ಮುಟ್ಟಿನ ದಿನಗಳಲ್ಲಿ ಆದಷ್ಟು ಈ ಚಟುವಟಿಕೆಗಳಿಂದ ದೂರವಿರಿ

ಅರಿತೋ, ಅರಿಯದೆಯೋ ಕೆಲವೊಮ್ಮೆ ಮುಟ್ಟಿನ ಸಮಯದಲ್ಲಿ ನೀವು ಮಾಡುವ ಕೆಲವೊಂದು ತಪ್ಪುಗಳು, ನಿಮ್ಮ ಆರೋಗ್ಯವನ್ನು ಇನ್ನಷ್ಟು ಹಿಂಡಿ ಹಿಪ್ಪೆ ಮಾಡಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದೆ ಓದಿ...

By: manu
Subscribe to Boldsky

ಮಾಸಿಕ ದಿನಗಳಲ್ಲಿ ಮಹಿಳೆಯರು ಕೆಲವಾರು ನೋವುಗಳನ್ನು ಅನುಭವಿಸುತ್ತಾರೆ. ಕೆಳಹೊಟ್ಟೆಯಲ್ಲಿ ಸಾಮಾನ್ಯದಿಂದ ತೀಕ್ಷ್ಣವಾದ ನೋವು, ಹಾರ್ಮೋನುಗಳ ಬದಲಾವಣೆಯ ಕಾರಣ ಮನೋಸ್ಥಿತಿಯಲ್ಲಿಯೂ ಬದಲಾವಣೆ, ರೇಗಾಟ, ಅಸಹನೆ, ಕೋಪಗೊಳ್ಳುವುದು ಮೊದಲಾದವುಗಳನ್ನು ಈ ದಿನಗಳಲ್ಲಿ ಕಾಣಬಹುದು.  ಯಮಯಾತನೆ ನೀಡುವ ಮುಟ್ಟಿನ ನೋವಿಗೆ ಪರಿಹಾರವೇನು?

ಸುಸ್ತು, ಆಸಕ್ತಿ ಇಲ್ಲದಿರುವುದು, ಮೈ ಸರಿಯಿಲ್ಲ ಎಂಬ ಭಾವನೆ ಇಡಿಯ ದಿನ ಮೂಡಿರುವುದು ಸಹಾ ಕಾಣಬರುತ್ತದೆ. ಹಿಂದಿನ ದಿನಗಳಲ್ಲಿ ಈ ಅವಧಿಯಲ್ಲಿ ಸಂಪೂರ್ಣ ರಜೆ ನೀಡುವ ಸಲುವಾಗಿ ಮನೆಯ ಹೊರಗಿನ ಕೋಣೆಯೊಂದರಲ್ಲಿ ಕಾಲ ಕಳೆಯುವಂತೆ ಮಾಡಲಾಗುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಇದು ಸಾಧ್ಯವಾಗದ ಕಾರಣ ಈ ದುಗುಡಗಳನ್ನು ಎದುರಿಸಿ ನಿತ್ಯದ ಕೆಲಸಗಳನ್ನು ಪೂರೈಸುವುದೇ ಜಾಣತನದ ಕ್ರಮವಾಗಿದೆ. ಮುಟ್ಟಿನ ನೋವನ್ನು ಕ್ಷಣ ಮಾತ್ರದಲ್ಲಿ ನಿಯಂತ್ರಿಸುವ ಸೂಪರ್ ಫುಡ್  
 

ಸುಮ್ಮನೇ ಹೊಟ್ಟೆನೋವು ಅಂದರೆ ಸಾಕು, ಅಕ್ಕ ಪಕ್ಕದವರಿಂದ ಪುಕ್ಕಟೆಯಾಗಿ ನೂರಾರು ಸಲಹೆಗಳು ಬರುತ್ತವೆ. ಇವುಗಳನ್ನು ಯಾವುದನ್ನು ಅನುಸರಿಸಬೇಕು ಅಥವಾ ಬಾರದು ಎಂಬ ದ್ವಂದ್ವದಲ್ಲಿ ಯಾವುದನ್ನೂ ಅನುಸರಿಸಲೇ ಆಗದೇ ಹೋಗುವುದು ಅಥವಾ ಒಂದು ಸಮಯದಲ್ಲಿ ಒಂದಕ್ಕಿಂತ ಹೆಚ್ಚು ವಿಧಾನ ಅಥವಾ ಔಷಧಿಗಳನ್ನು ಸೇವಿಸುವ ಪರಿಣಾಮವಾಗಿ ಆರೋಗ್ಯ ಇನ್ನಷ್ಟು ಬಿಗಡಾಯಿಸುವುದು ಸಹಾ ಕಂಡುಬರಬಹುದು.  ಮುಟ್ಟಿನ ಅವಧಿಯಲ್ಲಿ ಅಧಿಕ ರಕ್ತಸ್ರಾವಕ್ಕೆ ಆಯುರ್ವೇದ ಚಿಕಿತ್ಸೆ

ನಿಮ್ಮ ಆರೋಗ್ಯವನ್ನು ತಪಾಸಿಸಿ ನಿಮ್ಮ ವೈದ್ಯರೇ ಸೂಕ್ತ ಔಷಧಿಗಳನ್ನು ನೀಡಬಲ್ಲರೇ ಹೊರತು ಸ್ವತಃ ಪ್ರಯೋಗಿಸುವುದು ಸರ್ವಥಾ ಒಳ್ಳೆಯದಲ್ಲ. ಆದರೆ ಅರಿತೋ, ಅರಿಯದೆಯೋ ಈ ಸಮಯದಲ್ಲಿ ನಿಮ್ಮ ಕೆಲವು ಚಟುವಟಿಕೆಗಳು ನಿಮ್ಮ ಆರೋಗ್ಯವನ್ನು ಬಾಧಿಸುತ್ತಿರಬಹುದು. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದೆ ಓದಿ...

ಓಡುವುದು

ಮಾಸಿಕ ದಿನಗಳಲ್ಲಿ ಓಡುವುದು ಸರ್ವಥಾ ಸಲ್ಲದು. ಕೊಂಚ ದೂರಕ್ಕೇ ಆಗಲಿ, ಬಸ್ಸು ಬಿಟ್ಟು ಹೋಗುತ್ತದೆ ಎಂಬ ಅವಸರವೇ ಇರಲಿ, ಓಡುವುದರಿಂದ ಹೊಟ್ಟೆಯ ಭಾರ ಕೆಳಹೊಟ್ಟೆಯ ಮೇಲೆ ಬಿದ್ದು ಮಾಸಿಕ ದಿನಗಳ ನೋವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಆದ್ದರಿಂದ ಈ ದಿನಗಳಲ್ಲಿ ಓಡುವಿಕೆಗೆ ಸಂಪೂರ್ಣ ನಿಷೇಧವಿರಲಿ.

ಸಿದ್ಧ ಆಹಾರಗಳನ್ನು ಸೇವಿಸುವುದು

ಈ ಆಹಾರಗಳನ್ನು ಸಿದ್ಧಪಡಿಸುವಾಗ ಅಗ್ಗದ, ಅನಾರೋಗ್ಯಕರ ಮತ್ತು ಕೊಬ್ಬಿರುವ ಎಣ್ಣೆಗಳನ್ನೇ ಬಳಸಲಾಗುತ್ತದೆ. ಇದು ನಿಮ್ಮ ದೇಹದಲ್ಲಿ ಉರಿಯೂತವನ್ನುಂಟು ಮಾಡುತ್ತದೆ.

ಸಿದ್ಧ ಆಹಾರಗಳನ್ನು ಸೇವಿಸುವುದು

ಅಲ್ಲದೇ ಈಗಾಗಲೇ ಬಳಲಿರುವ ದೇಹ ಇನ್ನಷ್ಟು ಬಳಲಲು ಕಾರಣವಾಗುತ್ತದೆ. ಆದ್ದರಿಂದ ಎಷ್ಟೇ ಸುಂದರವಿರಲಿ, ಎಷ್ಟೇ ಖ್ಯಾತಿಯನ್ನು ಪಡೆದಿರಲಿ, ಈ ಆಹಾರಗಳತ್ತ ನೋಡುವುದೂ ಬೇಡ.

ಕೊಬ್ಬುಯುಕ್ತ ಆಹಾರ ಸೇವನೆ

ವಿಶೇಷವಾಗಿ ಮಾಂಸಾಹಾರದಲ್ಲಿರುವ ಕೊಬ್ಬು ಸಂತುಲಿತ ಕೊಬ್ಬುಗಳಾಗಿದ್ದು ಇವು ಸಹಾ ದೇಹದಲ್ಲಿ ಉರಿಯೂತವುಂಟುಮಾಡಲು ಕಾರಣವಾಗಬಹುದು. ಆದ್ದರಿಂದ ಈ ದಿನಗಳಲ್ಲಿ ಕೊಬ್ಬಿನ ಅಂಶ ಹೆಚ್ಚಿರುವ ಯಾವುದೇ ಆಹಾರಗಳನ್ನು ಸೇವಿಸಬಾರದು.

ಕಾಫಿ

ಕಾಫಿಯಲ್ಲಿ ಹೆಚ್ಚಿನ ಪ್ರಮಾಣದ ಕೆಫೀನ್ ಇದೆ. ಇದು ಹೊಟ್ಟೆಯ ನೋವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಅಲ್ಲದೇ ನಿದ್ದೆ ಬರದಿರುವಂತೆ ಮಾಡಿ ನೋವನ್ನು ಇಡಿಯ ದಿನ ಅನುಭವಿಸುವಂತೆ ಮಾಡುತ್ತದೆ. ಆದ್ದರಿಂದ ಅಷ್ಟೂ ದಿನಗಳ ಕಾಲ ಕಾಫಿ ಸೇವನೆಗೂ ರಜೆ ಇರಲಿ.

ತಡರಾತ್ರಿಯವರೆಗೆ ಎಚ್ಚರವಾಗಿರುವುದು

ಹೊಟ್ಟೆಯ ತೊಂದರೆ ಹೆಚ್ಚಲು ತಡರಾತ್ರಿಯವರೆಗೆ ಎಚ್ಚರಾಗಿರುವುದು ಇನ್ನೊಂದು ಕಾರಣವಾಗಿದೆ. ಈ ಸಮಯದಲ್ಲಿ ಮಹಿಳೆಯರು ಇತರ ದಿನಗಳಿಗಿಂತಲೂ ಕೊಂಚ ಹೆಚ್ಚೇ ಆರಾಮ ತೆಗೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಆದಷ್ಟು ಬೇಗನೇ ಮಲಗಿ ಕೊಂಚ ಹೆಚ್ಚೇ ಕಾಲ ಸುಖವಾಗಿ ನಿದ್ರಿಸುವ ಮೂಲಕ ದೇಹ ಸಹಜಸ್ಥಿತಿಗೆ ಬರಲು ಅನುಕೂಲವಾಗುತ್ತದೆ.

ಭಾರೀ ವ್ಯಾಯಮಗಳು

ಈ ದಿನಗಳಲ್ಲಿ ಮಹಿಳೆಯರು ಕೇವಲ ಸರಳ ವ್ಯಾಯಾಮಗಳನ್ನು ಮಾತ್ರ ಮಾಡಬೇಕು. ನಿತ್ಯವೂ ಮಾಡುತ್ತಿದ್ದೇನೆ, ಏನೂ ಆಗುವುದಿಲ್ಲ ಎಂಬ ಕಾರಣಗಳನ್ನು ಒಡ್ಡಿ ಭಾರೀ ವ್ಯಾಯಾಮಗಳನ್ನು ಮಾಡಬಾರದು. ಇದು ಮಾಸಿಕ ನೋವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಕುಳಿತುಕೊಳ್ಳುವುದನ್ನು ಕಡಿಮೆ ಮಾಡಿ

ಸುಸ್ತು ಎಂದು ಇಡಿಯ ದಿನ ಕುಳಿತೇ ಇರುವ ಮೂಲಕವೂ ನಿಧಾನವಾಗಿ ಹೊಟ್ಟೆನೋವು ಹೆಚ್ಚಬಹುದು. ಆದ್ದರಿಂದ ಕುಳಿತು ಆರಾಮ ಮಾಡುವ ಬದಲು ಬೆನ್ನ ಮೇಲೆ ಮಲಗಿ

ಕುಳಿತುಕೊಳ್ಳುವುದನ್ನು ಕಡಿಮೆ ಮಾಡಿ

ಅಥವಾ ಅಡ್ಡಲಾಗಿ ಮಲಗಿ ವಿಶ್ರಾಂತಿ ತೆಗೆದುಕೊಳ್ಳಬೇಕು. ಹೆಚ್ಚು ಹೊತ್ತು ಕುಳಿತುಕೊಳ್ಳುವುದನ್ನು ಆದಷ್ಟೂ ಕಡಿಮೆ ಮಾಡಬೇಕು.

ಊಟ ಬಿಡುವುದು

ಕೆಲವೊಮ್ಮೆ ಹಾರ್ಮೋನುಗಳ ಏರುಪೇರಿನ ಕಾರಣ ಹಸಿವೇ ಇಲ್ಲವಾಗುತ್ತದೆ. ಅಥವಾ ನಾಲಿಗೆಯ ರುಚಿ ಕೆಟ್ಟು ಯಾವ ತಿಂಡಿಯೂ ರುಚಿಸದಾಗುತ್ತದೆ. ಈ ಅವಧಿಯಲ್ಲಿ ದೇಹ ಹೆಚ್ಚಿನ ಪ್ರಮಾಣದ ರಕ್ತವನ್ನು ಕಳೆದುಕೊಳ್ಳುವ ಕಾರಣ ದೇಹ ಹೆಚ್ಚು ಆಯಾಸಗೊಳ್ಳುತ್ತದೆ.

ಊಟ ಬಿಡುವುದು

ಈ ಹೊತ್ತಿನಲ್ಲಿ ಇತರ ಹೊತ್ತಿಗಿಂತಲೂ ಹೆಚ್ಚು ಪೌಷ್ಟಿಕ ಮತ್ತು ಕಬ್ಬಿಣದ ಅಂಶ ಹೆಚ್ಚಿರುವ ಆಹಾರದ ಅಗತ್ಯವಿದೆ. ಹೀಗಿದ್ದಾಗ ಊಟವನ್ನೇ ಮಾಡದೇ ಇದ್ದರೆ ದೇಹಕ್ಕೆ ಪೋಷಕಾಂಶಗಳ ತೀವ್ರ ಕೊರತೆಯುಂಟಾಗುತ್ತದೆ.

ಸೂಕ್ಷ್ಮ ಸ್ಥಳಗಳನ್ನು ಸ್ವಚ್ಛಗೊಳಿಸಲು ಸೋಪು ಬಳಸುವುದು

ಈ ಅವಧಿಯಲ್ಲಿ ಮಹಿಳೆಯರು ಸೂಕ್ಷ್ಮಸ್ಥಳಗಳನ್ನು ಆಗಾಗ ಸ್ವಚ್ಛಗೊಳಿಸುತ್ತಿರಬೇಕು. ಆದರೆ ಮುಖದ ಚರ್ಮದಂತೆಯೇ ಈ ಭಾಗದ ಚರ್ಮವೂ ಅತಿ ಸೂಕ್ಷ್ಮವಾಗಿರುವ ಕಾರಣ ಮೈಸೋಪು ಸಲ್ಲದು. ಬದಲಿಗೆ ಸೌಮ್ಯವಾದ ದ್ರಾವಣ ಅಥವಾ ಇದೇ ಕಾರ್ಯಕ್ಕೆಂದು ಲಭ್ಯವಿರುವ ದ್ರಾವಣಗಳನ್ನು ಬಳಸಬೇಕು.

ಸೂಕ್ಷ್ಮ ಸ್ಥಳಗಳನ್ನು ಸ್ವಚ್ಛಗೊಳಿಸಲು ಸೋಪು ಬಳಸುವುದು

ಸೋಪು ಅತಿ ಹೆಚ್ಚು ಕ್ಷಾರೀಯವಾದ ಕಾರಣ ಸೂಕ್ಷ್ಮ ಅಂಗಗಳಲ್ಲಿರುವ ಅಗತ್ಯ ತೇವಾಂಶ ಮತ್ತು ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳನ್ನೇ ನಿವಾರಿಸಿ ಸೋಂಕು ಹೆಚ್ಚಲು ಕಾರಣವಾಗಬಹುದು.

ಈ ಅವಧಿಯಲ್ಲಿ ಕೂಡುವುದು

ಈ ಅವಧಿಯಲ್ಲಿ ಕೂಡುವುದು ಸರ್ವಥಾ ತರವಲ್ಲ. ಪ್ರಾರಂಭ ಮತ್ತು ಕೊನೆಯ ದಿನಗಳಲ್ಲಿ ಅನಿವಾರ್ಯ ಎನಿಸಿದರೆ ಸುರಕ್ಷತೆಯ ವಿಧಾನಗಳನ್ನು ಖಂಡಿತಾ ಅನುಸರಿಸಬೇಕು. ಇದರಿಂದ ಸೋಂಕು ಹರಡದಂತೆ ತಡೆಯಬಹುದು.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Wednesday, October 19, 2016, 12:35 [IST]
English summary

Are You On Your Periods? Then Avoid Doing These Things

Hormonal changes, light to severe abdominal pain, mood swings and irritation are a few of the major issues faced by women when they are on their period. A feeling of discomfort, weakness and fatigue are some of the conditions which women might experience during their periods. If you follow certain things and ways it helps in coping up during this time of the month.
Please Wait while comments are loading...
Subscribe Newsletter