For Quick Alerts
ALLOW NOTIFICATIONS  
For Daily Alerts

ಚೋಟುದ್ದ ಹಾಗಲಕಾಯಿ-ಬಾಯಿಗೆ ಕಹಿ, ಆರೋಗ್ಯಕ್ಕೆ ಸಿಹಿ

By Manu
|

ಕಹಿ ಎಂಬ ಒಂದೇ ಕಾರಣಕ್ಕೆ ಬಹುತೇಕ ಜನರು ಹಾಗಲಕಾಯಿಯನ್ನು ತಿನ್ನುವುದಿಲ್ಲ. ಕರೇಲಾ ಎಂದು ಹಿಂದಿಯಲ್ಲಿ ಕರೆಯುವ ಈ ಕಹಿ ತರಕಾರಿ ವಾಸ್ತವವಾಗಿ ಆರೋಗ್ಯಕ್ಕೆ ಅತ್ಯುತ್ತಮವಾದ ಪೋಷಣೆಯನ್ನು ನೀಡುತ್ತದೆ. ಇದರಲ್ಲಿ ಹಲವರು ಪೋಷಕಾಂಶಗಳು, ಖನಿಜಗಳು ಮತ್ತು ವಿಟಮಿನ್ B1, B2, B3 ಮತ್ತು C ಹಾಗೂ ಗಂಧಕ ಮತ್ತು ಉತ್ತಮ ಪ್ರಮಾಣದ ಕರಗುವ ಹಾಗೂ ಕರಗದ ನಾರು ಸಹಾ ಇದೆ. ಹಾಗಲಕಾಯಿ ಜ್ಯೂಸ್‌ನಲ್ಲಿದೆ 15 ಆರೋಗ್ಯಕರ ಪ್ರಯೋಜನಗಳು

ಮಧುಮೇಹಕ್ಕೆ ಹಾಗಲಕಾಯಿ ಅತ್ಯುತ್ತಮ ಮದ್ದು ಎಂದು ಜನಜನಿತವಾಗಿದೆ. ಏಕೆಂದರೆ ಇದರಲ್ಲಿರುವ ಪಿ ಇನ್ಸುಲಿನ್ ಎಂಬ ಪೋಷಕಾಂಶ ಮಧುಮೇಹಕ್ಕೆ ಕಾರಣವಾದ (ಟೈಪ್ 1) ಇನ್ಸುಲಿನ್ ಕೊರತೆಯನ್ನು ಸಮರ್ಥವಾಗಿ ನೀಗಿಸಬಲ್ಲ ಪೋಷಕಾಂಶವಾಗಿದೆ. ಅಲ್ಲದೇ ಇದರಲ್ಲಿರುವ ಕ್ಯಾರಾಂಟಿನ್ (charantin) ಎಂಬ ಸ್ಟೆರಾಡಲ್ ಸ್ಯಾಪೋನಿನ್ (ಮೆದುಳಿಗೆ ಸೂಚನೆ ನೀಡುವ ರಾಸಾಯನಿಕಗಳು) ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿರಿಸಲು ನೆರವು ನೀಡುವ ಕೆಲವು ಆಲ್ಕಲಾಯ್ಡುಗಳಿಗೆ ಸರಿಸಮನಾಗಿದ್ದು ಮಧುಮೇಹವನ್ನು ನಿಯಂತ್ರಿಸುವ ಕ್ಷಮತೆ ಪಡೆದಿವೆ.

Amazing Benefits And Uses Of Bitter Melon

ಮಧುಮೇಹ ಇರುವವರ ಸಹಿತ ಇಲ್ಲದೇ ಇರುವವರೂ ಹಾಗಲಕಾಯಿಯನ್ನು ನಿಯಮಿತವಾಗಿ ಸೇವಿಸುವ ಅಭ್ಯಾಸವಿಟ್ಟುಕೊಂಡರೆ ರಕ್ತದಲ್ಲಿ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿರಿಸಲು ಸಾಧ್ಯವಾಗುತ್ತದೆ. ಅಲ್ಲದೇ ಜೀರ್ಣಾಂಗಗಳಲ್ಲಿ ಜೀರ್ಣರಸಗಳನ್ನು ಸ್ರವಿಸಲು ನೀಡುವ ಪ್ರಚೋದನೆಯ ಮೂಲಕ ಜೀರ್ಣಕ್ರಿಯೆಯನ್ನೂ ಉತ್ತಮಗೊಳಿಸುತ್ತದೆ. ಅಲ್ಲದೇ ಪಿತ್ತರಸವನ್ನು ಹೆಚ್ಚು ಸ್ರವಿಸುವ ಮೂಲಕ ಯಕೃತ್‌ನ ಕ್ಷಮತೆಯನ್ನೂ ಹೆಚ್ಚಿಸುತ್ತದೆ. ಇದರಿಂದ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ನಿವಾರಿಸಲು ಸಾಧ್ಯವಾಗುತ್ತದೆ. ಹಾಗಲಕಾಯಿ: ಆರೋಗ್ಯಕ್ಕೆ ಸಿಹಿ, ರೋಗ ರುಜಿನಗಳಿಗೆ ಕಹಿ!

ಜೀರ್ಣಗೊಂಡ ಆಹಾರಗಳು ಕೆಲವೊಮ್ಮೆ ಗಂಟುಗಳ ರೂಪದಲ್ಲಿ ಕರುಳುಗಳ ಒಳಗೆ ಮುಂದೆ ಸಾಗುತ್ತವೆ. ಇದರಿಂದ ಕರುಳುಗಳ ಒಳಭಾಗಕ್ಕೆ ಮತ್ತು ಹೊರಭಾಗಕ್ಕೆ ಹೆಚ್ಚಿನ ಒತ್ತಡ ಬೀಳುತ್ತದೆ. ಹಾಗಲಕಾಯಿಯ ಪೋಷಕಾಂಶಗಳು ಈ ಚಲನೆಯನ್ನು ಸುಲಭವಾಗಿಸಿ ಕರುಳುಗಳು ಹೆಚ್ಚಿನ ಕ್ಷಮತೆಯಿಂದ ಜೀರ್ಣಗೊಂಡ ಆಹಾರದಿಂದ ಶಕ್ತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಹಾಗಲಕಾಯಿಯ ಜ್ಯೂಸ್ ಕುಡಿಯುವ ಮೂಲಕ ಮಲಬದ್ಧತೆಯ ತೊಂದರೆ ನಿವಾರಣೆಯಾಗುತ್ತದೆ.

ಅದರಲ್ಲೂ ವಿಶೇಷವಾಗಿ ಅನಾರೋಗ್ಯಕರ ಸಿದ್ಧ ಆಹಾರ ಅಥವಾ ದೇಹಕ್ಕೆ ಒಗ್ಗದ ಯಾವುದೋ ಆಹಾರ ಸೇವಿಸಿದ ಬಳಿಕ ಬಹಳ ಹೊತ್ತು ವಿಸರ್ಜನೆಯಾಗದೇ ಇದ್ದಾಗ ಹಾಗಲಕಾಯಿಯ ರಸ ಅಮೃತ ಸಮಾನವಾಗಿದೆ. ಮಹಿಳೆಯರು ನಿಯಮಿತವಾಗಿ ಸೇವಿಸಿದಾಗ ಅವರ ಮಾಸಿಕ ಚಕ್ರವೂ ನಿಯಮಿತವಾಗಿ ಮತ್ತು ಆರೋಗ್ಯಕರ ಅಂತರದಲ್ಲಿ ನಡೆಯುವುದು ಕಂಡುಬಂದಿದೆ. ಅಲ್ಲದೇ ಹಲವು ಚರ್ಮದ ತೊಂದರೆಗಳಾದ ವ್ರಣಗಳು, ತುರಿಕೆ, ಕುಷ್ಠ, ದೊಡ್ಡ ಗಾಯಗಳು ಮೊದಲಾದವುಗಳನ್ನು ಮಾಗಿಸಲು ನೆರವಾಗುತ್ತದೆ.

ಅಧಿಕ ರಕ್ತದ ಒತ್ತಡ, ಮಲೇರಿಯಾ, ಫ್ಲೂ ಜ್ವರ ಮತ್ತು ತಲೆನೋವುಗಳನ್ನು ಕಡಿಮೆಯಾಗಿಸಲೂ ಹಾಗಲಕಾಯಿ ನೆರವಾಗುತ್ತದೆ. ಅಲ್ಲದೇ ಕೆಲವು ಹೊಟ್ಟೆಯ ಹುಳಗಳು ಸುಲಭವಾಗಿ ಹೊರಬರದಿರುವುದು ಹಾಗಲಕಾಯಿಯ ರಸವನ್ನು ಕುಡಿದಾಗ ಸುಲಭವಾಗಿ ಹೊರಬರುತ್ತವೆ. ಆರೋಗ್ಯಕರ ಕೂದಲಿಗಾಗಿ ಹಾಗಲಕಾಯಿ ಜ್ಯೂಸ್ ಪ್ರಯತ್ನಿಸಿ ನೋಡಿ!
ಮಕ್ಕಳಿಗೂ ಸೇವಿಸಲು ನೀಡಬಹುದಾದ ಹಾಗಲಕಾಯಿಯ ರಸ ಹಲವು ವೈರಸ್ಸುಗಳು, ಚರ್ಮದ ಕಾಯಿಲೆಗೆ ಕಾರಣವಾಗುವ ಹರ್ಪಿಸ್ ಮತ್ತು ಹೆಚ್ ಐ ವಿ ಯಂತಹ ಮಾರಕ ರೋಗಗಳು ಎದುರಾಗದಂತೆಯೂ ನೋಡಿಕೊಳ್ಳುತ್ತದೆ. ಆದರೆ ಅಮೃತಸಮಾನವಾದ ಹಾಗಲಕಾಯಿಯಲ್ಲಿಯೂ ಕೆಲವು ಅವಗುಣಗಳಿವೆ. ಪ್ರಮುಖವಾದುದೆಂದರೆ ಇದರ ಪೋಷಕಾಂಶಗಳು ಗರ್ಭಿಣಿಯರಿಗೆ ಸರ್ವಥಾ ತಕ್ಕುದಲ್ಲ. ಕೆಲವೊಮ್ಮೆ ಇವು ಗರ್ಭಾಪಾತಕ್ಕೂ ಕಾರಣವಾಗಬಹುದು.

ಟೈಪ್ 1 ಮಧುಮೇಹಿಗಳು ನಿತ್ಯವೂ ಒಂದು ಲೋಟ ಹಾಗಲಕಾಯಿಯ ಜ್ಯೂಸ್ ಕುಡಿಯುವ ಮೂಲಕ ತಮ್ಮ ದೇಹದ ರಕ್ತದ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿರಿಸಬಹುದು. ಆದರೆ ಇದು ಸಕ್ಕರೆಯ ಪ್ರಮಾಣವನ್ನು ಅಗತ್ಯಕ್ಕೂ ಕಡಿಮೆ ಮಾಡುವ ಮೂಲಕ ಹೃದಯದ ತೊಂದರೆಗೆ ಆಹ್ವಾನ ನೀಡುವ ಕಾರಣ ನಿಯಮಿತ ಅಂತರಗಳಲ್ಲಿ ಸಕ್ಕರೆಯ ಪ್ರಮಾಣವನ್ನು ಅಳೆದು ಆ ಪ್ರಕಾರ ಸೇವನೆಯ ಪ್ರಮಾಣವನ್ನೂ ಹೆಚ್ಚು ಕಡಿಮೆ ಮಾಡಬಹುದು. ಅಲ್ಲದೇ ಸಕ್ಕರೆಯ ಪ್ರಮಾಣ ಕಡಿಮೆಯಾಗಿ ಮತ್ತೆ ಮೇಲೇರತೊಡಗಿದ ಎರಡು ವಾರದ ವರೆಗೆ ಹಾಗಲಕಾಯಿ ರಸ ಸೇವಿಸಬಾರದು.

English summary

Amazing Benefits And Uses Of Bitter Melon

Bitter melon is also generally known as bitter gourd, bitter cucumber, karolla and karela. Bitter melon or karela is loaded with essential nutrients, minerals and vitamins which should be consumed to live a healthy life. It is rich in vitamins B1, B2, B3 and C, phosphorous and fiber. Bitter melon is globally known because of its effectiveness in treating diabetes. It chemically comprises a compoundthat is quite definitely comparable to insulin and occasionally also referred to as p insulin.
X
Desktop Bottom Promotion