For Quick Alerts
ALLOW NOTIFICATIONS  
For Daily Alerts

ಮನೆ ಮದ್ದು: ಕರಿಬೇವು ಎಂಬ ಆರೋಗ್ಯ ಸಂಜೀವಿನಿ...

By Manu
|

ಸಿಹಿ ಕಹಿಯನ್ನು ಸಮನಾಗಿ ಸ್ವೀಕರಿಸುವ ಮೂಲಕ ಯುಗಾದಿಯನ್ನು ಸ್ವಾಗತಿಸುವ ನಮಗೆ ಕಹಿಯ ರೂಪದಲ್ಲಿ ಕರಿಬೇವಿನ ಎಲೆ ಅತಿ ಪವಿತ್ರವಾಗಿದೆ. ಕರಿಬೇವು ಅಪ್ಪಟ ಭಾರತದ ಮೂಲದ್ದೆಂದು ಹಲವು ಪುರಾಣಗಳಲ್ಲಿ ಪ್ರಸ್ತಾಪಿಸಲಾಗಿದೆ. ಆ ಕಾಲದಿಂದಲೂ ಕರಿಬೇವು ನಮ್ಮ ಪೂರ್ವಜರ ಅಡುಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಇಂದಿಗೂ ನಮ್ಮ ಅಡುಗೆಗಳಲ್ಲಿ 'ಒಗ್ಗರಣೆ' ಯಿಂದ ಮುಗಿಯದ ಅಡುಗೆಗೆ ರುಚಿಯೇ ಇರುವುದಿಲ್ಲ.

Ayurveda Tips: benefits of Curry leaf, which should surprise you

ಕರಿಬೇವು ಸೊಪ್ಪು ಮೂಲತಃ ಒಂದು ಗಿಡಮೂಲಿಕೆ, ಇದು ತನ್ನ ಜೀರ್ಣ ಕ್ರಿಯೆಯನ್ನು ಸುಧಾರಿಸುವ ಸಾಮರ್ಥ್ಯಕ್ಕೆ ಹೆಸರುವಾಸಿ. ಅಯುರ್ವೇದದ ಪ್ರಕಾರ ಕಡಿಪತ್ತಾ ಎಂದು ಕರೆಯಲ್ಪಡುವ ಇದನ್ನು ದೇಹದಲ್ಲಿರುವ ಟಾಕ್ಸಿಕ್ ಅಂಶಗಳನ್ನು ಹೊರ ಹಾಕಲು ಬಳಸಲಾಗುತ್ತದೆ. ಜೊತೆಗೆ ಇದು ನಿಮ್ಮ ದೇಹದಲ್ಲಿರುವ ಪಿತ್ತವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಬನ್ನಿ ಇದರ ಇನ್ನಷ್ಟು ಪ್ರಯೋಜನಗಳ ಬಗ್ಗೆ ತಿಳಿಯೋಣ... ಕರಿಬೇವಿನ ಸೊಪ್ಪಿನಿ೦ದ ಏನೆಲ್ಲಾ ಪ್ರಯೋಜನಗಳಿವೆ ನೋಡಿ?

ಅಜೀರ್ಣ ಸಮಸ್ಯೆಯಿದ್ದರೆ
1-2 ಟೀ ಚಮಚದಷ್ಟು ಎಲೆಯ ರಸವನ್ನು, 1ಟೀ ಚಮಚ ಲಿಂಬೆಬೆರಸವನ್ನು ಮತ್ತು ಸಕ್ಕರೆಯನ್ನು ಬೆರೆಸಿ ಸೇವಿಸುವುದರಿಂದ ಅಜೀರ್ಣ, ಅತಿಯಾಗಿ ಜಿಡ್ಡು ಪದಾರ್ಥ ಸೇವನೆಯಿಂದುಂಟಾದ ತೊಂದರೆಗಳನ್ನು ನಿವಾರಿಸಬಹುದು.

ಕಿಡ್ನಿಯ ಕಲ್ಲಿನ ಸಮಸ್ಯೆಗೆ
ಕರಿಬೇವಿನ ಎಲೆಗಳನ್ನು ಮಿಕ್ಸಿಯಲ್ಲಿ ಗೊಟಾಯಿಸಿ ಮಾಡಿದ ಜ್ಯೂಸ್ ಕುಡಿಯುವ ಮೂಲಕ ಉತ್ತಮ ಪರಿಹಾರ ದೊರಕುತ್ತದೆ.

ವಾಂತಿಯ ತೊಂದರೆಯಿದ್ದರೆ
ಸಾಮಾನ್ಯವಾಗಿ ಕೆಲವರಿಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ, ಅಥವಾ ಬೆಳಗಿನ ಜಾವ ಎದ್ದಾಕ್ಷಣ ವಾಕರಿಕೆ, ಅಥವಾ ವಾಂತಿಯ ತೊಂದರೆ ಕಂಡುಬರುತ್ತದೆ. ಇಂತಹ ಸಮಸ್ಯೆ ಎದುರಿಸುವವರು ಪ್ರತಿ ದಿನ ಕರಿಬೇವಿನ ಎಲೆಗಳನ್ನು ಅರೆದು ತಯಾರಿಸಿದ ಮಿಶ್ರಣವನ್ನು ನೀರಿನಲ್ಲಿ ಸೇರಿಸಿ ಕುಡಿದರೆ ಉತ್ತಮ ಪರಿಣಾಮ ದೊರಕುತ್ತದೆ

ಮಜ್ಜಿಗೆ ಜೊತೆ ಜಜ್ಜಿದ ಕರಿಬೇವು ಸೊಪ್ಪು
ಪ್ರತಿದಿನ 2-3 ಬಾರಿ ಸೇವಿಸಿದರೆ, ಆರೋಗ್ಯಕ್ಕೆ ಉತ್ತಮ. ಒಂದು ವೇಳೆ ನಿಮ್ಮ ಕುಟುಂಬದ ಸದಸ್ಯರಿಗೆ ಕರಿಬೇವು ಸೊಪ್ಪು ಇಷ್ಟವಾಗದಿದ್ದಲ್ಲಿ, ನೀವು ಕರಿಬೇವನ್ನು ರುಬ್ಬಿ, ಕರಿ ಮತ್ತು ಚಟ್ನಿಯಲ್ಲಿ ಬೆರೆಸಬಹುದು.

ಸ್ಥೂಲಕಾಯ ಸಮಸ್ಯೆಯಿದ್ದರೆ
ಬೊಜ್ಜು ಕರಗಿಸಲು ಪ್ರತಿ ಮುಂಜಾನೆ 8-10 ತಾಜಾ ಎಲೆಗಳನ್ನು ಅಗಿದು ಸೇವಿಸಿದರೆ ಒಳ್ಳೆಯದು.ಇದರಿಂದ ಮಧುಮೇಹ ರೋಗವನ್ನು ತಡೆಗಟ್ಟಬಹುದು.

ಕೂದಲಿನ ಆರೈಕೆಗೆ ಕರಿಬೇವು
ಒ೦ದು ಲೋಟದಷ್ಟು ಮೊಸರನ್ನು ತೆಗೆದುಕೊ೦ಡು ಅದಕ್ಕೆ ಕರಿಬೇವಿನ ಎಲೆಗಳನ್ನು ಜಜ್ಜಿ ಚೆನ್ನಾಗಿ ಮಿಶ್ರಗೊಳಿಸಿ, ನಿಮ್ಮ ನೆತ್ತಿಗೆ ಈ ಮಿಶ್ರಣದಿ೦ದ ಮಾಲೀಸು ಮಾಡಿಕೊಂದರೆ, ಕೂದಲು ಆರೋಗ್ಯದಿಂದ ಕೂಡಿರುತ್ತದೆ

English summary

Ayurveda Tips: benefits of Curry leaf, which should surprise you

Curry leaves is an essential ingredient of Indian cooking. Curry leaves adds flavour and aroma to the cooking and the recipe is incomplete if curry leaves are not added. The Curry leaf tree (Murraya Koenigii) is native to India. Also known as sweet neem leaves. Have a look health benefits of curry leaves
X
Desktop Bottom Promotion