For Quick Alerts
ALLOW NOTIFICATIONS  
For Daily Alerts

ಶೀತ, ಕೆಮ್ಮು ಉಪಟಳ ತಡೆಯುವ ಮನೆಮದ್ದು

|
Home Remedies For Cough And Cold
ಕೆಲವಡೆ ಜೋರಾದ ಮಳೆ, ಮತ್ತೆ ಕೆಲವಡೆ ಮೋಡ ಮುಸುಕಿದ ವಾತಾವರಣ. ಇದರಿಂದಾಗಿ ಶೀತ, ಕೆಮ್ಮು ಹೆಚ್ಚಾಗಿ ಕಂಡು ಬರುತ್ತಿದೆ. ಇದು ಮನೆಯಲ್ಲಿ ಒಬ್ಬರಿಗೆ ಸಾಕು ಸುಲಭವಾಗಿ ಮನೆಯವರಿಗೆಲ್ಲಾ ಶೀತ, ಕೆಮ್ಮು ತಲೆನೋವಿನ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚು.

ಅದರಲ್ಲೂ ಶಾಲೆಗೆ ಹೋಗುವ ಮಕ್ಕಳು ಮನೆಯಲ್ಲಿದ್ದರೆ ಇನ್ನೂ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು. ಶಾಲೆಯಲ್ಲಿ ಶೀತ ಮತ್ತು ಕೆಮ್ಮು ಇರುವ ಮಕ್ಕಳ ಜೊತೆ ಆಟ ಆಡಿದರೆ ರೋಗಾಣುಗಳು ನಿಮ್ಮ ಮಗುವಿಗೂ ಸುಲಭವಾಗಿ ಹರಡಿ ಬಿಡುತ್ತದೆ. ಆದ್ದರಿಂದ ನೀವು ಮತ್ತು ನಿಮ್ಮ ಮಕ್ಕಳು ಮುನ್ನೆಚ್ಚರಿಕೆ ಕ್ರಮ ಅನುಸರಿಸಿದರೆ ಒಳ್ಳೆಯದು.

ನೆಗಡಿ, ಕೆಮ್ಮು ಬರದಂತೆ ಕಾಪಾಡಲು ಮುನ್ನೆಚ್ಚರಿಕೆಯ ಕ್ರಮಗಳು:

1. ತುಳಸಿ ಎಲೆಯನ್ನು ಅಗೆಯುತ್ತಾ ಇರುವುದು ಅಥವಾ ತುಳಸಿ ಎಲೆಯನ್ನು ಬಿಸಿ ನೀರಿನಲ್ಲಿ ಹಾಕಿ ಅದನ್ನು ಕುಡಿಯುವುತ್ತಿದ್ದರೆ ನೆಗಡಿ, ಕೆಮ್ಮು ಬರುವುದಿಲ್ಲ.

2. ಹವಾನಿಯಂತ್ರಣ ಕೊಠಡಿಯಲ್ಲಿ ಅಥವಾ ಹೊರಗಡೆ ತಿರುಗಾಡಲು ಹೋಗುವಾಗ ಕಿವಿಗೆ ಹತ್ತಿಯನ್ನು ಇಟ್ಟುಕೊಳ್ಳಬೇಕು.

3. ತಲೆಯನ್ನು ಉಣ್ಣೆಯ ಸ್ಕಾರ್ಫ್ ಬಳಸುವುದು ಸೂಕ್ತ.

4. ಕರ್ಚೀಫ್ ಗೆ ಸ್ವಲ್ಪ ನೀಲಗಿರಿಯ ಎಣ್ಣೆಯನ್ನು ಹಾಕಿ ಅದರ ವಾಸನೆಯನ್ನು ತೆಗೆದು ಕೊಳ್ಳುತ್ತಿದ್ದರೆ ಸೀನು ಬರುವುದಿಲ್ಲ.

5. ಮುಖ ತೊಳೆಯುವಾಗ, ಸ್ನಾನಮಾಡುವಾಗ ಬಿಸಿ ನೀರನ್ನು ಬಳಸಬೇಕು.

6. ಕೈಯನ್ನು ಆಗಾಗ್ಗೆ ತೊಳೆಯುತ್ತಿರಬೇಕು, ಅಲ್ಲದೆ ಕೈನಿಂದ ಪದೇಪದೆ ಕಣ್ಣು, ಬಾಯಿ ಮತ್ತು ಮೂಗನ್ನು ಮುಟ್ಟುತ್ತಿರಬಾರದು.

7. ಜ್ವರವಿರುವವರಿಂದ ಸ್ವಲ್ಪ ದೂರವಿರಿ.

8. ಆರೋಗ್ಯಕರವಾದ ಆಹಾರಕ್ರಮವನ್ನು ಪಾಲಿಸಬೇಕು.

9. ಒಂದು ವೇಳೆ ಜ್ವರ ಬಂದರೆ ಮನೆಯಲ್ಲಿಯೆ ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ಇದರಿಂದ ಜ್ವರ ಮತ್ತೊಬ್ಬರಿಗೆ ಹರಡುವುದನ್ನು ತಡೆಯಬಹುದು.

ಒಂದು ಶೀತ ಅಥವಾ ಕೆಮ್ಮು ಮನೆಯಲ್ಲಿ ಯಾರಿಗಾದರೂ ಇದ್ದರೆ ಈ ಕೆಳಗಿನ ಮನೆಮದ್ದು ಮಾಡಿ ಸೇವಿಸಿದರೆ ಶೀತ ಮತ್ತು ಕೆಮ್ಮು ಕಮ್ಮಿಯಾಗುವುದು.

1. ಒಂದು ಚಮಚ ಜೇನಿಗೆ ಸ್ವಲ್ಪ ಕರಿಮೆಣಸನ್ನು ಪುಡಿ ಮಾಡಿ ಅದಕ್ಕೆ ತುಳಸಿ ರಸವನ್ನು ಸ್ವಲ್ಪ ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮತ್ತು ರಾತ್ರಿ ಮಲಗುವ ಮುನ್ನ ಸೇವಿಸಬೇಕು. ರಾತ್ರಿ ಈ ಔಷಧಿಯನ್ನು ಕುಡಿದ ನಂತರ ಯಾವುದೆ ಪದಾರ್ಥವನ್ನು ಸೇವಿಸಬಾರದು.

2. ಒಂದು ಲೋಟ ಹಾಲನ್ನು ಸ್ವಲ್ಪ ಅರಿಶಿಣ ಮತ್ತು ಒಂದು ಎಸಳು ಬೆಳ್ಳುಳ್ಳಿ ಹಾಕಿ ಕುದಿಸಿ ಕುಡಿಯಬೇಕು.

3. ಶುಂಠಿ ಕಾಫಿ ಮಾಡಿ ಕುಡಿದರೆ ಶೀತ , ಕೆಮ್ಮು , ತಲೆನೋವು ಕಡಮೆಯಾಗುವುದು.

4. ಕೆಮ್ಮಿಗೆ ಶುಂಠಿ ಹಾಕಿ ಮಾಡಿದ ಟೀ ಒಳ್ಳೆಯದು.

5. ಶುಂಠಿ ರಸಕ್ಕೆ ಸ್ವಲ್ಪ ಕರಿಮೆಣಸಿನ ಪುಡಿ ಮತ್ತು ಜೇನು ಮಿಶ್ರ ಮಾಡಿ ಕುಡಿಯುವುದರಿಂದ ನೆಗಡಿ ಮತ್ತು ಕೆಮ್ಮನ್ನು ನಿವಾರಿಸಬಹುದು. ಚಿಕ್ಕ ಮಕ್ಕಳಿಗೆ ಕೆಮ್ಮು ಬಂದಾಗ ಬೆಚ್ಚಗಿನ ನೀರಲ್ಲಿ ಜೇನುತುಪ್ಪವನ್ನು ಬೆರೆಸಿ ಪ್ರತಿದಿನ ಬೆಳಿಗ್ಗೆ ಕೆಲಕಾಲ ನಿರಂತರವಾಗಿ ನೀಡಿದರೆ ಕೆಮ್ಮು ನಿವಾರಣೆಯಾಗುವುದು.

6. ಒಣಶುಂಠಿ ಹಾಕಿದ ಕಾಫಿಯನ್ನು ಕುಡಿಯುವುದು ಕೂಡ ಒಳ್ಳೆಯದು.

7. ಕರಿಮೆಣಸಿನ ರಸ ಮಾಡಿ ಕುಡಿಯುವುದು ಕೂಡ ತುಂಬಾ ಒಳ್ಳೆಯದು. ಶುಂಠಿ ಕಷಾಯ, ಬೆಳ್ಳುಳ್ಳಿ ರಸವನ್ನು ತಯಾರಿಸಿ ಸೇವಿಸುವುದು ಒಳ್ಳೆಯದು.

English summary

Home Remedies For Cough And Cold | Tips For Health | ಕೆಮ್ಮು ಮತ್ತು ಶೀತಕ್ಕೆ ಮನೆಮದ್ದು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

In rainy season cough and cold is quite common. Before hitting from this problem it's better to take precaution. If already suffering from this problem here are home remedies to get rid from cough and cold.
X
Desktop Bottom Promotion