ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಇಲ್ಲಿದೆ ನೋಡಿ ಎಂಟು ಟಿಪ್ಸ್

ಒಂದು ವೇಳೆ ಈ ನಿದ್ರಾಹೀನತೆಯನ್ನು ಆರಂಭದಲ್ಲಿಯೇ ನೋಡಿಕೊಳ್ಳದಿದ್ದರೆ, ಮುಂದೆ ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸಿ, ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.

By: Vani nayak
Subscribe to Boldsky

ನಿದ್ರಾಹೀನತೆ ಮನುಷ್ಯನು ಎದುರಿಸುವ ಕೆಟ್ಟ ಸಮಸ್ಯೆಗಳಲ್ಲೊಂದು. ಅಂದರೆ ನಿದ್ರೆ ಬಾರದಿರುವಿಕೆ. ಎಷ್ಟೇ ಪ್ರಯತ್ನ ಪಟ್ಟರೂ ನಿದ್ರೆಬಾರದೇ ಹೋಗುತ್ತದೆ. ಇದರಿಂದಾಗಿ ಸುಸ್ತು, ಆಯಾಸ, ಸಿಡಿಮಿಡಿಗೊಳ್ಳುವ ಮನಸ್ಥಿತಿ, .ಯಾವುದೇ ಕೆಲಸ ತೆಗೆದುಕೊಂಡರೂ ಏಕಾಗ್ರತೆ ಇಲ್ಲದಿರುವಿಕೆ ಮುಂತಾದ ಸಮಸ್ಯೆಗಳು ಆಗುತ್ತವೆ.

ಹಾಗಾಗಿ, ನಿದ್ರಾಹೀನತೆಯ ಸಮಸ್ಯೆಯಿಂದ ನೀವು ಹೊರ ಬರಲು ಕೆಳಗೆ ಕೊಟ್ಟಿರುವ 8 ಸಲಹೆಗಳು ನಿಮಗೆ ಸಹಾಯ ಮಾಡಬಹುದು. ಯಾರು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಾರೋ, ಅವರುಗಳು ಮೊಟ್ಟಮೊದಲನೆಯದಾಗಿ ಕಂಡುಕೊಳ್ಳುವ ಪರಿಹಾರವೇನೆಂದರೆ, ಹತ್ತಿರದಲ್ಲೇ ಲಭ್ಯವಿರುವ ಔಷಧಿ ಅಂಗಡಿಗಳಲ್ಲಿ ಸುಲಭವಾಗಿ ಗುಳಿಗೆಯನ್ನು ತೆಗೆದುಕೊಂಡು ಬಂದು ಸೇವಿಸುವುದು. ನಿದ್ರಾಹೀನತೆ ಕಾಯಿಲೆಯ ಲಕ್ಷಣಗಳು      

Insomnia sleep
 

ಇದು ಆ ಕ್ಷಣಕ್ಕೆ ಪರಿಹಾರವನ್ನು ಕೊಟ್ಟರೂ, ತಜ್ಞರ ಪ್ರಕಾರ ಇದನ್ನೇ ರೂಢಿಸಿಕೊಂಡು ಹವ್ಯಾಸ ಮಾಡಿಕೊಳ್ಳುವುದು ಸರಿಯಲ್ಲವೆಂದು ಹೇಳಲಾಗಿದೆ. ಒತ್ತಡಭರಿತ ಜೀವನ ಹಾಗು ಜಡ ಜೀವನ ಶೈಲಿ ನಿದ್ರಾಹೀನತೆಗೆ ಪ್ರಮುಖ ಕಾರಣಗಳಾಗಿವೆ. ಆದ್ದರಿಂದ, ಈ ಸಮಸ್ಯೆಗೆ ಕಾರಣವನ್ನು ಕಂಡುಹಿಡಿದು ಅವುಗಳನ್ನು ಹೋಗಲಾಡಿಸಲು ಅದಕ್ಕೆ ತಕ್ಕ ಚಿಕಿತ್ಸೆಯನ್ನು ಕೊಡುವುದು ನಿದ್ರಾಹೀನತೆ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳವ ಉತ್ತಮ ವಿಧಾನವಾಗಿದೆ.

ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸಿದರೆ ನಿದ್ರೆಯೂ ಚೆನ್ನಾಗಿ ಬರುತ್ತದೆ ಮತ್ತು ಯಾವುದೇ ವಿಧವಾದ ಅಡ್ಡ ಪರಿಣಾಮವನ್ನೂ ಬೀರುವುದಿಲ್ಲ. ಈ ಕೆಳಗೆ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಕೆಲ ವಿಧಾನಗಳನ್ನು ನೀಡಲಾಗಿದೆ. ಒಮ್ಮೆ ನೋಡಿ. ನಿದ್ದೆ ಅತಿಯಾದರೂ ಆರೋಗ್ಯಕ್ಕೆ ಮಾರಕ, ನೆನಪಿರಲಿ....   

Get Eye Mask
 

ಐ ಮಾಸ್ಕ್ (ಕಣ್ಣಿನ ಮುಖವಾಡ)ಬಳಕೆ
ನಿದ್ದೆ ಬರುವ ಗುಳಿಗೆಗಳನ್ನು ತೆಗೆದುಕೊಳ್ಳುವ ಬದಲು, ಹತ್ತಿದರ ಔಷಧಿ ಅಂಗಡಿಗಳಲ್ಲಿ ದೊರೆಯುವ ಬ್ಲಾಕ್ಔಟ್ ಶೇಡ್ಸ್ ಗಳನ್ನು ಪಡೆಯುವುದು ಉತ್ತಮ. ಇದು ನಿಮಗೆ ನಿದ್ರೆಗೆ ಅಡ್ಡಿ ಮಾಡುವ ಬೆಳಕಿಂದ ದೂರವಿರುತ್ತದೆ.

Eat Dinner Early
 

ರಾತ್ರಿಯ ಊಟವನ್ನು ಬೇಗ ಮುಗಿಸುವುದು
ಮತ್ತೊಂದು ಉಪಾಯವೇನೆಂದರೆ ರಾತ್ರಿಯ ಊಟವನ್ನು ಬೇಗ ಮಾಡಿ ಮುಗಿಸುವುದು. ಯಾವಾಗಲೂ ಮಲಗುವ ಮೂರು ತಾಸಿನ ಮುಂಚೆ ಊಟ ಮುಗಿದಿರಬೇಕು. ಇದರಿಂದ ಮಲಗುವ ಹೊತ್ತಿಗೆ ಸೇವಿಸಿದ ಆಹಾರದ ಪಚನವಾಗಿರುತ್ತದೆ.

Meditation
 

ಧ್ಯಾನ
ಬೆಳಗಿನ ಜಾವ ಮತ್ತು ರಾತ್ರಿ ಮಲಗುವ ಮುನ್ನ 10-15 ನಿಮಿಷಗಳವರೆಗೆ, ಧ್ಯಾನವನ್ನು ಮಾಡಿದರೆ ಒತ್ತಡವು ನಿವಾರಣೆಯಾಗಿ, ನಿದ್ರೆಯು ಬೇಗ ಬರುತ್ತದೆ.  ನಿದ್ರಾಹೀನತೆ ಸಮಸ್ಯೆ ನಿವಾರಿಸುವ ಮನೆಮದ್ದು!  

Lavender Oil:
 

ಲ್ಯಾವೆಂಡರ್ ಆಯಿಲ್
ಈ ಎಣ್ಣೆಯು, ಮನಸ್ಸನ್ನು ಆರಾಮಗೊಳಿಸಿ ನಿದ್ರೆಯನ್ನು ಹೆಚ್ಚಿಸುತ್ತದೆ. ರಾತ್ರಿ ಮಲಗುವ ಮುನ್ನ ಸ್ನಾನದ ನೀರಿಗೆ ಒಂದೆರಡು ಹನಿಯನ್ನು ಹಾಕಿ ಸ್ನಾನ ಮಾಡಬೇಕು. ಹಾಗು, ದಿಂಬಿನ ಕವರಿಗೂ ಈ ಲ್ಯಾವೆಂಡರ್ ಎಣ್ಣೆಯನ್ನು ಒಂದೆರಡು ಹನಿ ಹಾಕಿ ಒಗೆಯಬೇಕು. ಇದರಿಂದ ನಿದ್ರಾಹೀನತೆಯನ್ನು ಹೋಗಲಾಡಿಸಬಹುದು.

 Exercise
 

ಮಲಗುವ ಮುನ್ನ ವ್ಯಾಯಾಮ ಬೇಡ
ವ್ಯಾಯಾಮ ಮಾಡಿದಾಗ ದೇಹದಲ್ಲಿನ ಚೈತನ್ಯ ಹೆಚ್ಚುತ್ತದೆ. ಆದ್ದರಿಂದ ಮಲಗುವ ಮುನ್ನ ವ್ಯಾಯಾಮವನ್ನು ಮಾಡಬಾರದು. ಸಂಜೆ ಐದು ಗಂಟೆಯ ಒಳಗೆ ಮಾಡಿ ಮುಗಿಸಿದರೆ ಒಳ್ಳೆಯದು ಮತ್ತು ಅದರಿಂದಾಗಿ ನಿದ್ದೆಯೂ ಚೆನ್ನಾಗಿ ಬರುತ್ತದೆ.

Chamomile Oil
 

ಕ್ಯಾಮೋಮೈಲ್ ಎಣ್ಣೆ
ಈ ಎಣ್ಣೆಗೆ ಮನಸ್ಸನ್ನು ಆರಾಮಗೊಳಿಸಿ ನಿದ್ರೆ ತರಿಸುವ ಶಕ್ತಿ ಹೆಚ್ಚಾಗಿ ಇರುತ್ತದೆ. ರಾತ್ರಿ ಸ್ನಾನ ಮಾಡುವಾಗ ಸ್ವಲ್ಪ ಎಣ್ಣೆಯನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡಬೇಕು. ಇದರಿಂದ ಒಳ್ಳೆ ನಿದ್ರೆ ಬರುತ್ತದೆ.

Bit Of Reading
 

ಓದುವುದು
ಕಂಪ್ಯೂಟರ್, ಮೊಬೈಲ್ ಮುಂತಾದ ಗ್ಯಾಜೆಟ್ ಗಳ ಜೊತೆ ಕಾಲಕಳೆಯುವ ಬದಲು, ಪುಸ್ತಕ, ಪತ್ರಿಕೆಗಳನ್ನು ಒದುವ ಅಭ್ಯಾಸ ಮಾಡಿಕೊಂಡರೆ ನಿದ್ರಾಹೀನತೆಯನ್ನು ಹೋಗಲಾಡಿಸಿ ಒಳ್ಳೆಯ ನಿದ್ದೆ ಬರುವಂತೆ ಮಾಡುತ್ತದೆ.

Spicy Food
 

ಮಲಗುವ ಮುನ್ನ ಅತಿ ಹೆಚ್ಚು ಮಸಾಲೆಭರಿತ ಆಹಾರವನ್ನು ಸೇವಿಸಬೇಡಿ
ಯಾವ ಆಹಾರಗಳಲ್ಲಿ ಹೆಚ್ಚು ಮಸಾಲೆ ಅಥವಾ ಸಕ್ಕರೆಯ ಅಂಶವಿರುತ್ತದೆಯೋ ಅಂತಹ ಆಹಾರವನ್ನು ಸೇವಿಸತಕ್ಕದ್ದಲ್ಲ. ಇವು ನಿದ್ರೆಯನ್ನು ಹೋಗಲಾಡಿಸುತ್ತದೆ. ಆದ್ದರಿಂದ ಮಲಗುವ ಮುನ್ನ ಲಗುವಾದ ಹಾಗು ಸಮತೋಲನತೆಯುಳ್ಳ ಆಹಾರವನ್ನು ಸೇವಿಸುವುದು ಹೆಟ್ಟು ಸೂಕ್ತ.

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Tuesday, October 25, 2016, 18:05 [IST]
English summary

8 Super Sleep Hacks To Overcome Insomnia

One of the worst conditions one could ever suffer from is insomnia, not being able to sleep. Despite several attempts and trials, one fails to sleep. The result - you tend to feel tired, fatigued, agitated and also not able to concentrate on whatever you do. So if you are looking out for ways to overcome insomnia, then here are these super sleep hacks you could take up, that actually help.
Please Wait while comments are loading...
Subscribe Newsletter