುದು.

ಬಾದಾಮಿ

ಬಾದಾಮಿ

ರಾತ್ರಿ ನೀರಿನಲ್ಲಿ ನೆನಸಿದ ಬಾದಾಮಿಯ ಸಿಪ್ಪೆ ತೆಗೆದು ಅದನ್ನು ಅರೆದು ಪೇಸ್ಟ್ ಮಾಡಿಕೊಂಡು ಪ್ರತೀ ದಿನ ಬೆಳಗ್ಗೆ ಹಾಲಿನೊಂದಿಗೆ ಸೇವನೆ ಮಾಡಿದರೆ ಅದರಿಂದ ಕಣ್ಣಿನ ದೃಷ್ಟಿದೋಷ ನಿವಾರಣೆಯಾಗುವುದು.

English summary

Ayurvedic Remedies To Improve Eyesight

With the change in lifestyle, weak eyesight is becoming a common phenomenon. It is no surprise considering the amount of time we spend on our television and computer screens. A person suffering from weak eyesight is either suffering from short-sightedness or far-sightedness
Story first published: Tuesday, June 28, 2016, 20:52 [IST]
X
Desktop Bottom Promotion