For Quick Alerts
ALLOW NOTIFICATIONS  
For Daily Alerts

ಮಾನಸಿಕ ಖಿನ್ನತೆಗೆ ಎದೆಗುಂದುವುದು ಸರಿಯೇ?

|

ಭಾವನೆಗಳು ಎಲ್ಲಾ ಜೀವಿಗಳಲ್ಲಿದ್ದರೂ ಮನುಷ್ಯರಷ್ಟು ಚೆನ್ನಾಗಿ ಅವನ್ನು ವ್ಯಕ್ತಪಡಿಸುವ ಇನ್ನೊಂದು ಜೀವಿಯಿಲ್ಲ. ಪರಿಸ್ಥಿತಿಗನುಗುಣವಾಗಿ ನಮ್ಮ ಮನೋಭಾವವೂ ಬದಲಾಗುತ್ತಾ ಹೋಗುತ್ತದೆ. ಮನ ನಿರಾಳವಾಗಿದ್ದು ಧನಾತ್ಮಕವಾಗಿ ಚಿಂತನೆ ನಡೆಸುತ್ತಿದ್ದಷ್ಟೂ ಹೊತ್ತು ಮನ ಮತ್ತು ದೇಹ ಆರೋಗ್ಯಕರವಾಗಿರುತ್ತದೆ. ಇದನ್ನೇ 'ನೆಮ್ಮದಿ' ಎಂದು ಕರೆಯುತ್ತೇವೆ. ಕೆಲವೊಮ್ಮೆ ಪರಿಸ್ಥಿತಿಗೆ ಅನುಗುಣವಾಗಿ ಮನೋಭಾವ ಬದಲಾಗುತ್ತಿದ್ದಂತೆಯೇ ನೆಮ್ಮದಿ ಹಾರಿಹೋಗುತ್ತದೆ. ಮಹಿಳೆಯರು ಖಿನ್ನತೆ ರೋಗಕ್ಕೆ ಗುರಿಯಾಗಲು ಕಾರಣಗಳೇನು?

ಪರಿಸ್ಥಿತಿಯನ್ನು ಎದುರಿಸಲು ಧೈರ್ಯ ಸಾಲದವರು ಅಂಜುಕುಳಿಗಳಾಗಿ ಮನೋಭಾವವನ್ನು ಋಣಾತ್ಮಕವಾಗಿ ಬದಲಾಯಿಸಿ ಧೈರ್ಯಗೆಡುತ್ತಾರೆ. ಇದನ್ನೇ 'ಖಿನ್ನತೆ' ಎನ್ನುತ್ತೇವೆ. ಚಿಕ್ಕಪುಟ್ಟ ಪರಿಸ್ಥಿತಿಗಳಿಗೂ ಎದೆಗುಂದುವ ಜನರು ದಾರಿಕಾಣದೆ ಮನಃಶಾಸ್ತ್ರಜ್ಞರ ಬಳಿ ಓಡುತ್ತಾರೆ. ಹೆಚ್ಚಿನವರು ಮನಃಶಾಸ್ತ್ರಜ್ಞರ ಬಳಿ ಹೋದವರನ್ನು ಹುಚ್ಚರು ಎಂದೇ ಪರಿಗಣಿಸುವ ಸಮಾಜವನ್ನು ಎದುರಿಸಲಾಗದೇ ಇನ್ನಷ್ಟು ಹೈರಾಣಾಗುತ್ತಾರೆ. ಆದರೆ ವಿದೇಶಗಳಲ್ಲಿ ಮನಃಶಾಸ್ತ್ರಜ್ಞರ ಬಳಿ ಹೋಗುವುದು ಅಂಗಡಿಗೆ ಹೋದಷ್ಟೇ ಸಾಮಾನ್ಯವಾಗಿಬಿಟ್ಟಿದೆ. 40 ನಂತರ ಮಹಿಳೆಯರಲ್ಲಿ ಕಾಡುತ್ತೆ ಖಿನ್ನತೆ-ಏಕೆ?

ಬನ್ನಿ ಇಂತಹ ಮನಸ್ಸಿನ ನೆಮ್ಮದಿಯನ್ನು ಕೆಡಿಸುವ ಖಿನ್ನತೆ ಸಮಸ್ಯೆಗಳಿಂದ ಹೊರಬರಲು ಹಲವಾರು ವಿಧಾನಗಳು ಈಗ ಲಭ್ಯವಿದ್ದು ಇವೆಲ್ಲವೂ ವೈದ್ಯಕೀಯವಾಗಿ, ಹಲವು ಸಂಶೋಧನೆಗಳಿಂದ ಸಾಬೀತಾಗಿರುವುದರಿಂದ ಕೆಳಗಿನ ಸ್ಲೈಡ್ ಶೋ ನಲ್ಲಿ ನೀಡಿರುವ ಯಾವುದೇ ಕ್ರಮ ನಿಮಗೆ ಸೂಕ್ತ ಅನಿಸಿದರೆ ಅದನ್ನು ಅನುಸರಿಸಿ, ಸುಖಮಯವಾದ ಬಾಳು ನಿಮ್ಮದಾಗಲಿ ಎಂದು ಬೋಲ್ಡ್ ಸ್ಕೈ ತಂಡ ಹಾರೈಸುತ್ತದೆ...

ವ್ಯಾಯಮ ಮಾಡಿ

ವ್ಯಾಯಮ ಮಾಡಿ

ಸಮಸ್ಯೆಗಳನ್ನು ಸೋಲಿಸುವುದಕ್ಕೆ ವ್ಯಾಯಾಮ ಮಾಡುವುದು ಅತ್ಯಂತ ಒಳ್ಳೆಯ ಮಾರ್ಗ. ಇದು ಕೇವಲ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ನಿಮ್ಮನ್ನು ಸದೃಢರನ್ನಾಗಿಸುತ್ತದೆ. ವ್ಯಾಯಮವು ಚಿತ್ತಸ್ಥಿತಿಗಳನ್ನು ಸ್ಥಿರಗೊಳಿಸಲು ಮತ್ತು ಖಿನ್ನತೆಯ ಆಲೋಚನೆಗಳನ್ನು ದೂರಗೊಳಿಸುವ ಸಿರೊಟೋನಿನ್ ಮತ್ತು ಟೆಸ್ಟೋಸ್ಟೆರಾನ್ ಹಾರ್ಮೋನ್ ಬಿಡುಗಡೆಗೊಳಿಸುತ್ತದೆ.

ಉತ್ತಮ ಸ್ನೇಹಿತರ ಒಡನಾಟ

ಉತ್ತಮ ಸ್ನೇಹಿತರ ಒಡನಾಟ

ನಿಮ್ಮ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ಸಹಾನುಭೂತಿಯನ್ನು ತೋರಿಸುವ ಹಾಗೂ ನಿಮಗೆ ಆತ್ಮಸ್ಥೈರ್ಯವನ್ನು ನೀಡುವವರೆಂದರೆ ಒಳ್ಳೆಯ ಸ್ನೇಹಿತರು. ಅಲ್ಲದೇ ಉತ್ತಮ ಕೇಳುಗನಾಗಿ, ಸಮಯಪ್ರಜ್ಞೆಯುಳ್ಳವರನ್ನಾಗಿ ನಿಮ್ಮನ್ನು ರೂಪಿಸುವಲ್ಲಿ ಅಕ್ಷರಶಃ ನೆರವಾಗುತ್ತಾರೆ ಸ್ನೇಹಿತರು!

ಸಮತೋಲನ ಆಹಾರ

ಸಮತೋಲನ ಆಹಾರ

ಹಣ್ಣು, ತರಕಾರಿ, ಮಾಂಸ ಹಾಗೂ ಕಾಬ್ರೋಹೈಡ್ರೇಟ್ ಇವು ಮನಸ್ಥಿಯನ್ನು ಸುಸ್ಥಿತಿಯಲ್ಲಿರುವಂತೆ ಮಾಡುತ್ತವೆ. ಸಮತೋಲನ ಹಾಗೂ ಸರಿಯಾದ ಆಹಾರ ಸೇವನೆ ಕೇವಲ ದೇಹಕ್ಕೆ ಮಾತ್ರವಲ್ಲದೆ ಮನಸ್ಸು ಸುಸ್ಥಿತಿಯಲ್ಲಿರುವಂತೆಯೂ ನೋಡಿಕೊಳ್ಳುತ್ತದೆ.

ನೀವಾಗಿಯೇ ನಿಮ್ಮನ್ನು ಪ್ರತ್ಯೇಕಿಸುವುದನ್ನು ತಪ್ಪಿಸಿ

ನೀವಾಗಿಯೇ ನಿಮ್ಮನ್ನು ಪ್ರತ್ಯೇಕಿಸುವುದನ್ನು ತಪ್ಪಿಸಿ

ಯಾವಾಗ ಖಿನ್ನರಾಗಿರುತ್ತೀರೋ ಆಗ ಎಲ್ಲರಿಂದ ದೂರವಿರಬೇಕೆಂದು ಅನಿಸುತ್ತದೆ. ಹೀಗೆ ಮಾಡುವುದರಿಂದ ನೀವು ಇನ್ನೊಂದು ಅವಕಾಶಗಳಿಂದ ವಂಚಿತರಾಗುತ್ತೀರಿ. ಸಂಪೂರ್ಣ ಪರಿಹಾರ ದೊರೆಯದಿದ್ದಾಗ ನಿಮ್ಮ ಸುತ್ತಲೂ ಜನರಿದ್ದರೆ ಖಿನ್ನತೆಯ ಭಾವನೆಯಿಂದ ಹೊರಬರಲು ಸಾಧ್ಯ.

ಮನೋರೋಗ ತಜ್ಞರೊಂದಿಗೆ ಮಾತನಾಡಿ

ಮನೋರೋಗ ತಜ್ಞರೊಂದಿಗೆ ಮಾತನಾಡಿ

ಖಿನ್ನತೆಯಿಂದ ಹೊರಬರಲು ಅತ್ಯಂತ ಉತ್ತಮವಾದ ಮಾರ್ಗವೆಂದರೆ ಮನೋರೋಗ ತಜ್ಞರನ್ನು ಭೇಟಿ ಮಾಡುವುದು. ನೀವು ನಿಮ್ಮ ಸಮಸ್ಯೆಗಳಿಂದ ಹೊರಬರಲು ಇದು ಬಹಳಷ್ಟು ಸಹಾಯಕವಾಗುತ್ತದೆ.

ವೈದ್ಯರು ಹೇಳಿದ ಔಷಧಗಳನ್ನು ಸರಿಯಾಗಿ ಅನುಸರಿಸಿ

ವೈದ್ಯರು ಹೇಳಿದ ಔಷಧಗಳನ್ನು ಸರಿಯಾಗಿ ಅನುಸರಿಸಿ

ಇದು ನಿಮ್ಮ ಮನಸ್ಸನ್ನು ಸಮತೋಲನವಾಗಿ ಇಡಬಲ್ಲದು. ಔಷಧಗಳನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿ ಇದರಿಂದ ಖಂಡಿತವಾಗಿ ನಿಮ್ಮ ಮನಸ್ಥಿತಿ ಸಾಮಾನ್ಯ ಸ್ಥಿತೆಗೆ ತಲುಪುವುದರಲ್ಲಿ ಸಂಶಯವಿಲ್ಲ.

ಧನಾತ್ಮಕವಾಗಿರಿ

ಧನಾತ್ಮಕವಾಗಿರಿ

ಧನಾತ್ಮಕ ದೃಷ್ಟಿಕೋನ ನಿಮ್ಮನ್ನು ಬಲಗೊಳಿಸುತ್ತವೆ. ಹಾಗೂ ಖಿನ್ನತೆಯಿಂದ ನಿಮ್ಮನ್ನು ದೂರಮಾಡುತ್ತವೆ. ಇದರಿಂದ ಋಣಾತ್ಮಕ ಚಿಂತನೆಗಳಿಂದ ಕೂಡಾ ನೀವು ಹೊರಗುಳಿಯಬಹುದು. ಅಲ್ಲದೆ ವಾಸ್ತವತೆಯ ಬಗ್ಗೆ ಚಿಂತಿಸಿ ಸಂಗೀತವನ್ನು ಕೇಳಿ ಸ್ವ-ಸಹಾಯ ಪುಸ್ತಕಗಳನ್ನು ಓದಿ ಜೀವಸತ್ವ ಪೂರಕವಾದ ಆಹಾರಗಳನ್ನು ಸೇವಿಸಿ.

English summary

World Mental Health Day Special: Simple Ways To Overcome Depression

We’ve all been upset. Sadness is a totally natural emotional response to certain environmental stimuli. Most of us have support, or systems in place to overcome sadness, reach balance, and go on to be happy as quickly as possible. Lack of self-awareness with respect to demanding situations can put one in a depressed state of mind.
Story first published: Saturday, October 10, 2015, 12:35 [IST]
X
Desktop Bottom Promotion