For Quick Alerts
ALLOW NOTIFICATIONS  
For Daily Alerts

ಮಳೆಗಾಲದ ಅತಿಥಿಗಳು..! ದಯವಿಟ್ಟು ಇವರಿಂದ ದೂರವಿರಿ!

By Jaya subramanya
|

ಮಳೆ ಬಂದು ಇಳೆ ತಂಪಾಯ್ತು ಎಂದಾಗ ಬಾಯಲ್ಲಿ ಬಿಸಿ ಬಿಸಿ ಚಹಾ ಖಾರದ ಬೋಂಡಾ, ಬಾಯಲ್ಲಿ ನೀರೂರಿಸುವ ಪಾನೀಪೂರಿ ಮಸಾಲ್ ಪೂರಿ ನೆನಪಾಗುವುದು ಸಹಜವೇ. ತಂಪಾದ ವಾತಾವರಣ ಥರಗುಟ್ಟುವ ಚಳಿ ಖಾರದ ತಿನಿಸುಗಳಿಗೆ ಹಾತೊರೆಯುವಂತೆ ಮಾಡುತ್ತದೆ. ಬೀದಿ ಬದಿಯ ಆಹಾರ ಪದಾರ್ಥಗಳಂತೂ ಇಂತಹ ವೇಳೆಯನ್ನೇ ಕಾಯುತ್ತಿವೆ ಎಂದೆನ್ನಿಸುವಂತೆ ನಮ್ಮನ್ನು ಆಕರ್ಷಿಸಿಬಿಡುತ್ತವೆ. ಆದರೆ ಬಾಯಿಗೆ ಹಿತಕಾರಿಯಾದ ಈ ತಿನಿಸುಗಳು ಆರೋಗ್ಯದ ಮೇಲೆ ಹೇಗೆ ಕೆಟ್ಟ ಪ್ರಭಾವವನ್ನು ಬೀರುತ್ತದೆ ಎಂಬುದೂ ನಿಮಗೆ ತಿಳಿದಿರಬೇಕು.

ಆರೋಗ್ಯದ ಮೇಲೆ ಕಾಳಜಿ ಉಳ್ಳವರು ನೀವಾಗಿದ್ದಲ್ಲಿ ಮಳೆಗಾಲದಲ್ಲಿ ಬೀದಿಬದಿಯ ಆಹಾರಗಳತ್ತ ನೀವು ಕಣ್ಣೆತ್ತಿ ಕೂಡ ನೋಡಬಾರದು ಎಂದೇ ನಾವು ಸಲಹೆ ನೀಡುತ್ತೇವೆ. ರಸ್ತೆ ಬದಿಯ ತಿನಿಸುಗಳನ್ನು ಸ್ವಚ್ಛವಾಗಿ ತಯಾರಿಸಿರುವುದಿಲ್ಲ ಎಂಬುದು ಒಂದು ಕಾರಣವಾದರೆ, ತೆರೆದಿಟ್ಟ ಆಹಾರ ಪದಾರ್ಥಗಳು ರೋಗಕ್ಕೆ ಮುಕ್ತ ಆಹ್ವಾನವಿದ್ದಂತೆ. ಮಳೆಯಿಂದ ಆಹಾರವನ್ನು ಸಂರಕ್ಷಿಸಿಲ್ಲ ಎಂದಾದಲ್ಲಿ ಇದು ತಿಂಡಿ ತಿನಿಸುಗಳ ಗುಣಮಟ್ಟವನ್ನು ಇನ್ನಷ್ಟು ಬಿಗಡಾಯಿಸುವುದು ಖಂಡಿತ.

ಪಾನಿಪುರಿಯ ವಿಷಯಕ್ಕೆ ಬಂದಾಗ, ನೀರಿನಿಂದ ನಿಮಗೆ ಡಯೇರಿಯಾ ಬರುವ ಸಾಧ್ಯತೆ ಇರುತ್ತದೆ. ಆಹಾರವನ್ನು ಕಟ್ಟಿಕೊಡಲು ಕೆಲವು ಅಂಗಡಿಯವರು ಸುದ್ದಿಪತ್ರಿಕೆಗಳನ್ನು ಬಳಸುವುದರಿಂದ ಪತ್ರಿಕೆಯಲ್ಲಿರುವ ಧೂಳು ಕೂಡ ಆಹಾರವನ್ನು ಸೇರಿಬಿಡುತ್ತದೆ. ತಿನಿಸಿಗೆ ಬಳಸುವ ಚಟ್ನಿ, ಸಾಸ್, ಕಾಳುಮೆಣಸು, ಉಪ್ಪಿನಲ್ಲಿ ಕೂಡ ಧೂಳು ಕೊಳೆ ತುಂಬಿಕೊಂಡಿರುತ್ತದೆ. ಹಾಗಿದ್ದರೆ ಮಳೆಗಾಲದಲ್ಲಿ ನೀವು ಸೇವಿಸದೇ ಬಾರದ ಆಹಾರ ಪದಾರ್ಥಗಳ ಪಟ್ಟಿಯನ್ನು ನಾವು ನಿಮ್ಮ ಮುಂದೆ ಇರಿಸುತ್ತಿದ್ದೇವೆ....

ನಿರ್ದಿಷ್ಟ ಎಣ್ಣೆಗಳು

ನಿರ್ದಿಷ್ಟ ಎಣ್ಣೆಗಳು

ಸಾಸಿವೆ ಎಣ್ಣೆಯಂತಹ ಕೆಲವೊಂದು ಎಣ್ಣೆಗಳು ಮಳೆಗಾಲದಲ್ಲಿ ದೇಹವನ್ನು ದುರ್ಬಲಗೊಳಿಸುತ್ತದೆ. ಇದಕ್ಕೆ ಬದಲಾಗಿ ಆಲೀವ್ ಆಯಿಲ್ ಎಣ್ಣೆಯನ್ನು ಬಳಸಿ.

ಚಾಟ್

ಚಾಟ್

ಚಾಟ್ ಮತ್ತು ಪಾನಿಪೂರಿ ಮಳೆಗಾಲದಲ್ಲಿ ನಿಮ್ಮ ಜೀರ್ಣಕ್ರಿಯೆಯ ಮೇಲೆ ಪರಿಣಾಮವನ್ನು ಬೀರುತ್ತದೆ ಮತ್ತು ಡಯೇರಿಯಾವನ್ನು ಉಂಟುಮಾಡುತ್ತದೆ.

ತಂಪು ಪಾನೀಯಗಳು

ತಂಪು ಪಾನೀಯಗಳು

ಕೆಲವೊಂದು ತಂಪು ಪಾನೀಯಗಳು ದೇಹದಲ್ಲಿರುವ ಖನಿಜ ಸತ್ವಗಳನ್ನು ಕಸಿದುಕೊಳ್ಳುತ್ತದೆ. ಬಿಸಿ ಶುಂಠಿ ಚಹಾ ಅಥವಾ ಲಿಂಬೆ ಪಾನಕವನ್ನು ಈ ಸಮಯದಲ್ಲಿ ಈ ಪಾನೀಯಗಳ ಬದಲಿಗೆ ಸೇವಿಸಿ.

ಸೊಪ್ಪು ತರಕಾರಿಗಳು

ಸೊಪ್ಪು ತರಕಾರಿಗಳು

ಇವುಗಳು ಆರೋಗ್ಯಕರವಾಗಿದ್ದರೂ ಇವುಗಳನ್ನು ಅಂಗಡಿಯವರು ಚೆನ್ನಾಗಿ ಸಂರಕ್ಷಿಸಿರುವುದಿಲ್ಲ. ಈ ಸೊಪ್ಪುಗಳಲ್ಲಿ ಸೂಕ್ಷ್ಮ ಜೀವಿಗಳು ಮತ್ತು ಕೀಟಗಳ ಮರಿ ಇರುವ ಸಾಧ್ಯತೆ ಇರುವುದರಿಂದ ಚೆನ್ನಾಗಿ ಈ ಹಸಿರು ತರಕಾರಿಗಳನ್ನು ತೊಳೆದಿಲ್ಲ ಎಂದಾದಲ್ಲಿ ಸೋಂಕು ನಿಮಗೆ ತಗುಲಬಹುದು.

ರಸ್ತೆಬದಿಯ ಜ್ಯೂಸ್‎ಗಳು

ರಸ್ತೆಬದಿಯ ಜ್ಯೂಸ್‎ಗಳು

ನಿಮಗೆ ಜ್ಯೂಸ್ ಕುಡಿಯಬೇಕು ಎಂದಾದಲ್ಲಿ ಮನೆಯಲ್ಲೇ ಅದನ್ನು ತಯಾರಿಸಿ. ರಸ್ತೆಬದಿಯ ಜ್ಯೂಸ್‎ಗಳು ಕಾಮಾಲೆ, ಅತಿಸಾರ ಮತ್ತು ಇತರೆ ಬ್ಯಾಕ್ಟೀರಿಯಾ ಸೋಂಕುಗಳನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ. ಈ ಜ್ಯೂಸ್‎ಗಳಲ್ಲಿ ಬಳಸುವ ಐಸ್‎ಗಳಲ್ಲಿ ನೊಣಗಳು ಕುಳಿತುಕೊಂಡಿರುತ್ತವೆ ಮತ್ತು ಜ್ಯೂಸ್ ಸುತ್ತಲೂ ಇವು ಹರಿದಾಡುತ್ತಿರುತ್ತವೆ.

ಮೀನು

ಮೀನು

ಮಳೆಗಾಲದಲ್ಲಿ ಸಮುದ್ರಾಹಾರ ಆಹಾರ ಕಲುಷಿತವನ್ನು ಉಂಟುಮಾಡುವುದರಿಂದ ಹೊಟ್ಟೆಯ ಸೋಂಕುಗಳನ್ನು ಉಂಟುಮಾಡಬಹುದು.

ರೆಡ್ ಮೀಟ್

ರೆಡ್ ಮೀಟ್

ಮಳೆಗಾದಲ್ಲಿ ರೆಡ್ ಮೀಟ್ ಸೇವನೆಯು ನಿಮ್ಮ ಜೀರ್ಣಕ್ರಿಯೆ ವ್ಯವಸ್ಥೆಗೆ ಹೊರೆಯನ್ನುಂಟು ಮಾಡುತ್ತದೆ. ಸಾಧ್ಯವಾದಲ್ಲಿ ಅದನ್ನು ಸೇವಿಸಿದಿರಿ.

ಕರಿದ ಆಹಾರಗಳು

ಕರಿದ ಆಹಾರಗಳು

ಮಳೆಗಾಲದಲ್ಲಿ ನಿಮ್ಮ ಜೀರ್ಣಕ್ರಿಯೆ ಪದ್ಧತಿಗಳು ನಿಧಾನವಾಗಿರುತ್ತವೆ. ಆದ್ದರಿಂದ ಕರಿದ ತಿನಿಸುಗಳನ್ನು ನೀವು ಸೇವಿಸಿದಲ್ಲಿ ಹೊಟ್ಟೆ ಉಬ್ಬಿಕೊಂಡಿರುವಂತೆ ನಿಮಗೆ ಭಾಸವಾಗುತ್ತದೆ.

ಬಿಳಿ ಅಕ್ಕಿ ಅನ್ನ

ಬಿಳಿ ಅಕ್ಕಿ ಅನ್ನ

ಬಿಳಿ ಅಕ್ಕಿ ಅನ್ನ ಕೂಡ ನಿಮ್ಮ ರೋಗವರ್ಧಕ ಶಕ್ತಿಯನ್ನು ಕುಗ್ಗಿಸುತ್ತದೆ. ನೀರಿನ ಧಾರಣಾ ಶಕ್ತಿಗೆ ಕಾರಣವಾಗಿ ನಿಮ್ಮ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಇದು ತಗ್ಗಿಸುತ್ತದೆ. ಮಳೆಗಾದಲ್ಲಿ ಆದಷ್ಟು ಸೇವನೆಯನ್ನು ಕಡಿಮೆ ಮಾಡಿ.

English summary

Avoid Eating Pani Puri When It Rains

Rainy season is surely a test for your immunity and the worst thing is the fact that certain diseases spread fast during the monsoons.It is better to curb your cravings for pani puri especially when it rains heavily. In fact, it is healthy to avoid eating any kind of street food during rains. Now, let us discuss about other foods to avoid in rainy season apart from pani puri.
Story first published: Monday, May 23, 2016, 20:05 [IST]
X
Desktop Bottom Promotion