For Quick Alerts
ALLOW NOTIFICATIONS  
For Daily Alerts

ಮೀನಿನೆಣ್ಣೆ ಆರೋಗ್ಯ ವೃದ್ಧಿಸುವ ಅದ್ಭುತ ಎಣ್ಣೆ

By Arshad
|

ಮೀನಿನೆಣ್ಣೆ ಅಥವಾ ಮೀನಿನ ಎಣ್ಣೆ ನೂರಾರು ವರ್ಷಗಳಿಂದ ಆರೋಗ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಉಪಯೋಗಿಸಲಾಗುತ್ತಾ ಬರಲಾಗಿದೆ. ಇತ್ತೀಚೆಗೆ ಇದು ಮಾತ್ರೆಗಳ ರೂಪದಲ್ಲಿ ಲಭ್ಯವಾಗತೊಡಗಿದ ಬಳಿಕ (cod liver oil capsules) ಜನಸಾಮಾನ್ಯರಿಗೂ ಆರೋಗ್ಯವೃದ್ಧಿಯ ಈ ಅದ್ಭುತ ಎಣ್ಣೆ ಸುಲಭವಾಗಿ ದೊರಕುವಂತಾಗಿದೆ. ಈ ಎಣ್ಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಒಮೆಗಾ 3 ಕೊಬ್ಬಿನ ತೈಲ ಹಾಗೂ ವಿಟಮಿನ್ ಎ ಮತ್ತು

ಡಿ ಇರುವ ಕಾರಣ ಇದರ ಸೇವನೆಯಿಂದ ಖಿನ್ನತೆ, ಹೊಟ್ಟೆಯಲ್ಲಿ ಉರಿ, ಸಂಧಿವಾತ, atherosclerosis ಅಥವಾ ಹೃದಯಸ್ತಂಭನದ ಸಾಧ್ಯತೆಯ ತೊಂದರೆ, ಕ್ಷಯ ಮೊದಲಾದ ತೊಂದರೆಗಳನ್ನು ನಿವಾರಿಸುವ ಜೊತೆಗೇ ಗಾಯಗಳನ್ನು ಬೇಗನೇ ಮಾಗುವಂತೆ ಸಹಾ ಮಾಡುತ್ತದೆ. ಆದರೆ ಇತ್ತೀಚಿನ ಸಂಶೋಧನೆಯ ಪ್ರಕಾರ ಈ ಎಣ್ಣೆ ತೂಕ ಕಳೆದುಕೊಳ್ಳಲೂ ನೆರವಾಗುತ್ತದೆ.

ಇತ್ತೀಚೆಗೆ ಇಲಿಗಳ ಮಾಡಿದ ಸಂಶೋಧನೆಗಳ ಪ್ರಕಾರ ತೂಕ ಇಳಿಸುವಲ್ಲಿ ಇದು ಪರಿಣಾಮಕಾರಿ ಎಂದು ಕಂಡು ಬಂದಿದೆ. ಇದನ್ನು ಸಮರ್ಥಿಸಿಕೊಳ್ಳಲು ಇಲಿಗಳನ್ನು ಎರಡು ಗುಂಪುಗಳಾಗಿ ವಿಭಜಿಸಿ ಒಂದು ಗುಂಪಿಗೆ ಮೀನಿನೆಣ್ಣೆ ಮತ್ತು ಆಹಾರವನ್ನು ನೀಡಲಾಯಿತು. ಇನ್ನೊಂದು ಗುಂಪಿಗೆ ಅಷ್ಟೇ ಪ್ರಮಾಣದ ಮತ್ತು ಅದೇ ಆಹಾರವನ್ನು ಮೀನಿನೆಣ್ಣೆ ರಹಿತವಾಗಿ ನೀಡಾಲಾಯಿತು. ಕೆಲವು ದಿನಗಳಲ್ಲಿ ಮೀನೆಣ್ಣೆ ಇಲ್ಲದ ಆಹಾರ ಸೇವಿಸಿದ ಇಲಿಗಳು ಹೆಚ್ಚು ತೂಕ ಪಡೆದುಕೊಂಡಿದ್ದವು.

ಅಲ್ಲದೇ ಮೀನೆಣ್ಣೆ ಸೇವಿಸಿದ ಇಲಿಗಳ ದೇಹದಲ್ಲಿ ಇನ್ಸುಲಿನ್ ಪ್ರಮಾಣ ಉತ್ತಮವಾಗಿದ್ದು ಇಲಿಗಳ ಆರೋಗ್ಯವೂ ವೃದ್ಧಿಸಿತ್ತು. ದೇಹದ ತಾಪಮಾನವೂ ಕೊಂಚ ಹೆಚ್ಚಿದ್ದು ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸಿತ್ತು. ಅಲ್ಲದೇ ಈ ಇಲಿಗಳು ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬನ್ನು ಹೆಚ್ಚು ಉರಿಸುವ ಮೂಲಕ ತೂಕ ಹೆಚ್ಚದಿರುವಂತೆ ಕಾಪಾಡಿಕೊಂಡಿದ್ದವು. ಈ ಸಂಶೋಧನೆಯ ಫಲಿತಾಂಶ ಮನುಷ್ಯರಿಗೂ ಆಶಾವಾದ ಹುಟ್ಟಿಸಿದೆ. ಇದರ ಸೇವನೆಯಿಂದ ಆರೋಗ್ಯ ವೃದ್ಧಿಸುವ ಜೊತೆಗೇ ತೂಕವೂ ಗಮನಾರ್ಹವಾಗಿ ಕಡಿಮೆಯಾಗಲಿದೆ. ಈ ಅದ್ಭುತ ಎಣ್ಣೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ:

ಮೀನಿನೆಣ್ಣೆ ಆರೋಗ್ಯವೃದ್ಧಿಸುವ ಅದ್ಭುತ ಎಣ್ಣೆ

ಮೀನಿನೆಣ್ಣೆ ಆರೋಗ್ಯವೃದ್ಧಿಸುವ ಅದ್ಭುತ ಎಣ್ಣೆ

ಮೀನಿನೆಣ್ಣೆಯ ಸೇವನೆಯಿಮ್ದ ಸ್ನಾಯುಗಳ ಬೆಳವಣಿಗೆಗೆ ಚುರುಕು ಪಡೆಯುತ್ತದೆ. ಇದಕ್ಕಾಗಿ ಸಂಗ್ರಹವಾಗಿದ್ದ ಕೊಬ್ಬನ್ನು ಉರಿಸಬೇಕಾಗಿ ಬರುವುದರಿಂದ ತೂಕ ಹೆಚ್ಚುವುದಿಲ್ಲ. ಒಂದು ಸಂಶೋಧನೆಯಲ್ಲಿ ಮೀನೆನೆಣ್ಣೆಯನ್ನು ಸೇವಿಸಿದವರ ಆರೋಗ್ಯವನ್ನು ಕೆಲದಿನಗಳ ಕಾಲ ಪರಿಶೀಲಿಸಿದಾಗ ಇವರ ದೇಹದ ಮಾಂಸಖಂಡಗಳು ಹುರಿಗಟ್ಟಿದ್ದರೂ ತೂಕದಲ್ಲಿ ಕಡಿಮೆಯಾಗಿದ್ದುದು ಕಂಡುಬಂದಿದೆ. ಇದು ಯಾವುದೇ ಹೆಚ್ಚಿನ ವ್ಯಾಯಾಮ ಅಥವಾ ಊಟದಲ್ಲಿ ಕಡಿಮೆ ಮಾಡದೇ ಸಾಧ್ಯವಾಗಿದ್ದುದು ಖಂಡಿತವಾಗಿಯೂ ಮೀನಿನೆಣ್ಣೆಯ ಫಲವೇ ಆಗಿದೆ.

ಮಾಹಿತಿ 2

ಮಾಹಿತಿ 2

ಸಾಮಾನ್ಯವಾಗಿ ತೂಕದ ಹೆಚ್ಚಳಕ್ಕೆ ಕಾರಣ ಕಂಡ ತಿಂಡಿ ಊಟಗಳನ್ನೆಲ್ಲಾ ತಿನ್ನಲು ಮನಸ್ಸಾಗುವುದು ಹಾಗೂ ಊಟ ಪ್ರಾರಂಭವಾದ ಬಳಿಕ ಇದಕ್ಕೆ ಕಡಿವಾಣ ಹಾಕಲು ಮನಸ್ಸು ಹಿಂದೇಟು ಹಾಕುವುದು. ಆದರೆ ಮೀನೆಣ್ಣೆಯ ಸೇವನೆಯಿಂದ ಈ ಪ್ರಲೋಭನೆಗೆ ತಡೆ ಉಂಟಾಗುವ ಕಾರಣ ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸೇವಿಸುವುದರಿಂದ ತಪ್ಪಿದಂತಾಗುತ್ತದೆ. ಇದು ತೂಕ ಹೆಚ್ಚದಿರುವಂತೆ

ನೋಡಿಕೊಳ್ಳುತ್ತದೆ.

ಮಾಹಿತಿ 3

ಮಾಹಿತಿ 3

ಮೀನೆಣ್ಣೆಯಲ್ಲಿರುವ ಕೆಲವು ಪೋಷಕಾಂಶಗಳು ಮೆದುಳಿಗೆ ನೆಮ್ಮದಿ ನೀಡುವ ರಾಸಾಯನಿಕವಾದ ಸೆರೋಟೋನಿನ್ ಪ್ರಮಾಣವನ್ನು ನಿಯಂತ್ರಿಸುತ್ತದೆ. ಪರಿಣಾಮವಾಗಿ ಭಾವೋದ್ವೇಗ, ಖಿನ್ನತೆ ಮೊದಲಾದ ಮಾನಸಿಕ ತೊಂದರೆಗಳಿಂದ ಮುಕ್ತಿ ಪಡೆಯಬಹುದು.

ಮಾಹಿತಿ 4

ಮಾಹಿತಿ 4

ಮೀನೆಣ್ಣೆ ಸ್ನಾಯುಗಳನ್ನು ಬೆಳೆಸಲು ಮತ್ತು ಕೊಬ್ಬನ್ನು ಕರಗಿಸಲು ನೆರವಾಗುತ್ತದೆ. ಇದಕ್ಕೆ ನಿತ್ಯದ ಊಟದಲ್ಲಿ ಕೊಂಚ ಪ್ರಮಾಣದಲ್ಲಿ ಮೀನೆಣ್ಣೆ ಸೇರಿಸಿದರೆ ಸಾಕು. ಹೆಚ್ಚಿನ ವ್ಯಾಯಾಮ ಅಥವಾ ಊಟದಲ್ಲಿ ಬದಲಾವಣೆಯ ಅಗತ್ಯವಿಲ್ಲದ ಕಾರಣ ತೂಕ ಇಳಿಸುವವರಿಗೆ ಈ ಎಣ್ಣೆ ಅತ್ಯುತ್ತಮವಾಗಿದೆ.

ಮಾಹಿತಿ 5

ಮಾಹಿತಿ 5

ತೂಕದ ಹೆಚ್ಚಳಕ್ಕೆ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ಪ್ರಮುಖ ಕಾರಣ. ಮೀನೆಣ್ಣೆಯ ಸೇವನೆಯಿಂದ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ಕರಗಲು ಪ್ರಾರಂಭವಾಗುತ್ತದೆ. ಅಲ್ಲದೇ ದೇಹದಲ್ಲಿ ಇನ್ಸುಲಿನ್ ಕ್ಷಮತೆಯನ್ನು ಹೆಚ್ಚಿಸುತ್ತದೆ. ಇದರಿಂದ ಜೀರ್ಣವಾದ ಆಹಾರ ಕೊಬ್ಬಾಗಿ ಪರಿವರ್ತನೆಗೊಳ್ಳುವ ಪ್ರಮಾಣ ಅತಿಯಾಗಿ ಕಡಿಮೆಯಾಗುತ್ತದೆ.

ಮಾಹಿತಿ 6

ಮಾಹಿತಿ 6

ಮೀನೆಣ್ಣೆ ಅಪ್ಪಟ ರೂಪದಲ್ಲಿ ಲಭ್ಯವಾಗುವುದು ಕೊಂಚ ಕಷ್ಟಕರ. ಏಕೆಂದರೆ ಇದರಲ್ಲಿ ಕರಗಿರುವ ಕೆಲವು ಅಶುದ್ದ ರಾಸಾಯನಿಕಗಳು ಮೀನೆಣ್ಣೆಯ ಉತ್ತಮ ಗುಣಗಳನ್ನೆಲ್ಲಾ ನುಂಗಿಬಿಡುತ್ತದೆ. ಆದ್ದರಿಂದ ಅಪ್ಪಟ ಮೀನೆನೆಣ್ಣೆಯನ್ನು ಮಾತ್ರ ಕೊಳ್ಳುವುದು ಉತ್ತಮ.

ಮಾಹಿತಿ 7

ಮಾಹಿತಿ 7

ಮೀನಿನೆಣ್ಣೆಯನ್ನು ಸಿದ್ಧರೂಪದಲ್ಲಿ ಅಥವಾ ಕ್ಯಾಪ್ಸೂಲುಗಳ ರೂಪದಲ್ಲಿ ಸೇವಿಸುವ ಮೊದಲು ವೈದ್ಯರನ್ನು ಭೇಟಿಯಾಗಿ ಈ ಬಗ್ಗೆ ಕೆಲವು ಮಾಹಿತಿಗಳನ್ನು ಪಡೆದುಕೊಳ್ಳುವುದು ಉತ್ತಮ. ಅಲ್ಲದೇ ಎಷ್ಟು ಸೇವಿಸಬೇಕು, ಯಾವ ಹೊತ್ತಿನಲ್ಲಿ ಸೇವಿಸುವುದು ಉತ್ತಮ ಎಂಬ ಮಾಹಿತಿಯನ್ನು ನಿಮ್ಮ ಆರೋಗ್ಯವನ್ನು ಪರೀಕ್ಷಿಸಿದ ವೈದ್ಯರು ನೀಡಬಲ್ಲರು. ಆ ಪ್ರಕಾರವೇ ಮೀನಿನೆಣ್ಣೆಯ ಕ್ಯಾಪ್ಸೂಲು ಅಥವಾ ದ್ರವರೂಪದಲ್ಲಿ ಸೇವಿಸುವುದು ವಿಹಿತವಾಗಿದೆ.

English summary

Another Benefit Of Fish Oil Discovered!

Fish oil supplements are believed to work well in treating depression, combating inflammation and more but there is very less evidence to prove its efficiency in those areas. so, fish oil diet may work for weight loss. Though there is still very little evidence to support this, health experts say that future studies may also support this fact.
Story first published: Saturday, January 9, 2016, 20:16 [IST]
X
Desktop Bottom Promotion