ಮಹಿಳೆಯರೇ ಶ್! ಗುಪ್ತಾಂಗದ ಸೋಂಕಿನ ಬಗ್ಗೆ ಎಚ್ಚರವಿರಲಿ!

ಮಹಿಳೆಯರ ಗುಪ್ತಾಂಗದ ಸೋಂಕು ಉಂಟಾದರೆ ಇದರ ಪರಿಣಾಮವಾಗಿ ತುರಿಕೆ, ಕೆಟ್ಟ ವಾಸನೆ, ಬಿಳಿಸೆರಗು ಇತರ ತೊಂದರೆಗಳು ಎದುರಾಗುತ್ತವೆ. ಸಾರ್ವಜನಿಕವಾಗಿ ಇದಕ್ಕೆ ಶಮನ ನೀಡಲು ಸಾಧ್ಯವಾಗದೇ ಮುಜುಗರ ಎದುರಿಸಬೇಕಾಗುತ್ತದೆ.

By: Arshad
Subscribe to Boldsky

ನಮ್ಮ ದೇಹದಲ್ಲಿ ಸೋಂಕು ಉಂಟಾಗುವ ಸ್ಥಳಗಳೆಂದರೆ ತೇವ ಇರುವ ಅಂಗಗಳು. ಮೂಗು, ಗಂಟಲು, ಬಾಯಿ ಹಾಗೂ ಗುಪ್ತಾಂಗಗಳಲ್ಲಿ ತೇವಾಂಶವಿರುವ ಕಾರಣ ವೈರಸ್ಸುಗಳು ಆಶ್ರಯ ಪಡೆಯುವ ಸಂಭವ ಹೆಚ್ಚು. ದಿನದ ಹೆಚ್ಚಿನ ಹೊತ್ತು ಉಡುಪುಗಳನ್ನು ಧರಿಸಿರುವ ನಮಗೆ ಗುಪ್ತ ಪ್ರದೇಶದಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಅದರಲ್ಲಿಯೂ ಮಹಿಳೆಯರಿಗೆ ಇನ್ನೂ ಹೆಚ್ಚು. ಯೋನಿಯ ದುರ್ವಾಸನೆ ಸಮಸ್ಯೆ ನಿವಾರಣೆಗೆ ಮನೆಮದ್ದುಗಳು

ಆದ್ದರಿಂದ ಪುಟ್ಟ ಹುಡುಗಿಯಾಗಿದ್ದಂದಿನಿಂದಲೇ ತಾಯಿ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಸ್ವಚ್ಛತೆಯ ಪಾಠವನ್ನು ಹೇಳಿಕೊಡುತ್ತಾ ಬರುತ್ತಾರೆ. ಇಂದಿನ ದಿನಗಳಲ್ಲಿ ಸ್ವಚ್ಛತೆಯನ್ನು ಕಾಪಾಡಲು ಆಧುನಿಕ ವಸ್ತ್ರಗಳು ಮತ್ತು ಇತರ ಪರಿಕರಗಳು ದೊರೆಯುತ್ತಿವೆ. ಎಷ್ಟೋ ಸಲ ಸ್ವಚ್ಛತೆಯನ್ನು ಕಾಪಾಡಿಕೊಂಡ ಬಳಿಕವೂ ಸೋಂಕು ಉಂಟಾಗುತ್ತದೆ. ಇದಕ್ಕೆ ಸ್ವಚ್ಛತೆ ಕಾಪಾಡಿದುದಕ್ಕಿಂತಲೂ ಹೆಚ್ಚಾಗಿ ಈ ಬಗ್ಗೆ ಅರಿವಿದ್ದೋ ಅರಿವಿಲ್ಲದೆಯೋ ಮಾಡುವ ತಪ್ಪುಗಳೇ ನೇರವಾಗಿ ಕಾರಣವಾಗುತ್ತವೆ. ಅನಿಯಮಿತವಾದ ಯೋನಿ ಸ್ರವಿಸುವಿಕೆಗೆ ಕಾರಣವಾಗುವ 10 ಬಗೆಯ ಜೀವನ ಶೈಲಿಗಳು  

ಮಹಿಳೆಯರ ಗುಪ್ತಾಂಗದ ಸೋಂಕು ಉಂಟಾದರೆ ಇದರ ಪರಿಣಾಮವಾಗಿ ತುರಿಕೆ, ಕೆಟ್ಟ ವಾಸನೆ, ಬಿಳಿಸೆರಗು ಇತರ ತೊಂದರೆಗಳು ಎದುರಾಗುತ್ತವೆ. ಸಾರ್ವಜನಿಕವಾಗಿ ಇದಕ್ಕೆ ಶಮನ ನೀಡಲು ಸಾಧ್ಯವಾಗದೇ ಮುಜುಗರ ಎದುರಿಸಬೇಕಾಗುತ್ತದೆ. ಈ ಸೋಂಕುಗಳಿಗೆ ಕೆಲವಾರು ಸೂಕ್ಷ್ಮಜೀವಿಗಳು ಕಾರಣವಾಗಿದ್ದು ತೇವವಿರುವ ಸ್ಥಳಗಳಲ್ಲಿಯೇ ಆಶ್ರಯ ಪಡೆಯುವ ಕಾರಣ ಸದಾ ಒಳ ಉಡುಪುಗಳನ್ನು ಧರಿಸಿಯೇ ಇರುವುದು ಮುಖ್ಯ ಕಾರಣವಾಗುತ್ತದೆ.

ಈ ಸೋಂಕು ತಗುಲಿದ ತಕ್ಷಣವೇ ಸೂಕ್ತ ಚಿಕಿತ್ಸೆಯನ್ನು ಪಡೆಯದೇ ಇದ್ದರೆ ಇದು ಶೀಘ್ರವೇ ಉಲ್ಬಣಗೊಂಡು ಕೆಲವಾರು ಭೀಕರ ತೊಂದರೆಗಳಿಗೆ ಕಾರಣವಾಗಬಹುದು. ವಿಶೇಷವಾಗಿ ಮೂತ್ರನಾಳದ ಸೋಂಕಿನಿಂದ ಪ್ರಾರಂಭಗೊಂಡು ಗರ್ಭಕೋಶದ ಕ್ಯಾನ್ಸರ್‌ವರೆಗೂ ವ್ಯಾಪಿಸಬಹುದು. ಸ್ವಚ್ಛತೆಯ ಕೊರತೆಯಿಂದಾಗಿ ಶಿಲೀಂಧ್ರಗಳೂ ಬೆಳವಣಿಗೆ ಪಡೆಯಬಹುದು. ಸೋಂಕು ತಗುಲಿದ ವ್ಯಕ್ತಿಯೊಂದಿಗೆ ಲೈಂಗಿಕ ಸಂಪರ್ಕ, ಕುಂಠಿತಗೊಂಡ ರೋಗ ನಿರೋಧಕ ಶಕ್ತಿ ಮೊದಲಾದವೂ ಈ ಸೋಂಕುಗಳನ್ನು ಹರಡಬಹುದು.

ಭಾರತದಲ್ಲಿ ಇನ್ನೂ ಮಡಿವಂತಿಕೆ ಇದ್ದು ಈ ಬಗ್ಗೆ ಮುಕ್ತವಾದ ಚರ್ಚೆಯಾಗದ ಕಾರಣ ಹೆಚ್ಚಿನ ಹೆಣ್ಣುಮಕ್ಕಳು ತಮ್ಮ ಹಿರಿಯರು ನಡೆಸಿಕೊಂಡು ಬಂದ ವಿಧಾನಗಳನ್ನೇ ಅನುಸರಿಸಿಕೊಂಡು ಬರುತ್ತಿದ್ದಾರೆ. ಇವುಗಳಲ್ಲಿ ಹೆಚ್ಚಿನವು ಅಂದಿನ ದಿನಗಳಲ್ಲಿ ಹಣದ ಮತ್ತು ಸೌಲಭ್ಯಗಳ ಮುಗ್ಗಟ್ಟಿನಿಂದಾಗಿ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲಾಗುತ್ತಿದ್ದು ಈ ತಾಯಂದಿರು ತಮ್ಮ ಹೆಣ್ಣುಮಕ್ಕಳಿಗೂ ಇದನ್ನೇ ಕಲಿಸುತ್ತಾರೆ. ಆದರೆ ಈ ಅಭ್ಯಾಸಗಳೇ ಸೋಂಕಿಗೆ ನಿಜವಾದ ಕಾರಣವಿರಬಹುದು. ಒಂದು ವೇಳೆ ನೀವು ಮಹಿಳೆಯಾಗಿದ್ದು ಅರಿವಿಲ್ಲದೇ ಕೆಳಗೆ ಸೂಚಿಸಿರುವ ಏಳು ಅಭ್ಯಾಸಗಳಲ್ಲಿ ಒಂದನ್ನಾದರೂ ಅನುಸರಿಸುತ್ತ ಬಂದಿದದ್ರೆ ತಕ್ಷಣವೇ ಬದಲಿಸಿಕೊಳ್ಳಿ, ಆರೋಗ್ಯವಂತರಾಗಿ......


ಇಂದು ಧರಿಸಿದ್ದ ಒಳ ಉಡುಪನ್ನು ಮರುದಿನಕ್ಕೂ ಮುಂದುವರೆಸುವುದು

ಗುಪ್ತಾಂಗದ ಸೋಂಕಿಗೆ ಪ್ರಮುಖ ಕಾರಣ ಇಂದಿನ ಒಳ ಉಡುಪನ್ನು ಬದಲಿಸದೇ ಮರುದಿನವೂ ಧರಿಸುವುದು. ಹಿಂದಿನ ದಿನಗಳಲ್ಲಿ ಕಡಿಮೆ ಉಡುಪುಗಳಿದ್ದ ಕಾರಣ ಮತ್ತು ಒಣಗದಿರುವ ಅನಿವಾರ್ಯತೆ ಅರಿವಿಲ್ಲದೇ ಒಂದು ಅಭ್ಯಾಸವಾಗಿ ಬಂದಿರುವುದು ಒಂದು ಕಾರಣವಾಗಿದೆ.

ಇಂದು ಧರಿಸಿದ್ದ ಒಳ ಉಡುಪನ್ನು ಮರುದಿನಕ್ಕೂ ಮುಂದುವರೆಸುವುದು

ಆದರೆ ಪ್ರತಿದಿನವೂ ಗುಪ್ತಾಂಗದಿಂದ ಒಸರುವ ದ್ರವ ಒಳ ಉಡುಪುಗಳಿಗೆ ತಗುಲಿ ತೇವವಾಗಿದ್ದು ಇದರಲ್ಲಿ ಸೋಂಕು ಹರಡುವ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳು ಬೀಡು ಬಿಡುತ್ತವೆ. ಮರುದಿನವೂ ಇದನ್ನೇ ತೊಡುವ ಮೂಲಕ ಈ ವೈರಸ್ಸುಗಳಿಗೆ ನಮ್ಮ ಕೈಯಾರೆ ಸೋಂಕು ಹರಡಲು ದಾರಿ ತೋರಿದಂತಾಗುತ್ತದೆ. ಆದ್ದರಿಂದ ಪ್ರತಿದಿನವೂ ಸ್ವಚ್ಛವಾಗಿ ಒಗೆದು ಇಸ್ತ್ರಿ ಮಾಡಿದ ಒಳ ಉಡುಪುಗಳನ್ನೇ ಧರಿಸಬೇಕು.

ವ್ಯಾಯಾಮದ ಬಳಿಕ ಒಳ ಉಡುಪನ್ನು ಬದಲಿಸದಿರುವುದು

ವ್ಯಾಯಾಮದ ಸಮಯದಲ್ಲಿ ಇತರ ಸಮಯಕ್ಕಿಂತಲೂ ಕೊಂಚ ಹೆಚ್ಚಿಗೇ ದ್ರವ ಸೋರುತ್ತದೆ. ಇದು ಒಳ ಉಡುಪಿನಲ್ಲಿ ಹೀರಲ್ಪಡುತ್ತದೆ. ಅಲ್ಲದೇ ವ್ಯಾಯಾಮದ ಕಾರಣ ಚರ್ಮದಲ್ಲಿ ಮೂಡಿರುವ ಬೆವರು ಸಹಾ ಉಡುಪಿನಲ್ಲಿ ಹೀರಲ್ಪಡುತ್ತದೆ. ಆದ್ದರಿಂದ ವ್ಯಾಯಾಮದ ಬಳಿಕ ಸ್ನಾನ ಮಾಡಿ ಸ್ವಚ್ಛವಾದ ಹೊಸ ಉಡುಪುಗಳನ್ನು ತೊಡಬೇಕು.

ಬಿಗಿ ತುಂಡುಡುಗೆಗಳನ್ನು ಹೆಚ್ಚು ಧರಿಸುವುದು

ಕೆಲವರಿಗೆ ದೇಹವನ್ನು ಬಿಗಿಯಾಗಿ ಹಿಡಿದಿರುವ ತುಂಡು ಉಡುಗೆಗಳೇ ಇಷ್ಟ. ಆದರೆ ಈ ಬಿಗಿತನ ಅತಿ ಸೂಕ್ಷವಾದ ಗುಪ್ತಾಂಗದ ಮೇಲೆ ಹೆಚ್ಚಿನ ಒತ್ತಡ ಹೇರಿ ನಡೆಯುವಾಗ ತಿಕ್ಕಾಟ ಅಥವಾ ಘರ್ಷಣೆಗೆ ಕಾರಣವಾಗುತ್ತದೆ. ಇದರಿಂದ ಸೂಕ್ಷ್ಮ ಚರ್ಮ ಹೆಚ್ಚು ಸವೆದು ಸೋಂಕು ತಗುಲಲು ಕಾರಣವಾಗುತ್ತದೆ. ಆದ್ದರಿಂದ ಅನಿವಾರ್ಯವಲ್ಲದೇ ತುಂಡುಡುಗೆ ಅಥವಾ ಬಿಗಿಯಾದ ಉಡುಗೆಗಳನ್ನು ತೊಡುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ.

ಒಳ ಉಡುಪುಗಳ ಅಂಚುಗಳು ಒರಟಾಗಿರುವುದು

ಮಹಿಳೆಯರು ಸ್ವಾಭಾವಿಕವಾಗಿ ಅಲಂಕಾರ ಪ್ರಿಯರು. ಮಹಿಳಾ ಗ್ರಾಹಕರನ್ನು ಆಕರ್ಷಿಸಲು ಒಳ ಉಡುಪುಗಳಲ್ಲಿಯೂ ವೈವಿಧ್ಯತೆಯನ್ನು ಮೂಡಿಸಲು ಇದರ ಅಂಚುಗಳಲ್ಲಿ ವಿವಿಧ ಬಣ್ಣದ ಲೇಸ್, ಸ್ಯಾಟಿನ್ ಪಟ್ಟಿ ಮೊದಲಾದವುಗಳನ್ನು ಇಟ್ಟು ಹೊಲಿದಿರಲಾಗುತ್ತದೆ. ನೋಡಲು ಇವು ಚೆನ್ನಾಗಿದ್ದರೂ ಈ ಪಟ್ಟಿಗಳನ್ನು ಹೊಲಿದಿರುವ ಅಂಚುಗಳು ಸೂಕ್ಷಾಣುಜೀವಿಗಳಿಗೆ ಸಮರ್ಪಕವಾದ ಆಶ್ರಯದಾಣವಾಗುತ್ತದೆ.

ಒಳ ಉಡುಪುಗಳ ಅಂಚುಗಳು ಒರಟಾಗಿರುವುದು

ಅಲ್ಲದೇ ಗುಪ್ತಾಂಗದ ಅತಿ ಸೂಕ್ಷ್ಮವಾದ ಚರ್ಮ ಈ ಒರಟು ಪಟ್ಟಿ ಅಥವಾ ಲೇಸ್ ಗಳ ಘರ್ಷಣೆಗೆ ಒಳಗಾಗಿ ಸತತ ಉಜ್ಜಲ್ಪಟ್ಟು ಉರಿ ಮತ್ತು ಸೂಕ್ಷ್ಮಗೆರೆಗಳಿಗೆ ಕಾರಣವಾಗಬಹುದು. ಆದ್ದರಿಂದ ಹತ್ತಿಯ, ಒರಟು ಅಂಚುಗಳಿಲ್ಲದ ಮತ್ತು ಅತ್ಯಂತ ಸೌಮ್ಯವಾದ ಒಳ ಉಡುಪುಗಳನ್ನು ಮಾತ್ರವೇ ಧರಿಸಿ.

ಸೂಕ್ತವಲ್ಲದ ಗಾತ್ರದ ಉಳ ಉಡುಪು ತೊಡುವುದು

ನಿಮ್ಮ ಒಳ ಉಡುಪುಗಳು ಅತಿ ಸಡಿಲವಾಗಿಯೂ ಇರಬಾರದು ಅಥವಾ ಅತಿ ಬಿಗಿಯಾಗಿಯೂ ಇರಬಾರದು. ಬಿಗಿಯಾಗಿದ್ದರೆ ಗಾಳಿಯಾಡಲು ಅವಕಾಶವಿಲ್ಲದೇ ಹೆಚ್ಚಿನ ಬೆವರುವಿಕೆಗೆ ಕಾರಣವಾಗುತ್ತದೆ. ಇದು ನೇರವಾಗಿ ಸೋಂಕಿಗೆ ಕಾರಣವಾಗುತ್ತದೆ.

ಸೂಕ್ತವಲ್ಲದ ಡಿಟರ್ಜೆಂಟ್‌ಗಳನ್ನು ಒಗೆಯಲು ಬಳಸುವುದು

ಒಳ ಉಡುಪುಗಳು ಇತರ ಬಟ್ಟೆಗಳಿಗಿಂತ ಮೃದುವಾಗಿದ್ದು ಇತರ ಬಟ್ಟೆಗಳಿಗೆ ಉಪಯೋಗಿಸುವ ಡಿಟರ್ಜೆಂಟುಗಳು ಇವುಗಳಿಗೆ ಹಾನಿಯುಂಟು ಮಾಡಬಹುದು. ಅಲ್ಲದೇ ಹೀಗೆ ಒಗೆದ ಉಡುಪುಗಳು ಕ್ರಮೇಣ ಒರಟಾಗುತ್ತಾ ಗಟ್ಟಿಯಾಗತೊಡಗುತ್ತವೆ. ಈ ಉಡುಪುಗಳನ್ನು ಧರಿಸುವ ಮೂಲಕ ಸೂಕ್ಷ್ಮ ಚರ್ಮ ಹೆಚ್ಚು ಘಾಸಿಗೊಳಗಾಗುತ್ತದೆ. ಆದ್ದರಿಂದ ಒಳ ಉಡುಪುಗಳನ್ನು ಪ್ರತ್ಯೇಕವಾಗಿ, ಇವುಗಳಿಗೆ ಸೂಕ್ತವಾಗಿರುವ ಡಿಟರ್ಜೆಂಟ್ ಪೌಡರ್ ಬಳಸಿ ಒಗೆಯಬೇಕು.

ಒಳ ಉಡುಪುಗಳನ್ನು ಧೂಳಿರುವಲ್ಲಿ ಒಣಗಿಸುವುದು/ಶೇಖರಿಸುವುದು

ಒಳ ಉಡುಪುಗಳನ್ನು ಧೂಳಿರುವಲ್ಲಿ ಬಿಸಿಲಿನಲ್ಲಿ ಒಣಗಿಸುವ ಬದಲು ನೆರಳಿನಲ್ಲಿ, ಧೂಳಿಲ್ಲದ ಕಡೆ ಒಣಗಿಸಬೇಕು. ಅಲ್ಲದೇ ಒಣಗಿದ ಬಳಿಕ ಇಸ್ತ್ರಿ ಮಾಡಿ ಮಡಚಿ ಪ್ರತ್ಯೇಕವಾದ ಚೀಲವೊಂದರಲ್ಲಿರಿಸಿ ನಿಮ್ಮ ಕಪಾಟಿನಲ್ಲಿ ಇರಿಸಿ. ಒಂದು ವೇಳೆ ಧೂಳು ಶೇಖರವಾದರೆ ಇದರೊಂದಿಗೆ ಸೂಕ್ಷ್ಮಜೀವಿಗಳೂ ಕರೆಯದೇ ಬಂದ ಅತಿಥಿಗಳಾಗಿ ಒಳ ಉಡುಪಿನಲ್ಲಿ ಆಶ್ರಯ ಪಡೆಯುತ್ತವೆ. ವಿಶೇಷವಾಗಿ ತೇವವಿರುವ ದಿನಗಳಲ್ಲಿ ಹೆಚ್ಚಿನ ಅಸ್ಥೆ ವಹಿಸಬೇಕು.

ಸೋಂಕು ತಗಲದೇ ಇರಲು ಕೆಲವು ಆರೋಗ್ಯಕರ ಅಭ್ಯಾಸಗಳು ಇಂತಿವೆ

* ರಾತ್ರಿ ಮಲಗುವಾಗ ಒಳ ಉಡುಪು ಧರಿಸಬೇಡಿ
* ಗುಪ್ತಾಂಗಗಳನ್ನು ಸ್ವಚ್ಛಗೊಳಿಸಲು ಸೋಪಿನ ಬದಲು ಇದಕ್ಕಾಗಿಯೇ ಇಂದು ದೊರಕುತ್ತಿರುವ ದ್ರಾವಣವನ್ನು ಬಳಸಿ. ಕೊಂಚ ದುಬಾರಿಯಾದರೂ ಸರಿ, ಇವು ಹೆಚ್ಚಿನ ರಕ್ಷಣೆ ನೀಡುತ್ತವೆ.
* ದಿನದಲ್ಲಿ ಕೆಲ ಹೊತ್ತಾದರೂ ಕಾಲುಗಳನ್ನು ಅಗಲಿಸುವ ವ್ಯಾಯಾಮಗಳನ್ನು ಮಾಡಿ.
* ಸಾರ್ವಜನಿಕವಾಗಿ ಮೊಣಕಾಲುಗಳನ್ನು ಜೋಡಿಸಿ ಕುಳಿತುಕೊಳ್ಳುವ ಅನಿವಾರ್ಯತೆ ಇದ್ದ ಹೊರತು ಮನೆಯಲ್ಲಿ ಆರಾಮವಾಗಿ ಕುಳಿತುಕೊಳ್ಳುವ ಸಮಯದಲ್ಲಿ ಕಾಲುಗಳನ್ನು ಅಗಲಿಸಿಯೇ ಕುಳಿತುಕೊಳ್ಳಿ.

ಸೋಂಕು ತಗಲದೇ ಇರಲು ಕೆಲವು ಆರೋಗ್ಯಕರ ಅಭ್ಯಾಸಗಳು ಇಂತಿವೆ

* ಸದಾ ಪರ್ಸ್ ನಲ್ಲಿ ಕೆಲವು ಟಿಶ್ಯೂ ಕಾಗದಗಳನ್ನು ಇರಿಸಿಕೊಳ್ಳಿ. ಸಾರ್ವಜನಿಕ ಶೌಚಾಲಯವನ್ನು ಬಳಸಿದ ಬಳಿಕ ಒಣಗಿಸಿಕೊಳ್ಳಲು ಇವು ನೆರವಾಗುತ್ತವೆ.
* ಮಾಸಿಕ ದಿನಗಳ ಸ್ರಾವವನ್ನು ಹೆಚ್ಚು ಸಮರ್ಪಕವಾಗಿ ನಿಭಾಯಿಸಲು ಸಾಂಪ್ರಾದಾಯಿಕ ಪ್ಯಾಡ್ ಬದಲಿಗೆ ಹೊಸದಾಗಿ ಬರುತ್ತಿರುವ ಟ್ಯಾಂಪೋನ್ ಗಳನ್ನು ಬಳಸಲು ಪ್ರಾರಂಭಿಸಿ

ಸೋಂಕು ತಗಲದೇ ಇರಲು ಕೆಲವು ಆರೋಗ್ಯಕರ ಅಭ್ಯಾಸಗಳು ಇಂತಿವೆ

* ಒಳ ಉಡುಗೆಗಳನ್ನು ಬಲು ಹೆಚ್ಚು ಕಾಲ ಬಳಸಬೇಡಿ. ಕಾಲಕಾಲಕ್ಕೆ ಹೊಸದನ್ನು ಖರೀದಿಸಿ.
* ತೀರಾ ಕಿರಿದಾಗಿರುವ ಒಳ ಉಡುಪುಗಳು ಸರ್ವಥಾ ಆರಾಮದಾಯಕವಲ್ಲ. ಆದ್ದರಿಂದ ಸೊಂಟವನ್ನು ಪೂರ್ಣವಾಗಿ ಸುತ್ತುವರೆಯುವ ಸಮರ್ಪಕವಾದ ಒಳ ಉಡುಪುಗಳನ್ನೇ ಧರಿಸಿ.
* ಪ್ರತಿದಿನ ತಲೆಗೆ ಸ್ನಾನ ಮಾಡದಿದ್ದರೂ ಪರವಾಗಿಲ್ಲ, ಆದರೆ ಮೈಸ್ನಾನ ಮಾತ್ರ ಮರೆಯದಿರಿ.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

English summary

Underwear Mistakes That Cause Vaginal Infections In Women

Infections of the vagina caused by microbes like bacteria and fungi can put a woman through quite an ordeal! Infections or ailments of the vagina come with certain uncomfortable symptoms like itching, foul odour, discharge, etc., that can come in the way of a woman's daily activities. In addition, there are a few underwear mistakes that can also lead to vaginal infections. Have a look and avoid these mistakes!
Please Wait while comments are loading...
Subscribe Newsletter