ಅಗ್ಗವೇ ಇರಲಿ, ಈ ಆರು ಅನಾರೋಗ್ಯಕರ ಎಣ್ಣೆಗಳನ್ನು ಬಳಸಲೇಬೇಡಿ!

By: manu
Subscribe to Boldsky

ನಮ್ಮ ಅಡುಗೆಗಳಲ್ಲಿ ಎಣ್ಣೆ ಒಂದು ಪ್ರಮುಖ ಪರಿಕರ. ಹುರಿಯಲು, ಕರಿಯಲು, ದೋಸೆ ಹುಯ್ಯಲು, ಒಗ್ಗರಣೆ ಮೊದಲಾದ ಹಲವು ಕ್ರಿಯೆಗಳಿಗೆ ಎಣ್ಣೆ ಅಗತ್ಯ. ಆದರೆ ಎಣ್ಣೆ ಅಡುಗೆಯಲ್ಲಿ ಹೆಚ್ಚಾಗಬಾರದು. ಏಕೆಂದರೆ ಕೆಲವು ಎಣ್ಣೆಗಳಲ್ಲಿರುವ ಜಿಡ್ಡು ಆಹಾರದ ಮೂಲಕ ರಕ್ತ ಸೇರಿ ರಕ್ತನಾಳಗಳ ಒಳಗೆ ಕಟ್ಟಿಕೊಂಡು ಗಡ್ಡೆಯಾಗುತ್ತವೆ. ಇದು ಹೃದಯದ ಒತ್ತಡವನ್ನು ಹೆಚ್ಚಿಸುವ ಮೂಲಕ ಹಲವು ಹೃದಯಸಂಬಂಧಿ ತೊಂದರೆಗಳಿಗೆ ಆಹ್ವಾನ ನೀಡುತ್ತದೆ. ಕೇಳಿ ಇಲ್ಲಿ, ಅಡುಗೆ ಎಣ್ಣೆಯ ವಿಚಾರದಲ್ಲಿ ಮೋಸ ಹೋಗದಿರಿ!

ಕೆಲವು ಎಣ್ಣೆಗಳಲ್ಲಿ ಅಪಾಯಕಾರಿಯಾದ ರಾಸಾಯನಿಕಗಳಿದ್ದು ಹಲವಾರು ವಿಧದಲ್ಲಿ ಆರೋಗ್ಯಕ್ಕೆ ಮಾರಕವಾಗಿವೆ. ಅಷ್ಟೇ ಅಲ್ಲ, ಕೆಲವು ಎಣ್ಣೆಗಳನ್ನು ಬಿಸಿ ಮಾಡಿದಷ್ಟೂ ಇದರ ವಿಷಕಾರಿ ಪರಿಣಾಮಗಳೂ ಹೆಚ್ಚುತ್ತಾ ಹೋಗುತ್ತವೆ. ಸಂಸ್ಕರಿತ ಸೂರ್ಯಕಾಂತಿ, ಮೆಕ್ಕೆ ಜೋಳದ ಮತ್ತು ಸೋಯಾ ಅವರೆಯ ಎಣ್ಣೆಗಳು ಆರೋಗ್ಯಕ್ಕೆ ಉತ್ತಮವಲ್ಲ. ಏಕೆಂದರೆ ಇದರಲ್ಲಿ ಒಮೆಗಾ 6 ಅಸಂತುಲಿತ ಕೊಬ್ಬಿನ ಆಮ್ಲಗಳಿವೆ. ಅಲ್ಲದೇ ನಿಯಮಿತವಾಗಿ ಸೇವಿಸಿದರೆ ಈ ಎಣ್ಣೆಗಳಲ್ಲಿರುವ ಕೆಲವು ಅಂಶಗಳು ನಮ್ಮ ಆರೋಗ್ಯವನ್ನು ಏರುಪೇರು ಮಾಡಬಲ್ಲವು. ಮೂರು ತಿಂಗಳಿಗೊಮ್ಮೆ ಅಡುಗೆ ಎಣ್ಣೆ, ಬದಲಿಸಲು ಮರೆಯದಿರಿ

ಆದರೆ ಪಾಶ್ಚಾತ್ಯ ದೇಶಗಳು ಅಪಪ್ರಚಾರ ಮಾಡಿದಕ್ಕೆ ವಿರುದ್ಧವಾಗಿ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಕೊಬ್ಬರಿ ಎಣ್ಣೆ ಮತ್ತು ತಣ್ಣನೆಯ ವಿಧಾನದಿಂದ ಹಿಂಡಿರುವ ಆಲಿವ್ ಎಣ್ಣೆಗಳು ಹೆಚ್ಚು ಆರೋಗ್ಯಕರವಾಗಿವೆ. ಬನ್ನಿ, ಆರೋಗ್ಯಕ್ಕೆ ಯಾವ ಎಣ್ಣೆಗಳು ಒಳ್ಳೆಯದು ಎಂಬುದನ್ನು ನೋಡೋಣ....    

ಕ್ಯಾನೋಲಾ ಎಣ್ಣೆ

ಸಾವಯವ ವಿಧಾನದಲ್ಲಿ ಬೆಳೆದ ಕ್ಯಾನೋಲಾ ಹೂವಿನ ಬೀಜಗಳನ್ನು ಹಿಂಡಿ ತೆಗೆದಿರುವ ಕ್ಯಾನೋಲಾ ಎಣ್ಣೆ ಅತ್ಯುತ್ತಮವಾಗಿದೆ. ಆದರೆ ಈ ಬೆಳೆಗೆ ಬಳಸಿರುವ ಕೀಟನಾಶಕಗಳು ಬೀಜದಲ್ಲಿಯೂ ಉಳಿದು ಎಣ್ಣೆಯಲ್ಲಿಯೂ ಕಾಣಬರುತ್ತವೆ. ಸಾಮಾನ್ಯವಾಗಿ ಇಂದು ಮಾರುಕಟ್ಟೆಯಲ್ಲಿ ಸಿಗುತ್ತಿರುವ ಎಲ್ಲಾ ಕ್ಯಾನೋಲಾ ಎಣ್ಣೆಗಳಲ್ಲಿಯೂ ಕೀಟನಾಶಕ ಕಂಡುಬಂದಿರುವ ಕಾರಣ ಈ ಎಣ್ಣೆಯನ್ನು ಬಳಸದಿರುವುದೇ ಉತ್ತಮ. ಈ ಎಣ್ಣೆಯ ಬಳಕೆಯಿಂದ ಕೆಲವು ಬಗೆಯ ಕ್ಯಾನ್ಸರ್, ಸ್ಥೂಲಕಾಯ ಹಾಗೂ ಕೆಲವು ಸಂದರ್ಭಗಳಲ್ಲಿ ಮಾರಕ ADHD ಕಾಯಿಲೆಯನ್ನೂ ತಂದೊಡ್ಡಬಹುದು.

ಮೆಕ್ಕೆಜೋಳದ ಎಣ್ಣೆ

ಮೆಕ್ಕೆಜೋಳದ ಎಣ್ಣೆ ತಣ್ಣಗಿದ್ದಾಗ ಸೇವಿಸಿದರೆ ಆರೋಗ್ಯಕರ. ಆದರೆ ಇದನ್ನು ಬಿಸಿಮಾಡಿದಾಗ ಮಾತ್ರ ಇದರಲ್ಲಿ ಕೆಲವು ರಾಸಾಯನಿಕಗಳು ಉತ್ಪತ್ತಿಯಾಗಿ ಯಕೃತ್, ಥೈಮಸ್ ಗ್ರಂಥಿಗಳಿಗೆ ಹಾನಿ ಎಸಗಬಹುದು. ಅಲ್ಲದೇ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಇಳಿಮುಖವಾಗಲೂ ಕಾರಣವಾಗುತ್ತದೆ.

ಹತ್ತಿಬೀಜದ ಎಣ್ಣೆ

ಈ ಎಣ್ಣೆಯ ಸೇವನೆಯಿಂದ ದೇಹದಲ್ಲಿ ಕೆಲವು ರಸದೂತಗಳ ಮೇಲೆ ಪರಿಣಾಮ ಬೀರಬಹುದು. ಹತ್ತಿಬೀಜದ ಎಣ್ಣೆ ಮಾತ್ರವಲ್ಲ, ಇದನ್ನು ಸಂಸ್ಕರಿಸಿ ಬೆಣ್ಣೆಯಂತಾಗಿಸಿದ ಮಾರ್ಜರೀನ್ ಸಹಾ ಒಳ್ಳೆಯದಲ್ಲ.

ಸೂರ್ಯಕಾಂತಿ ಎಣ್ಣೆ

ಸೂರ್ಯಕಾಂತಿ ಎಣ್ಣೆಯನ್ನೂ ಇದುವರೆಗೆ ಆರೋಗ್ಯಕರ ಎಂದೇ ಭಾವಿಸಲಾಗಿತ್ತು. ಆದರೆ ಇತ್ತೀಚಿನ ಸಂಶೋಧನೆಯಲ್ಲಿ ಈ ಎಣ್ಣೆಯಲ್ಲಿ ಲಿನೋಲಿಕ್ ಆಮ್ಲವಿರುವುದು ಕಂಡುಬಂದಿದೆ. ಕೊಂಚ ಪ್ರಮಾಣದ ಸೇವನೆಯಿಂದ ಹೆಚ್ಚು ಪ್ರಭಾವವಿರದಿದ್ದರೂ ಹೆಚ್ಚಿನ ಪ್ರಮಾಣದ ಮತ್ತು ಸತತ ಸೇವನೆ ದೇಹದಲ್ಲಿ ಕೆಲವು ಗಡ್ಡೆಗಳನ್ನು ಉಂಟುಮಾಡಬಹುದು. ಇದರ ಬದಲಿಗೆ ಕೊಬ್ಬರಿ ಎಣ್ಣೆಯೇ ವಾಸಿ.

ಶೇಂಗಾ ಎಣ್ಣೆ

ಈ ಎಣ್ಣೆ ವಿಶೇಷವಾಗಿ ಪುರುಷರಿಗೆ ಕೆಟ್ಟದಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಶೇಂಗಾ ಎಣ್ಣೆಯ ಆಹಾರಗಳನ್ನು ಸೇವಿಸುವುದರಿಂದ ಪುರುಷರಲ್ಲಿ ನಂಪುಂಸಕತೆಯ ಸಾಧ್ಯತೆ ಹೆಚ್ಚಾಗಿರುವುದು ಕಂಡುಬಂದಿದೆ.

ಸೋಯಾ ಅವರೆ ಎಣ್ಣೆ

ಈ ಎಣ್ಣೆಯಲ್ಲಿಯೂ ಲಿನೋಲಿಕ್ ಆಮ್ಲವಿದೆ. ಸೋಯಾ ಅವರೆಯ ಹೆಚ್ಚಿನ ಪ್ರಮಾಣದ ಸೇವನೆಯಿಂದ ದೇಹದಲ್ಲಿ ಗಡ್ಡೆಗಳಾಗುವ ಸಾಧ್ಯತೆ ಹೆಚ್ಚಾಗುತ್ತದೆ. ವಿಶೇಷವಾಗಿ ಕರುಳು ಮತ್ತು ಸ್ತನಗಳಲ್ಲಿ ಗಡ್ಡೆ ಕಂಡುಬರುವ ಸಾಧ್ಯತೆ ಅಪಾರವಾಗಿ ಹೆಚ್ಚುತ್ತದೆ.

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Tuesday, October 4, 2016, 10:25 [IST]
English summary

6 Unhealthy Cooking Oils

We love fried foods but unfortunately, frying involves usage of lots of oil. The problem with processed oils is that they are the reason behind clogged arteries. And some other cooking oils do contain harmful chemical compounds that damage your health in many ways. And on the other hand, we tend to heat the oils at high temperatures which could make them more harmful.
Please Wait while comments are loading...
Subscribe Newsletter