For Quick Alerts
ALLOW NOTIFICATIONS  
For Daily Alerts

ಏಕಾಗ್ರತೆ-ಜ್ಞಾಪಕಶಕ್ತಿ ಹೆಚ್ಚಿಸುವ ಆಕ್ಯುಪ್ರೆಷರ್ ಚಿಕಿತ್ಸೆ

By Hemanth
|

ಆಕ್ಯುಪ್ರೆಷರ್ ಚಿಕಿತ್ಸೆ ಇಂದು ವಿಶ್ವದೆಲ್ಲೆಡೆ ಪ್ರಸಿದ್ಧಿಯನ್ನು ಪಡೆದುಕೊಂಡು ದೇಹದಲ್ಲಿನ ಕೆಲವೊಂದು ನೋವುಗಳನ್ನು ನಿವಾರಣೆ ಮಾಡಲು ಹಾಗೂ ರೋಗಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ.

ದೇಹದಲ್ಲಿನ ಒಂದು ಭಾಗವನ್ನು ಕೇಂದ್ರವಾಗಿರಿಸಿಕೊಂಡು ಅದರ ಮೇಲೆ ಒತ್ತಡ ಹಾಕಿದಾಗ ರಕ್ತ ಪರಿಚಲನೆ ಸರಾಗವಾಗಿ, ನೋವು ನಿವಾರಣೆಯಾಗುತ್ತದೆ. ಅದರಲ್ಲೂ ಆಕ್ಯುಪಂಕ್ಚರ್‌ನಲ್ಲಿ ಸೂಜಿಗಳನ್ನು ಬಳಸಿಕೊಂಡು ಚಿಕಿತ್ಸೆ ನೀಡಲಾಗುತ್ತದೆ. ಆದರೆ ಆಕ್ಯುಪ್ರೆಷರ್‌ನಲ್ಲಿ ಕೈಬೆರಳಿನಲ್ಲೇ ಒತ್ತಡ ಹಾಕಿ ಚಿಕಿತ್ಸೆ ಮಾಡಲಾಗುವುದು.

2 Acupressure Points To Enhance Your Concentration And Memory

ಆಕ್ಯುಪಂಕ್ಚರ್‌ಗೆ ಹೋಲಿಸಿದರೆ ಆಕ್ಯುಪ್ರೆಷರ್‌ನಲ್ಲಿ ನೋವು ತುಂಬಾ ಕಡಿಮೆ. ಈ ಚಿಕಿತ್ಸೆಯು ಮಾನವ ದೇಹವು ತನಗೆ ತಾನೇ ಚಿಕಿತ್ಸೆ ಮಾಡಿಕೊಳ್ಳಬಲ್ಲದು ಎನ್ನುವುದನ್ನು ತಿಳಿಸಿಕೊಡುತ್ತದೆ. ದೇಹವು ಯಾವುದೇ ಔಷಧಿ ಅಥವಾ ಮದ್ದಿನ ನೆರವಿಲ್ಲದೆ ಸುಧಾರಿಸಿಕೊಳ್ಳಬಲ್ಲದು. ಇದು ಶತಮಾನಗಳಿಂದ ಪಾಲಿಸಿಕೊಂಡು ಬಂದಿರುವಂತಹ ಚಿಕಿತ್ಸಾ ಪದ್ಧತಿಯಾಗಿದೆ. ಏಕಾಗ್ರತೆಯನ್ನು ಹೆಚ್ಚಿಸಲು 20 ಮಾರ್ಗಗಳು

ಇದರಿಂದ ದೇಹಕ್ಕೆ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ಈ ಲೇಖನದಲ್ಲಿ ಎರಡು ಆಕ್ಯುಪ್ರೆಷರ್‌ ಬಿಂದುಗಳನ್ನು ತಿಳಿಸಿಕೊಡಲಾಗುವುದು. ಇದರಿಂದ ನಿಮ್ಮ ಏಕಾಗ್ರತೆ ಹಾಗೂ ನೆನಪಿನ ಶಕ್ತಿ ಹೆಚ್ಚಾಗುವುದು. ಒತ್ತಡ ಹಾಕಬೇಕಾದ ಬಿಂದುಗಳು ಎಲ್ಲಿದೆ ಎಂದು ತಿಳಿದುಕೊಳ್ಳಲು ಮುಂದಕ್ಕೆ ಓದಿ ಮತ್ತು ನಿಮ್ಮ ಚಿಕಿತ್ಸೆ ಮಾಡಿಕೊಳ್ಳಿ.

ದೊಡ್ಡ ಗಮನದ ಬಿಂದು
ದೊಡ್ಡ ಗಮನ ಬಿಂದು ಹೆಬ್ಬೆರಳು ಮತ್ತು ಎರಡನೇ ಬೆರಳನ್ನು ಸಂಧಿಸುವ ಎಲುಬು ಜೋಡಿಸಲ್ಪಟ್ಟಿರುವ ಸ್ಥಳ. ಈ ಸ್ಥಳದಲ್ಲಿ ನಿಮ್ಮ ಬೆರಳನ್ನಿಟ್ಟು 3-4 ನಿಮಿಷ ಒತ್ತಡ ಹಾಕಬೇಕು. ಇದರ ಬಳಿಕ ಬೆರಳನ್ನು ತೆಗೆಯಿರಿ.

ದಿನದಲ್ಲಿ ಮೂರರಿಂದ ನಾಲ್ಕು ಸಲ ಹೀಗೆ ಮಾಡಿ. ನಿಯಮಿತವಾಗಿ ಇದನ್ನು ಮಾಡುವುದರಿಂದ ನಿಮ್ಮ ಏಕಾಗ್ರತೆ ಮತ್ತು ಯಾವುದೇ ವಿಷಯವನ್ನು ತಿಳಿದುಕೊಳ್ಳುವ ಸಾಮರ್ಥ್ಯ ಹೆಚ್ಚಾಗುವುದು. ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವ 18 ಅದ್ಭುತ ಆಹಾರಗಳು

ಸೂರ್ಯನ ಬಿಂದು
ನಿಮ್ಮ ಹುಬ್ಬಿನಿಂದ ಕೆಲವೇ ಇಂಚಿನ ದೂರದಲ್ಲಿ ಈ ಎರಡನೇ ಬಿಂದುವನ್ನು ನೀವು ಗುರುತಿಸಬಹುದು. ಎರಡನೇ ಬಿಂದುವಿನ ಮೇಲೆ 3 ನಿಮಿಷಗಳ ಕಾಲ ಒತ್ತಡ ಹಾಕಿ. ಈ ಪ್ರಕ್ರಿಯೆಯನ್ನು ದಿನದಲ್ಲಿ ನಾಲ್ಕರಿಂದ ಐದು ಸಲ ಮಾಡಿ.


ಇದರಿಂದ ನಿಮ್ಮ ಏಕಾಗ್ರತೆ ಹೆಚ್ಚಾಗುವುದು ಮಾತ್ರವಲ್ಲದೆ, ಮನಸ್ಸು ಹಾಗೂ ದೇಹವನ್ನು ಒತ್ತಡದಿಂದ ಮುಕ್ತವಾಗಿಸುತ್ತದೆ.
ಸೂಚನೆ: ಕ್ರಮಬದ್ಧವಾಗಿ ಮತ್ತು ನಿಯಮಿತವಾಗಿ ಮಾಡಿದರೆ ನಿಮಗೆ ಕೆಲವೇ ದಿನಗಳಲ್ಲಿ ಇದರ ಫಲಿತಾಂಶ ಕಂಡುಬರುತ್ತದೆ. ಜ್ಞಾಪಕ ಶಕ್ತಿ ಹೆಚ್ಚಿಸಿಕೊಳ್ಳಲು, ಇದೋ ಇಲ್ಲಿದೆ ಸರಳ ಟ್ರಿಕ್ಸ್...
English summary

2 Acupressure Points To Enhance Your Concentration And Memory

The medical technique of acupressure is all about finding the meridian lines on the body and applying pressure on them, in a way to promote blood circulation, relieve pain, etc. This is quite similar to Acupuncture, except that in the Acupuncture technique, needles are used on the pressure point, whereas in acupressure
X
Desktop Bottom Promotion