For Quick Alerts
ALLOW NOTIFICATIONS  
For Daily Alerts

ಆಹಾರವನ್ನು ಫ್ರೀಜರ್‌ನಲ್ಲಿಡುವ ಮೊದಲು, ಈ ಲೇಖನ ಓದಿ...

By Cm Prasad
|

ಇತ್ತೀಚೆಗೆ ಎಲ್ಲರ ಮನೆಗಳಲ್ಲಿ ರೆಫ್ರಿಜರೇಟರ್ ಇರುವುದು ಸಾಮಾನ್ಯದ ಸಂಗತಿ. ಮಾರುಕಟ್ಟೆಯಿಂದ ತಂದ ಎಲ್ಲಾ ಪದಾರ್ಥಗಳನ್ನು ಶೇಖರಣೆ ಮಾಡಲು ರೆಫ್ರಿಜರೇಟರ್‌ನಲ್ಲಿ ಇಡುವುದು ಸಹಜ. ಆದರೆ ಅವುಗಳಲ್ಲಿ ನಿಮಗೆ ತಿಳಿಯದ ಕೆಲವು ಪದಾರ್ಥಗಳನ್ನು ನಿಮ್ಮ ತಪ್ಪು ಗ್ರಹಿಕೆಯಿಂದ ಫ್ರೀಜರ್‌ನಲ್ಲಿಟ್ಟಿರುತ್ತೀರಿ. ಇದು ಖಂಡಿತಾ ಒಳ್ಳೆಯ ಅಭ್ಯಾಸವಲ್ಲ. ಇದರಿಂದ ತಾಜಾತನ ಹಾಗೆಯೇ ಉಳಿಯಲು ಸಾಧ್ಯವಿಲ್ಲ. ಈ ಪದಾರ್ಥಗಳನ್ನು ತದನಂತರ ಸೇವಿಸಿದರೆ ಅದರಿಂದ ಆರೋಗ್ಯಕ್ಕೆ ಯಾವುದೇ ಪ್ರಯೋಜನವಾಗದೇ ದುಷ್ಪರಿಣಾಮ ಉಂಟಾಗುವುದೇ ಜಾಸ್ತಿ.

ಎಷ್ಟೋ ಜನಕ್ಕೆ ಯಾವ ಆಹಾರಗಳನ್ನು ಫ್ರೀಜರ್‌ನಲ್ಲಿಡಬೇಕು ಎಂಬುದರ ಬಗ್ಗೆ ಅರಿವಿರುವುದಿಲ್ಲ. ಕೇವಲ ಅವರಿವರ ಹೇಳಿಕೆಗಳನ್ನು ನಂಬಿಕೊಂಡು ಇವರೂ ಅನುಸರಿಸುತ್ತಿರುತ್ತಾರೆ. ಮೊದಲು ನಾವು ಫ್ರೀಜರ್‌ನಲ್ಲಿಡುವ ಆಹಾರಗಳ ಬಗ್ಗೆ ತಿಳಿದುಕೊಂಡು, ಅದು ಫ್ರೀಜ್ ಆದ ನಂತರ ಸೇವಿಸಲು ಯೋಗ್ಯವೇ ಎಂಬುದನ್ನು ಮೊದಲು ಖಾತ್ರಿಪಡಿಸಿಕೊಳ್ಳಬೇಕು. ಕೆಲವು ಆಹಾರಗಳನ್ನು ಫ್ರೀಜರ್‌ನಲ್ಲಿ ಶೇಖರಿಸಿಡಲು ಯೋಗ್ಯವಲ್ಲ. ಅದರ ತಾಜಾತನವು ಕುಂಠಿತಗೊಂಡು ಅಪಾಯಕಾರಿ ಅಂಶಕ್ಕೆ ರೂಪಾಂತರಗೊಂಡಿರುತ್ತದೆ.

ಎಲ್ಲಾ ಪದಾರ್ಥಗಳನ್ನು ಫ್ರೀಜರ್‌ನಲ್ಲಿ ಇಡುವುದರಿಂದ ಅದರ ಸತ್ವಗಳ ಆಯಸ್ಸನ್ನು ವೃದ್ಧಿಸಲು ಸಾಧ್ಯವಿಲ್ಲ. ಫ್ರೀಜರ್‌ನಲ್ಲಿಡದ ಹೆಚ್ಚು ತಾಜಾ ಆಹಾರ ಪದಾರ್ಥಗಳನ್ನೇ ಸೇವಿಸುವಂತೆ ಪೌಷ್ಠಿಕಾಂಶ ತಜ್ಞರು ಮತ್ತು ಆಹಾರ ತಜ್ಞರು ದೇಶಾದ್ಯಂತೆ ಒತ್ತಿ ಒತ್ತಿ ಹೇಳುತ್ತಿದ್ದಾರೆ. ಆದ್ದರಿಂದ ನಿಮ್ಮ ಎಲ್ಲಾ ಆಹಾರ ಪದಾರ್ಥಗಳನ್ನು ಅದೇ ಸಣ್ಣ ಡಬ್ಬದಲ್ಲಿ ಹಾಕಿ ಈ ಪೆಟ್ಟಿಗೆಯಲ್ಲಿ ಹಾಕುವುದನ್ನು ನಿಲ್ಲಿಸಿ. ಬನ್ನಿ, ಫ್ರೀಜರ್‌‌ನಲ್ಲಿಡಲು ಯೋಗ್ಯವಲ್ಲದ ಆಹಾರ ಪದಾರ್ಥಗಳ ಬಗ್ಗೆ ಈ ಲೇಖನದಲ್ಲಿ ಬೆಳಕು ಚೆಲ್ಲಲಾಗಿದೆ. ಈ ಆಹಾರ ಪದಾರ್ಥಗಳನ್ನು ತಾಜಾ ಸ್ಥಿತಿಯಲ್ಲಿಯೇ ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಹೆಚ್ಚು ಉಪಯುಕ್ತ..

ಎಲೆಯುಕ್ತ ತರಕಾರಿಗಳು

ಎಲೆಯುಕ್ತ ತರಕಾರಿಗಳು

ಅವಶ್ಯವಿದ್ದಲ್ಲಿ ಕಾಳುಗಳು ಅಥವಾ ಸ್ಟ್ರಾಬೆರ್ರಿಯನ್ನು ಫ್ರೀಜರ್‌ನಲ್ಲಿ ಇಡಬಹುದು ಏಕೆಂದರೆ ಈ ಪದಾರ್ಥಗಳನ್ನು ವರ್ಷದಲ್ಲಿ ಬೇಕೆನಿಸಿದಾಗ ಸೇವಿಸಬಹುದಾಗಿದೆ. ಆದರೆ ಎಲೆಯುಕ್ತ ತರಕಾರಿಗಳು, ಎಲೆಕೋಸು, ಬಸಲೆ ಸೊಪ್ಪು, ಮೆಂತೆ ಸೊಪ್ಪು, ಕೊತ್ತಂಬರಿ ಸೊಪ್ಪು - ಈ ರೀತಿಯ ಎಲೆಯುಕ್ತ ಆಹಾರ ಪದಾರ್ಥಗಳು ಫ್ರೀಜರ್‌ನಲ್ಲಿಟ್ಟರೆ ಅದು ಬಾಡಿ ಹೋಗಿ ಅದರ ಸತ್ವಗಳನ್ನು ಕಳೆದುಕೊಳ್ಳುತ್ತದೆ. ಈ ರೀತಿಯ ಸತ್ವವಿಲ್ಲದ ಆಹಾರ ಸೇವನೆ ಅಡ್ಡಪರಿಣಾಮಗಳನ್ನು ಉಂಟುಮಾಡಲು ಕಾರಣವಾಗುತ್ತದೆ.

ಮೊಟ್ಟೆಗಳು

ಮೊಟ್ಟೆಗಳು

ಒಂದೇ ಸಮಯಕ್ಕೆ ಒಂದು ಡಜನ್ ಮೊಟ್ಟೆಯನ್ನು ಕೊಂಡು, ಅದರ ಶೇಖರಣೆಗೆ ಅದನ್ನು ಫ್ರೀಜರ್‌ನಲ್ಲಿ ಇಡದೇ ರೆಫ್ರಿಜರೇಟರ್‌ನಲ್ಲಿ ಇಡುವುದು ಹೆಚ್ಚು ಸೂಕ್ತ. ಇದರಲ್ಲಿನ ಮರ್ಮವೇನೆಂದರೆ ಮೊಟ್ಟೆಯನ್ನು ಫ್ರೀಜರ್ ನಲ್ಲಿ ಇಟ್ಟರೆ ಮೊಟ್ಟೆಯೊಳಗಿನ ರಸವು ಹಿಗ್ಗಿ, ಅದರಿಂದ ಮೊಟ್ಟೆ ಒಡೆದು, ನಿಮ್ಮ ಫ್ರೀಜರ್ ಅನ್ನು ಕೊಳಕು ಮಾಡಿ ದುರ್ವಾಸನೆಗೆ ಎಡೆಮಾಡಿಕೊಡುತ್ತದೆ.

ಡೀಫ್ರೋಸ್ಟಡ್ ತಿಂಡಿಗಳು

ಡೀಫ್ರೋಸ್ಟಡ್ ತಿಂಡಿಗಳು

ತಂಪಾಗಿಸಿದ ಮಾಂಸ ಮತ್ತು ತರಕಾರಿಗಳು ತಿನ್ನಲು ಯೋಗ್ಯ. ಆದರೆ ಒಂದು ಬಾರಿ ಅದನ್ನು ಫ್ರೀಜರ್‌ನಲ್ಲಿ ಇಟ್ಟಾಗ ಮಾತ್ರ. ನೀವು ಈ ಪದಾರ್ಥಗಳನ್ನು ಪದೇ ಪದೇ ಫ್ರೀಜರ್‌ನಲ್ಲಿಟ್ಟು ಸೇವಿಸಿದರೆ ಆರೋಗ್ಯಕ್ಕೆ ಅಪಾಯ ಖಂಡಿತ. ಅದರ ಪ್ಯಾಕ್ ಮೇಲೆ ನಮೂದಾಗಿರುವುದನ್ನು ನೀವು ನೋಡಿರಬಹುದು. ಸಂಸ್ಕರಿಸಿದ ಆಹಾರಗಳನ್ನು ಪದೇ ಪದೇ ಪ್ರೀಜರ್ ನಲ್ಲಿಡುವುದು ಯೋಗ್ಯವಾದುದಲ್ಲ. ಇದರಿಂದ ಈ ಆಹಾರಗಳ ಮೇಲೆ ಬ್ಯಾಕ್ಟೀರಿಯಾಗಳು ಬೆಳೆಯುವುದಕ್ಕೆ ನೆರವಾಗಿ ಆಹಾರವು ಅನುಪಯುಕ್ತವಾಗುತ್ತದೆ.

ಕಾಫಿ ಬೀನ್ಸ್

ಕಾಫಿ ಬೀನ್ಸ್

ಕಾಫಿ ಬೀನ್ಸ್ ಅನ್ನು ಯಾವುದೇ ಕಾರಣಕ್ಕೂ ಫ್ರೀಜರ್‌ನಲ್ಲಿಡಬೇಡಿ. ವಿಶೇಷವಾಗಿ ಅದನ್ನು ತೆರೆದ ಪೊಟ್ಟಣದಲ್ಲಿ ಇಡಲೇ ಬಾರದು. ಏಕೆಂದರೆ ಕಾಫಿ ಅಥವಾ ಕಾಫಿ ಬೀನ್ಸ್ ಹೊರಗಿನ ವಾಸನೆಯನ್ನು ಸೆಳೆದುಕೊಳ್ಳುವ ಗುಣಹೊಂದಿದ್ದು, ಇದು ನಿಮ್ಮ ಫ್ರೀಜರ್‌ನ ಇತರೆ ವಾಸನೆಯನ್ನು ಸೆಳೆದುಕೊಳ್ಳುತ್ತದೆ. ಮತ್ತು ಫ್ರೀಜರ್‌ನಲ್ಲಿಟ್ಟಾಗ ಅದು ಗಟ್ಟೆಗೊಂಡು ಅದರ ಮೂಲ ಸತ್ವ ಮತ್ತು ಪರಿಮಳವನ್ನು ಕಳೆದುಕೊಂಡು ಸೇವಿಸಲು ಯೋಗ್ಯವಿರುವುದಿಲ್ಲ.

ಮೊಸರು ಮತ್ತು ಇತರೆ ಎಣ್ಣೆಯುಕ್ತ ಆಹಾರ ಪದಾರ್ಥಗಳು

ಮೊಸರು ಮತ್ತು ಇತರೆ ಎಣ್ಣೆಯುಕ್ತ ಆಹಾರ ಪದಾರ್ಥಗಳು

ಈ ರೀತಿಯ ಹಾಲಿನ ಮತ್ತು ಜಿಡ್ಡಿನ ಉತ್ಪನ್ನಗಳು ಫ್ರೀಜರ್‌ನಲ್ಲಿಟ್ಟರೆ ಅದನ್ನು ಮತ್ತೆ ಉಪಯೋಗಿಸಲು ಸಾಧ್ಯವಿರುವುದಿಲ್ಲ. ಇದನ್ನು ನಿಮ್ಮ ಅಡುಗೆಯಲ್ಲಿ ಸೇರಿಸಬಹುದು ಆದರೆ ಇದರ ತಾಜಾಯುಕ್ತ ಆಹಾರವನ್ನು ಸೇವಿಸಲು ಸಾಧ್ಯವಿರುವುದಿಲ್ಲ. ಮಂಜುಗಡ್ಡೆಯಾಗಿಸಿದ ಮೊಸರು ನಿಜಕ್ಕೂ ಅದರ ಮೂಲ ರುಚಿಯನ್ನು ನಿಮಗೆ ನೀಡಲು ಸಾಧ್ಯವೇ ಇಲ್ಲ.

English summary

5 foods you should never put in the freezer

Storing everything in the freezer does not increase its shelf life. Nutritionists and dietitians across the country stress on importance of eating fresh food over frozen and that sure has a reason. Read: Frozen foods- healthy or not? So do not start throwing all the fresh produce, fruits, meats in that small box and assume that time will stop for you to enjoy the same greens after three months. Here’s a list of foods that are not meant to go in the freezer:
Story first published: Wednesday, January 13, 2016, 15:42 [IST]
X
Desktop Bottom Promotion