For Quick Alerts
ALLOW NOTIFICATIONS  
For Daily Alerts

ಮಸಾಲೆ ಪದಾರ್ಥಗಳ ರಾಣಿ- ಪುಟ್ಟ ಏಲಕ್ಕಿ

By Manu
|

ಸಾವಿರಾರು ವರುಷಗಳ ಇತಿಹಾಸ ಹೊಂದಿರುವ ಏಲಕ್ಕಿ, ತನ್ನ ಘಮಘಮ ಪರಿಮಳದ ಮೂಲಕವೇ ಎಲ್ಲರನ್ನು ಆಕರ್ಷಿಸುವ ಸಾಂಬರ ಪದಾರ್ಥ, ನಿಮಗೆಲ್ಲಾ ಗೊತ್ತಿರುವ ಹಾಗೆ, ಈಗ ಮಾರುಕಟ್ಟೆಯಲ್ಲಿ ಕೇಸರಿ ಮತ್ತು ವೆನಿಲ್ಲಾ ಬಿಟ್ಟರೆ ಅತಿ ಹೆಚ್ಚು ಬೆಲೆಬಾಳುವ ಪದಾರ್ಥಗಳಲ್ಲಿ ಏಲಕ್ಕಿಯೂ ಕೂಡ ಒಂದು.

ಮಸಾಲೆ ಪದಾರ್ಥಗಳ ರಾಣಿ ಎಂದೇ ಕರೆಯಲಾಗುವ ಏಲಕ್ಕಿಯ ಪರಿಮಳಕ್ಕೆ ಮನಸೋಲದವರಿಲ್ಲ. ಯಾವುದೇ ಅಡುಗೆ, ತಿಂಡಿ ತಿನಿಸಾಗಿರಲಿ, ಅಷ್ಟೇ ಏಕೆ ಕೇವಲ ಒಂದು ಏಲಕ್ಕಿಯನ್ನು ನೀವು ಕುಡಿಯುವ ಟೀಯಲ್ಲಿ ಅಥವಾ ತಿನಿಸಿನಲ್ಲಿ ಬೆರೆಸಿದರೂ ಅದರ ರುಚಿ ಮತ್ತು ಪರಿಮಳ ಆ ಪೇಯ ಅಥವಾ ಖಾದ್ಯದ ರುಚಿಯನ್ನು ಹೆಚ್ಚಿಸುತ್ತದೆ. ಕುಟುಂಬದ ಆರೋಗ್ಯಕ್ಕಾಗಿ ಮನೆಯಲ್ಲಿರಲಿ ಏಲಕ್ಕಿ ಮಾಲೆ

ಏಲಕ್ಕಿಯಲ್ಲಿ ಹಸಿರು ಮತ್ತು ಕಂದು ಎಂಬ ಎರಡು ಬಗೆಗಳಿವೆ. ಹಸಿರು ಏಲಕ್ಕಿ ಕೊಂಚ ದುಬಾರಿಯಾಗಿದ್ದರೂ ಪರಿಮಳ ಹೆಚ್ಚು. ಇದರಲ್ಲಿರುವ ಪೋಷಕಾಂಶಗಳ ಪಟ್ಟಿ ನೋಡಿದರೆ ತಬ್ಬಿಬ್ಬಾಗುತ್ತದೆ. ಇದರಲ್ಲಿ ಉತ್ತಮ ಪ್ರಮಾಣದಲ್ಲಿ ವಿವಿಧ ಖನಿಜಗಳು, ಕ್ಯಾಲ್ಸಿಯಂ, ಗಂಧಕ, ವಿಟಮಿನ್‌ಗಳು ಮತ್ತು ವಿವಿಧ ಸೂಕ್ಷ್ಮ ಪೋಷಕಾಂಶಗಳಿವೆ. ಆರೋಗ್ಯದ ದೃಷ್ಟಿಯಿಂದಲೂ ಏಲಕ್ಕಿ ಬಹಳ ಮಹತ್ವದ್ದಾಗಿದೆ. ಬನ್ನಿ ಇದರ ಸದ್ಗುಣಗಳಲ್ಲಿ ಪ್ರಮುಖವಾದ ಗುಣಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ, ಮುಂದೆ ಓದಿ....

ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು

ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು

ಕೇವಲ ಒಂದು ಏಲಕ್ಕಿಯನ್ನು ಊಟದ ಬಳಿಕ ಜಗಿದು ನುಂಗುವುದರಿಂದ ಬಾಯಿಯ ದುರ್ವಾಸನೆ ಇಲ್ಲವಾಗುತ್ತದೆ ಹಾಗೂ ಬಹಳ ಹೊತ್ತಿನವರೆಗೆ ಬಾಯಿ ಸುವಾಸನೆಯಿಂದ ಕೂಡಿರುತ್ತದೆ.

ಹೊಟ್ಟೆಯ ಸಮಸ್ಯೆಗೆ

ಹೊಟ್ಟೆಯ ಸಮಸ್ಯೆಗೆ

ಒಂದು ವೇಳೆ ಅಜೀರ್ಣ, ಮಲಬದ್ಧತೆಗೂ ಏಲಕ್ಕಿಯ ಸೇವನೆ ಉತ್ತಮವಾಗಿದೆ. ಒಂದು ವೇಳೆ ಹೊಟ್ಟೆ ಕೆಟ್ಟಿದ್ದರೆ ಹಾಲಿಲ್ಲದ ಒಂದು ಲೋಟ ಚಹಾದಲ್ಲಿ ಒಂದೆರಡು ಏಲಕ್ಕಿಗಳನ್ನು ಕುದಿಸಿ ಕುಡಿಯುವ ಮೂಲಕ ತಕ್ಷಣ ಪರಿಹಾರ ಪಡೆಯಬಹುದು.

ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ

ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ

ಏಲಕ್ಕಿಯಲ್ಲಿರುವ ಸೂಕ್ಷ್ಮ ಪೋಷಕಾಂಶಗಳು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ (low density lipoproteins) ಅಥವಾ ಲಿಪಿಡ್ಸ್ ಎನ್ನುವ ಜಿಡ್ಡುಪದಾರ್ಥವನ್ನು ತೊಲಗಿಸಲು ನೆರವಾಗುತ್ತವೆ.

ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ

ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ

ಏಲಕ್ಕಿಯಲ್ಲಿಯೂ ಉತ್ತಮ ಪ್ರಮಾಣದ ವಿಟಮಿನ್ ಸಿ ಇದೆ. ಇದು ಒಂದು ಉತ್ತಮ ಆಂಟಿ ಆಕ್ಸಿಡೆಂಟ್ ಆಗಿದ್ದು ರಕ್ತಸಂಚಾರವನ್ನು ಹೆಚ್ಚಿಸಲು ನೆರವಾಗುತ್ತದೆ. ತನ್ಮೂಲಕ ಆರೋಗ್ಯ ಉತ್ತಮಗೊಳ್ಳುತ್ತದೆ ಹಾಗೂ ಚರ್ಮದ ಕಾಂತಿಯೂ ಹೆಚ್ಚುತ್ತದೆ.

ಅಸ್ತಮಾ ವಿರುದ್ಧ ಹೋರಾಡುತ್ತದೆ

ಅಸ್ತಮಾ ವಿರುದ್ಧ ಹೋರಾಡುತ್ತದೆ

ಅಸ್ತಮಾ ಮತ್ತು ನಾಯಿಕೆಮ್ಮುವಿನ ನಿವಾರಣೆ ಏಲಕ್ಕಿಯಿಂದ ಸಾಧ್ಯ. ಏಲಕ್ಕಿ ಹುಡಿ ಮತ್ತು ಜೇನನ್ನು ಸೇರಿಸಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಈ ಮಿಶ್ರಣದ ನಿಯಮಿತ ಸೇವನೆಯು ನಾಯಿಕೆಮ್ಮು ಮತ್ತು ಅಸ್ತಮಾದಿಂದ ಪರಿಹಾರ ನೀಡುತ್ತದೆ.

ಶ್ವಾಸನಾಳದ ಆರೋಗ್ಯಕ್ಕಾಗಿ

ಶ್ವಾಸನಾಳದ ಆರೋಗ್ಯಕ್ಕಾಗಿ

ಏಲಕ್ಕಿ ಶ್ವಾಸನಾಳವನ್ನು ಬೆಚ್ಚಗಾಗಿಸುತ್ತದೆ ಮತ್ತು ಇದರಿಂದ ಶ್ವಾಸಕೋಶದ ಪರಿಚಲನೆ ಹೆಚ್ಚಾಗುತ್ತದೆ. ಏಲಕ್ಕಿಯು ಶ್ವಾಸಕೋಶದಲ್ಲಿ ರಕ್ತದ ಸರಬರಾಜನ್ನು ಹೆಚ್ಚಿಸಿ ತನ್ಮೂಲಕ ಉಸಿರಾಟದ ಸಮಸ್ಯೆಗಳಾದ ಅಸ್ತಮಾ, ನೆಗಡಿ, ಮತ್ತು ಕೆಮ್ಮು ಇವುಗಳನ್ನು ನಿವಾರಿಸುತ್ತದೆ.

English summary

Amazing Health Benefits of Cardamom

As for the health benefits of cardamom, these range from the immediate and cosmetic to the deeply fortifying, long-term kind of effects. Here is a list of these benefits you too can enjoy...
X
Desktop Bottom Promotion