ನಾಲಗೆಯ ಸ್ವಚ್ಛತೆಗೆ ಒಂದಿಷ್ಟು ಪವರ್ ಫುಲ್ ಮನೆ ಔಷಧಿ....

ನಾಲಗೆಯೂ ತುಂಬಾ ಡ್ರೈ ಆಗಿದ್ಯಾ? ನಾಲಗೆಯಲ್ಲಿ ಅಗ್ರ (ನಾಲಗೆಯಲ್ಲಿ ಕಾಣಿಸಿಕೊಳ್ಳುವ ಬಿಳಿಯ ಪದರ) ಆಗಿ ಬಾಯಿಯಿಂದ ಕೆಟ್ಟ ವಾಸನೆ ಬರ್ತಾ ಇದ್ಯಾ? ಇಂತಹ ಸಮಸ್ಯೆಯಿಂದ ಬೇಸತ್ತು ಹೋಗಿದ್ದೀರಾ? ಹಾಗಾದ್ರೆ ನಿಮ್ಮ ಸಮಸ್ಯೆಗೆ ಪರಿಹಾರ ನಾವ್ ಹೇಳ್ತೀವಿ.

By: Arshad
Subscribe to Boldsky

ನಮ್ಮಲ್ಲಿ ಹೆಚ್ಚಿನವರು ಬಾಯಿಯ ಸ್ವಚ್ಛತೆಯಲ್ಲಿ ನಾಲಿಗೆಯ ಸ್ವಚ್ಛತೆಗೂ ಆದ್ಯತೆ ನೀಡುವ ಸಾಧ್ಯತೆ ಕಡಿಮೆ. ಏಕೆಂದರೆ ಹಲ್ಲುಜ್ಜಿಕೊಳ್ಳಿ ಎಂದು ಎಲ್ಲರೂ ಹೇಳುತ್ತಾರೆಯೇ ವಿನಃ ನಾಲಗೆಯನ್ನೂ ಸ್ವಚ್ಛಗೊಳಿಸಿ ಎಂದು ಹೇಳುವುದಿಲ್ಲ. ಸಾಮಾನ್ಯವಾಗಿ ನಾಲಗೆಯ ಹಿಂಭಾಗದಲ್ಲಿ ಬೆಳ್ಳಗಿನ ಪದರವೊಂದು ಆವರಿಸಿರುತ್ತದೆ. ಇದು ಬ್ಯಾಕ್ಟೀರಿಯಾಗಳಿಗೆ ಅತ್ಯುತ್ತಮವಾದ ಪಿಕ್ನಿಕ್ ತಾಣವಾಗಿದೆ.  ಬಿಸಿ ಆಹಾರ ಸೇವಿಸಿ ನಾಲಗೆ ಸುಟ್ಟುಕೊಂಡ್ರಾ..? ಇಲ್ಲಿದೆ ಪರಿಹಾರ

ಇವು ತಮ್ಮ ವಂಶವನ್ನು ಬೆಳೆಸಿ ಸೋಂಕು ಹರಡಿ ಬಾಯಿಯಲ್ಲಿ ದುರ್ವಾಸನೆ ಮೂಡಿಸಿ ಕುಣಿದಾಡುತ್ತವೆ. ಸಾಮಾನ್ಯವಾಗಿ ನಾಲಿಗೆ ಗುಲಾಬಿ ಬಣ್ಣದಲ್ಲಿರುತ್ತದೆ. ಸೋಮಾರಿತನ ಹೆಚ್ಚಾದಷ್ಟೂ ನಾಲಗೆಯ ಹಿಂಭಾಗ ನಿಧಾನವಾಗಿ ಬೆಳ್ಳಗಾಗುತ್ತಾ ಹೋಗುತ್ತದೆ. ಬಿಳಿಯಾಗಿರುವ ನಾಲಗೆಗೆ ಬಾಯಿಯಲ್ಲಿ ಉಳಿದಿರುವ ಆಹಾರದ ಚಿಕ್ಕ ಚಿಕ್ಕ ಕಣಗಳು, ಸತ್ತ ಜೀವಕೋಶಗಳು ಮತ್ತು ಇವುಗಳಲ್ಲಿ ಆಶ್ರಯ ಪಡೆದಿರುವ ಬ್ಯಾಕ್ಟೀರಿಯಾಗಳು ನೇರವಾಗಿ ಕಾರಣವಾಗಿವೆ.  ಬಿಸಿ ಆಹಾರ ಸೇವಿಸಿ ನಾಲಗೆ ಸುಟ್ಟುಕೊಂಡ್ರಾ..? ಇಲ್ಲಿದೆ ಪರಿಹಾರ

ಇದಕ್ಕೆ ಧೂಮಪಾನ, ಮದ್ಯಪಾನ, ಸರಿಯಾದ ಸಮಯದಲ್ಲಿ ಮತ್ತು ಸಾಕಷ್ಟು ನೀರು ಕುಡಿಯದಿರುವುದು ಮೊದಲಾದವು ತಮ್ಮ ಪಾಲಿನ ದೇಣಿಗೆ ನೀಡುತ್ತವೆ. ಕೆಲವೊಮ್ಮೆ ಅತೀವ ಜ್ವರ ಅಥವಾ ಕಾಮಾಲೆ ರೋಗದ ಪರಿಣಾಮವಾಗಿಯೂ ನಾಲಗೆಯ ಬಣ್ಣ ಬಿಳಿಯದಾಗುತ್ತದೆ. ವೈದ್ಯರು ನಾಲಿಗೆ ತೋರಿಸಿ ಎಂದು ಪರೀಕ್ಷಿಸುವುದು ಇದನ್ನೇ.

ಕೆಲವು ಸಂದರ್ಭಗಳಲ್ಲಿ ಔಷಧಿಗಳು ಮತ್ತು ಆಂಟಿ ಬಯೋಟಿಕ್‌ಗಳು ಸಹಾ ಬಿಳಿಯ ನಾಲಗೆಗೆ ಕಾರಣವಾಗುತ್ತವೆ. ಇಂದು ನಾಲಿಗೆಯ ಪದರವನ್ನು ಸಡಿಲಗೊಳಿಸಿ ಸುಲಭವಾಗಿ ಮುಕ್ಕಳಿಕೆಯ ಮೂಲಕ ಹೊರಹಾಕುವ ದ್ರಾವಣಗಳು ಲಭ್ಯವಿವೆ. ಕೊಂಚ ದುಬಾರಿಯಾದ ಈ ದ್ರಾವಣಗಳ ಬದಲು ಮನೆಯಲ್ಲಿಯೇ ಸುಲಭವಾಗಿ ಇದೇ ಪರಿಣಾಮವನ್ನು ಪಡೆಯಬಹುದಾದ ಮನೆಮದ್ದುಗಳನ್ನು ನೀಡಿದ್ದೇವೆ ಮುಂದೆ ಓದಿ...

ಲೋಳೆಸರ

ಲೋಳೆಸರದಲ್ಲಿರುವ ಉರಿಯೂತನಿವಾರಕ ಗುಣ ಮತ್ತು ಸೂಕ್ಷ್ಮಜೀವಿ ನಿವಾರಕ ಗುಣಗಳು ನಾಲಿಗೆಯಲ್ಲಿನ ಬಿಳಿಪದರವನ್ನು ನಿವಾರಿಸಲು ಸಕ್ಷಮವಾಗಿವೆ. ಇದಕ್ಕಾಗಿ ಕೊಂಚ ಲೋಳೆಸರದ ರಸವನ್ನು ಬಾಯಿಯಲ್ಲಿ ಹಾಕಿಕೊಂಡು ಕೊಂಚ ಸಮಯ ಮುಕ್ಕಳಿಸಿ ಬಳಿಕ ನಿವಾರಿಸಿ.

ಉಪ್ಪು ನೀರು

ಒಂದು ಕಪ್ ಉಗುರುಬೆಚ್ಚನೆಯ ನೀರಿಗೆ ಅರ್ಧ ಚಿಕ್ಕಚಮಚ ಉಪ್ಪು ಬೆರೆಸಿ ಈ ನೀರಿನಿಂದ ಬಾಯಿಯನ್ನು ಚೆನ್ನಾಗಿ ಮುಕ್ಕಳಿಸಿ. ವಿಶೇಷವಾಗಿ ಮುಖವನ್ನು ಮೇಲೆತ್ತಿ ಗಂಟಲಲ್ಲಿ ಗಳಗಳ ಮಾಡಿ. ಇದರಿಂದ ನಾಲಿಗೆಯ ಬಿಳಿ ಪದರದ ಜೊತೆಗೇ ಬಾಯಿಯ ದುರ್ವಾಸನೆಯೂ ತೊಲಗುತ್ತದೆ. ಉಪ್ಪು ಬೆರೆಸಿದ ಬೆಚ್ಚನೆಯ ನೀರು, ಆಯಸ್ಸು ನೂರು!

ಅಡುಗೆ ಸೋಡಾ

ಒಂದು ಚಿಕ್ಕ ಚಮಚದಷ್ಟು ಅಡುಗೆ ಸೋಡಾ ಮತ್ತು ಸಮಪ್ರಮಾಣದ ಲಿಂಬೆರಸ ಬೆರೆಸಿ ಲೇಪನ ತಯಾರಿಸಿ. ಈ ಲೇಪನವನ್ನು ನಾಲಿಗೆಯ ಮೇಲೆ ದಪ್ಪನಾಗಿ ಹಚ್ಚಿ ನಯವಾಗಿ ಉಜ್ಜಿಕೊಳ್ಳಿ. ಬಳಿಕ ತಣ್ಣೀರಿನಿಂದ ಚೆನ್ನಾಗಿ ಮುಕ್ಕಳಿಸಿ ಉಗುಳಿ. ಇದರಿಂದ ನಾಲಿಗೆಯಲ್ಲಿ ಉಳಿದಿದ್ದ ಆಹಾರದ ಕಣಗಳು ಸಡಿಲವಾಗಿ ಸುಲಭವಾಗಿ ನಿವಾರಣೆಯಾಗುತ್ತವೆ. ಅಲ್ಲದೇ ನಾಲಿಗೆಯ ಮೇಲೆ ಮತ್ತೊಮ್ಮೆ ಬಿಳಿಪದರ ಮೂಡದಂತೆ ತಡೆಯುತ್ತದೆ.

ಮೊಸರು

ಮೊಸರಿನಲ್ಲಿರುವ ಆರೋಗ್ಯಕ್ಕೆ ಪೂರಕವಾದ ಬ್ಯಾಕ್ಟೀರಿಯಾಗಳು ನಾಲಿಗೆಯ ಮೇಲಿರುವ ಕೆಟ್ಟ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳನ್ನು ನಿವಾರಿಸಲು ನೆರವಾಗುತ್ತದೆ. ನಿಮ್ಮ ಊಟದಲ್ಲಿ ಮೊಸರು ಸದಾ ಇರುವಂತೆ ಮತ್ತು ಕಡೆಯ ಆಹಾರವಾಗಿ ಮೊಸರನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.

ಲಿಂಬೆ ರಸ

ಒಂದು ವೇಳೆ ಬಿಳಿಪದರ ಸುಲಭಕ್ಕೆ ಮಣಿಯದಿದ್ದರೆ ನಾಲಿಗೆಯ ಮೇಲೆ ಕೊಂಚ ಲಿಂಬೆರಸವನ್ನು ಹಿಂಡಿ ನಯವಾಗಿ ಬೆರಳಿನಿಂದ ಉಜ್ಜಿಕೊಳ್ಳಿ. ಕೊಂಚಹೊತ್ತಿನ ನಂತರ ನೀರಿನಿಂದ ಚೆನ್ನಾಗಿ ಮುಕ್ಕಳಿಸಿ.

ಬೆಳ್ಳುಳ್ಳಿ

ಬೆಳ್ಳುಳ್ಳಿ ಒಂದು ಅತ್ಯುತ್ತಮವಾದ ಶಿಲೀಂಧ್ರನಿವಾರಕವಾಗಿದ್ದು ನಾಲಿಗೆಯ ಬಿಳಿಪದರವನ್ನು ನಿವಾರಿಸಲೂ ಸಕ್ಷಮವಾಗಿದೆ. ನಿತ್ಯವೂ ನಿಮ್ಮ ಊಟದಲ್ಲಿ ಕೊಂಚ ಬೆಳ್ಳುಳ್ಳಿಯ ಎಸಳುಗಳನ್ನು ಹಸಿಯಾಗಿ ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಸಾಧ್ಯವಾದರೆ ಊಟದ ಬಳಿಕ ಹಸಿಬೆಳ್ಳುಳ್ಳಿಯ ಒಂದು ಅಥವಾ ಎರಡು ಎಸಳುಗಳನ್ನು ಜಗಿದು ನುಂಗಲು ಪ್ರಯತ್ನಿಸಿ.

ಗ್ಲಿಸರಿನ್

ಸಸ್ಯಾಹಾರಿ ಗ್ಲಿಸರಿನ್ ದ್ರವದ ಕೆಲವು ಹನಿಗಳನ್ನು ನಾಲಿಗೆಯ ಮೇಲೆ ಹಚ್ಚಿ ನಯವಾಗಿ ಬೆರಳುಗಳಿಂದ ಉಜ್ಜಿಕೊಳ್ಳಿ. ಇದರಿಂದ ಬಿಳಿಪದರ ಸಡಿಲವಾಗುತ್ತದೆ. ಬಳಿಕ ತಣ್ಣೀರಿನಿಂದ ಚೆನ್ನಾಗಿ ಮುಕ್ಕಳಿಸಿ.

ಕುಡಿಯುವ ನೀರು

ನಾಲಗೆಯಲ್ಲಿ ಬಿಳಿಪದರ ಮೂಡದಂತೆ ಸತತವಾಗಿ ನೀರು ಕುಡಿಯುತ್ತಿರುವುದು ಅಗತ್ಯ. ಇದರಿಂದ ದೇಹದ ಇತರ ಅಂಗಗಳ ಜೊತೆಗೇ ನಾಲಗೆಗೂ ಸೂಕ್ತ ಪ್ರಮಾಣದ ಆರ್ದ್ರತೆ ದೊರಕುತ್ತದೆ. ಹೆಚ್ಚಿನ ನೀರಿದ್ದರೆ ಆಹಾರ ಕಣಗಳು ಉಳಿಯಲು ಸಾಧ್ಯವಾಗದೇ ಬಿಳಿಪದರ ಮೂಡುವ ಸಂಭವವೂ ಕಡಿಮೆಯಾಗುತ್ತದೆ.

ಬೇವು

ಬೇವು ಒಂದು ಅತ್ಯುತ್ತಮವಾದ ಆಂಟಿ ಆಕ್ಸಿಡೆಂಟು ಆಗಿದೆ. ಇದಕ್ಕಾಗಿ ಕೆಲವು ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ತಣಿಯಲು ಬಿಡಿ. ಉಗುರುಬೆಚ್ಚಗಾಗುವಷ್ಟು ತಣಿದ ಬಳಿಕ ಈ ನೀರಿನಿಂದ ಹಲವಾರು ಬಾರಿ ಬಾಯಿಯನ್ನು ಚೆನ್ನಾಗಿ ಮುಕ್ಕಳಿಸಿ. ಇದರಿಂದ ನಾಲಿಗೆಯ ಬಿಳಿಪದರ ಸುಲಭವಾಗಿ ನಿವಾರಣೆಯಾಗುತ್ತದೆ.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Wednesday, October 12, 2016, 13:27 [IST]
English summary

Amazing Ingredients To Clean Your White Tongue

Do you feel that the food you eat tastes different, or that your tongue has become thicker and you also have bad breath? Check it for yourself. This might be due to a white tongue. Normally our tongue appears pinkish, but when you see a white coating on your tongue which looks a little weird, then this is a typical sign of white tongue.
Please Wait while comments are loading...
Subscribe Newsletter