For Quick Alerts
ALLOW NOTIFICATIONS  
For Daily Alerts

ನೂರಾರು ವರ್ಷಗಳ ಇತಿಹಾಸವಿರುವ ಪವರ್ ಫುಲ್ ಮನೆಮದ್ದುಗಳು

By Manu
|

ಚಿಕ್ಕಪುಟ್ಟ ಕಾಯಿಲೆಗಳಿಗೆ ನಾವು, ಭಾರತೀಯರು ವೈದ್ಯರ ಬಳಿಗೆ ಹೋಗುವ ಬದಲು ಮನೆಮದ್ದುಗಳನ್ನು ಅನುಸರಿಸಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡಿದ್ದೇವೆ. ಏಕೆಂದರೆ ಭಾರತೀಯ ಮನೆಗಳಲ್ಲಿ ನೂರಾರು ವರ್ಷಗಳಿಂದ ಬಳಸಲ್ಪಡುತ್ತಾ ಫಲಪ್ರದವೆಂದು ಪ್ರಾಮಾಣಿಸಲ್ಪಟ್ಟ ಸಾವಿರಾರು ಮನೆಮದ್ದುಗಳಿವೆ. ಇದರ ಇನ್ನೊಂದು ಹೆಗ್ಗಳಿಕೆ ಎಂದರೆ ಹೆಚ್ಚಿನ ಎಲ್ಲವನ್ನೂ ಅಡುಗೆ ಮನೆಯಲ್ಲಿ ಸಿಗುವ ಸಾಮಾಗ್ರಿಗಳಿಂದಲೇ ತಯಾರಿಸಬಹುದಾಗಿರುವುದು.

ಭಾರತೀಯ ಪ್ರಾಚೀನ ವೈದ್ಯ ಪದ್ದತಿಯಲ್ಲಿ ಅನುಭವಕ್ಕೆ ಹೆಚ್ಚಿನ ಆದ್ಯತೆ ಇತ್ತೇ ಹೊರತು ಇದನ್ನು ಬರೆದಿಡುವ ಪದ್ಧತಿ ಇರಲಿಲ್ಲ. ಆದರೆ ಕೆಲವು ಕುಟುಂಬಗಳು ಮಾತ್ರ ತಮ್ಮ ಪದ್ಧತಿಗಳನ್ನು ಬರೆದಿಟ್ಟು ಮುಂದಿನ ಜನಾಂಗಕ್ಕೂ ಕಲಿಸಲು ಸಾಧ್ಯವಾಯಿತು. ಇವುಗಳು ಬಹಳವಾಗಿ ಗಿಡಮೂಲಿಕೆಗಳನ್ನೇ ಅವಲಂಬಿಸಿವೆ. ಇಂದಿಗೂ ಎಷ್ಟೋ ಕುಟುಂಬಗಳಲ್ಲಿ ವೈದ್ಯರ ಬಳಿಗೆ ಹೋಗುವ ಮುನ್ನ ಮನೆಮದ್ದನ್ನೇ ಪ್ರಥಮವಾಗಿ ಬಳಸುತ್ತಿವೆ. ವೈದ್ಯ ಲೋಕವನ್ನು ಅಚ್ಚರಿಗೊಳಿಸುವ ಹಳ್ಳಿ ಮದ್ದಿನ ಕಮಾಲು

ಭಾರತೀಯ ವೈದ್ಯಪದ್ಧತಿಯಲ್ಲಿ ಆಯುರ್ವೇದ ಒಂದು ಮುಖ್ಯವಾದ ವೈದ್ಯಪದ್ಧತಿಯಾದರೂ ಆಯುರ್ವೇದದಲ್ಲಿಯೂ ಕೆಲವು ಮನೆಮದ್ದುಗಳನ್ನು ಅನುಮೋದಿಸಲಾಗಿದೆ. ಬನ್ನಿ, ಮನೆಮದ್ದುಗಳಾಗಿ ಬಳಸಬಹುದಾದ ಸುಲಭ ಸಾಮಾಗ್ರಿಗಳು ಹೇಗೆ ನಮ್ಮ ನೆರವಿಗೆ ಬರಲಿದೆ ಎಂಬುದನ್ನು ನೋಡೋಣ...

ರೋಸ್ಮರಿ

ರೋಸ್ಮರಿ

ರೋಸ್ಮರಿ ಹೂವು ಅಥವಾ ಎಲೆಗಳಿಂದ ತಯಾರಾದ ಟೀ ಕುಡಿಯುವ ಮೂಲಕ ಸ್ನಾಯುಗಳ ನೋವು, ಸೆಳೆತ ಕಡಿಮೆಯಾಗುವುದು ಹಾಗೂ ರಕ್ತಪರಿಚಲನೆಯೂ ಉತ್ತಮಗೊಳ್ಳುತ್ತದೆ. ಅಲ್ಲದೇ ದೇಹದ ಕಲ್ಮಶಗಳನ್ನು ಹೊರಹಾಕಲೂ ನೆರವಾಗುತ್ತದೆ.

ಜಿನ್ಸೆಂಗ್

ಜಿನ್ಸೆಂಗ್

ಶುಂಠಿಯಂತೆಯೇ ತೋರುವ ಜಿನ್ಸೆಂಗ್ ಸಹಾ ಒಂದು ಗಡ್ಡೆಯಾಗಿದ್ದು ಸುಸ್ತು ನಿವಾರಿಸಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ಯಕೃತ್, ಶ್ವಾಸಕೋಶಗಳ ಕ್ಷಮತೆ ಹೆಚ್ಚಿಸಲು ಮತ್ತು ಶಕ್ತಿಯನ್ನು ಹೆಚ್ಚಿಸಲೂ ನೆರವಾಗುತ್ತದೆ.

ಹಸಿಶುಂಠಿ

ಹಸಿಶುಂಠಿ

ಹಸಿಶುಂಠಿ ಒಂದು ಉತ್ತಮ ಉರಿಯೂತ ನಿವಾರಕವಾಗಿದ್ದು ಹತ್ತು ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪೂರಕವಾಗಿದೆ. ಪ್ರಮುಖವಾಗಿ ಜೀರ್ಣಶಕ್ತಿ, ರಕ್ತಪರಿಚಲನೆ ಹೆಚ್ಚಿಸುತ್ತದೆ. ಆದ್ದರಿಂದ ನಿಮ್ಮ ಟೀಯಲ್ಲಿ ಆಗಾಗ ಶುಂಠಿ ಸೇರಿಸಿ ಸೇವಿಸುತ್ತಿರುವುದು ಆರೋಗ್ಯಕ್ಕೆ ಪೂರಕವಾಗಿದೆ. ಬೆಕ್ಕಸ ಬೆರಗಾಗಿಸುವ ಹಸಿ ಶುಂಠಿಯ ಕಾರುಬಾರು...!

ಯಷ್ಠಿಮಧು (Licorice)

ಯಷ್ಠಿಮಧು (Licorice)

ಇದೊಂದು ಒಣಗಿದ ಬೇರಾಗಿದ್ದು ಇದರ ಪುಡಿಯನ್ನು ಕುದಿಸಿ ಕುಡಿಯುವ ಮೂಲಕ ಕೆಮ್ಮು ಮತ್ತು ಶೀತ, ಗಂಟಲಬೇನೆ, ಮೈಕೈ ನೋವು ಮೊದಲಾದವು ಶೀಘ್ರವಾಗಿ ಕಡಿಮೆಯಾಗುತ್ತದೆ. ಹಲ್ಲು ನೋವಿದ್ದರೆ ಈ ಬೇರನ್ನು ಜಗಿಯುತ್ತಾ ಇರುವ ಮೂಲಕ ಕಡಿಮೆಯಾಗುತ್ತದೆ.

ಕ್ಯಾಮೊಮೈಲ್

ಕ್ಯಾಮೊಮೈಲ್

ಕ್ಯಾಮೊಮೈಲ್ ಹೂವುಗಳ ಟೀ ಅಥವಾ ಈ ಹೂವುಗಳಿಂದ ತೆಗೆಯಲಾದ ರಸ ಕರುಳುಗಳಿಗೆ ಉತ್ತಮವಾಗಿದೆ. ಇದು ವಾಕರಿಕೆ, ಸುಸ್ತು ಮೊದಲಾದವುಗಳಿಗೂ ಅತ್ಯುತ್ತಮವಾಗಿದೆ. ಕ್ಯಾಮೊಮೈಲ್ ಚಹಾ, ಮುಟ್ಟಿನ ನೋವಿಗೆ ದಿವ್ಯೌಷಧ

ನೀಲಗಿರಿ ಎಣ್ಣೆ

ನೀಲಗಿರಿ ಎಣ್ಣೆ

ಗಂಟಲ ಬೇನೆ, ಜ್ವರ, ಫ್ಲೂ, ಕೆಮ್ಮು, ತಲೆನೋವು, ಮೈಕೈ ನೋವು ಮೊದಲಾದ ತೊಂದರೆಗಳಿಗೆ ನೀಲಗಿರಿ ಎಣ್ಣೆ ಅತ್ಯುತ್ತಮವಾಗಿದೆ. ಎಷ್ಟೋ ಔಷಧಿಗಳಲ್ಲಿ ನೀಲಗಿರಿ ಎಣ್ಣೆಯನ್ನು ಬಳಸಲಾಗುತ್ತದೆ. ನೀಲಗಿರಿ ತೈಲದಿಂದ ನೂರೆಂಟು ಉಪಯೋಗ

ಕಪ್ಪು ರಾಸ್ಪ್ಬೆರಿ

ಕಪ್ಪು ರಾಸ್ಪ್ಬೆರಿ

ಈ ಹಣ್ಣಿನ ಗಿಡದ ಬೇರುಗಳು ಅತಿಸಾರವನ್ನು ನಿಲ್ಲಿಸುವಲ್ಲಿ ಅತ್ಯುತ್ತಮವಾಗಿದೆ. ಜೊತೆಗೇ ಕೆಮ್ಮು, ಕರುಳಿನಲ್ಲಿ ಹುಣ್ಣು ಮೊದಲಾದ ತೊಂದರೆಗಳಿಗೂ ಉತ್ತಮ ಪರಿಹಾರ ನೀಡುತ್ತದೆ.

ಕೆಂಪು ಮೆಣಸಿನ ಪುಡಿ (Cayenne)

ಕೆಂಪು ಮೆಣಸಿನ ಪುಡಿ (Cayenne)

ತಿನ್ನಲಿಕ್ಕೆ ಖಾರವಾದರೂ ಮೆಣಸಿನ ಪುಡಿಯಲ್ಲಿ ನೋವು ನಿವಾರಕ ಗುಣವಿದೆ. ಅಲ್ಲದೇ ಜೀರ್ಣಶಕ್ತಿ ಹೆಚ್ಚಿಸಲು ಮತ್ತು ರಕ್ತ ಪರಿಚಲನೆ ಉತ್ತಮಗೊಳಿಸಲೂ ನೆರವಾಗುತ್ತದೆ.

ಆಲೋವೆರಾ ಅಥವಾ ಲೋಳೆಸರ

ಆಲೋವೆರಾ ಅಥವಾ ಲೋಳೆಸರ

ಲೋಳೆಸರದಿಂದ ಸಂಗ್ರಹಿಸಲಾದ ರಸ ಗಾಯಗಳನ್ನು ಮಾಗಿಸಲು, ಸುಟ್ಟಗಾಯಗಳ ಉರಿ ತಣಿಸಲು, ಕೀಟಗಳ ಕಡಿತಕ್ಕೆ ತಕ್ಷಣವೇ ಪರಿಹಾರ ನೀಡಲು ನೆರವಾಗುತ್ತದೆ. ಅಲ್ಲದೇ ಇನ್ನೂ ಹಲವಾರು ಆರೋಗ್ಯಕರ ಗುಣಗಳಿವೆ. ಲೋಳೆಸರ ಎಂಬ ಬಹುಮೂಲ್ಯ ಸಸ್ಯ ಸಂಜೀವಿನಿ

ಬ್ಲ್ಯಾಕ್ ಬೆರಿ

ಬ್ಲ್ಯಾಕ್ ಬೆರಿ

ಈ ಹಣ್ಣಿನ ಮರದ ಎಲೆಗಳು, ಬೇರು, ತೊಗಟೆಗಳನ್ನು ಕುದಿಸಿ ಮಾಡಿದ ಟೀ ಕುಡಿಯುವ ಮೂಲಕ ಉರಿಯೂತ ಬಹುತೇಕ ಕಡಿಮೆಯಾಗುತ್ತದೆ. ಅಲ್ಲದೇ ಅತಿಸಾರ ನಿಲ್ಲಿಸಲು, ಜೀವ ರಾಸಾಯನಿಕ ಕ್ರಿಯೆ ಉತ್ತಮಗೊಳಿಸಲು, ಗಂಟಲಬೇನೆ ನಿವಾರಿಸಲೂ ನೆರವಾಗುತ್ತದೆ.

English summary

Ancient Indian Proven Home Remedies

Ancient Indians relied more on herbs and leaves to cure themselves and they also have documented the whole subject after carefully acquiring the knowledge. Even today,herbal remedies are followed by many Indians as an alternate form of medicine. Nature has solutions for all problems and a safer approach is to try natural remedies first before gulping a pill.
X
Desktop Bottom Promotion