For Quick Alerts
ALLOW NOTIFICATIONS  
For Daily Alerts

ಕಿಡ್ನಿ ಕಲ್ಲು ಕರಗಿಸುವ, ಹಿತ್ತಲ ಗಿಡದ ಮದ್ದು

By Manu
|

ನಮ್ಮ ನಿತ್ಯದ ಚಟುವಟಿಕೆಯನ್ನೇ ನಿಲ್ಲಿಸಿಬಿಡಬಲ್ಲಷ್ಟು ನೋವು ನೀಡುವ ಮೂತ್ರಪಿಂಡ ಕಲ್ಲುಗಳಿಂದ ಬಿಡುಗಡೆ ಪಡೆಯುವುದು ಅಷ್ಟು ಸುಲಭವಲ್ಲ. ಇದರ ನಿವಾರಣೆಗೂ ಮುನ್ನ ಇದು ಪ್ರಾರಂಭವಾಗುವುದು ಹೇಗೆ ಎಂದು ತಿಳಿದುಕೊಂಡರೆ ಉತ್ತಮ. ದೇಹದ ನೀರನ್ನು ಶೋಧಿಸಿ ಲವಣಗಳನ್ನು ಮತ್ತು ಕಲ್ಮಶಗಳನ್ನು ಮೂತ್ರದ ಮೂಲಕ ಹೊರಹಾಕುವ ಮೂತ್ರಪಿಂಡಗಳಲ್ಲಿ ಕೆಲವೊಮ್ಮೆ ಕೆಲವು ಲವಣಗಳು ಘನರೂಪ ಪಡೆದು ನಿಂತುಬಿಡುತ್ತವೆ.

Ayurveda To Treat Kidney Stones

ಸತತವಾಗಿ ಶೋಧಿಸುತ್ತಾ ಹೋಗುವಾಗ ಇನ್ನಷ್ಟು ಲವಣದ ಕಣಗಳು ಈ ಕಲ್ಲಿಗೆ ಅಂಟಿಕೊಳ್ಳುತ್ತಾ ಹೋಗುತ್ತದೆ. ಸಾಮಾನ್ಯವಾಗಿ ನಮ್ಮೆಲ್ಲರ ಮೂತ್ರಪಿಂಡಗಳಲ್ಲಿ ಈ ಕಲ್ಲುಗಳು ಚಿಕ್ಕದಾಗಿ ಇದ್ದೇ ಇರುತ್ತವೆ. ಆದರೆ ನೀರು ಹೆಚ್ಚಿದಂತೆ ಇವು ಕರಗುತ್ತವೆ ಸಹಾ. ಕೆಲವೊಂದು ಲವಣಗಳು ಮಾತ್ರ ಕರಗದೇ ಗಟ್ಟಿಯಾದ ಕಲ್ಲುಗಳಾಗಿ ಉಳಿದುಬಿಡುತ್ತವೆ. ಕಲ್ಲುಗಳು ಕರಗದೇ ಇರಲಿಕ್ಕೆ ಅಧಿಕ ರಕ್ತದೊತ್ತಡ, ಪ್ರಾಣಿಜನ್ಯ ಕೊಬ್ಬಿನ ಪ್ರಮಾಣದಲ್ಲಿ ಹೆಚ್ಚಳ, ಕುಡಿಯುವ ನೀರು ಕಡಿಮೆಯಾಗುವುದು, ಆಹಾರದಲ್ಲಿ ನಾರು ಇಲ್ಲದಿರುವುದು ಮೊದಲಾದ ಕಾರಣಗಳೂ ಇವೆ. ಕಿಡ್ನಿ ಕಲ್ಲಿನ ಸಮಸ್ಯೆಗೆ ಗಿಡಮೂಲಿಕೆಗಳ ನಲ್ಮೆಯ ಆರೈಕೆ

ಬಹುತೇಕ ಕಲ್ಲುಗಳೂ ಕ್ಯಾಲ್ಸಿಯಂ ಫಾಸ್ಪೇಟ್ ಅಥವಾ ಕ್ಯಾಲ್ಸಿಯಂ ಆಕ್ಸಲೇಟ್ ರೂಪ ಪಡೆಯುತ್ತವೆ. ಒಂದು ವೇಳೆ ಕ್ಯಾಲ್ಸಿಯಂ ಫಾಸ್ಪೇಟ್ ಆಗಿದ್ದರೆ ಇವು ನಯವಾದ ಸುಣ್ಣದ ಕಲ್ಲಿನಂತಿದ್ದು ನೆನೆದ ಚಾಕ್ ಪೀಸ್ ನಷ್ಟೇ ಗಟ್ಟಿಯಾಗಿರುತ್ತದೆ. ಈ ಕಲ್ಲುಗಳನ್ನು ಕರಗಿಸುವುದು ಸುಲಭ. ಆದರೆ ಕ್ಯಾಲ್ಸಿಯಂ ಆಕ್ಸಲೇಟ್ ಕಲ್ಲುಗಳು ಮಾತ್ರ ರಸ್ತೆಗೆ ಹಾಕುವ ಟಾರಿನಲ್ಲಿರುವ ಕಲ್ಲಿನಷ್ಟು ಗಟ್ಟಿಯಾಗಿದ್ದು ಇದನ್ನು ಒಡೆಯುವುದು ವೈದ್ಯರಿಗೆ ದೊಡ್ಡ ಸವಾಲಾಗಿದೆ.

ಒಂದು ವೇಳೆ ಒಡೆದರೂ ಇದರ ಚೂರುಗಳು ಮೂತ್ರನಾಳದಲ್ಲಿ ಇಳಿದು ಹೊರಹೋಗಲು ಬಹಳಷ್ಟು ಸಮಯ ಹಾಗೂ ಅಪಾರ ನೋವು ನೀಡುತ್ತವೆ. ಆದರೆ ಆಯುರ್ವೇದದಲ್ಲಿ ಈ ಕಲ್ಲುಗಳನ್ನು ಕರಗಿಸಿ ಸುಲಭವಾಗಿ ಹೊರಹಾಕಲು ಕೆಲವು ವಿಧಾನಗಳಿದ್ದು ನೈಸರ್ಗಿಕವಾಗಿವೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ನೋಡೋಣ....

ತುಳಸಿ ಎಲೆಗಳು
ಸಾಮಾನ್ಯವಾಗಿ ಮೂತ್ರದ ಯಾವುದೇ ತೊಂದರೆಗೆ ತುಳಸಿ ಉತ್ತಮವಾಗಿದೆ. ಶೀತದಿಂದ ಹಿಡಿದು ಜ್ವರ, ಶ್ವಾಸ, ಮೂತ್ರಪಿಂಡಗಳ ಕಲ್ಲಿಗೂ ಉತ್ತಮವಾಗಿದೆ. ತುಳಸಿಯಲ್ಲಿರುವ ಮೂತ್ರವರ್ಧಕ ಗುಣ ಮತ್ತು ಕಲ್ಮಶ ನಿವಾರಕ ಗುಣ ಮೂತ್ರಪಿಂಡಗಳ ಕಲ್ಲುಗಳನ್ನು ಹೊರಹಾಕಲು ಸಮರ್ಥವಾಗಿವೆ. ತುಳಸಿ ಎಲೆಗಳ ರಸದಲ್ಲಿ ಅಸೆಟಿಕ್ ಆಮ್ಲವಿದ್ದು ಈ ಆಮ್ಲದಲ್ಲಿ ಮೂತ್ರಪಿಂಡದ ಕಲ್ಲುಗಳು ಕರಗುತ್ತವೆ. ಕಲ್ಲುಗಳು ಕರಗುತ್ತಾ ಹೋದಂತೆ ನೋವು ಸಹಾ ಕಡಿಮೆಯಾಗುತ್ತದೆ. ಆಪಲ್ ಸಿಡೆರ್ ವಿನೆಗರ್- ಕಿಡ್ನಿ ಕಲ್ಲಿನ ಸಮಸ್ಯೆಗೆ ರಾಮಬಾಣ

ಬಳಕೆಯ ವಿಧಾನ: ನಾಲ್ಕಾರು ತುಳಸಿ ಎಲೆಗಳನ್ನು ಚೆನ್ನಾಗಿ ತೊಳೆದು ಕೊಂಚ ಜೇನಿನೊಂದಿಗೆ ಬೆರೆಸಿ ಪ್ರತಿದಿನ ಜಗಿದು ತಿನ್ನುವ ಮೂಲಕ ಕಲ್ಲುಗಳು ನಿಧಾನವಾಗಿ ಕರಗುತ್ತಾ ಹೋಗುತ್ತವೆ.

ಎಳನೀರು
ನಮ್ಮ ದೇಹಕ್ಕೆ ಅತ್ಯುತ್ತಮವಾದ ದ್ರವವಾಗಿರುವ ಎಳನೀರು ಮೂತ್ರಪಿಂಡಗಳ ಕಲ್ಲು ನಿವಾರಿಸಲು ಹಾಗೂ ನೋವು ಇಲ್ಲದಂತಾಗಿಸಲೂ ನೆರವಾಗುತ್ತದೆ. ಪ್ರತಿದಿನ ಖಾಲಿಹೊಟ್ಟೆಯಲ್ಲಿ ಒಂದು ಎಳನೀರು ಕುಡಿಯುವ ಮೂಲಕ ಕಲ್ಲುಗಳು ಕರಗಲು ಸಾಧ್ಯವಾಗುತ್ತದೆ. ನೀವು ತಿಳಿದಿರಬೇಕಾದ ಕಿಡ್ನಿ ರೋಗಗಳ 12 ಲಕ್ಷಣಗಳು

ಬಳಕೆಯ ವಿಧಾನ: ಖಾಲಿಹೊಟ್ಟೆಯಲ್ಲಿ ಒಂದು ಎಳನೀರು ಕುಡಿದ ಬಳಿಕ ದಿನದಲ್ಲಿ ಸುಮಾರು ನಾಲ್ಕರಿಂದ ಐದು ಎಳನೀರನ್ನಾದರೂ ಊಟಕ್ಕೆ ಅರ್ಧ ಘಂಟೆಗೆ ಮುನ್ನ ಕುಡಿಯಬೇಕು. ರಾತ್ರಿ ಮಲಗುವ ಮುನ್ನವೂ ಒಂದು ಎಳನೀರು ಕುಡಿದು ಕೊಂಚಕಾಲ ಅಡ್ಡಾಡಿ ಬಳಿಕ ಮೂತ್ರ ವಿಸರ್ಜಿಸಿ ಮಲಗಿಕೊಳ್ಳಬೇಕು.

ಮದರಂಗಿ ಗಿಡದ ತೊಗಟೆ
ಮದರಂಗಿ ಗಿಡದ ತೊಗಟೆಯಲ್ಲಿಯೂ ಮೂತ್ರಪಿಂಡದ ಕಲ್ಲುಗಳನ್ನು ಕರಗಿಸುವ ಶಕ್ತಿಯಿದೆ. ಈ ತೊಗಟೆಯನ್ನು ಕುದಿಸಿ ಸೋಸಿ ಆರಿಸಿದ ನೀರು ಕುಡಿಯುವ ಮೂಲಕ ಪರಿಹಾರ ಪಡೆಯಬಹುದು.

ಬಳಕೆಯ ವಿಧಾನ: ಒಂದು ಭಾಗ ತೊಗಟೆಗೆ ಸುಮಾರು ಹನ್ನೆರಡು ಭಾಗ ನೀರು ಹಾಕಿ ಚೆನ್ನಾಗಿ ಕುದಿಸಿ ತಣಿಸಿ. ಬಳಿಕ ದಿನದಲ್ಲಿ ಮೂರು ಬಾರಿ (20-30 mL) ನಷ್ಟು ಪ್ರಮಾಣವನ್ನು ಸೇವಿಸುತ್ತಾ ಬಂದರೆ ಕಲ್ಲುಗಳು ಕರಗುತ್ತವೆ. ಎಚ್ಚರ: ನಿಮ್ಮ ಕಿಡ್ನಿ ಕೂಡ ಅಪಾಯದಲ್ಲಿ ಸಿಲುಕಿರಬಹುದು!

ಹುರುಳಿ ಕಟ್ಟು
ಮೂತ್ರಪಿಂಡದ ಕಲ್ಲುಗಳಿಗೆ ಆಯುರ್ವೇದ ಸೂಚಿಸುವ ಇನ್ನೊಂದು ಆಹಾರವೆಂದರೆ ಹುರುಳಿ. ಸಾಮಾನ್ಯವಾಗಿ ಎತ್ತುಗಳಿಗೆ ತಿನ್ನಿಸುತ್ತೇವೆ ಎಂಬ ಒಂದೇ ಕಾರಣಕ್ಕೆ ನಾವು ಉಪಯೋಗಿಸದ ಈ ಆಹಾರ ವಾಸ್ತವವಾಗಿ ಒಂದು ಉತ್ತಮ ಧಾನ್ಯವಾಗಿದ್ದು ಮೊಳಕೆ ಬರಿಸಿ ಸೇವಿಸಿದಾಗ ಇದರ ಗುಣಗಳು ಬಹಳಷ್ಟು ಹೆಚ್ಚುತ್ತವೆ. ನಿಯಮಿತವಾಗಿ ಹುರುಳಿಯನ್ನು ಸೇವಿಸುತ್ತಾ ಬಂದರೆ ಕಲ್ಲುಗಳು ಕರಗಿ ಅಥವಾ ಚಿಕ್ಕದಾಗಿ ಒಡೆದು ಮೂತ್ರದ ಮೂಲಕ ಹೊರಹೋಗುತ್ತವೆ.

ಬಳಕೆಯ ವಿಧಾನ: ಸುಮಾರು ಇನ್ನೂರು ಮಿಲೀ ನೀರಿನಲ್ಲಿ ಅರ್ಧ ಮುಳುಗುವಷ್ಟು ಹುರುಳಿಯನ್ನು ಹಾಕಿ ಚೆನ್ನಾಗಿ ಬೇಯಿಸಿ ಈ ನೀರು ಐವತ್ತು ಮಿ.ಲೀ ಯಷ್ಟು ಆದ ಬಳಿಕ ಇದನ್ನು ಸೋಸಿ ತಣಿಸಿ ಬೆಳಿಗ್ಗೆ ಮತ್ತು ರಾತ್ರಿ ತಲಾ ಇಪ್ಪತ್ತೈದು ಮಿ.ಲೀ ಕುಡಿಯಬೇಕು.

English summary

Ayurveda To Treat Kidney Stones

Kidney stones are one of the most painful diseases that can hamper our day-to-day activities to a great extent. Stones are a mineral deposit that are filtered by the kidney and dissolved in urine, which prevents these mineral salt deposits from becoming solid. Therefore, we, at Boldsky, would recommend using Ayurveda to treat kidney stones, naturally. Here's a look at some of the Ayurvedic remedies to treat kidney stones, have a look.
X
Desktop Bottom Promotion