For Quick Alerts
ALLOW NOTIFICATIONS  
For Daily Alerts

ಮಕ್ಕಳ ಶೀತ ಶಮನಕ್ಕೆ-ಬಿಸಿ ಬಿಸಿ ಅರಿಶಿನ ಬೆರೆಸಿದ ಹಾಲು

By Arshad
|

ಮಳೆಗಾಲದ ಆಗಮನವಾಗುತ್ತಿದ್ದಂತೆಯೇ ಆವರಿಸುವ ತೇವ ತನ್ನೊಂದಿಗೆ ಶೀತ ನೆಗಡಿ ಕೆಮ್ಮುಗಳನ್ನೂ ತರುತ್ತದೆ. ಅದರಲ್ಲೂ ಮಕ್ಕಳಿಗೆ ಶೀತ ಅತಿ ಬೇಗನೇ ಆವರಿಸುತ್ತದೆ. ಏಕೆಂದರೆ ಪ್ರತಿಬಾರಿಯೂ ತೇವಾಂಶದಲ್ಲಿ ಬೇರೆ ಬೇರೆ ವೈರಸ್ಸುಗಳು ತೇಲುತ್ತಾ ಬರುತ್ತವೆ.

ಹಿರಿಯರ ದೇಹದಲ್ಲಿ ಈ ವೈರಸ್ಸುಗಳಿಗೆ ರೋಗ ನಿರೋಧಕ ಶಕ್ತಿ ಈಗಾಗಲೇ ಪಡೆದುಬಿಟ್ಟಿರುವ ಕಾರಣ ಹೆಚ್ಚು ಬಾಧಿಸದಿದ್ದರೂ ಮಕ್ಕಳಿಗೆ ಇದು ಅವರಿಗೆ ಪ್ರಥಮವಾಗಿರುವ ಕಾರಣ ಈ ವೈರಸ್ಸುಗಳಿಗೆ ರೋಗ ನಿರೋಧಕ ಶಕ್ತಿ ಮೂಡಿರುವುದಿಲ್ಲ. ಇದು ಮೂಡಲು ಒಂದು ವಾರ ಬೇಕು. ಹಾಲು-ಅರಿಶಿನದ ಜೋಡಿ ಮಾಡಲಿದೆ ಕಮಾಲಿನ ಮೋಡಿ!

Ayurveda tips: Turmeric milk can help cure your child’s common cold

ಅದಕ್ಕೇ ವೈದ್ಯರೇ 'ಶೀತಕ್ಕೆ ಔಷಧಿ ತೆಗೆದುಕೊಂಡರೆ ಒಂದೇ ವಾರದಲ್ಲಿ ಗುಣವಾಗುತ್ತದೆ, ಇಲ್ಲದಿದ್ದರೆ ಏಳು ದಿನ ಬೇಕು ನೋಡಿ' ಎಂದೇ ನಗೆಚಟಾಕಿ ಹಾರಿಸುತ್ತಾರೆ. ಒಮ್ಮೆ ಮಕ್ಕಳಿಗೆ ಶೀತ ಆವರಿಸಿದರೆ ಹಿರಿಯರಿಗಿಂತಲೂ ಹೆಚ್ಚು ಬಳಲುತ್ತಾರೆ ಹಾಗೂ ನಿಃಶಕ್ತರಾಗುತ್ತಾರೆ. ಶೀತವನ್ನು ಬಲವಂತವಾಗಿ ಕಡಿಮೆ ಮಾಡುವ ಪ್ರಬಲ ಗುಳಿಗೆಗಳಿಗಿಂತ ದೇಹದ ರೋಗ ನಿರೋಧಕ ಶಕ್ತಿಯನ್ನು ಆದಷ್ಟು ಬೇಗನೇ ಸಶಕ್ತಗೊಳಿಸುವುದೇ ಜಾಣತನದ ಕ್ರಮವಾಗಿದೆ. ಸರ್ವಗುಣ ಸಂಪನ್ನ ಅರಿಶಿನ ಎಂಬ ಸಂಜೀವಿನಿ

ಈ ಕ್ರಮವನ್ನು ಕೈಗೊಳ್ಳಲು ಹೆಚ್ಚೇನೂ ಕಷ್ಟಪಡಬೇಕಾಗಿಲ್ಲ. ಆಯುರ್ವೇದ ಸೂಚಿಸಿರುವ ಈ ಸರಳ ಕ್ರಮ ಅನುಸರಿಸಿದರೆ ಸಾಕು. ಆಯುರ್ವೇದ ತಜ್ಞರ ಪ್ರಕಾರ ಅರಿಶಿನ ಶೀತವನ್ನು ಎದುರಿಸಲು ಒಂದು ಪ್ರಬಲ ಮೂಲಿಕೆಯಾಗಿದ್ದು ಹಿರಿಯರಿಗೂ ಮಕ್ಕಳಿಗೂ ಸುರಕ್ಷಿತವಾಗಿ ಮತ್ತು ನಿಯಮಿತವಾಗಿ ಸೇವಿಸಬಹುದಾದ ಮತ್ತು ಯಾವುದೇ ಅಡ್ಡಪರಿಣಾಮವಿಲ್ಲದ ಔಷಧಿಯಾಗಿದೆ.

ಅರಿಶಿನದಲ್ಲಿ ಶೀತ ಎದುರಿಸಲು ಅಂತಹದ್ದೇನಿದೆ ಎಂದು ಕೇಳಿದರೆ ಇಂದಿನ ವೈಜ್ಞಾನಿಕ ವಿಶ್ಲೇಷಣೆ ಇದಕ್ಕೆ ಕುರ್ಕುಮಿನ್ (curcumin) ಎಂಬ ಪೋಷಕಾಂಶದತ್ತ ಬೊಟ್ಟು ಮಾಡುತ್ತದೆ. ಇದೊಂದು ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ನಿವಾರಕ ಮತ್ತು ಮುಖ್ಯವಾಗಿ ವೈರಸ್ ನಿವಾರಕ ಗುಣ ಹೊಂದಿದ್ದು ಸಾಮಾನ್ಯ ಶೀತಕ್ಕೆ ಕಾರಣವಾಗುವ ಬಹುತೇಕ ಎಲ್ಲಾ ವೈರಸ್ಸುಗಳನ್ನು ಸದೆಬಡಿಯುವ ಶಕ್ತಿ ಹೊಂದಿದೆ. ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ

ಅಲ್ಲದೇ ಶೀತದ ಅಡ್ಡಪರಿಣಾಮಗಳಾದ ಕಟ್ಟಿಕೊಂಡ ಎದೆ, ಗಂಟಲ ಕೆರೆತ, ಸೋರುವ ಮೂಗು ಮೊದಲಾದವುಗಳನ್ನೆಲ್ಲಾ ಇದರ ಉರಿಯೂತ ನಿವಾರಕ ಗುಣ ಕಡಿಮೆಗೊಳಿಸುತ್ತದೆ. ಅಷ್ಟೇ ಅಲ್ಲದೆ ದೇಹ ಮತ್ತೊಮ್ಮೆ ಈ ವೈರಸ್ಸಿಗೆ ಬಗ್ಗದಂತೆ ರೋಗ ನಿರೋಧಕ ಶಕ್ತಿಯನ್ನು ಪಡೆಯಲು ನೆರವಾಗುತ್ತದೆ. ಜೀವಮಾನವಿಡೀ ಈ ವೈರಸ್ಸು ಮಗುವನ್ನು ಮತ್ತೆ ಬಾಧಿಸಲಾರದು. ಮುಂದಿನ ಬಾರಿ ಶೀತವಾದರೆ ಅದಕ್ಕೆ ಹಿಂದೆಂದೂ ಬಾಧಿಸಿರದ ಹೊಸ ವೈರಸ್ಸೇ ಆಗಿರುತ್ತದೆ.

ಆದರೆ ಅರಿಶಿನವನ್ನು ಹಾಗೇ ಸೇವಿಸುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಇವನ್ನು ಹೊತ್ತುಕೊಂಡು ಹೋಗಲು ಹಾಲಿನ ಕೊಬ್ಬು ಅತ್ಯಂತ ಸೂಕ್ತವಾಗಿದ್ದು ಹಾಲಿನೊಂದಿಗೆ ಕೊಂಚ ಅರಿಶಿನ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ಇದರ ಗರಿಷ್ಠ ಪ್ರಯೋಜನವನ್ನು ಪಡೆಯಬಹುದು. ಚಿನ್ನದ ದೇವತೆ ಅರಿಶಿನದ ಚಿನ್ನದಂತಹ ಗುಣಗಳು

ಮುಂದಿನ ಬಾರಿ ನಿಮ್ಮ ಮಗುವಿಗೆ ಶೀತವಾಗುತ್ತಿದೆ ಎಂಬ ಯಾವುದೇ ಚಿಕ್ಕ ಸೂಚನೆ ಸಿಕ್ಕರೂ ತಕ್ಷಣ ದಿನಕ್ಕೆ ಎರಡು ಬಾರಿ ಒಂದು ಲೋಟ ಬಿಸಿಬಿಸಿ ಹಾಲಿನಲ್ಲಿ ಒಂದು ಚಿಕ್ಕ ಚಮಚ ಅರಿಶಿನ ಪುಡಿ ಬೆರೆಸಿ ನೀಡಿದರೆ ಸಾಕು. ಕೆಲವೊಮ್ಮೆ ಅಂಗಡಿಗಳಲ್ಲಿ ಸಿಗುವ ಪುಡಿ ಅಷ್ಟೊಂದು ಉತ್ತಮವಾಗಿರುವುದಿಲ್ಲ. ಹಾಗಾಗಿ ಔಷಧಿಗಾಗಿ ಉತ್ತಮ ಗುಣಮಟ್ಟದ ಅರಿಶಿನ ಕೊಂಬನ್ನು ಹಾಲಿನಲ್ಲಿ ತೇದಿ ಬಿಸಿಹಾಲಿನಲ್ಲಿ ಬೆರೆಸಿ ನೀಡುವುದು ಹೆಚ್ಚು ಪ್ರಯೋಜನಕಾರಿ.

English summary

Ayurveda tips: Turmeric milk can help cure your child’s common cold

Cold is very common in children during the rainy reason. When a child gets common cold, it is usually accompanied with headaches, fever and a runny nose. This can cause your child to get cranky and uncomfortable. While giving usual allopathy drugs can cure the cold instantly, it is better to avoid excessive usage of chemical drugs. According to ayurvedic experts, turmeric is an excellent herb that can help treat common cold in children and can be taken on a regular basis without any adverse effects.
X
Desktop Bottom Promotion