For Quick Alerts
ALLOW NOTIFICATIONS  
For Daily Alerts

ಚಿನ್ನದ ದೇವತೆ 'ಅರಿಶಿನ'ದ ಚಿನ್ನದಂತಹ ಗುಣಗಳು...

ಅರಿಶಿನವನ್ನು ಅಡುಗೆಯಲ್ಲಿ ಮುನ್ನೆಚ್ಚರಿಕೆಯಿಂದ ಬಳಸಲಾಗುತ್ತದೆ. ಬ್ಯಾಕ್ಟೀರಿಯಾ ವಿರೋಧಿ ಗುಣ ಹಾಗೂ ಉರಿಯೂತ ಶಮನಕಾರಿ ಗುಣವನ್ನು ಹೊಂದಿರುವಂತಹ ಅರಿಶಿನವು ಸದ್ದಿಲ್ಲದೆ ಕೆಲವೊಂದು ಕಾಯಿಲೆಗಳನ್ನು ನಿವಾರಿಸುತ್ತದೆ.

By Hemanth
|

ದೇಹಕ್ಕೆ ಭಾದಿಸುವ ಕೆಲವೊಂದು ರೋಗಗಳನ್ನು ನಿವಾರಣೆ ಮಾಡಲು ನಾವು ತಿನ್ನುವಂತಹ ಪದಾರ್ಥಗಳನ್ನೇ ಬಳಸಬಹುದಾಗಿದೆ. ಸಾವಿರಾರು ವರ್ಷಗಳಿಂದಲೂ ಈ ಪದ್ಧತಿಯನ್ನು ಆಯುರ್ವೇದದಲ್ಲಿ ಬಳಸಲಾಗುತ್ತಿದೆ. ನಾವು ಏನು ತಿನ್ನುತ್ತೇವೆಯೋ ಅದನ್ನೇ ಮದ್ದಾಗಿಯೂ ಬಳಸಬಹುದಾಗಿದೆ. ಅದರಲ್ಲೂ ಹಲವಾರು ಆರೋಗ್ಯಕಾರಿ ಗುಣಗಳನ್ನು ಹೊಂದಿರುವಂತಹ ಅರಿಶಿನದಲ್ಲಿ ಹೊಟ್ಟೆಯ ಸಮಸ್ಯೆಯನ್ನು ನಿವಾರಿಸುವಂತಹ ಶಕ್ತಿಯಿದೆ. ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ

ಭಾರತೀಯರು ಹೆಚ್ಚಾಗಿ ತಮ್ಮ ಅಡುಗೆಗಳಲ್ಲಿ ಅರಿಶಿನವನ್ನು ಹಿಂದಿನಿಂದಲೂ ಬಳಸುತ್ತಾ ಬಂದಿದ್ದಾರೆ. ಆರೋಗ್ಯವನ್ನು ದೃಷ್ಟಿಯಲ್ಲಿರಿಸಿಕೊಂಡೇ ಅರಿಶಿನವನ್ನು ಅಡುಗೆಯಲ್ಲಿ ಬಳಸಲಾಗುತ್ತಿದೆ. ಅರಿಶಿನವು ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಆಹಾರದಲ್ಲಿರುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.

 turmeric

ಅರಿಶಿನವನ್ನು ಅಡುಗೆಯಲ್ಲಿ ಮುನ್ನೆಚ್ಚರಿಕೆಯಿಂದ ಬಳಸಲಾಗುತ್ತದೆ. ಬ್ಯಾಕ್ಟೀರಿಯಾ ವಿರೋಧಿ ಗುಣ ಹಾಗೂ ಉರಿಯೂತ ಶಮನಕಾರಿ ಗುಣವನ್ನು ಹೊಂದಿರುವಂತಹ ಅರಿಶಿನವು ಸದ್ದಿಲ್ಲದೆ ಕೆಲವೊಂದು ಕಾಯಿಲೆಗಳನ್ನು ನಿವಾರಿಸುತ್ತದೆ. ಸರ್ವಗುಣ ಸಂಪನ್ನ ಅರಿಶಿನ ಎಂಬ ಸಂಜೀವಿನಿ

ದೇಹಕ್ಕೆ ಪೋಷಕಾಂಶವನ್ನು ನೀಡಬಲ್ಲ ಪ್ರಮುಖ ಪೋಷಕಾಂಶಗಳಾದ ಕಬ್ಬಿಣ, ಕ್ಯಾಲ್ಸಿಯಂ, ಪೊಟಾಶಿಯಂ, ವಿಟಮಿನ್ ಸಿ, ಮೆಗ್ನಿಶಿಯಂ ಇತ್ಯಾದಿಗಳು ಅರಿಶಿನದಲ್ಲಿವೆ. ಹೊಟ್ಟೆಯ ಕೆಲವೊಂದು ಕಾಯಿಲೆಗಳಿಗೆ ಅರಿಶಿನವು ಯಾವ ರೀತಿ ಪ್ರಯೋಜನಕಾರಿ ಎಂದು ಈ ಲೇಖನದಲ್ಲಿ ತಿಳಿದುಕೊಳ್ಳುವ.....

ಜೀರ್ಣ ಶಕ್ತಿ ಹೆಚ್ಚಿಸುವುದು
ಹೊಟ್ಟೆಯಲ್ಲಿ ಜೀರ್ಣಕ್ರಿಯೆಗೆ ಬೇಕಾಗುವ ಆರೋಗ್ಯಕಾರಿ ರಸದ ಉತ್ಪಾದನೆಯನ್ನು ಅರಿಶಿನವು ದ್ವಿಗುಣಗೊಳಿಸುವುದು. ಇದರಿಂದ ಜೀರ್ಣಕ್ರಿಯೆಯು ಸುಗಮವಾಗಿ ಸಾಗುವುದು.

ನೋವು ನಿವಾರಣೆ
ಉರಿಯೂತ ಶಮನಕಾರಿ ಗುಣವನ್ನು ಹೊಂದಿರುವಂತಹ ಅರಿಶಿನವು ಹೊಟ್ಟೆಯ ಜೀರ್ಣಾಂಗ ವ್ಯವಸ್ಥೆಯಲ್ಲಿರುವ ಉರಿಯೂತ ಮತ್ತು ಅಲ್ಸರ್ ಅನ್ನು ನಿವಾರಣೆ ಮಾಡಿ ಹೊಟ್ಟೆ ನೋವು ಕಡಿಮೆ ಮಾಡುವುದು.

ಅತಿಸಾರ ತಡೆಯುವುದು
ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿರುವಂತಹ ಅರಿಶಿನವು ದೇಹದಲ್ಲಿರುವ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಾಣು ಜೀವಿಗಳನ್ನು ಹೊರಹಾಕಿ ಅತಿಸಾರವನ್ನು ತಡೆಯುವುದು.

ಗ್ಯಾಸ್ಟ್ರಿಕ್(ಜಠರದುರಿ) ಕಡಿಮೆಗೊಳಿಸುವುದು
ಹೊಟ್ಟೆಯಲ್ಲಿನ ಆಮ್ಲದ ಮಟ್ಟವನ್ನು ತಟಸ್ಥವಾಗಿಸುವ ಅರಿಶಿನವು ಅಸಿಡಿಟಿ, ಗ್ಯಾಸ್ಟ್ರಿಕ್ ಮತ್ತು ಎದೆಯುರಿಯಂತಹ ಸಮಸ್ಯೆಯನ್ನು ದೂರವಾಗಿಸುತ್ತದೆ. ತಂಪಾದ ಅರಿಶಿನ ಹಾಲನ್ನು ಸೇವನೆ ಮಾಡಿದರೆ ಸಮಸ್ಯೆ ಕಡಿಮೆಯಾಗುವುದು.

ಕರುಳನ್ನು ಶಾಂತವಾಗಿಸುವುದು
ಕರುಳು ಕೆರಳುವುದರಿಂದ ಉಂಟಾಗುವ ಜೀರ್ಣಕ್ರಿಯೆ ಸಮಸ್ಯೆಯಾದ ಅತಿಸಾರ, ಮಲಬದ್ಧತೆ ಮತ್ತು ಹೊಟ್ಟೆಯುಬ್ಬರ ಇತ್ಯಾದಿಗಳನ್ನು ಅರಿಶಿನದಲ್ಲಿರುವ ಕೆಲವೊಂದು ಪೋಷಕಾಂಶಗಳು ನಿವಾರಿಸುತ್ತದೆ ಎಂದು ಅಧ್ಯಯನಗಳು ಹೇಳಿವೆ.

ವಾಕರಿಕೆ ಕಡಿಮೆ ಮಾಡುವುದು
ವಾಕರಿಕೆ ಉಂಟಾದ ಸಂದರ್ಭದಲ್ಲಿ ಬಿಸಿ ನೀರಿಗೆ ಸ್ವಲ್ಪ ಅರಿಶಿನ ಮತ್ತು ಸ್ವಲ್ಪ ಶುಂಠಿ ರಸವನ್ನು ಹಾಕಿ ಕುಡಿದರೆ ತುಂಬಾ ಒಳ್ಳೆಯದು. ವಾಕರಿಕೆಯನ್ನು ಇದು ತಕ್ಷಣ ನಿವಾರಿಸುವುದು.

ಕರುಳಿನ ಕ್ಯಾನ್ಸರ್ ತಡೆಯುವುದು
ಅರಿಶಿನದಲ್ಲಿರುವ ಪೈಥೋನ್ಯೂಟ್ರಿಯಂಟ್ಸ್ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣ ಹೊಂದಿದೆ. ಇದು ಕರುಳು ಹಾಗೂ ಹೊಟ್ಟೆಯ ಕ್ಯಾನ್ಸರ್ ಬರದಂತೆ ತಡೆಯಬಲ್ಲದು.

English summary

Amazing Benefits of Turmeric to Treat Stomach Problems ...

Turmeric, the ancient Indian spice, has been used in various natural remedies since times immemorial. Did you know that there are many ways in which turmeric can treat your stomach ailments? Now, have a look at the few best ways in which turmeric can help treat your stomach ailments.
Story first published: Saturday, December 3, 2016, 18:46 [IST]
X
Desktop Bottom Promotion