For Quick Alerts
ALLOW NOTIFICATIONS  
For Daily Alerts

ಆರೋಗ್ಯಕಾರಿ ಟಿಪ್ಸ್: ಹಿಮ್ಮಡಿ ನೋವೇ? ಇನ್ನು ಚಿಂತೆ ಬಿಡಿ!

By Jayasubramanya
|

ನಮ್ಮ ದೇಹದ ಇತರೆ ಭಾಗಗಳನ್ನು ನಾವು ಉಪಚರಿಸುವಂತೆಯೇ ಪಾದಗಳ ಹಿಮ್ಮಡಿಯ ಆರೈಕೆಯನ್ನು ನಾವು ಮಾಡಬೇಕಾಗುತ್ತದೆ. ಬಿರುಕು ಬಿಟ್ಟ ಹಿಮ್ಮಡಿಗಳು ನಿಮ್ಮ ಸೌಂದರ್ಯಕ್ಕೆ ಕುಂದು. ನೀವು ಎಷ್ಟೇ ಅಲಂಕಾರ ಮಾಡಿಕೊಂಡು ಸೊಗಸಾದ ಪಾದರಕ್ಷೆಗಳನ್ನು ಧರಿಸಿಕೊಂಡಿದ್ದರೂ ನಿಮ್ಮ ಹಿಮ್ಮಡಿ ಬಿರುಕು ಬಿಟ್ಟಿದೆ ಎಂದಾದಲ್ಲಿ ಅದು ಮುಜುಗರವನ್ನು ತಂದಿಕ್ಕುವುದು ಖಂಡಿತ. ಹಿಮ್ಮಡಿಗಳ ಅಧಿಕ ಬಳಕೆ, ಗಾಯ, ಸ್ಥೂಲಕಾಯ ಮೊದಲಾದ ಕಾರಣಗಳಿಂದ ಹಿಮ್ಮಡಿಗಳಲ್ಲಿ ಒಡೆತ ಕಾಣಿಸಿಕೊಂಡು ಅದು ನೋವನ್ನು ಉಂಟುಮಾಡುತ್ತದೆ. ಪಾದದ ಬಿರುಕು ಪರದಾಟ ಬೇಡ, ಇಲ್ಲಿದೆ ಸೂಕ್ತ ಪರಿಹಾರ

ಹಿಮ್ಮಡಿಗಳ ನೋವು ಬಿಗಡಾಯಿಸಿತು ಎಂದಾದಲ್ಲಿ ಇದು ಸಂಧಿವಾತದಂತಹ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆ ಸಂದರ್ಭಗಳಲ್ಲಿ ತಜ್ಞರನ್ನು ನೀವು ಸಂಪರ್ಕಿಸಬೇಕಾಗುತ್ತದೆ. ಹಿಮ್ಮಡಿಗಳ ನೋವು ಸಹಿಸಲು ಸಾಧ್ಯವಾಗದೇ ಇರುತ್ತದೆ ಮತ್ತು ಇದು ಆರಾಮದಾಯಕವಾಗಿರುವುದಿಲ್ಲ. ಕೆಲವೊಂದು ಸಂದರ್ಭಗಳಲ್ಲಿ ಹಿಮ್ಮಡಿಗಳ ನೋವು ಸಹಿಸಲು ಸಾಧ್ಯವಾಗದೇ ಇರುವುದರಿಂದ ನಿಮಗೆ ಅತ್ತಿಂದಿತ್ತ ಚಲಿಸಲೂ ಸಾಧ್ಯವಾಗುವುದಿಲ್ಲ. ಆಗ ನೀವು ನೋವುನಿವಾರಕಗಳನ್ನು ಸೇವಿಸಬೇಕಾಗುತ್ತದೆ. ಕಾಡುವ ಸಮಸ್ಯೆ ಹಿಮ್ಮಡಿ ಒಡಕು-ಇಲ್ಲಿದೆ ಸಿಂಪಲ್ ಮದ್ದು

ಆದರೆ ಇವುಗಳು ಕ್ಷಣ ಮಾತ್ರದ ಉಪಶಮನವನ್ನು ನಿಮ್ಮ ನೋವಿಗೆ ನೀಡಿದರೂ ಇದರಿಂದ ಆರೋಗ್ಯಕ್ಕೆ ಧಕ್ಕೆ ಖಂಡಿತ. ಇದಕ್ಕೆ ಪರಿಹಾರವೆಂದರೆ ನೀವು ಮನೆಮದ್ದುಗಳನ್ನು ಆಶ್ರಯಿಸುವುದಾಗಿದೆ.ನಿಮ್ಮ ಸಮಯವನ್ನು ಕೊಲ್ಲದೆ ಈ ಮನೆಮದ್ದುಗಳನ್ನು ನಿಮಗೆ ಸರಳವಾಗಿ ತಯಾರಿಸಿಕೊಳ್ಳಬಹುದಾಗಿದ್ದು ಹಿಮ್ಮಡಿಗಳ ನೋವಿನಿಂದ ಇವುಗಳ ಉಪಶಮನವನ್ನು ನೀಡುತ್ತವೆ. ಬನ್ನಿ ಅವುಗಳೇನು ಎಂಬುದನ್ನು ಕಂಡುಕೊಳ್ಳೋಣ.

ಬಿಸಿ ಮತ್ತು ತಣ್ಣಗಿನ ನೀರು

ಬಿಸಿ ಮತ್ತು ತಣ್ಣಗಿನ ನೀರು

ಬಿಸಿ ಮತ್ತು ತಣ್ಣಗಿನ ನೀರನ್ನು ಕಾಲಿನ ಉಪಚಾರಕ್ಕಾಗಿ ಬದಲಾಯಿಸುವುದು ರಕ್ತ ಪ್ರಸಾರವನ್ನು ಉತ್ತೇಜಿಸುತ್ತದೆ. ಸುಧಾರಿತ ರಕ್ತ ಪರಿಚಲನೆ ಹಿಮ್ಮಡಿ ನೋವಿನಿಂದ ನಿಮಗೆ ಉಪಶಮನವನ್ನು ನೀಡುತ್ತದೆ.

ಐಸ್

ಐಸ್

ಹಿಮ್ಮಡಿ ನೋವಿನ ನಿವಾರಣೆಗೆ ಐಸ್ ಅನ್ನು ಬಳಸಿಕೊಳ್ಳಬಹುದಾಗಿದೆ. ನೋವನ್ನು ಇದು ಜೋಮು ಹಿಡಿಸುವುದರಿಂದ ಹಿಮ್ಮಡಿಯ ನೋವಿಗೆ ಪರಿಹಾರವನ್ನು ಶೀಘ್ರವೇ ಒದಗಿಸುತ್ತದೆ.

ಎಪ್ಸಮ್ ಉಪ್ಪು

ಎಪ್ಸಮ್ ಉಪ್ಪು

ಹಿಮ್ಮಡಿಯ ನೋವಿನಿಂದ ನಿಮಗೆ ತ್ವರಿತ ಉಪಶಮನವನ್ನು ಈ ಉಪ್ಪು ನೀಡುತ್ತದೆ. ಇದು ಸಲ್ಫೇಟ್ ಅಂಶಗಳನ್ನು ಒಳಗೊಂಡಿರುವುದರಿಂದ ಇದು ಯಾವುದೇ ನೋವು ಅತವಾ ಉರಿಯೂತವನ್ನು ನಿಭಾಯಿಸುತ್ತದೆ. ತ್ವರಿತ ಉಪಶಮನಕ್ಕಾಗಿ, ಎಪ್ಸೋಮ್ ಉಪ್ಪು ನೀರಿನಲ್ಲಿ ಪಾದಗಳನ್ನು ಮುಳುಗಿಸಿಡಿ.

ಮಸಾಜ್

ಮಸಾಜ್

ಹಿಂದಿನ ಕಾಲದಿಂದಲೂ ಹಿಮ್ಮಡಿ ನೋವಿಗಾಗಿ ಜನರು ಈ ಆರೈಕೆಯನ್ನು ಅನುಸರಿಸಿಕೊಂಡು ಬಂದಿದ್ದಾರೆ. ಮಸಾಜ್ ಮಾಡುವುದರಿಂದ ಸ್ನಾಯುಗಳಿಗೆ ಆರಾಮ ದೊರಕಿ ರಕ್ತ ಪ್ರಸಾರ ಉತ್ತಮವಾಗುತ್ತದೆ.

ಲವಂಗದೆಣ್ಣೆ

ಲವಂಗದೆಣ್ಣೆ

ಉಪಶಮನ ಮಾಡುವ ಅಂಶಗಳನ್ನು ಒಳಗೊಂಡಿರುವುದರಿಂದ ಲವಂಗದೆಣ್ಣೆ ಹಿಮ್ಮಡಿ ನೋವಿಗೆ ಅತ್ಯುತ್ತಮ ಎಂದೆನಿಸಿದೆ. ನಿಮ್ಮ ಪಾದಗಳನ್ನು ಲವಂಗದೆಣ್ಣೆಯಿಂದ ಮಸಾಜ್ ಮಾಡಿ ಇದು ರಕ್ತ ಪರಿಚಲನೆಯನ್ನು ಸುಧಾರಿಸಿ ನೋವಿನಿಂದ ತ್ವರಿತ ಪರಿಹಾರವನ್ನು ಒದಗಿಸುತ್ತದೆ.

ಪಾದಊರುವ ವ್ಯಾಯಾಮಗಳು

ಪಾದಊರುವ ವ್ಯಾಯಾಮಗಳು

ಸರಳ ವ್ಯಾಯಾಮವನ್ನು ಮಾಡುವುದು ಹಿಮ್ಮಡಿ ನೋವನ್ನು ಉಪಚರಿಸಬಹುದು. ಪಾದವನ್ನು ಊರಿ ಮಾಡುವ ವ್ಯಾಯಾಮವನ್ನು ನೀವು ಎಲ್ಲಿ ಬೇಕಾದರೂ ಮಾಡಬಹುದಾಗಿದ್ದು ಸ್ನಾಯುಗಳನ್ನು ಇದು ಉಪಚರಿಸಿ ಪಾದದ ಹಿಮ್ಮಡಿ ನೋವನ್ನು ನಿವಾರಿಸುತ್ತದೆ.

ವಿನೇಗರ್

ವಿನೇಗರ್

ಉಳುಕಿದ ನೋವಿನಿಂದಾಗಿ ಒಮ್ಮೊಮ್ಮೆ ಹಿಮ್ಮಡಿ ನೋವು ತಲೆದೋರುತ್ತದೆ. ವಿನೇಗರ್ ಬೆರೆಸಿದ ನೀರಿನಲ್ಲಿ ಪಾದಗಳನ್ನು ಮುಳುಗಿಸಿಡುವುದು ನಿಜಕ್ಕೂ ಪರಿಣಾಮಕಾರಿ ಚಿಕಿತ್ಸೆ ಎಂದೆನಿಸಿದೆ.

ಮೆಣಸಿನ ಹುಡಿ ಮತ್ತು ಬಿಸಿ ನೀರು

ಮೆಣಸಿನ ಹುಡಿ ಮತ್ತು ಬಿಸಿ ನೀರು

ಹಿಮ್ಮಡಿ ನೋವನ್ನು ಉಪಶಮನಗೊಳಿಸುವ ಮೆಣಸಿನ ಹುಡಿ ಮತ್ತು ಬಿಸಿ ನೀರಿನ ಪರಿಹಾರವನ್ನು ನಿಮಗೆ ಮನೆಯಲ್ಲೇ ಮಾಡಿಕೊಳ್ಳಬಹುದಾಗಿದೆ. ಸ್ನಾಯುಗಳ ಗಾಯಗಳಿಗಾಗಿ ಹಿಂದಿನಿಂದಲೂ ಜನರು ಇದೇ ಪರಿಹಾರವನ್ನು ಬಳಸುತ್ತಾ ಬಂದಿದ್ದಾರೆ. ಮೆಣಸಿನ ಹುಡಿಯನ್ನು ಬಿಸಿ ನೀರಿನಲ್ಲಿ ಬೆರೆಸಿಕೊಂಡು ಅದರಲ್ಲಿ ನಿಮ್ಮ ಪಾದಗಳನ್ನು ನೆನೆಸಿ ಇದರಿಂದ ನೋವು ಪರಿಹಾರವಾಗುತ್ತದೆ.

English summary

8 Home Remedies To Get Relief From Heel Pain Naturally

Very few of us are aware of the fact that the heel is the largest bone in the body. And the severity of pain in the heel can range from mild to disabling. It can occur due to various reasons like overuse, injury, obesity, etc. In certain cases, it could be a result of severe medical conditions like arthritis, rheumatism, etc. In this article, we at Boldsky will be sharing a list of extremely effective home remedies to get rid of the heel pain naturally. Have a look at these:
Story first published: Monday, May 9, 2016, 20:23 [IST]
X
Desktop Bottom Promotion