For Quick Alerts
ALLOW NOTIFICATIONS  
For Daily Alerts

ಸಿಪ್ಪೆಯ ಮೇಲೆ ಚುಕ್ಕೆ ಬಿದ್ದ ಬಾಳೆಹಣ್ಣಿನ ಅದ್ಭುತ ಪವರ್....

ಆರೋಗ್ಯ ತಜ್ಞರ ಪ್ರಕಾರ ಚುಕ್ಕೆ ಬಿದ್ದ ಸಿಪ್ಪೆಯ ಬಾಳೆ ಹಣ್ಣು, ಆರೋಗ್ಯಕ್ಕೆ ಬಹಳ ಒಳ್ಳೆಯದು

By Manohar
|

ವರ್ಷವಿಡೀ, ಎಲ್ಲೆಡೆ ಮತ್ತು ಅಗ್ಗವಾಗಿ ಸಿಗುವ ಹಣ್ಣು ಎಂದರೆ ಬಾಳೆಹಣ್ಣು. ಬಾಳೆಗೊನೆ ಹಣ್ಣಾಗಿದ್ದರೂ ಒಂದು ವೇಳೆ ಇದರಲ್ಲಿ ಚುಕ್ಕೆ ಬಿದ್ದಿದ್ದರೆ ಹೆಚ್ಚಿನವರು ಈ ಬಾಳೆಹಣ್ಣುಗಳನ್ನು ಮುಟ್ಟಲಿಕ್ಕೇ ಹೋಗುವುದಿಲ್ಲ. ಏಕೆಂದರೆ ಇವರ ಪ್ರಕಾರ 'ಇದು ಒಳಗಿನಿಂದ ಕೊಳೆತಿದೆ'. ವಾಸ್ತವವಾಗಿ ಒಳಗಣ ತಿರುಳು ಹಣ್ಣಾಗಿರುವ ಸಂಕೇತವೇ ಚುಕ್ಕೆಗಳು. ಒಂದು ವೇಳೆ ಚುಕ್ಕೆ ಬೀಳದೇ ಕೇವಲ ಸಿಪ್ಪೆ ಹಳದಿಯಾಗಿದ್ದರೆ ಇದು ಬಲವಂತವಾಗಿ ಹಣ್ಣಾಗಿಸಿದ ಬಾಳೆಹಣ್ಣು ಎಂದು ತಿಳಿದುಕೊಳ್ಳಬೇಕು. ದಿನಕ್ಕೆರಡು ಬಾಳೆಹಣ್ಣು ಸೇವಿಸಿ, ವೈದ್ಯರಿಂದ ದೂರವಿರಿ!

ಹಳ್ಳಿಯವರೂ ಇಂದು ತಿಳಿದುಕೊಂಡಿರುವ ಪ್ರಕಾರ ಕಾರ್ಬೆಟ್ (ವಾಸ್ತವವಾಗಿ ಕ್ಯಾಲ್ಸಿಯಂ ಕಾರ್ಬೈಡ್ ಎಂಬ ಸುಣ್ಣದ ಕಲ್ಲು) ಬಾಳೆಗೊನೆಯ ಒಳಗೆ ಇಟ್ಟರೆ ಒಂದೇ ದಿನದಲ್ಲಿ ಹಣ್ಣಾಗುತ್ತದೆ. ಈ ಗುಟ್ಟನ್ನು ತಿಳಿದುಕೊಂಡ ವ್ಯಾಪಾರಿಗಳು ಕಾರ್ಬೆಟ್ ಉಪಯೋಗಿಸಿ ಸಿಪ್ಪೆಯನ್ನು ಹಳದಿಯಾಗಿಸಿ ಚಿನ್ನದ ಬಣ್ಣದ ಬಾಳೆಹಣ್ಣನ್ನು ಮಾರುತ್ತಾರೆ. ಗ್ರಾಹಕರೂ ಚುಕ್ಕೆಯಿಲ್ಲದ ಬಾಳೆ ಅತ್ಯುತ್ತಮ ಎಂದೇ ಇದನ್ನು ಕೊಂಡೊಯ್ಯುತ್ತಾರೆ.

ಆದರೆ ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ? ಬರೆಯ ಸಿಪ್ಪೆ ಹಳದಿಯಾದ ಬಾಳೆ ಉತ್ತಮವೇ? ಚುಕ್ಕೆ ಬಿದ್ದ ಸಿಪ್ಪೆಯ ಬಾಳೆಹಣ್ಣು ಆರೋಗ್ಯಕರವೇ? ತಜ್ಞರ ಪ್ರಕಾರ ಹಳದಿಯಾದ ಬಾಳೆಯಹಣ್ಣು ಅಪಾಯಕಾರಿಯಲ್ಲದಿದ್ದರೂ ಅನುಕೂಲಕರವೂ ಅಲ್ಲ. ಬಾಳೆಯ ಹಣ್ಣಿನ ಪ್ರಯೋಜನಗಳ ಪೈಕಿ ಬಹಳಷ್ಟನ್ನು ಪಡೆಯಲು ಈ ವಿಧಾನದಿಂದ ಸಾಧ್ಯವಿಲ್ಲ. ಬಾಳೆ ಹಣ್ಣಿನ ಸಿಪ್ಪೆಯ 10 ಅದ್ಭುತ ಪ್ರಯೋಜನಗಳು

ಆದರೆ ಚುಕ್ಕೆಬಿದ್ದ ಸಿಪ್ಪೆಯ ಬಾಳೆಹಣ್ಣು ಅತ್ಯುತ್ತಮವಾಗಿದ್ದು ಬಾಳೆಯ ಪೂರ್ಣ ಮತ್ತು ಇನ್ನೊಂದು ವಿಧಾನದಲ್ಲಿ ಪಡೆಯಲಾಗದ ಇತರ ಪ್ರಯೋಜನಗಳನ್ನೂ ಪಡೆಯಬಹುದು. ಚುಕ್ಕೆ ಬಿದ್ದ ಸಿಪ್ಪೆಯ ಹಣ್ಣಿನ ಒಂದೇ ತೊಂದರೆ ಎಂದರೆ ಇದನ್ನು ಹೆಚ್ಚು ಹೊತ್ತು ಕಾಪಾಡಲಾಗದೇ ಇರುವುದು. ಎರಡನೆಯ ದಿನಕ್ಕೆ ಒಳಗಣ ತಿರುಳು ನಿಧಾನವಾಗಿ ಕೊಳೆಯುತ್ತಾ ಬರುತ್ತದೆ. ಹೀಗಾದರೂ ಇದನ್ನು ಸ್ಮೂಥಿ ಮತ್ತು ಜ್ಯೂಸ್ ಗಳಲ್ಲಿ ಬೆರೆಸಿ ಬಳಸಬಹುದು. ತಜ್ಞರು ಚುಕ್ಕೆ ಬಿದ್ದ ಸಿಪ್ಪೆಯ ಬಾಳೆಯಹಣ್ಣನ್ನು ಸೇವಿಸಲು ಏಕೆ ಸಲಹೆ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರಗಳ ರೂಪದಲ್ಲಿ ಕೆಳಗಿನ ಸ್ಲೈಡ್ ಶೋ ಮೂಲಕ ಮಾಹಿತಿಗಳನ್ನು ನೀಡಲಾಗಿದೆ, ಮುಂದೆ ಓದಿ..

ಪ್ರಯೋಜನ #1

ಪ್ರಯೋಜನ #1

ಈ ಹಣ್ಣಿನಲ್ಲಿ ಪೊಟ್ಯಾಶಿಯಂ ಬಿಡುಗಡೆಯಾಗಿರುತ್ತದೆ. ಇದು ವಿಶೇಷವಾಗಿ ಮಹಿಳೆಯರಿಗೆ ಮಾಸಿಕ ದಿನಗಳಲ್ಲಿ ಮಾಂಸಖಂಡಗಳ ಸೆಡೆತವನ್ನು ಕಡಿಮೆಯಾಗಿಸಲು ನೆರವಾಗುತ್ತದೆ.

ಪ್ರಯೋಜನ #1

ಪ್ರಯೋಜನ #1

ಇನ್ನುಳಿದಂತೆ ಪೊಟ್ಯಾಶಿಯಂ ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶವಾಗಿದ್ದು ದಿನಕ್ಕೆರಡು ಬಾಳೆಹಣ್ಣು ತಿನ್ನುವ ಮೂಲಕ ದಿನದ ಅಗತ್ಯ ಪ್ರಮಾಣದ ಪೊಟ್ಯಾಶಿಯಂ ಅನ್ನು ಪಡೆಯಬಹುದು.

Most Read:ಆರೋಗ್ಯ ಟಿಪ್ಸ್: ಸರ್ವರೋಗಕ್ಕೂ ವೀಳ್ಯದೆಲೆಯೇ ಮನೆಮದ್ದು...

ಪ್ರಯೋಜನ #2

ಪ್ರಯೋಜನ #2

ಒಂದು ವೇಳೆ ಕರುಳು ಅಥವಾ ಹೊಟ್ಟೆಯಲ್ಲಿ ಉರಿ ಇದ್ದರೆ, ವ್ರಣಗಳಾಗಿದ್ದರೆ ಬಾಳೆಹಣ್ಣು ಅತ್ಯುತ್ತಮವಾದ ಆಹಾರವಾಗಿದೆ. ಇದು ಸುಲಭವಾಗಿ ಜೀರ್ಣವಾಗುವ ಮೂಲಕ ವ್ರಣಗಳ ಮೇಲೆ ಭಾರಿಯಾಗದೇ ಶೀಘ್ರವಾಗಿ ಮಾಗಲು ನೆರವಾಗುತ್ತದೆ.

ಪ್ರಯೋಜನ #3

ಪ್ರಯೋಜನ #3

ಈ ತಿರುಳಿನಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿ ಬಿಡುಗಡೆಯಾಗಿದ್ದು ರಕ್ತಹೀನತೆಯಿಂದ ರಕ್ಷಿಸುತ್ತದೆ.

ಪ್ರಯೋಜನ #4

ಪ್ರಯೋಜನ #4

ಈ ತಿರುಳು ಸುಲಭವಾಗಿ ಜೀರ್ಣವಾಗುವ ಮೂಲಕ ಬೇಗನೇ ರಕ್ತಕ್ಕೆ ಸೇರಿ ತಕ್ಷಣವೇ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಅಲ್ಲದೇ ಬಳಲಿದ ಸ್ನಾಯುಗಳಿಗೆ ಚೈತನ್ಯ ನೀಡುತ್ತದೆ. ಆದ್ದರಿಂದ ದೈಹಿಕವಾಗಿ ಬಳಲಿದ್ದಾಗ ಈ ಬಾಳೆಹಣ್ಣು ಸೇವಿಸುವುದು ಉತ್ತಮ.

Most Read:ಅಕ್ಟೋಬರ್ 2018ರ ತಿಂಗಳ ಭವಿಷ್ಯ-ನಿಮ್ಮದೂ ಪರಿಶೀಲಿಸಿಕೊಳ್ಳಿ

ಪ್ರಯೋಜನ #5

ಪ್ರಯೋಜನ #5

ಈ ಹಣ್ಣಿನಲ್ಲಿರುವ ಟ್ರಿಪ್ಟೋಫಾನ್ (Tryptophan) ಎಂಬ ಅಮೈನೋ ಆಮ್ಲ ಸೆರೋಟೋನಿನ್ ಎಂಬ ಹಾರ್ಮೋನು ಉತ್ಪತ್ತಿಯಾಗಲು ನೆರವಾಗುತ್ತದೆ.

ಪ್ರಯೋಜನ #5

ಪ್ರಯೋಜನ #5

ಮೆದುಳನ್ನು ಶಾಂತವಾಗಿರಿಸಲು ಈ ಸೆರೋಟೋನಿನ್ ಅಗತ್ಯವಾಗಿದೆ. ನಿತ್ಯವೂ ಕಳಿತ ಬಾಳೆಹಣ್ಣುಗಳನ್ನು ತಿನ್ನುವ ಮೂಲಕ ಮಾನಸಿಕ ಖಿನ್ನತೆಯನ್ನು ಕಡಿಮೆ ಮಾಡಿಕೊಳ್ಳಬಹುದು.

ಪ್ರಯೋಜನ #6

ಪ್ರಯೋಜನ #6

ಒಂದು ವೇಳೆ ಅಜೀರ್ಣ, ಮಲಬದ್ಧತೆ ಮೊದಲಾದ ತೊಂದರೆಗಳು ಬಾಧಿಸುತ್ತಿದ್ದರೆ ನಿತ್ಯವೂ ಕೆಲವು ಬಾಳೆಹಣ್ಣುಗಳನ್ನು ತಿನ್ನುವ ಅಭ್ಯಾಸವಿಟ್ಟುಕೊಂಡರೆ ಉತ್ತಮ. ಇವು ಸುಲಭವಾಗಿ ಜೀರ್ಣವಾಗುವುದು ಮಾತ್ರವಲ್ಲದೇ ಇದರಲ್ಲಿರುವ ಕರಗದ ನಾರು ವಿಸರ್ಜನಾ ಕ್ರಿಯೆಯನ್ನು ಸುಲಭವಾಗಿಸುತ್ತದೆ.

ಪ್ರಯೋಜನ #7

ಪ್ರಯೋಜನ #7

ಒಂದು ವೇಳೆ ಊಟದ ಬಳಿಕ ಹೊಟ್ಟೆಯಲ್ಲಿ ಗ್ಯಾಸ್ ತೊಂದರೆ ಎದುರಾದರೆ ಈ ಬಾಳೆಹಣ್ಣನ್ನು ತಿನ್ನುವ ಮೂಲಕ ಹುಳಿತೇಗು, ಹೊಟ್ಟೆಯುರಿ ಮೊದಲಾದ ತೊಂದರೆಗಳನ್ನು ನಿವಾರಿಸಬಹುದು.

ಪ್ರಯೋಜನ#8

ಪ್ರಯೋಜನ#8

ರಕ್ತದ ಒತ್ತಡ ಸಮಪ್ರಮಾಣದಲ್ಲಿರಲು ದೇಹದಲ್ಲಿ ಉತ್ತಮ ಪ್ರಮಾಣದ ಪೊಟ್ಯಾಶಿಯಂ ಅಗತ್ಯ. ನಿತ್ಯವೂ ಕಳಿತ ಬಾಳೆಹಣ್ಣಿನ ಸೇವನೆಯಿಂದ ಅಗತ್ಯ ಪ್ರಮಾಣದ ಪೊಟ್ಯಾಶಿಯಂ ಲಭ್ಯವಾಗಿ ರಕ್ತದೊತ್ತಡ ಆರೋಗ್ಯಕರ ಮಟ್ಟದಲ್ಲಿರುತ್ತದೆ.

English summary

Are Bananas With Black Spots Healthy?

Most of us hate the mere sight of black spotted bananas. And when they are ripe, they look more repulsive. We might even throw them away to avoid eating them. But what if they are good for health? So, let us know about their health benefits.
X
Desktop Bottom Promotion